ಮೂಳೂರು: ಸರಣಿ ಅಪಘಾತ; ಮಹಿಳೆ ಸಾವು

Team Udayavani, May 17, 2019, 12:43 PM IST

ಕಾಪು: ರಾ. ಹೆ. 66ರ ಮೂಳೂರು ಪೇಟೆಯಲ್ಲಿ ನಾಲ್ಕು ವಾಹನಗಳು ಪರಸ್ಪರ ಢಿಕ್ಕಿ ಹೊಡೆದು ಓರ್ವ ಮಹಿಳೆ ಸಾವಿಗೀಡಾಗಿ, ನಾಲ್ವರು ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಮಾರುತಿ ಆಮ್ನಿ ಕಾರು ಕಾಪು ಕಡೆಗೆ ತೆರಳುತ್ತಿದ್ದ ಸುಜುಕಿ ಎ ಸ್ಟಾರ್‌ ಕಾರಿಗೆ ಢಿಕ್ಕಿ ಹೊಡೆದು, ಬಳಿಕ ಎದುರಿನಲ್ಲಿ ಹೋಗುತ್ತಿದ್ದ ರಿಕ್ಷಾಕ್ಕೆ ಗುದ್ದಿದೆ. ಚಾಲಕನ ನಿಯಂತ್ರಣ ತಪ್ಪಿದ ಎ ಸ್ಟಾರ್‌ ಕಾರು ಮತ್ತೂಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಪರಿ ಣಾ ಮ ನಾಲ್ಕೂ ವಾಹನಗಳು ಜಖಂಗೊಂಡಿವೆ.

ರಿಕ್ಷಾ ಪ್ರಯಾಣಿಕೆ, ಉಚ್ಚಿಲ ಕೊಲ್ಯ ನಿವಾಸಿ ಹಫೀಸಾಬಿ  62) ಮೃತಪಟ್ಟವರು. ರಿಕ್ಷಾ ಚಾಲಕರಾದ ಅಬ್ದುಲ್‌ ರಝಾಕ್‌ ಮೂಳೂರು, ಉದಯ್‌ ಕುಮಾರ್‌ ಕುಂಜೂರು, ರಿಕ್ಷಾ ಪ್ರಯಾಣಿಕರಾದ ಗುರುವಪ್ಪ ಪೂಜಾರಿ ಮತ್ತು ಮಾರುತಿ ಆಮ್ನಿಯಲ್ಲಿದ್ದ ರುಕಿಯಾ ಗಾಯಗೊಂಡಿದ್ದಾರೆ. ಎ ಸ್ಟಾರ್‌ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಬ್ದುಕ್‌ ರಝಾಕ್‌ ಮತ್ತು ಗುರುವಪ್ಪ ಪೂಜಾರಿ ಅವರ ಕಾಲುಗಳಿಗೆ ಗಂಭೀರ ಏಟಾಗಿದೆ. ಮತ್ತೂಂದು ರಿಕ್ಷಾ ಹೆದ್ದಾರಿಗೆ ಅಡ್ಡವಾಗಿ ಬಿದ್ದಿದ್ದು, ಎ ಸ್ಟಾರ್‌ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬಿಟ್ಟು ಚರಂಡಿಗೆ ಬಿದ್ದಿದೆ. ಅಪಘಾತಕ್ಕೆ ಆಮ್ನಿ ಚಾಲಕ ನಜೀಂ ವಿರುದ್ಧ ದಿಕ್ಕಿನಿಂದ ಬಂದುದು ಸಂಚಾರ ಮುಖ್ಯ ಕಾರಣ ಎಂದು ಇತರ ವಾಹನ ಚಾಲಕರು ದೂರು ನೀಡಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸರ್ವಿಸ್‌ ರಸ್ತೆ ಸಮಸ್ಯೆ ಕಾರಣ
ಮೂಳೂರು ಬೆಳೆಯುತ್ತಿರುವ ಪೇಟೆಯಾಗಿದ್ದು, ಇಲ್ಲಿ ಸರ್ವಿಸ್‌ ರಸ್ತೆ ಇಲ್ಲದ ಕಾರಣ ಮಂಗಳೂರಿಗೆ ತೆರಳುವ ವಾಹನಗಳು ಕೊಪ್ಪಲಂಗಡಿ ವರೆಗೆ ತೆರಳಿ ಅಲ್ಲಿಂದ ಮಂಗಳೂರಿಗೆ ಹೋಗಬೇಕಾಗಿದೆ. ಇಂತಹ ಸಂದರ್ಭದಲ್ಲಿ ಮೂಳೂರು ಮೀನುಗಾರಿಕಾ ರಸ್ತೆಯಿಂದ ಬರುವ ವಾಹನಗಳು ಹತ್ತಿರದ ಉಚ್ಚಿಲ ಡಿವೈಡರನ್ನು ದಾಟುವ ಉದ್ದೇಶದೊಂದಿಗೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದು, ಪರಿಣಾಮ ಅಪಘಾತಗಳು ಹೆಚ್ಚುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ