ಮತಗಳಿಕೆ ಅಂತರ: ಬೈಂದೂರಲ್ಲಿ  ಏರಿಳಿಕೆ, ಕುಂದಾಪುರದಲ್ಲಿ  ಬರೀ ಏರಿಕೆ!


Team Udayavani, Apr 26, 2018, 7:30 AM IST

voting-machine—8885.jpg

ಕುಂದಾಪುರ: ಮತ ಗಳಿಕೆಯಲ್ಲಿ ಏರುಪೇರು ಸಹಜ. ಹಾಗೆಯೇ ಗೆಲ್ಲುವ ಅಭ್ಯರ್ಥಿಗಳ ಗೆಲುವಿನ ಅಂತರ ಕೂಡ ಮತದಾನದ ಲೆಕ್ಕಾಚಾರದ ಮೇಲೆ ಪರಿಣಾಮ ಬೀರುತ್ತದೆ. ರಾಜಕೀಯ ಪಕ್ಷಗಳು ಈ ಅಂಕಿ-ಅಂಶಗಳ ಆಧಾರದಲ್ಲಿ ತಮ್ಮ ವ್ಯೂಹ ರೂಪಿಸುತ್ತವೆ. ಗೆಲುವಿನ ಅಂತರದ ಮತ ಗಳಿಕೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಏರಿಳಿಕೆ ಹೆಚ್ಚು ಕಂಡುಬಂದರೆ ಕುಂದಾಪುರ ಕ್ಷೇತ್ರದಲ್ಲಿ ಏರಿಕೆ ಹೆಚ್ಚು ಇಳಿಕೆ ಕಡಿಮೆಯಾಗಿದೆ.

ಕುಂದಾಪುರ
1983ರಲ್ಲಿ ಒಟ್ಟು 60,044 ಮತಗಳು ಚಲಾವಣೆ ಯಾಗಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ 32,469, ಜನತಾ ಪಕ್ಷದ ಮಾಣಿಗೋಪಾಲ್‌ 25,197 ಮತಗಳನ್ನು ಪಡೆದರು. ಗೆಲುವಿನ ಅಂತರ 7,272 ಮತಗಳಾಗಿದ್ದವು. 1985ರಲ್ಲಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಅವರಿಗೆ 38,296, ಜನತಾ ಪಕ್ಷದ ಅಪ್ಪಣ್ಣ ಹೆಗ್ಡೆ ಅವರಿಗೆ 29,638 ಮತಗಳು ಸಿಕ್ಕಿ, 8,658 ಅಂತರ ಇತ್ತು. 1989ರಲ್ಲಿ ಒಟ್ಟು 83,354 ಮತಗಳು ಚಲಾವಣೆಯಾಗಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟರಿಗೆ 46,641, ಜನತಾ ದಳದ ಕೆ.ಎನ್‌. ಗೋವರ್ಧನರಿಗೆ 27,540 ಮತಗಳಾಗಿ 19,101 ಮತಗಳ ಅಂತರವಾಯಿತು. 1994ರಲ್ಲಿ ಒಟ್ಟು 92,235 ಮತ ಚಲಾವಣೆಯಾಗಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟರಿಗೆ 41,209, ಬಿಜೆಪಿಯ ಎ.ಜಿ. ಕೊಡ್ಗಿ ಅವರಿಗೆ 37,770 ಮತ ಲಭಿಸಿ ಅಂತರ 3,439 ಮತಗಳಾದವು. 

1999ರಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟರು ಬಿಜೆಪಿ ಗೆಲುವಿನ ಖಾತೆ ತೆರೆದರು. 97,882 ಮತ ಚಲಾವಣೆಯಾಗಿ ಹಾಲಾಡಿ 48,051, ಪ್ರತಾಪಚಂದ್ರ ಶೆಟ್ಟರು 47,030, ಗೆಲುವಿನ ಅಂತರ 1,021 ಮತಗಳು. 2004ರಲ್ಲಿ ಒಟ್ಟು 1,05,839 ಮತಗಳು ಚಲಾವಣೆಯಾಗಿ ಹಾಲಾಡಿ 58,923, ಕಾಂಗ್ರೆಸ್‌ನ ಅಶೋಕ್‌ ಕುಮಾರ್‌ ಹೆಗ್ಡೆ 39,258, ಗೆಲುವಿನ ಅಂತರ 19,665 ಆಗಿತ್ತು. 2008ರಲ್ಲಿ ಒಟ್ಟು ಚಲಾವಣೆಯಾದ 1,24,716 ಮತ ಗಳಲ್ಲಿ ಹಾಲಾಡಿಯವರಿಗೆ 71,695, ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ ಅವರಿಗೆ 46,612, ಅಂತರ 25,083 ಮತ ಲಭಿಸಿದವು. 2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ ಹಾಲಾಡಿಯವರಿಗೆ 80,563, ಕಾಂಗ್ರೆಸ್‌ನ ಮಲ್ಯಾಡಿ ಶಿವರಾಮ ಶೆಟ್ಟರಿಗೆ 39,952. ಒಟ್ಟು ಚಲಾವಣೆಯಾದ ಮತಗಳು 1,81,890. ಗೆಲುವಿನ ಅಂತರ 40,611 ಮತಗಳು. ಬಿಜೆಪಿಗೆ ಮೂರನೇ ಸ್ಥಾನ ದೊರೆತಿತ್ತು.

ಬೈಂದೂರು
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1983ರಲ್ಲಿ ಜನತಾ ಪಕ್ಷದಿಂದ ಅಪ್ಪಣ್ಣ ಹೆಗ್ಡೆ ಅವರು ಕಾಂಗ್ರೆಸ್‌ನ ಜಿ.ಎಸ್‌. ಆಚಾರ್‌ ಅವರೆದುರು ಗೆಲ್ಲಲು ಕೇವಲ 24 ಹೆಚ್ಚು ಮತಗಳನ್ನು ಪಡೆದಿದ್ದರು. ಅಪ್ಪಣ್ಣ ಹೆಗ್ಡೆ ಅವರಿಗೆ 25,771 ಮತ ಬಿದ್ದಿದ್ದರೆ ಜಿ.ಎಸ್‌. ಆಚಾರ್‌ಗೆ 25,747 ಮತಗಳು ದೊರೆತಿದ್ದವು. ಒಟ್ಟು 53,579 ಮತಗಳು ಚಲಾವಣೆಯಾಗಿದ್ದವು. ಇದು ಎರಡು ಜಿಲ್ಲೆಯಲ್ಲಿಯೇ ಕನಿಷ್ಠ ದಾಖಲೆ ಅಂತರವಾಗಿ ದಾಖಲಾಯಿತು. ಎರಡೇ ವರ್ಷದ ಅಂತರದಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದ ಮಾಣಿ ಗೋಪಾಲ್‌ ಅವರನ್ನು ಕಾಂಗ್ರೆಸ್‌ನ ಜಿ.ಎಸ್‌. ಆಚಾರ್‌ 414 ಮತಗಳ ಅಂತರದಿಂದ ಸೋಲಿಸಿದರು. ಒಟ್ಟು 58,956 ಮತಗಳಲ್ಲಿ ಜಿ.ಎಸ್‌. ಆಚಾರ್‌ಗೆ 28,393, ಮಾಣಿಗೋಪಾಲ್‌ಗೆ 27,979 ಮತ ಲಭಿಸಿತ್ತು. 1989ರಲ್ಲಿ ಗೆಲುವಿನ ಅಂತರ 519. ಚಲಾವಣೆಯಾದ 77,879 ಮತಗಳಲ್ಲಿ ಕಾಂಗ್ರೆಸ್‌ನ ಜಿ.ಎಸ್‌. ಆಚಾರ್‌ 35,892, ಜನತಾ ದಳದ ಮಾಣಿಗೋಪಾಲ್‌ 35,373 ಪಡೆದಿದ್ದರು. 1994ರಲ್ಲಿ ಮತಗಳಿಕೆ ಅಂತರ 11,300ಕ್ಕೆ ಏರಿ ಒಮ್ಮೆಲೆ ಏರಿಕೆ ಕಂಡಿತು. ಆಗ ಕಣದಲ್ಲಿ ಇದ್ದುದು ಬಿಜೆಪಿಯ ಐ.ಎಂ. ಜಯರಾಮ ಶೆಟ್ಟಿ ಹಾಗೂ ಕಾಂಗ್ರೆಸ್‌ನ ಮಾಣಿಗೋಪಾಲ್‌. ಒಟ್ಟು 80,767 ಮತ ಗಳಲ್ಲಿ ಬಿಜೆಪಿಗೆ 29,841, ಕಾಂಗ್ರೆಸ್‌ಗೆ 18,541 ಮತ ಗಳಿದ್ದವು. 1997ರಲ್ಲಿ ಕಾಂಗ್ರೆಸ್‌ನ ಗೋಪಾಲ ಪೂಜಾರಿ ಗೆದ್ದರು. 1999ರಲ್ಲಿ ಒಟ್ಟು 89,383 ಮಂದಿ ಮತ ಚಲಾಯಿಸಿದ್ದು  ಕೆ. ಗೋಪಾಲ ಪೂಜಾರಿ 46,075,ಬಿಜೆಪಿಯ ಲಕ್ಷ್ಮೀನಾರಾಯಣ 40,693 ಪಡೆದು 5,382 ಅಂತರ ದೊರೆಯಿತು. 2004ರಲ್ಲಿ ಒಟ್ಟು ಚಲಾವಣೆಯಾದ 1,01,028 ಮತಗಳಲ್ಲಿ ಗೋಪಾಲ ಪೂಜಾರಿ 47,627, ಬಿಜೆಪಿಯ ಲಕ್ಷ್ಮೀನಾರಾಯಣ  44,375, ಅಂತರ ಕಳೆದ ಅವಧಿಗಿಂತ ಕಡಿಮೆಯಾಗಿ 3,252ಕ್ಕೆ ಸೀಮಿತವಾಯಿತು. 2008ರಲ್ಲಿ 1,27,881 ಮತ ಚಲಾವಣೆಯಾಗಿ ಲಕ್ಷ್ಮೀ ನಾರಾಯಣ (62,196)   ಅವರು ಗೋಪಾಲ ಪೂಜಾರಿ (54,226)ಯನ್ನು 7,970 ಮತಗಳಿಂದ ಮಣಿಸಿದರು. 

2013ರ ಚುನಾವಣೆ ಮಾತ್ರ ಐತಿಹಾಸಿಕವಾಯಿತು. 1,48,090 ಮತ ಚಲಾವಣೆಯಾಗಿತ್ತು. 82,277 ಮತ ಪಡೆದ ಗೋಪಾಲ ಪೂಜಾರಿ ಅವರು 51,128 ಮತ ಗಳಿಸಿದ ಬಿಜೆಪಿಯ ಬಿ.ಎಂ. ಸುಕುಮಾರ ಶೆಟ್ಟರನ್ನು 31,149 ಮತಗಳಿಂದ ಮಣಿಸಿದರು. ಇದು ಈ ಕ್ಷೇತ್ರದ ಇತಿಹಾಸದಲ್ಲಿ ದಾಖಲೆ ಅಂತರವಾಗಿ ದಾಖಲಾಯಿತು.

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.