Rice ಹೆಚ್ಚುವರಿ ಕಾರ್ಡ್‌ದಾರರಿಗೆ ಅಕ್ಕಿ ನೀಡಲು ಕೇಂದ್ರ ಸರಕಾರ ಅಸ್ತು

2 ತಿಂಗಳ ಅಕ್ಕಿ ಒಟ್ಟಿಗೆ ನೀಡುವ ಸಾಧ್ಯತೆ

Team Udayavani, Oct 12, 2023, 12:02 AM IST

Rice ಹೆಚ್ಚುವರಿ ಕಾರ್ಡ್‌ದಾರರಿಗೆ ಅಕ್ಕಿ ನೀಡಲು ಕೇಂದ್ರ ಸರಕಾರ ಅಸ್ತು

ಉಡುಪಿ: ರಾಜ್ಯ ಸರಕಾರವು ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳ ಪ್ರತೀ ಸದಸ್ಯನಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ನೀಡಲು ಅಗತ್ಯವಿರುವ ಅಕ್ಕಿಯನ್ನು ಪೂರೈಸಲು ಕೇಂದ್ರ ಸರಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಆದರೆ ರಾಜ್ಯ ಸರಕಾರ ಈಗಾಗಲೇ ವಿತರಿಸಿರುವ ಹೆಚ್ಚುವರಿ ಬಿಪಿಎಲ್‌ ಕಾರ್ಡ್‌ಗಳಿಗೆ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳ ಅಕ್ಕಿ ನೀಡಲು ಕೇಂದ್ರ ಸಮ್ಮತಿಸಿದೆ.

ಕೇಂದ್ರ ಸರಕಾರ ನೀಡುತ್ತಿರುವ ಪಡಿತರ ಅಕ್ಕಿಯ ಜತೆಗೆ ರಾಜ್ಯ ಸರಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಹೆಚ್ಚುವರಿಯಾಗಿ ಬಿಪಿಎಲ್‌ ಕಾರ್ಡ್‌ನ ಪ್ರತೀ ಸದಸ್ಯರಿಗೆ 5 ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗೆ ಕೇಂದ್ರ ಸರಕಾರ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಅಕ್ಕಿಯ ಕೊರತೆಯಿಂದ ಅದಕ್ಕೆ ಸಮನಾದ ಮೌಲ್ಯದ ಹಣವನ್ನು ನೇರವಾಗಿ ಫ‌ಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತಿದೆ. ತಾಂತ್ರಿಕ ಕಾರಣದಿಂದ ಅರ್ಹ ಫ‌ಲಾನುಭವಿಗಳಲ್ಲಿ ಅನೇಕರಿಗೆ ಹಣವೂ ತಲುಪಿಲ್ಲ.

ರಾಜ್ಯ ಸರಕಾರ ಹಣದ ಬದಲು ಅಕ್ಕಿಯನ್ನೇ ನೀಡಲು ನಿರಂತರ ಪ್ರಯತ್ನಿಸುತ್ತಲೇ ಬಂದಿದೆ. ಈಗ ಕೇಂದ್ರ ಸರಕಾರ ರಾಜ್ಯಕ್ಕೆ ಅಗತ್ಯವಿರುವ ಹೆಚ್ಚುವರಿ ಅಕ್ಕಿ ನೀಡಲು ಹಸುರು ನಿಶಾನೆ ತೋರಿದೆ. ಕೇಂದ್ರ ಸರಕಾರದ ಸಂಸ್ಥೆಗಳಾದ ಎನ್‌ಸಿಸಿಎಫ್, ನಾಫೆಡ್‌, ಕೇಂದ್ರೀಯ ಭಂಡಾರದಿಂದ ಅಕ್ಕಿ ಖರೀದಿಸಲು ಆದೇಶಿಸಲಾಗಿದೆ.

40 ಸಾವಿರ ಮೆಟ್ರಿಕ್‌ ಟನ್‌
ಹೆಚ್ಚುವರಿಯಾಗಿ ವಿತರಿಸಿರುವ ಬಿಪಿಎಲ್‌ ಕಾರ್ಡ್‌ದಾರಿಗೆ ಅಕ್ಟೋಬರ್‌ ಮತ್ತು ನವೆಂಬರ್‌ಗೆ ಅಗತ್ಯವಿರುವ 40 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಕೆ.ಜಿ.ಗೆ 34.60 ರೂ. ದರದಲ್ಲಿ ಎನ್‌ಸಿಸಿಎಫ್, ನಾಫೆಡ್‌, ಕೇಂದ್ರೀಯ ಭಂಡಾರದ ಮೂಲಕ ಖರೀದಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಹಂಚಿಕೆಯಾಗಿರುವ ಹೆಚ್ಚುವರಿ ಬಿಪಿಎಲ್‌ ಕಾರ್ಡ್‌ದಾರರಿಗೂ ಈ ಅಕ್ಕಿ ಸಿಗಲಿದೆ.

ಎತ್ತುವಳಿ ಸೂಚನೆ ಬಂದಿಲ್ಲ
ಅಕ್ಕಿ ಖರೀದಿ/ ಎತ್ತುವಳಿಗೆ ಅಧಿಕೃತ ಆದೇಶ ಈವರೆಗೆ ಬಂದಿಲ್ಲ. ಪ್ರತೀ ತಿಂಗಳು 10ನೇ ತಾರೀಕಿನೊಳಗೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಗೆ ಬೇಕಾದಷ್ಟು ಅಕ್ಕಿ ಪೂರೈಕೆಯಾಗಿಲ್ಲ. ಹೀಗಾಗಿ ಪಡಿತರ ಕಾರ್ಡ್‌ ದಾರರಿಗೆ ಯಾವುದೇ ಸೂಚನೆ ನೀಡಿಲ್ಲ. ಅಲ್ಲದೆ ಎರಡನೇ ತಿಂಗಳ ಹಣ ವರ್ಗಾವಣೆಯೂ ಆಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

Bhatkal: ಒಂದೇ ದಿನ ತಾಯಿ, ಮಗಳು ನೇಣಿಗೆ ಶರಣು

Bhatkal: ಒಂದೇ ದಿನ ತಾಯಿ, ಮಗಳು ನೇಣಿಗೆ ಶರಣು

Sanketh-Film

Kannada Cinema: ವಿಭಿನ್ನ ಕಥಾನಕದ ‘ಸಾಂಕೇತ್’ ಚಿತ್ರ ಜು.26ಕ್ಕೆ ತೆರೆಗೆ

Dengue

Dengue fever :ಹಾಸನದಲ್ಲಿ ಮತ್ತೊಬ್ಬ ಬಾಲಕ ಬಲಿ

Bollywood: ಬರ್ಲಿನ್‌ನ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡ ನಟಿ ಸುಚಿತ್ರಾ

Bollywood: ಬರ್ಲಿನ್‌ನ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡ ನಟಿ ಸುಚಿತ್ರಾ

rain 21

Red alert ;ದ.ಕ,ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಜು.16 ರಂದು ಪಿಯುಸಿವರೆಗೆ ರಜೆ

1-bale-1-aa

Agriculture; ಬಾಳೆ ಬೆಳೆದು ಗೆದ್ದ ಬಸವನಾಡಿನ ರೈತ: ಆದಾಯ ಕಂಡು ಐಟಿ ಅಧಿಕಾರಿಗಳೇ ದಂಗು!!

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

9-kaup

Heavy rain: ಕಾಪು ತಾಲೂಕಿನಾದ್ಯಂತ ಅಪಾರ ಹಾನಿ: ವಿದ್ಯುತ್ ವೃತ್ಯಯ

Udupi: ಮುಸ್ಲಿಮರ ವಿರುದ್ಧ ಅವಹೇಳನಕಾರಿ ಟ್ವೀಟ್… ವೈದ್ಯನ ವಿರುದ್ಧ ಪ್ರಕರಣ ದಾಖಲು

Udupi: ಮುಸ್ಲಿಮರ ವಿರುದ್ಧ ಅವಹೇಳನಕಾರಿ ಟ್ವೀಟ್… ವೈದ್ಯನ ವಿರುದ್ಧ ಪ್ರಕರಣ ದಾಖಲು

3-udupi

Udupi: ಬೆಳ್ಳಂಬೆಳಗ್ಗೆ ಮನೆಯಲ್ಲಿ ಅಗ್ನಿ ದುರಂತ: ಬಾರ್ ಮಾಲೀಕ ಮೃತ್ಯು, ಪತ್ನಿ ಗಂಭೀರ  

3-udupi

Udupi: ಬಾರ್‌ ಮಾಲಕರ ಮನೆಯಲ್ಲಿ ಅಗ್ನಿ ಅವಘಡ; ದಂಪತಿಗೆ ಗಂಭೀರ ಗಾಯ

MUST WATCH

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

ಹೊಸ ಸೇರ್ಪಡೆ

Bhatkal: ಒಂದೇ ದಿನ ತಾಯಿ, ಮಗಳು ನೇಣಿಗೆ ಶರಣು

Bhatkal: ಒಂದೇ ದಿನ ತಾಯಿ, ಮಗಳು ನೇಣಿಗೆ ಶರಣು

Sanketh-Film

Kannada Cinema: ವಿಭಿನ್ನ ಕಥಾನಕದ ‘ಸಾಂಕೇತ್’ ಚಿತ್ರ ಜು.26ಕ್ಕೆ ತೆರೆಗೆ

Dengue

Dengue fever :ಹಾಸನದಲ್ಲಿ ಮತ್ತೊಬ್ಬ ಬಾಲಕ ಬಲಿ

Bollywood: ಬರ್ಲಿನ್‌ನ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡ ನಟಿ ಸುಚಿತ್ರಾ

Bollywood: ಬರ್ಲಿನ್‌ನ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡ ನಟಿ ಸುಚಿತ್ರಾ

rain 21

Red alert ;ದ.ಕ,ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಜು.16 ರಂದು ಪಿಯುಸಿವರೆಗೆ ರಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.