ದೇವರಿಗೆ ಲಕ್ಷ ಲಕ್ಷ ಬತ್ತಿ ಸಮರ್ಪಣೆಯಲ್ಲೇ ಧನ್ಯತೆ

10 ವರ್ಷಗಳಲ್ಲಿ 25 ಲಕ್ಷ ಬತ್ತಿ ಸಮರ್ಪಿಸಿದ ತುಳಸಿ ಮಧ್ವೇಶ ತಂತ್ರಿ

Team Udayavani, Feb 11, 2020, 5:25 AM IST

KARTHIK-2

ಉಡುಪಿ: 10 ವರ್ಷಗಳಿಂದ 25 ಲಕ್ಷಕ್ಕೂ ಅಧಿಕ ಬತ್ತಿಗಳನ್ನು ಉಚಿತವಾಗಿ ನೀಡುತ್ತ ವಿಶಿಷ್ಟ ಸೇವೆ ಸಲ್ಲಿಸುತ್ತಿರುವವರು ತುಳಸಿ ಮಧ್ವೇಶ ತಂತ್ರಿ.

ಶಾರದಾ ಕಲ್ಯಾಣ ಮಂಟಪದ ಸಮೀಪದ ನಿವಾಸಿ ಆಗಿರುವ ತುಳಸಿ ಅವರು ಉಡುಪಿ ಭಾಗದ ವಿವಿಧ ದೇವಸ್ಥಾನಗಳಿಗೆ ಲಕ್ಷ ಬತ್ತಿ ಸೇವೆ ಮಾಡಿದ ಹಿರಿಮೆ ಇವರದು. ಆದಿ ಉಡುಪಿಯ ಕಂಗೂರು ಮಠಕ್ಕೆ ಇದೇ ಫೆ. 17ರಂದು ಲಕ್ಷ ಬತ್ತಿ ಸೇವೆ ನೀಡಲಿದ್ದಾರೆ. ಪ್ರತಿ ಬಾರಿ ದೇವಸ್ಥಾನಕ್ಕೆ ತೆರಳುವಾಗಲು ಹಣ್ಣು ಕಾಯಿ ಬದಲು ಬತ್ತಿ, ದೀಪದ ಎಣ್ಣೆ ತೆಗೆದುಕೊಂಡು ದೇವರಿಗೆ ಸಲ್ಲಿಸುವ ರೂಢಿ ಇವರದ್ದು.

ಇವರ ಈ ಉಚಿತ ಸೇವೆ ಹಾಗೂ ಬತ್ತಿಯ ಗುಣ ಮಟ್ಟಕ್ಕೆ ಎಲ್ಲ ದೇವಸ್ಥಾನ ಸೇರಿದಂತೆ ಸ್ಥಳೀಯರು ಇವರನ್ನು ಗುರುತಿಸುವಂತೆ ಮಾಡಿದೆ.

ನೂರು ದಿನ ಲಕ್ಷ ಬತ್ತಿ
74 ವರ್ಷದ ತುಳಸಿ ತಂತ್ರಿ ಅವರು ನೂರು ದಿನದಲ್ಲಿ ಲಕ್ಷ ಬತ್ತಿ ತಯಾರಿಸಿದ ಹಿರಿಮೆ ಹೊಂದಿದ್ದಾರೆ. ಉಡುಪಿ ಕೃಷ್ಣ ಮಠಕ್ಕೆ 3 ಲಕ್ಷ ಬತ್ತಿ, ಪಣಿಯಾಡಿ ಅನಂತ ಪದ್ಮನಾಭ ದೇವಸ್ಥಾನಕ್ಕೆ 3 ಲಕ್ಷ ಬತ್ತಿ ಸೇವೆ ಸಲ್ಲಿಸಿದ್ದಾರೆ. ಪ್ರತಿ ತಿಂಗಳು ಪಣಿಯಾಡಿ ದೇವಸ್ಥಾನ, ಕಡಿಯಾಳಿ ದೇವಸ್ಥಾನ, ಶಾರದಾ ಕಲ್ಯಾಣ ಮಂಟಪದ ಶಾರದಾಂಬ ದೇವಸ್ಥಾನ, ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನ, ರಾಘವೇಂದ್ರ ಮಠಗಳಿಗೆ ಒಂದೊಂದು ಸಾವಿರ ಬತ್ತಿ ನೀಡುತ್ತಾರೆ. ಬತ್ತಿಯನ್ನು ದೇವರ ಪೂಜಾ ಕಾರ್ಯಕ್ಕೆ ಮಾತ್ರ ಬಳಸಲು ಸಾಧ್ಯ. ಈ ನಿಟ್ಟಿನಲ್ಲಿ ತಮ್ಮ ಸಣ್ಣ ಅಳಿಲು ಸೇವೆ ಎಂದು ತುಳಸಿ ಅವರು ಸಾರ್ಥಕ ಭಾವ ತೊರುತ್ತಾರೆ.

ಆಕರ್ಷಕ ಜೋಡಣೆ
ದಿನಕ್ಕೆ ಸಾವಿರಕ್ಕೂ ಅಧಿಕ ಬತ್ತಿ ಮಾಡುವ ಇವರು ಬತ್ತಿ ಜೋಡಿಸಿ ಆಲಂಕರಿಸುವಲ್ಲಿಯೂ ಸೈ ಎನಿಸಿದ್ದಾರೆ. ದೊಡ್ಡ ಬುಟ್ಟಿಯಲ್ಲಿ ರಥದ ಆಕಾರದಲ್ಲಿ ಬತ್ತಿ ಜೋಡಿಸಿಡುತ್ತಾರೆ ಇದನ್ನು ನೋಡಲೆಂದೇ ಸ್ಥಳೀಯರು ಬರುತ್ತಾರೆ.

ವಿದೇಶದಲ್ಲೂ ಪ್ರಸಿದ್ಧಿ
ಇವರ ಸೇವೆ ಕೇವಲ ದೇಶದೊಳಗೆ ಮಾತ್ರ ಸೀಮಿತವಾಗಿರದೆ ವಿದೇಶಕ್ಕೂ ಹಬ್ಬಿದೆ. ತುಳಸಿ ಅವರ ಮಗ ಅಬುಧಾಬಿಯಲ್ಲಿದ್ದು, ಮಗನ ಮನೆಗೆ ತೆರಳುವಾಗ ಹತ್ತಿ ತೆಗೆದುಕೊಂಡು ಹೋಗಿ, ಬಳಿಕ ಅಲ್ಲಿ ಬತ್ತಿ ಮಾಡಿ ಅಲ್ಲಿರುವ ಬ್ರಾಹ್ಮಣ ಸಂಘಕ್ಕೆ ನೀಡುತ್ತಾರೆ. ಮಕ್ಕಳ ಸ್ನೇಹಿತರು ಕೂಡ ಅವರಲ್ಲಿಗೆ ಬಂದು ಬತ್ತಿಯನ್ನು ಪಡೆದುಕೊಂಡು ಹೋಗುತ್ತಾರೆ. ಮಗ ಊರಿಗೆ ಬಂದಾಗಲು 20, 30 ಸಾವಿರ ಬತ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ. ನೆರೆಯ ಮನೆಯವರೂ ಅಮೆರಿಕಕ್ಕೆ ತೆರಳುವಾಗ ಇವರಿಂದ ಬತ್ತಿಯನ್ನು ತೆಗೆದುಕೊಂಡು ಹೋಗುತ್ತಾರಂತೆ.

ಧನ್ಯತಾ ಭಾವ
ಒಂದು ಲಕ್ಷ ಬತ್ತಿ ತಯಾರಿಸಲು ಮೂರು ತಿಂಗಳು ಬೇಕು. ಇತ್ತೀಚೆಗೆ ಮನೆಕೆಲಸ, ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಹೆಚ್ಚು ಸಮಯ ಬತ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಪ್ರಯತ್ನ ನಿರಂತರವಾಗಿದೆ. ದೇವರ ಸ್ಮರಣೆ, ಶ್ಲೋಕಗಳ ಜತೆ ಬತ್ತಿ ಕೆಲಸ ಮಾಡಿ ಇವುಗಳನ್ನು ದೇವರಿಗೆ ಸಮರ್ಪಣೆ ಮಾಡುವುದರಿಂದ ಮನಸ್ಸು ನೆಮ್ಮದಿ ಹೊಂದಿ ಧನ್ಯತಾಭಾವ ಮೂಡುತ್ತದೆ. ಸ್ಥಳೀಯರು ಕೂಡ ಮನೆಗೆ ಬಂದು ಬತ್ತಿ ಪಡೆಯುತ್ತಾರೆ.
-ತುಳಸಿ ತಂತ್ರಿ

ಟಾಪ್ ನ್ಯೂಸ್

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.