ಚರಂಡಿ ಅವ್ಯವಸ್ಥೆ, ಸಂಚಾರ ಸಂಕಷ್ಟ; ದುರಸ್ತಿಗೆ ಆಗ್ರಹ
Team Udayavani, Sep 27, 2020, 7:35 PM IST
ಬಸ್ರೂರು, ಸೆ. 26: ಬಸ್ರೂರು ಬಸ್ ನಿಲ್ದಾಣದ ಸಮೀಪದಿಂದ ಗುಂಡಿಗೋಳಿ ಕಡೆಗೆ ಸಂಚರಿಸುವ ರಸ್ತೆಯ ಚರಂಡಿ ಅವ್ಯವಸ್ಥೆಯಿಂದಾಗಿ ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೋಗುವಂತಾಗಿದೆ.
ಗುಂಡಿ ಗೋಳಿ ಕಡೆಗೆ ಹೋಗುವ ರಸ್ತೆಯ ಆರಂಭದಲ್ಲಿ ಸುಮಾರು 150 ಮೀ. ಉದ್ದಕ್ಕೆ ಕಾಂಕ್ರೀಟ್ ಹಾಕಲಾಗಿದೆ. ರಾಜ್ಯ ಹೆದ್ದಾರಿಯಿಂದತಿರುವಿನ ಆರಂಭದಲ್ಲೇ ಚರಂಡಿಗೆ ಹಾಕಲಾದ ಕಲ್ಲುಗಳು ಎದ್ದಿದೆ. ಅದಲ್ಲದೆ ಮಳೆನೀರು ವೇಗವಾಗಿ ಬಂದಾಗ ಈ ತಿರುವಿನ ಪೂರ್ಣ ಜಾಗ ನೀರಲ್ಲಿ ಮುಳುಗಿರುತ್ತದೆ. ಇದರಿಂದ ದ್ವಿಚಕ್ರ ಸೇರಿದಂತೆ ಯಾವ ವಾಹನವೂ ಸಂಚರಿಸಲು ಸಾಧ್ಯವಿಲ್ಲದಂತಾಗುತ್ತದೆ.
ಕಳೆದ ವರ್ಷದ ಮಳೆಗಾಲದಲ್ಲೂ ಇದೇ ಸ್ಥಿತಿ ಉಂಟಾಗಿತ್ತು. ನಿತ್ಯ ಸಾಗುವ ಪ್ರಯಾಣಿಕರಿಗೆ ಇದನ್ನು ದಾಟುವುದು ಒಂದು ಸವಾಲಾಗಿದೆ. ಸಂಬಂಧಪಟ್ಟ ಇಲಾಖೆ ಆದಷ್ಟು ಶೀಘ್ರ ಈ ತಿರುವಿನ ಸ್ಥಳದಲ್ಲಿ ಕಿತ್ತು ಹೋದ ಚರಂಡಿ, ಎದ್ದು ಬಂದ ಕಲ್ಲುಗಳನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಾನು ಗುಂಡಿಗೋಳಿಯಿಂದ ಕುಂದಾಪುರದ ಕಚೇರಿ ಕೆಲಸಕ್ಕೆ ದಿನವೂ ಸಾಗುವ ನೌಕರ. ದ್ವಿಚಕ್ರದಲ್ಲಿ ಸಾಗುವಾಗ ಈಗಾಗಲೇ ಎರಡು ಬಾರಿ ಈ ತಿರುವಿನಲ್ಲಿ ಬಿದ್ದಿದ್ದೇನೆ. ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ಈ ತಿರುವಿನ ಹೊಂಡಬಿದ್ದ ಸ್ಥಳವನ್ನು ಸರಿಪಡಿಸಿದರೆ ಜನರಿಗೆ ಅನುಕೂಲವಾಗಿರುತ್ತದೆ ಎನ್ನುವುದು ಪ್ರಯಾಣಿಕರೊಬ್ಬರ ಅಭಿಪ್ರಾಯ.
ಬಸ್ರೂರು ಬಸ್ ನಿಲ್ದಾಣದ ಬಳಿ ಗುಂಡಿಗೋಳಿಗೆ ಹೋಗುವ ತಿರುವಿನಲ್ಲಿ ಕಲ್ಲುಗಳು ಎದ್ದಿದ್ದು, ಸಂಚಾರ ಕಷ್ಟಕರವಾಗಿದೆ. ಶೀಘ್ರ ಈ ತಿರುವಿನಲ್ಲಿ ಎದ್ದ ಕಲ್ಲುಗಳನ್ನು ಸರಿಪಡಿಸಿ ಹೊಂಡ ಮುಚ್ಚಲಾಗುವುದು. -ನಾಗೇಂದ್ರ ಜೆ., ಅಭಿವೃದ್ಧಿ ಅಧಿಕಾರಿ, ಬಸ್ರೂರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೊರಬ : ಎಸ್ಸೆಸ್ಸೆಲ್ಸಿ ಯಲ್ಲಿ ಸಮಾನ ಅಂಕ ಗಳಿಸುವ ಮೂಲಕ ಗಮನ ಸೆಳೆದ ಅವಳಿ ಸಹೋದರಿಯರು
ಪೇಟಿಎಂ ಕಂಪನಿಗೆ 761 ಕೋಟಿ ರೂ. ನಷ್ಟ!
ಬಾಣಂತಿಯರ ಶಸ್ತ್ರಚಿಕಿತ್ಸೆಯಲ್ಲಿ ಲೋಪ : ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಉಪ ಲೋಕಾಯುಕ್ತ ಭೇಟಿ
ಉತ್ತಮ ಮಳೆ: ಬಿತ್ತನೆಗಾಗಿ ಡಿಎಪಿ ಗೊಬ್ಬರ ಖರೀದಿಸಲು ಮುಗಿಬಿದ್ದ ರೈತರು
2 ಲಕ್ಷ ಟ್ರಾನ್ಸ್ ಫಾರ್ಮರ್ ದುರಸ್ತಿ: ಸಚಿವ ಸುನಿಲ್ ಕುಮಾರ್