ಕಡು ಬಿಸಿಲ ಬೇಗೆಗೆ ಬಸವಳಿದ ಭತ್ತದ ಬೆಳೆ

Team Udayavani, Sep 19, 2018, 1:45 AM IST

paddy-crop-600.jpg

ಕೋಟ: ಈ ಬಾರಿ ಮಳೆಗಾಲದ ಆರಂಭದಲ್ಲಿ ಉತ್ತಮ ಮಳೆಯಾದ್ದರಿಂದ ಭತ್ತದ ಕೃಷಿಗೆ ಅನುಕೂಲ ವಾತಾವರಣ ಸೃಷ್ಟಿಯಾಗಿತ್ತು. ಜತೆಗೆ ಉತ್ತಮ ಇಳುವರಿಯ ನಿರೀಕ್ಷೆ ರೈತರಲ್ಲಿತ್ತು. ಆದರೆ ಕೆಲ ದಿನಗಳಿಂದ ಮಳೆ ಕೈಕೊಟ್ಟಿದ್ದು, ಸುಡುಬಿಸಿಲು ಭತ್ತದ ಬೆಳೆಗೆ ಕಂಟಕವಾಗಿ ಪರಿಣಮಿಸಿದೆ. ಇದೇ ರೀತಿ ಮುಂದುವರಿದಲ್ಲಿ  ಇಳುವರಿ ಕುಸಿತದ ಆತಂಕ ಎದುರಾಗಿದೆ.

ಅಗತ್ಯ ಸಂದರ್ಭದಲ್ಲೇ ಕೈಕೊಟ್ಟ ಮಳೆ 
ನಾಟಿ ಮಾಡಿ 45ರಿಂದ 60ದಿನಕ್ಕೆ ಭತ್ತದ ತೆನೆ (ಹೊಡೆ) ಹೊರಮೂಡುತ್ತದೆ. ಉತ್ತಮ ಫಸಲು ಬರಬೇಕಾದರೆ ಈ ಸಂದರ್ಭ  ಹೇರಳ ಪ್ರಮಾಣದ ನೀರು, ಒಳ್ಳೆಯ ವಾತಾವರಣ ಅಗತ್ಯ. ಆದರೆ ಈ ಬಾರಿ ನಾಟಿ ಮಾಡಿ 40-45ದಿನಕ್ಕೆ  ಮಳೆ ಕೈ ಕೊಟ್ಟಿದೆ. ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ  ಎಂ.ಒ.4 ಮುಂತಾದ ತಳಿಗಳು ಉತ್ತಮ ಫಸಲು ನೀಡಬೇಕಾದರೆ  ತೆನೆ ಕಟ್ಟುವ ಸಂದರ್ಭದಲ್ಲಿ ತಂಪಾದ ವಾತಾವರಣ, ಬುಡದಲ್ಲಿ ತಂಪಗಿನ ನೀರು ಅತೀ ಅಗತ್ಯ. ಆದರೆ ಇದೀಗ ವಾತಾವರಣ, ಗದ್ದೆಯ ನೀರೂ ಬಿಸಿಯಾಗಿದೆ. ಹೀಗಾಗಿ ಇಳುವರಿಯ ಮೇಲೆ ಇದು ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಪಂಪ್‌ಸೆಟ್‌ಗೆ ಮೊರೆ 
ಗದ್ದೆಯಲ್ಲಿ ನೀರು ಸಂಗ್ರಹಿಸುವ ಸಲುವಾಗಿ ಇದೀಗ ರೈತರು ಪಂಪ್‌ಸೆಟ್‌ಗಳ ಮೊರೆ ಹೋಗಿದ್ದಾರೆ. ಬಾವಿ, ಕೆರೆಗಳ ಮೂಲಕ ನೀರು ಹಾಯಿಸಿ ಇಳುವರಿ ಸಂಪೂರ್ಣ ಕುಸಿತವಾಗುವುದನ್ನು ತಪ್ಪಿಸಲು ಹೋರಾಟ ನಡೆಸುತ್ತಿದ್ದಾರೆ.

ರೋಗ ಬಾಧೆ
ಬಿಸಿಲ ತಾಪ ಹೆಚ್ಚಾಗಿದ್ದರಿಂದ ಬೆಂಕಿ ರೋಗ, ಸುಳಿಗೆ ಹಾನಿ, ಸಸಿಗೆ ಹಾನಿ ಮುಂತಾದ ಸಮಸ್ಯೆಗಳು ಹೆಚ್ಚುತ್ತಿವೆ. ಮಳೆ ಸ್ವಲ್ಪ ಪ್ರಮಾಣದಲ್ಲಿ ಇದ್ದರೂ ರೋಗಗಳು ಹತೋಟಿಗೆ ಬರುತ್ತಿತ್ತು. ಆದರೆ ಮಳೆ ಲಕ್ಷಣ ಕ್ಷೀಣಿಸಿದ್ದರಿಂದ ರೋಗ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.

ಇಳುವರಿ ಕುಸಿತ ಭೀತಿ?
ಅಗತ್ಯ  ಸಂದರ್ಭದಲ್ಲೇ ಈ ರೀತಿ ಅನಾವೃಷ್ಠಿ ಎದುರಾಗಿರುವುದರಿಂದ ಭತ್ತದ ಬೆಳೆ ಸಮೃದ್ಧಗೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ಇದೇ ರೀತಿ ವಾತಾವರಣವಿದ್ದಾಗ ಒಟ್ಟು ಇಳುವರಿಯಲ್ಲಿ ಶೇ. 30ರಿಂದ 40ರಷ್ಟು ಕುಸಿತಗೊಂಡ ಉದಾಹರಣೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನಿರ್ವಹಣೆಯಲ್ಲಿ ಎಚ್ಚರಿಕೆ ಅಗತ್ಯ
ಮಳೆ ಪ್ರಮಾಣ ದಿಢೀರ್‌ ಕಡಿಮೆಯಾದ್ದರಿಂದ ಎಳೆ ಮಡಚುವುದು, ಸುಳಿ ಕೆಂಪಾಗುವುದು, ಹುಳು ಬಾಧೆ ಸಾಧ್ಯತೆ ಇದೆ. ಹೀಗಾಗಿ ಈ ಸಂದರ್ಭ ಬೆಳೆಯ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಬೇಕು. ಸಸಿಯ ಎಳೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು.ತೆನೆ ಹೊರಮೂಡುವಾಗ ಹೆಚ್ಚಿನ ಪೋಷಕಾಂಶದ ಅಗತ್ಯವಿದ್ದು ಒಂದು ಎಕ್ರೆಗೆ 15ಕೆ.ಜಿ. ಪೊಟ್ಯಾಷ್‌, 10 ಕೆ.ಜಿ. ಯೂರಿಯ ನೀಡಿದರೆ ಉತ್ತಮ. ಕನಿಷ್ಠ ಎರಡು-ಮೂರು ದಿನಗಳಿಗೊಮ್ಮೆ  ಗದ್ದೆಯ ನೀರನ್ನು ಬದಲಿಸಬೇಕು. ಯಾವುದೇ ಮಾಹಿತಿಗಾಗಿ ಕೃಷಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.
– ಡಾ| ಎಸ್‌.ವಿ.ಪಾಟೀಲ್‌, ಸಹ ಸಂಶೋಧನ ನಿರ್ದೇಶಕ, ಕೆ.ವಿ.ಕೆ. ಬ್ರಹ್ಮಾವರ
 
ಇಳುವರಿಯ ಕುರಿತು ಆತಂಕವಿದೆ 

ಈ ಬಾರಿ ಭತ್ತದ ಬೆಳೆಗೆ ಅಗತ್ಯ ಸಂದರ್ಭದಲ್ಲಿ ಮಳೆ ಕೈಕೊಟ್ಟಿರುವುದರಿಂದ ಬೆಳೆ ಹಾನಿ ಆರಂಭವಾಗಿದೆ. ಇಳುವರಿಯಲ್ಲಿ ಶೇ. 40ರ ವರೆಗೆ ಕುಂಠಿತವಾಗುವ ಆತಂಕವಿದೆ.
– ಜಯರಾಮ್‌ ಶೆಟ್ಟಿ ಮಣೂರು, ಪ್ರಗತಿಪರ ಕೃಷಿಕರು ಕೋಟ

ಟಾಪ್ ನ್ಯೂಸ್

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.