ಮಾಲಿನ್ಯ ತಡೆ ಹೇಗೆ ಸಾಧ್ಯ?

ವಿಶ್ವ ಪರಿಸರ ದಿನ

Team Udayavani, Jun 5, 2019, 6:10 AM IST

malinya-tade

-  ರಸ್ತೆ ಸಾರಿಗೆ ಬದಲಿಗೆ ನೌಕಾಯಾನ ಹಾಗೂ ಸರಕುಗಳ ಸಾಗಾಟಕ್ಕೆ ಹಡಗುಗಳ ಬಳಕೆಗೆ ಉತ್ತೇಜನ ಕೊಡುವುದು.
-  ಹೆಚ್ಚಿನ ಇಂಧನ ದಕ್ಷತೆಯ ಹೈಬ್ರಿàಡ್‌ ವಾಹನಗಳ ಉಪಯೋಗಕ್ಕೆ ಪ್ರೋತ್ಸಾಹ ನೀಡುವುದು.
-  ಡೀಸೆಲ್‌, ಪೆಟ್ರೋಲ್‌ಗೆ ಪರ್ಯಾಯವಾಗಿ ಇಥೆನಾಲ್‌, ಬಯೋಡೀಸೆಲ್‌ ಅಥವಾ ವಿದ್ಯುತ್‌ ಬಳಸುವ ಎಂಜಿನ್‌ಗಳ ಬಳಕೆ.
-  ಸಂಚಾರಕ್ಕೆ ರೈಲು, ಬಸ್ಸಿನಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸುವುದು.
-  ಪರಿಸರದಲ್ಲಿ ಹೆಚ್ಚು ಹೆಚ್ಚು ಗಿಡ – ಮರಗಳನ್ನು ನೆಟ್ಟು ಬೆಳೆಸುವುದು. ಅರಣ್ಯ ನಾಶ ತಪ್ಪಿಸುವುದು.
-  ಅಂತರ್ಜಲ ಮರುಪೂರಣ, ಮಳೆಕೊಯ್ಲು, ಮನೆ ಹಾಗೂ ಕಟೇರಿಗಳಲ್ಲಿ ಸೌರಶಕ್ತಿ ಬಳಕೆ ಕಡ್ಡಾಯ ಗೊಳಿಸುವುದು.
-  ಒಂದು ಮನೆಗೆ ಒಂದೇ ವಾಹನ ನಿಯಮವನ್ನು ಜಾರಿಗೊಳಿಸುವುದು.
-  ವಿದೇಶಗಳಲ್ಲಿರುವಂತೆ ಬೈಸಿಕಲ್‌ಗ‌ಳ ಬಳಕೆಗೆ ಉತ್ತೇಜನ ನೀಡುವುದು.
-  ತ್ಯಾಜ್ಯ ಸಂಗ್ರಹ, ವಿಲೇವಾರಿಗೆ ಅಚ್ಚುಕಟ್ಟಾದ ವ್ಯವಸ್ಥೆ. ತ್ಯಾಜ್ಯದಿಂದ ಇಂಧನ ಅಥವಾ ಗೊಬ್ಬರ ಉತ್ಪಾದನೆಗೆ ಕ್ರಮ.

ನಿತ್ಯವೂ ನಾವೇನು ಮಾಡ ಬಹುದು?
ತರಕಾರಿ, ಕಿರಾಣಿ ಖರೀದಿಸಿದಾಗ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಕೇಳಿ ಪಡೆಯುವ ಬದಲು ಮನೆಯಿಂದಲೇ ಬಟ್ಟೆ ಚೀಲಗಳನ್ನು ಒಯ್ಯಬೇಕು.
ಹಸಿ ಮತ್ತು ಒಣಗಿದ ಕಸಗಳನ್ನು ವಿಂಗಡಿಸಿ ಅವುಗಳನ್ನು ಕಸ ಸಂಗ್ರಾಹಕರಿಗೆ ನೀಡಬೇಕು. ಮನೆಯ ಸಮೀಪವೇ ಕಸ ಸುಡುವುದು ಸಲ್ಲದು. ಇದರಿಂದ ಆರೋಗ್ಯ ಹಾಗೂ ಪರಿಸರ ಎರಡೂ ಕೆಡುತ್ತದೆ.

ಕಟ್ಟಡ, ರಸ್ತೆಗಳ ನಿರ್ಮಾಣ ಸಂದರ್ಭ ಮರಗಳನ್ನು ಆದಷ್ಟು ಕಡಿಮೆ ಕಡಿಯಬೇಕು. ಕಡಿಯುವ ಮರಗಳ ಪ್ರಮಾಣದ ಎರಡರಷ್ಟಾದರೂ ಗಿಡಗಳನ್ನು ನೆಟ್ಟು ಬೆಳೆಸಬೇಕು. ಬಯಲು ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಮಾಡುವುದು ಸೂಕ್ತ. ಮನೆಯ ಸುತ್ತ ಹಣ್ಣು ಹಾಗೂ ಹೂವಿನ ಗಿಡಗಳನ್ನು ನೆಟ್ಟು ಬೆಳೆಸಿದರೆ ಶುದ್ಧ ಗಾಳಿಯೂ ಸಿಗುತ್ತದೆ. ಆಗ ಮನೆಯ ಸುತ್ತ ಚಿಟ್ಟೆಗಳು, ಹಕ್ಕಿಗಳು, ಸಣ್ಣ ಪ್ರಾಣಿಗಳು ಬಂದು ಬದುಕು ಉಲ್ಲಸಿತವಾಗುತ್ತದೆ.

ಖಾಸಗಿ ವಾಹನಗಳ ಬದಲು ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸಿದರೆ ಮಿತವ್ಯಯಕಾರಿಯೂ ಹೌದು, ಪರಿಸರಪ್ರೇಮಿ ನಡೆಯೂ ಆಗುವುದು.

ದಿಲ್ಲಿ ಮಾದರಿಯಲ್ಲಿ ಸಮ, ಬೆಸ ಸಂಖ್ಯೆಗಳ ಆಧಾರದಲ್ಲಿ ವಾಹನಗಳ ಓಡಾಟ ನಡೆಸಿ. ಕಚೇರಿಗೆ ತೆರಳುವಾಗ ಸಹೋದ್ಯೋಗಿಗಳ ಜತೆಗೆ ಪೂಲಿಂಗ್‌ ಪದ್ಧತಿ ಬಳಸಿ.

ಹಿತ, ಮಿತವಾಗಿ ನೀರನ್ನು ಬಳಸಿ. ಸಾಧ್ಯವಾದಲ್ಲಿ ಮರು ಬಳಕೆ ಮಾಡಿ. ಕಟ್ಟಿಗೆ ಉರಿಸಿ ಸ್ನಾನಕ್ಕಾಗಿ ನೀರನ್ನು ಬಿಸಿ ಮಡುವ ಪದ್ಧತಿ ಇನ್ನೂ ಇದೆ. ಇದರಿಂದ ವಾಯು ಮಾಲಿನ್ಯದ ಜತೆಗೆ ಮರಗಳ ನಾಶವೂ ಆಗುತ್ತಿದೆ. ಬೇಸಗೆಯಲ್ಲಿ ತಣ್ಣೀರು ಸ್ನಾನವೇ ಶ್ರೇಯಸ್ಕರ.

ಫ್ರಿಜ್‌ಗಳು ಬಿಡುಗಡೆಗೊಳಿಸುವ ಕ್ಲೋರೋಫ್ಲೋರೋ ಕಾರ್ಬನ್‌ಗಳು ಓಝೊàನ್‌ ಪದರದ ಮೇಲೆ ಪ್ರಭಾವ ಬೀರುತ್ತವೆ. ಫ್ರಿಜ್‌ ಹಾಗೂ ಎಸಿಗಳ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವುದು ಸೂಕ್ತ.

ಮನೆಯ ಸುತ್ತ ಮುತ್ತಲಿನ ಪರಿಸರದಲ್ಲಿ ಹಾವು, ಚೇಳುಗಳು ಕಂಡುಬಂದಲ್ಲಿ ಅವುಗಳನ್ನು ಸಾಯಿಸಬೇಡಿ. ಅವುಗಳ ಪಾಡಿಗೆ ಅವನ್ನು ಬಿಟ್ಟುಬಿಡಿ.

ಅಪಾಯವಾಗುವ ಮುನ್ಸೂಚನೆ ಇದ್ದಲ್ಲಿ ತಜ್ಞರಿಂದ ಅವುಗಳನ್ನು ಹಿಡಿಸಿ, ಸುರಕ್ಷಿತ ಸ್ಥಳದಲ್ಲಿ ಬಿಡಲು ಹೇಳಿ.

ಬೇಸಗೆ ಸಮಯದಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ಮನೆಯ ಹೊರ ಆವರಣದಲ್ಲಿ ಒಂದಷ್ಟು ನೀರು ಇಡಿ. ಹಕ್ಕಿಗಳಿಗಾಗಿ ಟೆರೇಸ್‌ ಮೇಲೆ ಅಥವಾ ಕಿಟಕಿ ಪಕ್ಕ ಒಂದು ಬಟ್ಟಲು ನೀರು, ಒಂದಿಷ್ಟು ಧಾನ್ಯಗಳನ್ನು ಇರಿಸಿ.

ಟಾಪ್ ನ್ಯೂಸ್

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

ಪ್ರಭಾಸ್‌ ಜೀವನಕ್ಕೆ ಬರಲಿದ್ದಾರೆ ವಿಶೇಷ ವ್ಯಕ್ತಿ.. ಮದುವೆ ಆಗಲಿದ್ದಾರಾ ʼಸಲಾರ್‌ʼ ನಟ?

ಪ್ರಭಾಸ್‌ ಜೀವನಕ್ಕೆ ಬರಲಿದ್ದಾರೆ ವಿಶೇಷ ವ್ಯಕ್ತಿ.. ಮದುವೆ ಆಗಲಿದ್ದಾರಾ ʼಸಲಾರ್‌ʼ ನಟ?

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌ !

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಲೈಂಗಿಕ ದೌರ್ಜನ್ಯ ಬಿಡುಗಡೆಗೆ ಆದೇಶ

Udupi: ಲೈಂಗಿಕ ದೌರ್ಜನ್ಯ ಬಿಡುಗಡೆಗೆ ಆದೇಶ

Manipal: ಗಾಂಜಾ ಸೇವನೆ: 6 ಮಂದಿ ವಶಕ್ಕೆ

Manipal: ಗಾಂಜಾ ಸೇವನೆ: 6 ಮಂದಿ ವಶಕ್ಕೆ

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

ಪ್ರಭಾಸ್‌ ಜೀವನಕ್ಕೆ ಬರಲಿದ್ದಾರೆ ವಿಶೇಷ ವ್ಯಕ್ತಿ.. ಮದುವೆ ಆಗಲಿದ್ದಾರಾ ʼಸಲಾರ್‌ʼ ನಟ?

ಪ್ರಭಾಸ್‌ ಜೀವನಕ್ಕೆ ಬರಲಿದ್ದಾರೆ ವಿಶೇಷ ವ್ಯಕ್ತಿ.. ಮದುವೆ ಆಗಲಿದ್ದಾರಾ ʼಸಲಾರ್‌ʼ ನಟ?

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.