ಜಯ ಆಚಾರ್ಯರಿಗೆ ಜೆಮ್ ಆಫ್ ದ ಇಯರ್ (ಸೌತ್) ಪ್ರಶಸ್ತಿ ಪ್ರದಾನ
Team Udayavani, Feb 28, 2019, 12:50 AM IST
ಉಡುಪಿ: ಆಲ್ ಇಂಡಿಯಾಜೆಮ್ ಫೆಡರೇಶನ್ ಪ್ರತೀ ವರ್ಷ ನೀಡುತ್ತಿರುವ ಜುವೆಲರಿ ರಂಗದ “ಆಸ್ಕರ್ಅವಾರ್ಡ್’ ಎಂದೇ ಪರಿಗಣಿತವಾದ ಜೆಮ್ ಆಫ್ ದ ಇಯರ್ (ಸೌತ್-2018) ಪ್ರತಿಷ್ಠಿತ ಪ್ರಶಸ್ತಿಯನ್ನು ರಾಜ್ಯ ಜುವೆಲರಿ ಫೆಡರೇಶನ್ ಚೇರ್ಮನ್ ಹಾಗೂ ಜೆಮ್ ಆ್ಯಂಡ್ ಜುವೆಲರಿ ದೇಶೀಯ ಮಂಡಳಿಯ ಸದಸ್ಯ ನೋವೆಲ್ಟಿ ಜಯ ಆಚಾರ್ಯ ಅವರಿಗೆ ನೀಡಲಾಯಿತು.
ಮುಂಬಯಿಯ ಗ್ರ್ಯಾಂಡ್ ಹಯಾತ್ ಹೊಟೇಲ್ನಲ್ಲಿ ನಡೆದ ಸಮಾರಂಭದಲ್ಲಿ ಜುವೆಲರಿ ಉದ್ಯಮದ ಹಲವು ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದ್ದು, ಸ್ವರ್ಣೋದ್ಯಮಕ್ಕೆ ನೀಡಿ ರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ಪ್ರಶಸ್ತಿ ವಿತರಿಸಿದರು.
ಆಲ್ ಇಂಡಿಯಾ ಜೆಮ್ ಫೆಡರೇಶನ್ ಚೇರ್ಮನ್ ಅನಂತ ಪದ್ಮನಾಭನ್, ವೈಸ್ ಚೇರ್ಮನ್ ಶಂಕರ್ಸೇನ್ ಉಪಸ್ಥಿತರಿದ್ದರು. ಪ್ರತಿಷ್ಠಿತ ಜುವೆಲರಿ ಉದ್ಯಮಿಗಳು ಭಾಗ ವಹಿಸಿದ್ದರು.