Udupi ಪಾರ್ಟ್ಟೈಮ್ ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ
Team Udayavani, Jan 3, 2024, 12:42 AM IST
ಉಡುಪಿ: ಪಾರ್ಟ್ಟೈಮ್ ಉದ್ಯೋಗದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.
ಪ್ರಶಾಂತ್ ಅವರನ್ನು ಯಾರೋ ಅಪರಿಚಿತ ವ್ಯಕ್ತಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ಪಾರ್ಟ್ಟೈಮ್ ಉದ್ಯೋಗ ನೀಡುವುದಾಗಿ ನಂಬಿಸಿ, ಟಾಸ್ಕ್ ಪೂರ್ಣಗೊಳಿಸಲು ತಿಳಿಸಿದ್ದರು. ಬಳಿಕ ಟಾಸ್ಕ್ ನಿಂದ ಬಂದ ಹಣವನ್ನು ಪಡೆಯಲು ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗೆ ಹಣವನ್ನು ಪಾವತಿಸಲು ತಿಳಿಸಿದ್ದರು. ಅದರಂತೆ ಅ.22ರಿಂದ 30ರ ನಡುವೆ ಆರೋಪಿಗಳು ಸೂಚಿಸಿರುವ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 3,01,000ರೂ.ಗಳನ್ನು ಆನ್ಲೈನ್ ಮೂಲಕ ವರ್ಗಾಯಿಸಿದ್ದರು. ಆದರೆ ಆರೋಪಿಗಳು ಟಾಸ್ಕ್ ನಡೆಸಿ ಬಂದ ಹಣ ಹಾಗೂ ಪಡೆದ ಹಣವನ್ನು ಹಿಂದಿರುಗಿಸದೆ ನಷ್ಟ ಉಂಟುಮಾಡಿದ್ದಾರೆ.
ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Borewell: ಬರದ ಮಧ್ಯೆ ಜಲಮಂಡಳಿ ಕೊರೆಸಿದ ಶೇ.90 ಬೋರ್ಗಳು ಸಕ್ಸಸ್
Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್
ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
Thomas Cup: ಬ್ಯಾಡ್ಮಿಂಟನ್; ಭಾರತದ ಆಟಕ್ಕೆ ತೆರೆ
ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!