ನೆನೆಯುವ ಅನುದಿನ; ಕೋಟೇಶ್ವರದ ಕೋಟಿಲಿಂಗೇಶ್ವರ, ಕುಂದಾಪುರ‌ದ ಕುಂದೇಶ್ವರ


Team Udayavani, Feb 21, 2020, 5:40 AM IST

shivaratri

ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ ಎನ್ನುತ್ತದೆ ಒಂದು ಹಾಡು. ಶಿವನನ್ನು ಭಜಿಸುವುದರ ಮಹತ್ವ ಇಂಥದ್ದು. ಅಂಥ ಮಹಾಶಿವನದಿನವಿದು, ಶಿವರಾತ್ರಿ. ಉಪವಾಸ, ಜಾಗರಣೆಗಳೊಂದಿಗೆ ಲಯಾಧಿಪತಿ ಸದಾಶಿವನ ಭಜನೆ ಈ ದಿನದ ವೈಶಿಷ್ಟé. ನಾಡಿನ ಎಲ್ಲ ಶಿವ ದೇಗುಲಗಳು ಶಿವರಾತ್ರಿ ಆಚರಣೆಗೆ ಸಿದ್ಧವಾಗಿವೆ. ಮನೆಗಳಲ್ಲೂ ಹರನಿಗೆ ವಿಶೇಷ ಅರ್ಚನೆ, ಅಭಿಷೇಕ ಇತ್ಯಾದಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ವಿವಿಧ ದೇವಾಲಯಗಳ ಶಿವರಾತ್ರಿ ಸಂಭ್ರಮದ ಇಣುಕುನೋಟ ಇಲ್ಲಿದೆ.

ಕೆದೂರು ಮಹಾಲಿಂಗೇಶ್ವರ ದೇವಸ್ಥಾನ
ಕೆದೂರು: ಕುಂದಾಪುರದಿಂದ 16 ಕಿ.ಮೀ. ದೂರವಿದ್ದು, ರಾ.ಹೆ.66 ತೆಕ್ಕಟ್ಟೆ- ಕೆದೂರು,  ದಬ್ಬೆಕಟ್ಟೆ ಮಾರ್ಗವಾಗಿ ಪೂರ್ವಾಭಿಮುಖವಾಗಿ ಸಾಗಿದಾಗ ಕೆದೂರು ರೈಲ್ವೇ ಬ್ರಿಜ್‌ನ ಎಡಭಾಗ ರಸ್ತೆಯಲ್ಲಿ ಸಾಗಿದಾಗ ಕಂಗೊಳಿಸುವ ಸುಂದರ ದೇಗುಲವೇ ಕೆದೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.

ಅಪೂರ್ವ ಇತಿಹಾಸ ವನ್ನು ಹೊಂದಿರುವ ಈ ದೇಗುಲವು ಪರಿಸರವು ಹಚ್ಚ ಹಸಿರಿನ ಕಾನನದ ನಡುವೆ ಕಂಗೊಳಿಸುತ್ತಿದೆ. ಈ ದೇಗುಲಕ್ಕೆ ತೆರಳುವುದು ಭಕ್ತಿ-ಭಾವ ಮೂಡಿಸುತ್ತದೆ. ನಂಬಿದ ಭಕ್ತರಿಗೆ ಸಕಲ ಇಷ್ಟಾರ್ಥವನ್ನು ಸಿದ್ಧಿಸುವ ಕ್ಷೇತ್ರ ಇದಾಗಿದೆ.

ಈ ಬಾರಿಯ ವಿಶೇಷ:
ಪ್ರತಿ ವರ್ಷ ಮಹಾ ಶಿವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ರುದ್ರಾಭಿಷೇಕ, ರಂಗಪೂಜೆ ಹಾಗೂ ಭಜನ ಕಾರ್ಯಕ್ರಮಗಳು ನಡೆಯಲಿವೆ.

ಬೇಳೂರು ದೇಲಟ್ಟು ಮಹಾಲಿಂಗೇಶ್ವರ ದೇವಸ್ಥಾನ
ಬೇಳೂರು: ತೆಕ್ಕಟ್ಟೆ ಮಾರ್ಗವಾಗಿ ಉಳೂ¤ರು ಟ್ಯಾಂಕ್‌ ಬಳಿ ಬಲ ತಿರುವಿನಲ್ಲಿ ಸಾಗಿ ಬೇಳೂರು ಬಡಾಬೆಟ್ಟು ಶಾಲಾ ಬಳಿ ಇರುವ ದೇಗುಲದ ಮಹಾದ್ವಾರದಿಂದ ಒಳ ಪ್ರವೇಶಿಸಿದಾಗ ಸಿಗುವ ಉದ್ಭವ ಮೂರ್ತಿ ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.
ಹಿಂದೆ ಇಲ್ಲಿನ ಧನ್ಯಾಡಿ (ದನ ,ಹಾಡಿ) ಮನೆತನದವರು ಸಾಕಿದ ದನವೊಂದು ಇಲ್ಲಿನ ಉದ್ಭವ ಲಿಂಗದ ಮೇಲೆ ಹಾಲು ಸುರಿಸಿದ್ದು , ದೇವರ ಹಟ್ಟಿ ದೇಲಟ್ಟು ಆಯಿತು ಎನ್ನುವ ಪ್ರತೀತಿ ಇದೆ. ಮದುವೆ ನಿಶ್ಚಿತಾರ್ಥ ಪೂರ್ವದ ಪ್ರಸಾದ ನೋಡುವ ಪದ್ಧತಿ ಕಳೆದ ಹಲವು ದಶಕಗಳಿದಂಲೂ ನಡೆಯುತ್ತಿದೆ.

ಈ ಬಾರಿಯ ವಿಶೇಷ: ದೇವತಾ ಪ್ರಾರ್ಥನೆ, ಮಂಗಳಾ ರತಿ, ಹರಿವಾಣ ನೈವೇದ್ಯ, ರುದ್ರಾಭಿಷೇಕ, ಮೂಡುಗಣಪತಿ, ತುಲಾಭಾರ ಸೇವೆ, ಮಹಾಪೂಜೆ ಸೇವೆಗಳು ನಡೆಯಲಿವೆ.

ಕುಂದಾಪುರ‌ ಮೈಲಾರೇಶ್ವರ ದೇವಸ್ಥಾನ
ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ಚಿಕ್ಕನ್‌ಸಾಲ್‌ ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನದ ಮೈಲಾರಮಠ ಶ್ರೀ ವಿಶ್ವೇಶ್ವರ ದೇವರು ಭಕ್ತರ ಮನದಿಚ್ಛೆಗಳನ್ನು ಪರಿಹರಿಸುವ ಭಕ್ತಾಧೀನ. ದೇವಾಲಯದ ಬಿಲ್ವಪತ್ರೆ ಮರ ದೇವರ ಕಲಶದ ಮೇಲೆ ಹಾದುಹೋಗಿದ್ದು ಅತ್ಯಂತ ವಿಶೇಷವಾಗಿದೆ. ಈ ದೇವಾಲಯ ಎರಡು ಜಿಲ್ಲೆಗಳಲ್ಲಿ ಇರುವ ಏಕೈಕ ಮೈಲಾರೇಶ್ವರ ದೇವಾಲಯವಾಗಿದೆ. ನಂದಿ ಹಾಗೂ ನವಗ್ರಹ ವಿಗ್ರಹಗಳು ಆಕರ್ಷಣೀಯವಾಗಿದೆ. ಶಿವರಾತ್ರಿ ಮತ್ತು ಇತರ ವಿಶೇಷ ದಿನಗಳಂದು ಹೆಚ್ಚಿನ ಸಂಖ್ಯೆಯಯಲ್ಲಿ ದೇಗುಲಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ.

ಈ ಬಾರಿಯ ವಿಶೇಷ: ಹೂವಿನ ಅಲಂಕಾರ, ದೀಪಾ ಲಂಕಾರ, ಶತರುದ್ರಾಭಿಷೇಕ, ಭಕ್ತರಿಂದ ಶ್ರೀದೇವರ ನಾಮ ಸಂಕೀರ್ತನೆ, ರಾತ್ರಿ ರಂಗಪೂಜೆ ನಡೆಯಲಿದೆ.

ಮರಾತೂರು ಮಹಾಲಿಂಗೇಶ್ವರ ದೇವಸ್ಥಾನ
ಮೊಳಹಳ್ಳಿ: ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಇತಿಹಾಸ ಪ್ರಸಿದ್ಧ ಮರಾತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಪ್ರಾಕಾರ ವಿನಾಯಕ ದೇವಸ್ಥಾನವು ನಿಸರ್ಗ ರಮಣೀಯವಾದ ಹರಿಯುವ ವಾರಾಹಿ ನದಿಯ ತಟದಿಂದ ಸುಮಾರು 75 ಅಡಿ ಎತ್ತರದಲ್ಲಿ ಕಂಗೊಳಿಸುವ ಈ ದೇಗುಲ ಭಕ್ತರ ಸಕಲ ಇಷ್ಟಾರ್ಥವನ್ನು ಕರುಣಿ ಸುವ ಪುಣ್ಯಕ್ಷೇತ್ರ ಇದಾಗಿದೆ.ಹಿಂದೆ ಈ ಸ್ಥಳದಲ್ಲಿ ಮರತು ಎಂಬ ಋಷಿಮುನಿ ತಪಸ್ಸು ಮಾಡಿದ ಈ ಪುಣ್ಯಭೂಮಿ ಆದ್ದರಿಂದ ಈ ಗ್ರಾಮವನ್ನು ಮರಾತೂರು ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತಿದೆ. ಹಿಂದೆ ಇಲ್ಲಿ ವೈಭವದ ರಥೋತ್ಸವ ನಡೆಯುತ್ತಿತ್ತಂತೆ.
ಈ ಬಾರಿಯ ವಿಶೇಷ: ಪ್ರತಿ ವರ್ಷ ಮಹಾ ಶಿವರಾತ್ರಿ ಪ್ರಯುಕ್ತ ದೇಗುಲದಲ್ಲಿ ಶತರುದ್ರಭಿಷೇಕ, ರಂಗಪೂಜೆ , ಭಜನ ಮಂಗಲೋತ್ಸವ ನಡೆಯಲಿದೆ.

ಯಡಾಡಿ ಮಹಾಲಿಂಗೇಶ್ವರ ದೇವಸ್ಥಾನ
ಬಿದ್ಕಲ್‌ಕಟ್ಟೆ: ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಯಡಾಡಿ ಶ್ರೀ ಮಹಾಲಿಂಗೇಶ್ವರ ದೇಗುಲ ಹಚ್ಚ ಹಸಿರಿನ ಕಾನನಗಳ ನಡುವೆ ಕಂಗೊಳಿಸುತ್ತಿದ್ದಾನೆ. ಪ್ರತಿವರ್ಷ ಹೋಳಿ ಹುಣ್ಣಿಮೆಯಂದು ಇಲ್ಲಿ ಶ್ರೀದೇವರ ಮನ್ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರುತ್ತದೆ. ಗರಿಷ್ಠ ಸಂಖ್ಯೆಯಲ್ಲಿ ಇದಕ್ಕೆ ಭಕ್ತರೂ ಆಗಮಿಸುತ್ತಾರೆ.ಇಲ್ಲಿನ ಶಿಲಾ ಶಾಸನದ ಪ್ರಕಾರ ಗತಕಾಲದಿಂದಲೂ ಜೈನ ಕಾಲದ ಆಡಳಿತಾವಧಿಯಲ್ಲಿತ್ತು. ಖರಾಸುರನು ತನ್ನ ಎಡಭುಜದಲ್ಲಿರಿಸಿ ಈ ಉದ್ಭವ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ ಎನ್ನುವ ಬಗ್ಗೆ ಐತಿಹ್ಯವಿದೆ.

ಈ ಬಾರಿಯ ವಿಶೇಷ: ದೇಗುಲದಲ್ಲಿ ಶತರುದ್ರಾಭಿಷೇಕ, ರಂಗಪೂಜೆ ಹಾಗೂ ಭಜನೆ ಕಾರ್ಯಕ್ರಮಗಳು ನಡೆಯಲಿವೆ.

ಶಾನಾಡಿ ಬೆಳಗೋಡು ಮಹಾಲಿಂಗೇಶ್ವರ ದೇವಸ್ಥಾನ
ಶಾನಾಡಿ: ಬೆಳಗೋಡು ಶ್ರೀ ಮಹಾಲಿಂಗೇಶ್ವರ ದೇಗುಲವು ಕಾನನದ ನಡುವೆ ವಿರಾಜಮಾನನಾಗಿ ಭಕ್ತರ ಇಷ್ಟಾರ್ಥಗಳನ್ನು ಕರುಣಿಸುತ್ತಿದ್ದಾನೆ.ಮುನಿಯೊಬ್ಬರು ದೈವಿ ಸಂಕಲ್ಪದಂತೆ ಅಂದು 3 ಲಿಂಗ ಹೊತ್ತು ತಂದು ಒಂದು ಭುಜದ ಲಿಂಗವನ್ನು ಯಡಾಡಿಯಲ್ಲಿ ಸ್ಥಾಪಿಸಿ ಅಲ್ಲಿಂದ ಮೂರು ಮೈಲಿ ದೂರದಲ್ಲಿರುವ ಬೆಳಗೋಡಿನಲ್ಲಿ ಶಿರದ ಲಿಂಗವನ್ನು ಅಲ್ಲಿಂದ ಮೂರು ಮೈಲಿ ದೂರ ದಲ್ಲಿರುವ ಉಳೂ¤ರಿನಲ್ಲಿ ಸ್ಥಾಪಿಸಿದರಂತೆ.
ಹೀಗೆ ಶಿರದ ಮೇಲಿನ ಶ್ರೇಷ್ಠ ಲಿಂಗವಾಗಿರುವ ಬೆಳಗೋಡು ಶ್ರೀ ಮಹಾಲಿಂಗೇಶ್ವರ ಭಕ್ತರ ಅಭೀಷ್ಟ ಈಡೇರಿಸುತ್ತಿದ್ದಾನೆ.

ಈ ಬಾರಿಯ ವಿಶೇಷ: ರುದ್ರಾಭಿಷೇಕ, ಶಿವ ಸ್ತುತಿ, ಶಿವರಾತ್ರಿ ಜಾಗರಣೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಕೋಟೇಶ್ವರ ಕೋಟಿಲಿಂಗೇಶ್ವರ ದೇಗುಲ
ಕೋಟೇಶ್ವರ : ಪುರಾಣ ಪ್ರಸಿದ್ದ ಸಪ್ತ ಕ್ಷೇತ್ರಗಳಲ್ಲೊಂದಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಫೆ.21 ರಂದು ಮಹಾ ಶಿವರಾತ್ರಿ ಉತ್ಸವ ನಡೆಯಲಿದೆ. ಆಸುಪಾಸಿನ 14 ಗ್ರಾಮಗಳ ನಂಬಿದ ಭಕ್ತರ ಪುಣ್ಯ ಕ್ಷೇತ್ರವಾದ ಶ್ರೀ ಕೋಟಿಲಿಂಗೇಶ್ವರ ದೇಗುಲವು 1400 ವರುಷಗಳ ಇತಿಹಾಸಹೊಂದಿದೆ. ಇಲ್ಲಿನ 4.30 ಎಕರೆ ವಿಸ್ತೀರ್ಣದ ಬೃಹತ್‌ ಕೆರೆ ಸನಾತನ ಪರಂಪರೆಯನ್ನು ಉಲ್ಲೇಖೀಸುತ್ತದೆ.

ಈ ಬಾರಿಯ ವಿಶೇಷ: ಬೆಳಗ್ಗೆ ಶಿವ ಸಹಸ್ರನಾಮಾವಳಿ ಪಠಣ, ಮಧ್ಯಾಹ್ನ ಮಹಾಪೂಜೆ, ರಾತ್ರಿ ದೊಡ್ಡ ರಂಗ ಪೂಜೆ, ಸಣ್ಣ ರಥೋತ್ಸವ ಹಾಗೂ ಕಾಮದಹನ ನಡೆಯಲಿದೆ. ಜಾಗರಣೆ ಅಂಗವಾಗಿ ಅಖಂಡ ಭಜನೆ, ಕೋಟಿಲಿಂಗೇಶ್ವರ ಕಲಾಬಳಗ ವತಿಯಿಂದ ಶಿವಪಂಚಾಕ್ಷರಿ ಯಕ್ಷಗಾನ ನಡೆಯಲಿದೆ.

ಬೈಂದೂರು ಸೇನೇಶ್ವರ ದೇವಸ್ಥಾನ
ಬೈಂದೂರು: ಮಹತೋಭಾರ ಶ್ರೀಸೇನೇಶ್ವರ ದೇವಸ್ಥಾನ ಬೈಂದೂರು ಇದರ ಮಹಾಶಿವರಾತ್ರಿ ಉತ್ಸವ ಫೆ.21 ರಂದು ನಡೆಯಲಿದೆ. ಐತಿಹಾಸಿಕ ಹಿನ್ನೆಲೆಯಿರುವ ಈ ದೇವಸ್ಥಾನ ಬೈಂದೂರಿನ ಗ್ರಾಮದೇವರಾಗಿದೆ. ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ದೇವಸ್ಥಾನ ಅತ್ಯಾಕರ್ಷಕ ಶಿಲ್ಪಕಲಾ ವೈಭವವನ್ನು ಹೊಂದಿದೆ. ಶಿವರಾತ್ರಿಯಂದು ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಈ ಬಾರಿಯ ವಿಶೇಷ: ಬೆಳಗ್ಗೆ 10 ಗಂಟೆಗೆ ಸಾಮೂಹಿಕ ನವಗ್ರಹಯುಕ್ತ ರುದ್ರಹೋಮ, ಸಂಜೆ ಶತರುದ್ರ, ಮಹಾ ಮಂಗಳಾರತಿ, ಪನಿವಾರ ವಿತರಣೆ, ರಾತ್ರಿ 9.30ಕ್ಕೆ ಮಹಾ ಮಂಗಳಾರತಿ ನಗರೋತ್ಸವ ನಡೆಯಲಿದೆ.

ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ
ಉಪ್ಪುಂದ: ಕಿರಿಮಂಜೇಶ್ವರ ಕರಾವಳಿ ತೀರದಲ್ಲಿ ಅಗಸ್ತ್ಯೇ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ದೇಗುಲದಲ್ಲಿ ಅತಿ ವಿಶಿಷ್ಟ ದೇಗುಲವಾಗಿದೆ. ಇದು ಅಗಸ್ತ್ಯ ಮುನಿಗಳ ತಪೋಕ್ಷೇತ್ರವೆಂದೂ ಪ್ರಸಿದ್ಧಿ ಹೊಂದಿದೆ. ಇಲ್ಲಿನ ಕಮಂಡಲ ತೀರ್ಥ ಅತ್ಯಂತ ಪವಿತ್ರವಾಗಿದೆ. ದೇವರ ಅಭಿಷೇಕಕ್ಕೆ ಇದೇ ತೀರ್ಥವನ್ನು ಬಳಸಲಾಗುತ್ತದೆ. ಸದಾ ತುಂಬಿರುವ ತೀರ್ಥ ಕೆರೆಗಳು ದೇಗುಲದ ಹಿರಿಮೆಯನ್ನು ಹೆಚ್ಚಿಸಿದೆ. ಪರಿವಾರ ದೇವರಾಗಿರುವ ಬಾಲ ಗಣಪತಿ, ವಿಶಾಲಾಕ್ಷಿ ಅಮ್ಮನವರ ಸನ್ನಿಧಿಯು ಭಕ್ತರ ಇಷ್ಟಾರ್ಥ ಸಿದ್ಧಿ ಕ್ಷೇತ್ರವಾಗಿದೆ.

ಈ ಬಾರಿಯ ವಿಶೇಷ: ಧಾರ್ಮಿಕ ವಿಧಿವಿಧಾನಗಳು, ಬಿಲ್ವಾರ್ಚನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕಗಳೊಂದಿಗೆ ವಿಶೇಷ ರುದ್ರಹೋಮ ನಡೆಯಲಿದೆ.

ಕುಂದಾಪುರ ಕುಂದೇಶ್ವರ ದೇವಸ್ಥಾನ
ಕುಂದಾಪುರ: ಕುಂದವರ್ಮನಿಂದ ಪ್ರತಿಷ್ಠಾಪಿಸಲ್ಪಟ್ಟ ಕುಂದೇಶ್ವರ ದೇವಾಲಯಕ್ಕೆ ಶೃಂಗೇರಿ ಧರ್ಮ ಸಂಸ್ಥಾನದ ಸಂಬಂಧ ಇದೆ. ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ನರಸಿಂಹ ಭಾರತಿ ವೊಡೆಯರಿಗೆ ಸಂಬಂಧಿ ಸಿದ ಈ ಭೂಮಿ ಮುಂದೆ ವಡೇರ ಹೋಬಳಿ ಎಂದೇ ಪ್ರಸಿದ್ಧಿ ಪಡೆ ಯಿತು ಎಂದು ಈ ಶಾಸನ ಸಾರುತ್ತದೆ. ಕುಂದೇಶ್ವರನ ಜತೆಗೆ ಗಣಪತಿ, ಅಮ್ಮನವರು, ನಾಗದೇವತೆ, ಅಯ್ಯಪ್ಪ ಸ್ವಾಮಿ ಗುಡಿಗಳಿವೆ. ಇಲ್ಲಿಯ ಪುಷ್ಕರಣಿಯಲ್ಲಿ ಸ್ಥಾಪಿತವಾದ ಧ್ಯಾನಸ್ಥ ಶಿವನ ಗಂಗಾವತರಣ ಹಾಗೂ ರಾಜಗೋಪುರ ವಿಶೇಷ ಆಕರ್ಷಣೆಯಾಗಿದೆ.

ಈ ಬಾರಿಯ ವಿಶೇಷ: ರುದ್ರಾಭಿಷೇಕ, ಜಲಾಭಿಷೇಕ, ಬಿಲ್ವಾರ್ಚನೆ, ನಂದಾದೀಪ, ಸಂಜೆ ಶಿವರಾತ್ರಿ ಅಘÂìಪ್ರದಾನ, ದೇವರಿಗೆ ರಂಗಪೂಜೆ ನಡೆಯುತ್ತದೆ.

ವನಕೊಡ್ಲು ಮಹಾಲಿಂಗೇಶ್ವರ ದೇವಸ್ಥಾನ
ಬೈಂದೂರು: ಗಂಗನಾಡು ವನಕೊಡ್ಲು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪೂಜೆ ಅತ್ಯಂತ ವಿಶೇಷವಾಗಿದೆ. ಶಿವರಾತ್ರಿಯಂದು ಶಿವ ಲಿಂಗವನ್ನು ಮುಟ್ಟಿಪೂಜೆ ಮಾಡು ತ್ತಾರೆ. ಸುಮಾರು 11ನೇ ಶತಮಾನದಲ್ಲಿ ಗಂಗರಸದಿಂದ ನಿರ್ಮಿ ಸಲ್ಪಟ್ಟ ಈ ದೇವಸ್ಥಾನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.ಅಷ್ಟ ಮಂಗಲ ಪ್ರಶ್ನೆ ಚಿಂತನೆ ನಡೆಸಿದಾಗ ಮಹಾ ಲಿಂಗೇಶ್ವರ ಸಾನ್ನಿಧ್ಯ, ಶ್ರೀವೈದ್ಯನಾಥ, ಮೃತ್ಯುಂಜಯ ಎಂಬ ತ್ರಿವಿಧ ಶಿವನ ಶಕ್ತಿಗಳ ಸಾನ್ನಿಧ್ಯ ಹೊಂದಿರುವುದು ತಿಳಿದುಬಂದಿದೆ. ದೇವಸ್ಥಾನದ ಎದುರುಗಡೆ ಕೆರೆ ಇದ್ದು ಶಿವರಾತ್ರಿಯಂದು ಕೆರೆಯ ನೀರನ್ನು ಭಕ್ತರು ಪ್ರೋಕ್ಷಣೆ ಮಾಡಿಕೊಳ್ಳುತ್ತಾರೆ.

ಈ ಬಾರಿಯ ವಿಶೇಷ: ದೇವಸ್ಥಾನದಲ್ಲಿ ಶಿವರಾತ್ರಿ ಪೂಜೆ ಅತ್ಯಂತ ವಿಶೇಷವಾಗಿದೆ. ಬಿಲ್ವಾರ್ಚನೆ, ಅಭಿಷೇಕಗಳೂ ನಡೆಯುತ್ತವೆ.

ಉಳ್ತೂರುಮಹಾಲಿಂಗೇಶ್ವರ ದೇವಸ್ಥಾನ
ಉಳ್ತೂರು: ತೆಕ್ಕಟ್ಟೆಯಿಂದ ಮಲ್ಯಾಡಿ ಮಾರ್ಗವಾಗಿ ಪೂರ್ವಾಭಿಮುಖವಾಗಿ ಚಲಿಸಿದಾಗ ಕಂಗೊಳಿಸುವ ಭವ್ಯ ದೇಗುಲವೇ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.ಸುಮಾರು 800 ವರ್ಷಗಳ ಅಪೂರ್ವ ಇತಿಹಾಸವಿರುವ ಈ ದೇವಸ್ಥಾನ ನೆನೆದ ಭಕ್ತರ ಮನದಲ್ಲಿ ಪವಾಡ ಸದೃಶ್ಯ ಸಾಕಾರ ಮೂರ್ತಿಯಾಗಿ “ಮಾಳತೂರು ಕೇರಿಯ ಮಹಾದೇವ’ ನಾಗಿ ಭಕ್ತರಿಗೆ ಸಕಲ ಇಷ್ಟಾರ್ಥವನ್ನು ಕರುಣಿಸುತ್ತಾನೆ ಎಂಬ ಪ್ರತೀತಿ ಇದೆ. ಶಿವರಾತ್ರಿ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ.

ಈ ಬಾರಿಯ ವಿಶೇಷ: ರುದ್ರಾಭಿಷೇಕ, ಭಜನ ಕಾರ್ಯಕ್ರಮ ಹಾಗೂ ಕಾಮದಹನ ಕಾರ್ಯಕ್ರಮ ನಡೆಯಲಿದೆ.

ಕುಂಭಾಸಿ ಮಹಾಲಿಂಗೇಶ್ವರ ದೇಗುಲ
ಕುಂಭಾಸಿ: ಕುಂಭಾಸಿ (ಕುಂಭಕಾಶಿ) ಮುಕ್ತಿಪ್ರದ ಕ್ಷೇತ್ರ. ಶ್ರೀ ಪರಶುರಾಮ ದೇವರಿಂದ ಚಿನ್ನದ ಗುಹೆಗಳಲ್ಲಿ ಪೂಜಿಸಲ್ಪಟ್ಟ ಹರಿಹರರಿಂದ ಇದು ಕೃತ ಯುಗದಲ್ಲಿ ಹರಿಹರ ಕ್ಷೇತ್ರವಾಯಿತು. ತ್ರೇತಾ ಯುಗದಲ್ಲಿ ಹನು ಮಂತ ಸಂಜೀವಿನಿ ಪರ್ವತವನ್ನು ಒಯ್ಯುವಾಗ ಅದರ ತುಂಡೊಂದು ಬಿದ್ದು ದೇವಸ್ಥಾನ ಮುಚ್ಚಿ ಹೋಗಿ ಮಧುವನ ಎಂದು ಪ್ರಸಿದ್ಧವಾಯಿತು. ಮಧು ಎಂಬ ಹೆಸರುಳ್ಳ ವಸಂತನ ತಪಸ್ಸಿಗೆ ಒಲಿದು ಬಂದ ಹರಿ. ಸೂರ್ಯ, ಚಂದ್ರರೂ ಇಲ್ಲಿ ಉಗ್ರವಾದ ತಪಸ್ಸನ್ನು ಆಚರಿಸಿದರು. ಇವರ ತಪಸ್ಸಿಗೆ ಮೆಚ್ಚಿದ ರುದ್ರ ದೇವರು ಪ್ರತ್ಯಕ್ಷರಾಗಿ ಇಲ್ಲಿರುವ ಸೂರ್ಯ- ಚಂದ್ರ ಪುಷ್ಕರಣಿ ಎಂದು ಹೆಸರು ಬರುವಂತೆ ವರ ನೀಡಿದರು ಎಂದು ಕಥೆಯಿದೆ.

ಈ ಬಾರಿಯ ವಿಶೇಷ: ಏಕಾದಶ ರುದ್ರಾಭಿಷೆೇಕ, ಶಿವ ಸ್ತುತಿ ಹಾಗೂ ನರಸಿಂಹ ಸ್ತುತಿ ಪಠಣ, ರುದ್ರ ಪಠಣ, ಭಜನೆ ಹಾಗೂ ರಂಗಪೂಜೆ ನಡೆಯಲಿದೆ.

ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ
ತೆಕ್ಕಟ್ಟೆ: ರಾ.ಹೆ.66 ಸಮೀಪದಲ್ಲಿರುವ ದೇಗುಲವೇ ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.ಪಾಳೆಯಗಾರರ ಕಾಲದ ತೆಂಕಣ ಸುಂಕದ ಕಟ್ಟೆ, ಕೋಟೇಶ್ವರ ಕೋಟಿಲಿಂಗೇಶ್ವರನ ವೈಭವದ ಮೆರವಣಿಗೆಯ ತೆಂಕಣಕಟ್ಟೆ ಇಂದಿನ ತೆಕ್ಕಟ್ಟೆಯಾಯಿತು.ಕ್ರಿ.ಶ.1563 ರಲ್ಲಿ ವಿಜಯ ನಗರ ಸಾಮ್ರಾಜ್ಯವನ್ನು ಸದಾಶಿವರಾಯ ಅಳ್ವಿಕೆ ಒಳಪಟ್ಟ ಸ್ತ್ರೀ ಪುರುಷ ಶಕ್ತಿ ಸಮ್ಮಿಳಿತವಾದ ಉಮಾ ಮಹೇಶ್ವರ ದೇಗುಲ ಇದಾಗಿದೆ. ಶಿವರಾತ್ರಿಯಂದು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಈ ದೇಗುಲ ಆಕರ್ಷಿಸುತ್ತಿದೆ.

ಈ ಬಾರಿಯ ವಿಶೇಷ:ರುದ್ರಾಭಿಷೇಕ, ಶಿವ ಸ್ತುತಿ ಹಾಗೂ ಅಹೋರಾತ್ರಿ ಭಜನ ಕಾರ್ಯಕ್ರಮ ಮತ್ತು ಕಾಮದಹನ ಕಾರ್ಯಕ್ರಮ ನಡೆಯಲಿದೆ.

ಬೇಳೂರು ಮಹಾಲಿಂಗೇಶ್ವರ ದೇವಸ್ಥಾನ
ಬೇಳೂರು: ತೆಕ್ಕಟ್ಟೆ ದಬ್ಬೆಕಟ್ಟೆ ಮಾರ್ಗವಾಗಿ ಉಳೂ¤ರು ಟ್ಯಾಂಕ್‌ ಬಳಿ ಬಲ ತಿರುವಿನ ಮೂಲಕ ಸಾಗಿದಾಗ ಸಿಗುವ ದೇಗುಲವೇ ಬೇಳೂರು ದೇವಸ್ಥಾನ ಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ಸಂತಾನ ಪ್ರಾಪ್ತಿ , ಮಳೆ ಬೆಳೆಗಳು ಸಮೃದ್ಧವಾಗುವ ಜತೆಗೆ ಭಕ್ತರಿಗೆ ಸಕಲ ಇಷ್ಟಾರ್ಥವನ್ನು ಕರುಣಿಸುತ್ತಾನೆ ಎನ್ನುವಂತದ್ದು ಇಲ್ಲಿನ ಪೌರಾಣಿಕ ಹಿನ್ನೆಲೆ . ದೇಗುಲದ ಪರಿಸರದಲ್ಲಿ ಅತ್ಯಂತ ಫಲವತ್ತಾದ ಕೃಷಿ ಭೂಮಿಗಳನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ವಾಡಿಕೆಯಂತೆ ಏಳೂರು ಕೊಟ್ಟರು, ಬೇಳೂರು ಕೊಡೆವು ಎನ್ನುವ ಗಾದೆ ಜನಜನಿತವಾಗಿದೆ.

ಈ ಬಾರಿಯ ವಿಶೇಷ: ರುದ್ರಾಭಿಷೇಕ, ರಂಗಪೂಜೆ, ವಿವಿಧ ಅರ್ಚನೆಗಳು, ಭಜನೆ ಕಾರ್ಯಕ್ರಮಗಳು ನಡೆಯಲಿವೆ.

ಪಂಚ ಶಂಕರನಾರಾಯಣ ಕ್ಷೇತ್ರಗಳು
ಸಿದ್ದಾಪುರ: ಪುರಾಣ ಪ್ರಸಿದ್ಧ ಮೋಕ್ಷದಾಯಕ ಕ್ಷೇತ್ರಗಳಲ್ಲಿ ಪಂಚ ಶಂಕರನಾರಾಯಣ ಕ್ಷೇತ್ರಗಳು ಒಂದಾಗಿದೆ. ಈ ಪಂಚ ಶಂಕರನಾರಾಯಣ ಕ್ಷೇತ್ರದಲ್ಲಿ ಶಂಕರ ಮತ್ತು ನಾರಾಯಣ ದೇವರು ಲಿಂಗರೂಪದಲ್ಲಿ ಜಲದಲ್ಲಿ ಐಕ್ಯವಾಗಿರುವ ನೆಲೆಯಿದು. ಖರರಟ್ಟಾಸುರರ ಸಂಹಾರಕ್ಕಾಗಿ ದೇವತೆಗಳಿಂದ ಪ್ರೇರಪಿಸಲ್ಪಟ್ಟ ಪಂಚ ಮಹರ್ಷಿಗಳು ಖರರಟ್ಟಾಸುರರ ರಾಜಧಾನಿಯ ಪಂಚ ದಿಕ್ಕುಗಳಲ್ಲಿ ತಪಸ್ಸನಾಚರಿಸಿದ ಸ್ಥಳಗಳು ಕ್ಷೇತ್ರಗಳಾಗಿ ಪರಿಣಮಿಸಿವೆ. ಕ್ರೋಢ, ಲೋಮಶ, ಮಾಂಡವ್ಯ, ಅಗಸ್ತÂ, ಜಮದಗ್ನಿ ಪಂಚ ದಿಕ್ಕುಗಳಲ್ಲಿ ಶಿವ ಹಾಗೂ ವಿಷ್ಣು ಕುರಿತು ತಪಸ್ಸನ್ನು ಆಚರಿಸಿದರು. ಕ್ರೋಢ ಮಹರ್ಷಿ ತಪಸ್ಸನಾಚರಿಸಿದ ಸ್ಥಳ ಕ್ರೋಢ ಶ್ರೀ ಶಂಕರನಾರಾಯಣ, ಲೋಮಶ ಮಹರ್ಷಿ ತಪಸ್ಸನಾಚರಿಸಿದ ಸ್ಥಳ ಸಿದ್ದಾಪುರ ಸಮೀಪದ ಹೊಳೆ ಶಂಕರನಾರಾಯಣ, ಮಾಂಡವ್ಯ ಮಹರ್ಷಿ ತಪಸ್ಸನಾಚರಿಸಿದ ಸ್ಥಳ ಅಮಾಸೆಬೈಲು ಸಮೀಪದ ಮಾಂಡವಿ ಶಂಕರನಾರಾಯಣ, ಅಗಸ್ತÂ ಮಹರ್ಷಿ ತಪಸ್ಸನಾಚರಿಸಿದ ಸ್ಥಳ ಬೆಳ್ವೆ ಗ್ರಾಮದ ಬೆಳ್ವೆ ಶಂಕರನಾರಾಯಣ, ಜಮದಗ್ನಿ ಮಹರ್ಷಿ ತಪಸ್ಸನಾಚರಿಸಿದ ಸ್ಥಳ ಅವರ್ಸೆ ಗ್ರಾಮದ ಆವರ್ಸೆ ಶಂಕರನಾರಾಯಣ. ಈ ಪಂಚ ಸ್ಥಳಗಳು ಕ್ಷೇತ್ರಗಳಾಗಿವೆ. ಶಿವರಾತ್ರಿಯಂದು ಈ ಪಂಚ ಕ್ಷೇತ್ರಗಳಿಗೆ ಸಂದರ್ಶಿಸಿದರೆ, ಪಾಪ ನಾಶವಾಗುತ್ತದೆ ಎನ್ನುವ ಪ್ರತೀತಿ ಇದೆ.

ಕ್ರೋಢ ಶಂಕರನಾರಾಯಣ
ಈ ಬಾರಿಯ ವಿಶೇಷ: ಕ್ರೋಢ ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಪೂರ್ವಾಹ್ನ 9ರಿಂದ ಮಧ್ಯಾಹ್ನ 12ರ ತನಕ ಶತರುದ್ರಾಭಿಷೇಕ, ಮಹಾಪೂಜೆ, ಸಂಜೆ 6ರಿಂದ 8ರ ತನಕ ಶಂಕರನಾರಾಯಣ ಯಕ್ಷಗಾನ ಬಾಲಕ ಸಂಘದಿಂದ ಯಕ್ಷಗಾನ ಪ್ರದರ್ಶನ, ರಾತ್ರಿ 9ರಿಂದ ಮಹಾ ರಂಗಪೂಜೆ, ಪಲ್ಲಕಿ ಉತ್ಸವ, ಪುಷºಕ ರಥೋತ್ಸವ ಜರಗಲಿದೆ.

ಮಾಂಡವಿ ಶಂಕರನಾರಾಯಣ
ಈ ಬಾರಿಯ ವಿಶೇಷ: ಅಮಾಸೆಬೈಲು ಗ್ರಾಮದ ಶ್ರೀ ಮಾಂಡವಿ ಶಂಕರನಾರಾಯಣ ಕ್ಷೇತ್ರದಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ರುದ್ರಾಭಿಷೇಕ, ಬಿಲ್ವಾರ್ಚನೆ, ರಂಗಪೂಜಾ ಮಹೋತ್ಸವ, ಭಜನೆ ಸೇವಾ ಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ.

ಹೊಳೆ ಶಂಕರನಾರಾಯಣ
ಈ ಬಾರಿಯ ವಿಶೇಷ: ಸಿದ್ದಾಪುರ ಸಮೀಪದ ಉಮಾರಮಾ ಸಹಿತ ಶ್ರೀ ಕ್ಷೇತ್ರ ಹೊಳೆ ಶಂಕರನಾರಾಯಣ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಗಳು ಶಿವರಾತ್ರಿ ಪ್ರಯುಕ್ತ ನಡೆಯಲಿದೆ. ಬೆಳಗ್ಗೆಯಿಂದ ಸಂಜೆಯ ತನಕ ರುದ್ರಾಭಿಷೇಕ, ವಿವಿಧ ಅರ್ಚನೆಗಳು, ಸೇವೆಗಳು ನಡೆಯಲಿವೆ. ಸಂಜೆ 6ರಿಂದ ಶ್ರೀ ದೇವರಿಗೆ ರಂಗಪೂಜಾ ಮಹೋತ್ಸವ ಮತ್ತು ಭಜನೆ ಸೇವಾ ಕಾರ್ಯಗಳು ಜರಗಲಿದೆ.

ಬೆಳ್ವೆ ಶಂಕರನಾರಾಯಣ
ಈ ಬಾರಿಯ ವಿಶೇಷ: ಬೆಳ್ವೆ ಗ್ರಾಮದಲ್ಲಿರುವ ಶಂಕರನಾರಾಯಣ ಕ್ಷೇತ್ರದಲ್ಲಿ ಶಿವರಾತ್ರಿ ಮಹೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿವೆ. ರುದ್ರಾಭಿಷೇಕ, ಬಿಲ್ವಾರ್ಚನೆ, ರಾತ್ರಿ ರಂಗಪೂಜಾ ಮಹೋತ್ಸವ ಮತ್ತು ಭಜನೆ ನಡೆಯಲಿದೆ.

ಆವರ್ಸೆ ಶಂಕರನಾರಾಯಣ
ಈ ಬಾರಿಯ ವಿಶೇಷ: ಅವರ್ಸೆ ಗ್ರಾಮದ ಆವರ್ಸೆ ಶಂಕರನಾರಾಯಣ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸðತಿಕ ಕಾರ್ಯಕ್ರಮ ಗಳೊಂದಿಗೆ ಬೆಳಗ್ಗೆಯಿಂದ ಸಂಜೆಯ ತನಕ ರುದ್ರಾಭಿಷೇಕ, ರಾತ್ರಿ ರಂಗಪೂಜಾ ಮಹೋತ್ಸವ ಮತ್ತು ಭಜನೆ ಸೇವಾ ಕಾರ್ಯಗಳು ಜರಗಲಿದೆ. ಶಿವರಾತ್ರಿ ಉತ್ಸವ ನಿಮಿತ್ತ ದೇವರಿಗೆ ರುದ್ರ ಪಠಣ, ಬಿಲ್ವಾರ್ಚನೆ ಮೊದಲಾದ ಧಾರ್ಮಿಕ ಸೇವೆಗಳು ನೆರವೇರಲಿದೆ.

ಟಾಪ್ ನ್ಯೂಸ್

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.