Malpe: ಸ್ಕೂಟರ್ನಲ್ಲಿಟ್ಟಿದ್ದ ನಗದು ಕಳವು
Team Udayavani, Feb 10, 2024, 9:48 PM IST
ಮಲ್ಪೆ: ಕಳ್ಳನೊಬ್ಬ ಹೊಂಚು ಹಾಕಿ ಸ್ಕೂಟರ್ನ ಒಳಗೆ ಇಟ್ಟಿದ್ದ 1.5 ಲಕ್ಷ ರೂ. ನಗದನ್ನು ಎಗರಿಸಿರುವ ಘಟನೆ ಶುಕ್ರವಾರ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಡೆದಿದೆ.
ಶ್ರೀಕಾರ್ ಬೋಟಿನ ರೈಟರ್ ಆಗಿದ್ದ ಶಮಿತ್ ಅವರು ಮೀನು ಮಾರಾಟದ ಬಿಲ್ಲಿನ 1.5 ಲಕ್ಷ ರೂ. ಹಣವನ್ನು ಪೌಚ್ನಲ್ಲಿ ಹಾಕಿ ಸ್ಕೂಟರ್ನ ಢಿಕ್ಕಿಯಲ್ಲಿಟ್ಟು ಬೀಗ ಹಾಕಿ ಇನ್ನೊಂದು ಮೀನು ಪಾರ್ಟಿ ಕಚೇರಿಗೆ ಹೋಗಿದ್ದರು. ಅಲ್ಲಿಂದ ಮರಳಿ ಬಂದು ಪರಿಶೀಲಿಸಿದಾಗ ಢಿಕ್ಕಿಯಲ್ಲಿದ್ದ ಹಣದ ಪೌಚ್ ಇರಲಿಲ್ಲ.
ಪಕ್ಕದ ಅಂಗಡಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಓರ್ವ ವ್ಯಕ್ತಿ ಸ್ಕೂಟರಿನ ಸೀಟ್ ಅನ್ನು ಕೈಯಲ್ಲಿ ಎತ್ತಿ ಹಣವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ