ಒಂದೇ ವರ್ಷದಲ್ಲಿ ಮೂರು ಬಾರಿ ಮಾವು ಫಲ!
Team Udayavani, Jul 15, 2017, 2:25 AM IST
ಉಡುಪಿ: ಒಂದೇ ವರ್ಷದಲ್ಲಿ ಮೂರು ಬಾರಿ ಮಾವಿನ ಮರ ಫಲ ಬಿಡುವುದನ್ನು ಕೇಳಿದ್ದೀರಾ? ಕಲ್ಸಂಕ ಬಳಿಯ ರಮೇಶ್ ಪೈಯವರ ತೋಟದ ಮಾವಿನ ಮರ ಈ ತೆರನಾಗಿ ಫಲಭರಿತವಾಗಿದೆ. ಪ್ರತಿ ವರ್ಷ ನವೆಂಬರ್ನಲ್ಲಿ ಹೂ ಬಿಟ್ಟು ಜನವರಿಯಲ್ಲಿ ಫಲ, ಮಾರ್ಚ್ನಲ್ಲಿ ಹೂ ಬಿಟ್ಟು ಮೇಯಲ್ಲಿ ಫಲವನ್ನು ಈ ಮರ ಬಿಡುತ್ತಿತ್ತು. ಮರಕ್ಕೆ ಸುಮಾರು 40 ವರ್ಷ. ಇದುವರೆಗೆ ನೇರವಾಗಿ ಬೆಳೆದ ಮರ ಮೂರ್ನಾಲ್ಕು ವರ್ಷಗಳಲ್ಲಿ ಪಕ್ಕದ ಆವರಣದಲ್ಲಿ ಶ್ರೀನಿವಾಸ ಬಾಳಿಗಾ ಅವರು ಪ್ರತಿಷ್ಠಾಪಿಸಿದ ನಾಗನ ಗುಡಿಯ ಮೇಲೆ ಅಡ್ಡವಾಗಿ ಬೆಳೆದು ಗುಡಿಗೆ ತಂಪು ಒದಗಿಸಿತು. ಬೇರೆ ರೆಂಬೆಗಳಲ್ಲಿ ಫಲ ಬಿಡದ ಮರ ಈಗ ಮೂರನೆಯ ಬಾರಿಗೆ ಗುಡಿಯ ಮೇಲಿನ ರೆಂಬೆಗಳಲ್ಲಿ ಮಾತ್ರ ಫಲವನ್ನು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು