ಫೆ. 17: ಮಣಿಪಾಲ್‌ ಮ್ಯಾರಥಾನ್‌


Team Udayavani, Feb 15, 2019, 4:08 AM IST

marathon.jpg

ಮಣಿಪಾಲ: ಮಾನಸಿಕ ಆರೋಗ್ಯ ಜಾಗೃತಿಯ ಧ್ಯೇಯದೊಂದಿಗೆ ಮಾಹೆ ಹಾಗೂ ಉಡುಪಿ ಜಿಲ್ಲಾ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಜಂಟಿ ಆಶ್ರಯದಲ್ಲಿ ಫೆ. 17ರಂದು ಹಮ್ಮಿಕೊಂಡಿರುವ “ಮಣಿಪಾಲ್‌ ಮ್ಯಾರಥಾನ್‌’ಗೆ ಉತ್ತಮ ಪ್ರತಿಸ್ಪಂದನೆ ದೊರೆತಿದ್ದು ಈಗಾಗಲೇ 7 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಸಂಖ್ಯೆ 10 ಸಾವಿರ ತಲುಪುವ ನಿರೀಕ್ಷೆ ಇದೆ ಎಂದು ಮಾಹೆ ಕ್ರೀಡಾ ಕಾರ್ಯದರ್ಶಿ ಡಾ| ವಿನೋದ್‌ ನಾಯ್ಕ ತಿಳಿಸಿದ್ದಾರೆ. 

ಶ್ರೀಲಂಕಾದ 6 ಮಂದಿ ಮತ್ತು ಕೀನ್ಯಾದ 8 ಮಂದಿ ಹಾಫ್ ಮ್ಯಾರಥಾನ್‌ (21 ಕಿ.ಮೀ.)ಗೆ ನೋಂದಣಿ ಮಾಡಿಕೊಂಡಿದ್ದಾರೆ. ಹಾಫ್ ಮ್ಯಾರಥಾನ್‌ ಪೂರ್ಣ ಗೊಳಿಸುವ ಮೊದಲ ಮೂವರಿಗೆ ಕ್ರಮವಾಗಿ 50 ಸಾವಿರ, 30 ಸಾವಿರ ಹಾಗೂ 15 ಸಾವಿರ ರೂ.ಗಳ ನಗದು ಬಹುಮಾನವಿದೆ. ಇಥಿಯೋಪಿಯಾದ ಕೆಲವು ಮಂದಿಯೂ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ದೇಶದೆಲ್ಲೆಡೆಯಿಂದ ನೋಂದಣಿಗಳು ಸ್ವೀಕೃತವಾಗುತ್ತಿವೆ. ಮಾಹೆಯ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಐಸಿಐಸಿಐ ಬ್ಯಾಂಕ್‌ ಪ್ರಧಾನ ಪ್ರಾಯೋಜಕರಾಗಿರುವ ಈ ಮ್ಯಾರಥಾನ್‌ಗೆ, ಸಿಂಡಿಕೇಟ್‌ ಬ್ಯಾಂಕ್‌, ಎಸ್‌ಬಿಐ, ಭಾರತ್‌ ಪೆಟ್ರೋಲಿಯಂ ಸಹ ಪ್ರಾಯೋಜಕತ್ವ ವಹಿಸಿವೆ. ಗೋಲ್ಡನ್‌ ಗ್ಲೋಬ್‌ ರೇಸ್‌ -2018ರಲ್ಲಿ ಏಷಿಯಾದಿಂದ ಪಾಲ್ಗೊಂಡ ಏಕೈಕ ವ್ಯಕ್ತಿಯಾಗಿರುವ ಭಾರತೀಯ ನೌಕಾಪಡೆಯ ಕಮಾಂಡರ್‌ ಅಭಿಲಾಷ್‌ ಟಾಮಿ ಪಾಲ್ಗೊಳ್ಳಲಿದ್ದಾರೆ.

ಐಸಿಐಸಿಐ ಸೌತ್‌ ಮುಖ್ಯಸ್ಥ ವಿರಳ್‌ ರೂಪಾನಿ ಅವರು ಬೆಳಗ್ಗೆ 6 ಗಂಟೆಗೆ ಮ್ಯಾರಥಾನ್‌ಗೆ ಚಾಲನೆ ನೀಡಲಿದ್ದಾರೆ. ಇದರೊಂದಿಗೆ 10, 5 ಮತ್ತು 3 ಕಿ.ಮೀ. ಓಟದ ಸ್ಪರ್ಧೆಗಳಿಗೂ ಚಾಲನೆ ದೊರೆಯಲಿದೆ.ವಿಎಸ್‌ಒ ಸ್ವಯಂಸೇವಕರು ಕೆಎಂಸಿ ವಠಾರದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಸ್ಟಾಲ್‌ಗ‌ಳನ್ನು ಅಳವಡಿಸಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಇದೇ ವೇಳೆ ಲಾಫ್ಟರ್‌ ಗುರು ಡಾ| ಮದನ್‌ ಕಠಾರಿಯಾ ಅವರಿಂದ ಆರೋಗ್ಯ ಮತ್ತು ಸಂತೃಪ್ತಿಗಾಗಿ “ಲಾಫ್ಟರ್‌ ಯೋಗ’ ನಡೆಯಲಿದೆ.

ಮಾರ್ಗ ಯಾವುದು?
ಮಣಿಪಾಲ-ಪೆರಂಪಳ್ಳಿ ರೋಡ್‌- ಅಂಬಾಗಿಲು-ರಾಷ್ಟ್ರೀಯ ಹೆದ್ದಾರಿ-ಕರಾವಳಿ ಬೈಪಾಸ್‌-ಬನ್ನಂಜೆ ರಸ್ತೆ-ಬಿಗ್‌ ಬಜಾರ್‌-ಕೆಎಂ ಮಾರ್ಗ-ಕಲ್ಸಂಕ-ಮಣಿಪಾಲ

ಟಾಪ್ ನ್ಯೂಸ್

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.