ಕಟ್ಟಡದ ಹೊರಗೆ ಕಚೇರಿ; ಪಾರ್ಕಿಂಗ್‌ಗಾಗಿ ನಿತ್ಯ ಸಂಘರ್ಷ

ಉಡುಪಿ ನಗರಸಭೆ ಕಚೇರಿಗಳಿಗೆ ಜಾಗದ ಕೊರತೆ !

Team Udayavani, Sep 19, 2019, 5:43 AM IST

ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವ ನಗರಸಭೆ ಕಟ್ಟಡ.

ಉಡುಪಿ: ವಾರ್ಷಿಕ ಸುಮಾರು 50 ಕೋ.ರೂ. ತೆರಿಗೆ, ತೆರಿಗೆಯೇತರ ಆದಾಯ ಹೊಂದಿರುವ ಉಡುಪಿ ನಗರಸಭೆ ತನ್ನ ಸ್ವಂತ ಕಚೇರಿಗೆ ಸಮರ್ಪಕ ಜಾಗವಿಲ್ಲದೆ
ಸಂಕಷ್ಟಕ್ಕೀಡಾಗಿದೆ !

ನಗರ ವಿಸ್ತರಿಸುತ್ತಾ ಹೋಗಿ ಈಗ 35 ವಾರ್ಡ್‌ಗಳಾಗಿ ಕಾರ್ಯವ್ಯಾಪ್ತಿ ಹೆಚ್ಚಾಗಿದೆ. ಅಗತ್ಯ ಕಚೇರಿಗಳಿಗೆ ಸ್ಥಳಾವಕಾಶವಿಲ್ಲದೆ ಕೆಲವು ಕಚೇರಿಗಳು ನಗರಸಭೆ ಕಟ್ಟಡದ ಹೊರಗೆ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಚೇರಿಯ ಒಳಗೆ ಮತ್ತು ಹೊರಗೆ ಇಕ್ಕಟ್ಟಿನ ಸ್ಥಿತಿ.

ಏನೇನೂ ಸಾಲದು
1972ರಲ್ಲಿ ನಿರ್ಮಾಣಗೊಂಡ ಉಡುಪಿ ನಗರಸಭೆ ಕಚೇರಿ ಕಟ್ಟಡದ ನೆಲ ಅಂತಸ್ತಿ ನಲ್ಲಿಯೇ ಕಂದಾಯ ಸೇರಿದಂತೆ 12ಕ್ಕೂ ಅಧಿಕ ವಿಭಾಗಗಳ ಕಚೇರಿಗಳಿವೆ. 15,494 ಚದರ ಅಡಿ ಕಟ್ಟಡದ ಒಟ್ಟು ವಿಸ್ತೀìರ್ಣ. ಮೊದಲ ಅಂತಸ್ತಿನಲ್ಲಿ ಸಭಾಂಗಣ, ಅಧ್ಯಕ್ಷ ಉಪಾಧ್ಯಕ್ಷರ ಕೊಠಡಿಗಳಿವೆ. ಸ್ಥಳದ ಕೊರತೆಯಿಂದಾಗಿ ಪ್ರಸ್ತುತ ಸ್ವಯಂಘೋಷಿತ ಆಸ್ತಿ ತೆರಿಗೆ ಮತ್ತು ಆಸ್ತಿ ತೆರಿಗೆಯ ವಿಭಾಗಗಳು ಕಟ್ಟಡದಿಂದ ಹೊರಗಿವೆ. ಕ್ಯಾಂಟೀನ್‌ಗೆ ಹೋಗುವ ಮೆಟ್ಟಿಲುಗಳ ಬಳಿ ಆಸ್ತಿ ತೆರಿಗೆ ಸಂಗ್ರಹ ಮಾಡ ಲಾಗುತ್ತಿದೆ. ವರ್ಷಕ್ಕೆ ಸರಿಸುಮಾರು 12 ಕೋ.ರೂ.ಗಳಷ್ಟು ಆಸ್ತಿ ತೆರಿಗೆ ಸಂಗ್ರಹವಾದರೂ ಅದನ್ನು ಸಂಗ್ರಹಿಸುವವರಿಗೊಂದು ವ್ಯವಸ್ಥಿತ ಕಚೇರಿ ಇಲ್ಲ!. ಪಕ್ಕದ ಗ್ರಂಥಾಲಯದ ಪ್ರವೇಶ ದ್ವಾರ “ಸ್ವಯಂಘೋಷಿತ ಆಸ್ತಿ ತೆರಿಗೆಯ ಕಚೇರಿ’ಯಾಗಿದೆ. ನೀರಿನ ಬಿಲ್‌ ಪಾವತಿಗೂ ಕಚೇರಿ ಹೊರಗೆ ಸರತಿ ಸಾಲು ನಿಲ್ಲಬೇಕಾಗಿದೆ. ರೆಕಾರ್ಡ್‌ ರೂಮ್‌ಗೂ ಜಾಗದ ಕೊರತೆಯಾಗಿದೆ.

ಗ್ರಂಥಾಲಯ ಸಿಕ್ಕಿದರೂ ಸಾಕು
ಪಕ್ಕದಲ್ಲಿರುವ 5,450 ಚದರ ಅಡಿ ವಿಸ್ತೀರ್ಣದ ನಗರ ಮತ್ತು ಕೇಂದ್ರ ಗ್ರಂಥಾಲಯ ಕಟ್ಟಡ ಅಜ್ಜರಕಾಡಿನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಗ್ರಂಥಾಲಯ ಕಟ್ಟಡಕ್ಕೆ ಸ್ಥಳಾಂತರವಾದರೆ ಆ ಕಟ್ಟಡಕ್ಕೂ ನಗರಸಭೆಯ ಕಚೇರಿ ವಿಸ್ತರಿಸಬಹುದು ಎನ್ನುತ್ತಾರೆ ಅಧಿಕಾರಿಗಳು. ಅಲ್ಲದೆ ನಗರಸಭೆ ಕಟ್ಟಡದ ಸುಮಾರು 2,000 ಚದರ ಅಡಿ ವಿಸ್ತೀರ್ಣ ಜಾಗವನ್ನು ಹಲವು ವರ್ಷಗಳ ಹಿಂದೆಯೇ ಬ್ಯಾಂಕ್‌ ಕಚೇರಿಗೆ ಬಾಡಿಗೆ ನೀಡಲಾಗಿದೆ. ಒಂದು ವೇಳೆ ಬ್ಯಾಂಕ್‌ ಕಚೇರಿ ತೆರವಾದರೆ ಮತ್ತಷ್ಟು ಜಾಗ ದೊರೆಯಬಹುದು. ಆದರೆ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಸುಲಭವಲ್ಲ.

ಪಾರ್ಕಿಂಗ್‌ ಸಂಘರ್ಷ
ಮುಖ್ಯ ರಸ್ತೆಯ ಅಂಚಿನಲ್ಲೇ ಕಚೇರಿ ಇರುವುದರಿಂದ ಪಾರ್ಕಿಂಗ್‌ ಸಮಸ್ಯೆ ತೀವ್ರವಾಗಿದೆ. ಕಚೇರಿಯ ಎದುರು ಅಧ್ಯಕ್ಷರು, ಪೌರಾಯುಕ್ತರ ವಾಹನ ಹೊರತುಪಡಿಸಿದರೆ 10ರಷ್ಟು ದ್ವಿಚಕ್ರಗಳನ್ನು ಮಾತ್ರ ನಿಲ್ಲಿಸಿಡಬಹುದು. ಇದಕ್ಕಾಗಿ ಇಲ್ಲಿ ಆಗಾಗ್ಗೆ ಇಲ್ಲಿ ಸಂಘರ್ಷ ಉಂಟಾಗುತ್ತದೆ.

ಹಳೆ ತಾಲೂಕು ಕಚೇರಿ ಜಾಗ ದಕ್ಕುವುದೆ?
ನಗರಸಭೆಯ ಕಟ್ಟಡವನ್ನು ಈ ಹಿಂದಿನ ತಾಲೂಕು ಕಚೇರಿ ಇರುವ ಸ್ಥಳಕ್ಕೆ ಸ್ಥಳಾಂತರಿಸುವ ಯೋಜನೆ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ಅಲ್ಲಿರುವ ಸುಮಾರು 1 ಎಕರೆ ಜಾಗದಲ್ಲಿ 10 ಸೆಂಟ್ಸ್‌ನಷ್ಟು ಜಾಗ ಇಂದಿರಾ ಕ್ಯಾಂಟೀನ್‌ಗೆ ಹೋಗಿದೆ. ಉಳಿದ ಜಾಗ ದೊರೆತರೂ ಸುವ್ಯವಸ್ಥಿತ ಕಟ್ಟಡ ನಿರ್ಮಾಣ ಮಾಡಬಹುದು ಎಂಬುದು ನಗರಸಭೆ ಅಧಿಕಾರಿಗಳ ಯೋಚನೆ. ಹಿಂದೊಮ್ಮೆ ಜಿಲ್ಲಾಧಿಕಾರಿಯವರ ಮೂಲಕ ಈ ಪ್ರಯತ್ನ ನಡೆಸಲಾಗಿತ್ತು. ಅನಂತರ ಆ ಜಾಗಕ್ಕೆ ಸುಮಾರು 7 ಕೋ.ರೂ.ಗಳಷ್ಟು ಪಾವತಿ ಮಾಡಬೇಕಾಗಿ ಬಂದುದರಿಂದ ಆ ಪ್ರಯತ್ನ ಅಲ್ಲಿಯೇ ನಿಂತು ಹೋಗಿತ್ತು. ಈಗ ಮತ್ತೆ ಈ ಕುರಿತಾದ ಚರ್ಚೆ ಮುನ್ನೆಲೆಗೆ ಬಂದಿದೆ.

ಪಾರ್ಕಿಂಗ್‌ ದೊಡ್ಡ ಸಮಸ್ಯೆ
ಪ್ರಸ್ತುತ ಪಾರ್ಕಿಂಗ್‌ಗೆ ಜಾಗದ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಗ್ರಂಥಾಲಯ ಪಕ್ಕದಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಆದರೆ ಈ ಗ್ರಂಥಾಲಯ ಕಟ್ಟಡ ಕೂಡ ನಗರಸಭೆಗೇ ಸಂಬಂಧಿಸಿದ್ದು. ಒಂದು ವೇಳೆ ಗ್ರಂಥಾಲಯ ತೆರವಾದರೆ ಕಚೇರಿಗಳಿಗೆ ಅಗತ್ಯವಿರುವ ಜಾಗ ದೊರೆಯಬಹುದು. ಸದ್ಯ ವಾಹನ ಪಾರ್ಕಿಂಗ್‌ ದೊಡ್ಡ ಸಮಸ್ಯೆಯಾಗಿದೆ. ನಗರಸಭೆ ಕಟ್ಟಡವನ್ನು ಹಳೆ ತಾಲೂಕು ಕಚೇರಿ ಜಾಗದಲ್ಲಿ ನಿರ್ಮಿಸುವ ಬಗ್ಗೆ ಹಿಂದೊಮ್ಮೆ ಚರ್ಚೆ ನಡೆದಿತ್ತು. ಪ್ರಯತ್ನಗಳು ನಡೆಯುತ್ತಿವೆ. ಅಲ್ಲಿ ನಿರ್ಮಾಣವಾದರೆ ಪಾರ್ಕಿಂಗ್‌ ಸೇರಿದಂತೆ ಸ್ಥಳಾವಕಾಶದ ಕೊರತೆಯಾಗದು.
– ಮ್ಯಾನೇಜರ್‌, ಉಡುಪಿ ನಗರಸಭೆ

ಬರಹ: ಸಂತೋಷ್‌ ಬೊಳ್ಳೆಟ್ಟು
ಚಿತ್ರ: ಆಸ್ಟ್ರೋಮೋಹನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ/ಮುಂಬಯಿ: ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಸೋಮವಾರ...

  • ಬೆಂಗಳೂರು: ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದ ವೇತನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ. ಪೊಲೀಸ್‌ ಅಧಿಕಾರಿ,...

  • ಗಂಗಾವತಿ: ಪ್ರವಾಹದಿಂದಾಗಿ ವಿರೂಪಾಪುರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ 350ಕ್ಕೂ ಹೆಚ್ಚು ಟೆಕ್ಕಿಗಳನ್ನು ರಕ್ಷಿಸಲಾಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ...

  • ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ...

  • ಕೊಲ್ಲೂರು: ಮಹಾತ್ಮಾ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ಸ್ವದೇಶಿ, ಸ್ವರಾಜ್‌, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ...