“ಸಂಘಟನಾತ್ಮಕ ತೊಡಗಿಸಿದಾಗ‌ ಗೌರವ’

Team Udayavani, Feb 26, 2017, 3:34 PM IST

2502rjh8.jpg

ಪುತ್ತೂರು : ಸಂಘ ಜೀವಿಯಾದ ಮನುಷ್ಯನು ಜಾತಿ, ಧರ್ಮ, ವಯಸ್ಸುಗಳ ವೈರುಧ್ಯವನ್ನು ಮೀರಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡಾಗ ಸಮಾಜದಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಹೆಸರಿನಂತೆಯೇ ಸ್ನೇಹ ಸಂಗಮ ರಿಕ್ಷಾ ಸಂಘಟನೆ ಇತರರಿಗೆ ಮಾದರಿಯಾಗಿದೆ ಎಂದು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಫೆಲಿಕ್ಸ್‌ ಡಿ’ಸೋಜಾ ಹೇಳಿದರು.

ನೆಲ್ಲಿಕಟ್ಟೆ  ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ಪುತ್ತೂರು ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ -ಮಾಲಕರ ಸಂಘದ 20ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ಇಲಾಖೆಗಳು ನೀಡುವ ಎಲ್ಲ  ಸವಲತ್ತುಗಳನ್ನು ರಿಕ್ಷಾ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಹೇಳಿದ ಅವರು, ಸಂಚಾರ ನಿಯಮಗಳನ್ನು ಪಾಲಿಸ ಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾ ದಿಡ್ಡಿ ವಾಹನಗಳನ್ನು ನಿಲ್ಲಿಸಬಾರದು, ಅಪಘಾತ ಗಳು ಸಂಭವಿಸಿದ ಸಂದರ್ಭ ನೆರವಿಗೆ ಧಾವಿಸಬೇಕು ಎಂದು ರಿಕ್ಷಾ ಚಾಲಕರಿಗೆ ಸಲಹೆ ನೀಡಿದರು.

ಒಂದುಗೂಡಿಸುವ ಕೆಲಸ
ಮುಖ್ಯ ಅತಿಥಿಯಾಗಿದ್ದ  ಈಶ್ವರಮಂಗಲ ಶ್ರೀ ಪಂಚಮುಖೀ ಆಂಜನೇಯ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಸಮಾಜದ ಎಲ್ಲರನ್ನೂ ಒಂದುಗೂಡಿಸುವ ಕೆಲಸ ರಿಕ್ಷಾ ಚಾಲಕರ ಸಂಘದಿಂದ ನಡೆಯುತ್ತಿದೆ. ದೇವಸ್ಥಾನಕ್ಕೆ ಹೋಗುವ ಮೆಟ್ಟಿಲಿನ ಕಾರ್ಯದಂತೆ ಯಾರಿಗೂ ತಿಳಿಯದಂತೆ ಸಮಾಜದ ಸೇವೆ ಮಾಡುವವರು ರಿಕ್ಷಾ ಚಾಲಕರು ಎಂದು ಹೇಳಿದರು.

ಪುತ್ತೂರು ಮಾçದೆ ದೇವುಸ್‌ ಚರ್ಚ್‌ನ ಧರ್ಮಗುರು ಆಲ್ಫೆ†ಡ್‌ ಜೆ. ಪಿಂಟೋ ಮಾತ ನಾಡಿ, ಸಮಯದ ಪರಿವೆಯಿಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಶಿಸ್ತಿನ ಸಿಪಾಯಿ ಗಳು ರಿಕ್ಷಾ ಚಾಲಕರು. ಸಂಘದ ಕೆಲಸದ ಜತೆಗೆ ಪ್ರತಿಯೊಬ್ಬ ಸದಸ್ಯರ ಮನೆಗಳೂ ಬೆಳಗಬೇಕು ಎಂದು ಹಾರೈಸಿದರು.

ಜಗತ್ತಿನಲ್ಲಿ ಅತ್ಯಂತ ಕೊರತೆಯಾಗಿ ಕಾಡುತ್ತಿರುವುದು ಸ್ನೇಹ. ಆದರೆ ಪುತ್ತೂರಿನಲ್ಲಿ ಪ್ರೀತಿ, ಸ್ನೇಹದ ಕೊರತೆಯನ್ನು ನೀಗಿಸಿ ಮಧ್ಯ ರಾತ್ರಿಯಲ್ಲೂ ಧೈರ್ಯದಿಂದ ತೆರಳಲು ಸ್ನೇಹ ಸಂಗಮ ಕಾರಣವಾಗುತ್ತಿದೆ. ಅತ್ಯಂತ ಪವಿತ್ರವಾದ ಜಾತ್ಯತೀತ ಸಂವಿಧಾನವನ್ನು ಹೊಂದಿರುವ ಭಾರತದಲ್ಲಿ ಸೌಹಾರ್ದ ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಸಂಘಟನೆಗಳು ಹೆಚ್ಚು ಹೆಚ್ಚು ಹುಟ್ಟಿಕೊಳ್ಳಬೇಕು ಎಂದು ಕುಂಬ್ರದ ಕರ್ನಾಟಕ ಇಸ್ಲಾಂ ಅಕಾಡೆಮಿ ಮ್ಯಾನೇಜರ್‌ ಕೆ.ಆರ್‌. ಹುಸೇನ್‌ ದಾರಿಮಿ ಆಶಯ ವ್ಯಕ್ತಪಡಿಸಿದರು.

ನಗರ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಓಮನ ಶುಭಹಾರೈಸಿದರು. ಸ್ನೇಹ ಸಂಗಮ ರಿಕ್ಷಾ ಚಾಲಕ -ಮಾಲಕರ ಸಂಘದ ಗೌರವಾಧ್ಯಕ್ಷ ಜಗದೀಶ್‌ ಶೆಟ್ಟಿ ನೆಲ್ಲಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ, ನಗರಸಭಾ ಮಾಜಿ ಸದಸ್ಯ ನವೀನ್‌ಚಂದ್ರ ನಾೖಕ್‌, ಸ್ನೇಹಸಂಗಮದ ಸ್ಥಾಪಕಾಧ್ಯಕ್ಷ ಸುಧಾಕರ್‌, ಸ್ನೇಹಸಂಗಮದ ಅಧ್ಯಕ್ಷ ಲೋಕೇಶ್‌ ಗೌಡ ಉಪಸ್ಥಿತರಿದ್ದರು.

ಸಂಘದ ಕಾರ್ಯಾಧ್ಯಕ್ಷ ಚನಿಯಪ್ಪ ನಾಯ್ಕ ಸ್ವಾಗತಿಸಿ, ಪ್ರಕಾಶ್‌ ಹಾರಾಡಿ ವರದಿ ವಾಚಿಸಿದರು. ದಿಲೀಪ್‌ ಮೊಟ್ಟೆತ್ತಡ್ಕ ನಿರ್ವಹಿಸಿದರು. ಸಂಘದ ವಿವಿಧ ಘಟಕಗಳ ಸದಸ್ಯರು ಪಾಲ್ಗೊಂಡರು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.