ಶಿರ್ವ: ಶಾಲಾ ಕ್ಯಾಬಿನ್ ಒಳಗೆ ಪ್ರಾಂಶುಪಾಲ ಆತ್ಮಹತ್ಯೆ
Team Udayavani, Oct 12, 2019, 8:05 AM IST
ಶಿರ್ವ: ಇಲ್ಲಿನ ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ ವಂ|ಮಹೇಶ್ ಡಿಸೋಜಾ (36) ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಡಾನ್ ಬಾಸ್ಕೋ ಶಾಲೆಯ ಕ್ಯಾಬಿನ್ ಒಳಗೆ ವಂ|ಮಹೇಶ್ ಡಿಸೋಜಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ.
ಮೂಲತಃ ಮೂಡಬೆಳ್ಳೆಯವರಾಗಿದ್ದ ಅವರು 2013ರಲ್ಲಿ ಗುರು ದೀಕ್ಷೆ ಪಡೆದಿದ್ದರು. ಉಡುಪಿ ಧರ್ಮಪ್ರಾಂತ್ಯದ ಉದಯದ ಬಳಿಕ ಮೊದಲ ಧರ್ಮಗುರುವಾಗಿದ್ದ ವಂ|ಮಹೇಶ್ ಡಿಸೋಜಾ ಅವರು ಶಿರ್ವ ಆರೋಗ್ಯ ಮಾತಾ ಇಗರ್ಜಿ ಆಡಳಿತಕ್ಕೆ ಒಳಪಟ್ಟ ಡಾನ್ ಬಾಸ್ಕೊ ಶಾಲೆಯನ್ನು ಸಿಬಿಎಸ್ ಸಿ ಪಠ್ಯಕ್ರಮಕ್ಕೆ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.