ರಸಮಂಜರಿ, ಯಕ್ಷಗಾನ, ಸಾಂಸ್ಕೃತಿಕ ರಸದೌತಣ

ಜನಾಕರ್ಷಣೆಯ ಸಾಂಸ್ಕೃತಿಕ ವೈಭವ

Team Udayavani, Jan 18, 2020, 6:45 AM IST

bel-29

ಉಡುಪಿ: ಪರ್ಯಾಯ ಮೆರವಣಿಗೆಯ ಪೂರ್ವದಲ್ಲಿ ಜೋಡುಕಟ್ಟೆಯಿಂದ ರಥಬೀದಿ ತನಕ ರಸ್ತೆಯ ಇಕ್ಕೆಲಗಳಲ್ಲಿ ವೈವಿಧ್ಯಮಯ ನೃತ್ಯ ಪ್ರಕಾರಗಳು, ರಸಮಂಜರಿ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಿನ್ನಿಮೂಲ್ಕಿಯ ಶ್ರೀಕೃಷ್ಣ ಗ್ರೂಪ್‌ ಆಫ್‌ ಡ್ಯಾನ್ಸ್‌ ನಿಂದ ಪರ್ಯಾಯ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಕಿನ್ನಿಮೂಲ್ಕಿ ಜಂಕ್ಷನ್‌ ಬಳಿ ನಡೆಯಿತು. ಅಭಿಜ್ಞ ನೃತ್ಯ ಭೂಮಿಯ ನೃತ್ಯ ವಿದುಷಿ ಡಾ| ರಶ್ಮಿ ಗುರುಮೂರ್ತಿ ಅವರ ಶಿಷ್ಯೆ ವೈಭವಿ ರಾವ್‌ ಕನ್ನರ್ಪಾಡಿ ಅವರಿಂದ ಭರತನಾಟ್ಯ ಹಾಗೂ ರಾಘವೇಂದ್ರ ಮಯ್ಯ (ಬಡಗು), ಅಮೃತಾ ಅಡಿಗ (ತೆಂಕು) ತಂಡದವರಿಂದ ಗಾನ ವೈಭವ ನಡೆಯಿತು.

ಅಂತಾರಾಷ್ಟ್ರೀಯ ಕಲಾವಿದರು, ಹಿನ್ನೆಲೆ ಗಾಯಕರು, ಅಜಯ್‌ ವಾರಿಯರ್‌, ಸರಿಗಮಪ, ಕನ್ನಡ ಕೋಗಿಲೆ ಖ್ಯಾತಿಯ ಹಿನ್ನೆಲೆ ಗಾಯಕಿತಯರಿಂದ ನಡೆದ ರಸಮಂಜರಿ ಜನಮನ್ನಣೆ ಗಳಿಸಿದವು. ಕೆ.ಎಂ. ರೋಡ್‌ ಬಳಿ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಯಕ್ಷಗಾನ ನಡೆಯಿತು.

ಜೋಡುಕಟ್ಟೆ. ಕೆ.ಎಂ. ರೋಡ್‌ ಸಹಿತ ಹಲವೆಡೆ ಗಳಲ್ಲಿ ರಸಮಂಜರಿ ಕಾರ್ಯಕ್ರಮ ಹಾಗೂ ಮೂರು ಕಡೆಗಳಲ್ಲಿ ಪರಂಧಾಮಗೈದ ಪೇಜಾವರ ಶ್ರೀಪಾದರ ಜೀವನ ಚರಿತ್ರೆಯನ್ನು ಪರದೆ ಮೂಲಕ ಅನಾವರಣಗೊಳಿಸಲಾಯಿತು. ಪೌರತ್ವ ಕಾಯ್ದೆ ಬೆಂಬಲಿಸಿ ಜಾಗೃತಿ, ವಿದ್ಯುತ್‌ ಬಳಕೆ ಕುರಿತು ಜಾಗೃತಿ ಸಂದೇಶಗಳು ಪ್ರದರ್ಶನಗೊಂಡವು.

ಕಾಮಿಡಿ ಮ್ಯೂಸಿಕಲ್‌ ಸ್ಟಾರ್‌ನೈಟ್‌
ಶೋಲೈಟ್ಸ್‌ ಈವೆಂಟ್ಸ್‌ ಉಡುಪಿ ವತಿಯಿಂದ ಮಿಷನ್‌ ಕಾಂಪೌಂಡಿ ನಲ್ಲಿರುವ ಕ್ರಿಶ್ಚಿಯನ್‌ ಪ.ಪೂ. ಕಾಲೇಜು ಮೈದಾನದಲ್ಲಿ ಸ್ಟಾರ್‌ ಕಾಮಿಡಿ ಮ್ಯೂಸಿಕಲ್‌ ನೈಟ್ಸ್‌ ಕಾರ್ಯಕ್ರಮ ಕಲಾಸಕ್ತರನ್ನು ಆಕರ್ಷಿಸಿತು. ಕೇರಳದ ಕಲಾವಿದರು, ಕನ್ನಡ ಹಾಗೂ ತುಳು ಪ್ರತಿಭಾನ್ವಿತ ನಟ, ನಟಿಯರ ಸಹಿತ ಹೆಸರಾಂತ ಕಲಾವಿದರು ಭಾಗವಹಿಸಿದ್ದರು. ಸಂಗೀತ ಗ್ರೂಪ್‌ ಫ್ರೆಂಡ್ಸ್‌ ಮೆಲೋಡಿಸ್‌ ಅವರು ನಡೆಸಿಕೊಟ್ಟ ಸಂಗೀತ ರಸಸಂಜೆ, ಪ್ರಸಿದ್ಧ ಚೆನ್ನೈ ಕಲಾವಿದರಿಂದ ಡ್ಯಾನ್ಸ್‌ ಮತ್ತು ಮೆಜೀಶಿಯನ್‌ ಜನರನ್ನು ಸೆಳೆದವು.

ಉಡುಪಿ ಅಜ್ಜರಕಾಡಿನ ಟೌನ್‌ಹಾಲ್‌ನಲ್ಲಿ ಹರ್ಷರಾಂಜಲಿ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರ ಕಾರ್ಯಕ್ರಮ ಕಲಾಸಕ್ತರ ಗಮನಸೆಳೆಯುತು. ನಗರದ ಸರ್ವಿಸ್‌ ಬಸ್‌ ನಿಲ್ದಾಣ ಬಳಿ ಪ್ರತೀಕ್ಷ ರಿದಮಿಕ್‌ ವಾಯ್ಸ ಆಫ್ ಉಡುಪಿ ಹಾಗೂ ಪ್ರೈಮ್‌ ಟಿವಿ ಸಹಕಾರದಲ್ಲಿ ಸಂಗೀತ ರಸಮಂಜರಿ ನಡೆಯಿತು. ಖ್ಯಾತ ನಾಟಕ ಕಲಾವಿದರು ಭಾಗವಹಿಸಿದ್ದರು. ಸಂಜೆಯಿಂದ ಪರ್ಯಾಯ ಮೆರವಣಿಗೆ ಆರಂಭವಾಗುವ ತನಕವೂ ಸಾಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆದವು.

ಪೇಜಾವರ ಶ್ರೀಗಳ ಪಲ್ಲಕ್ಕಿಗೆ ಸಿರಿ ಸಿಂಗಾರ
ಉಡುಪಿ: ಪರ್ಯಾಯೋತ್ಸವದ ಮೆರವಣಿಗೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅವರು ಏರಿ ಬರುವ ಪಲ್ಲಕಿಗೆ ಪಾರಂಪರಿಕ, ಜನಪದೀಯ ಕಲಾತ್ಮಕತೆಯ ಸ್ಪರ್ಶ ನೀಡಲಾಗಿದೆ. ಈ ಬಾರಿ ಪೇಜಾವರ ಶ್ರೀಗಳು ಸ್ಥಳೀಯ ಕಲಾ ವಿದರ ಕಲೆಗಾರಿಕೆಗೆ ಮನ್ನಣೆ ನೀಡುವ ಮತ್ತು ಪ್ರಕೃತಿಯ ಮೇಲಿನ ಒಲವಿನಿಂದ ಪಲ್ಲಕಿಗೆ ತೆಂಗಿನ ಸಿರಿ ಸಿಂಗಾರವನ್ನು ಮಾಡಿಸಿದ್ದಾರೆ. ತೆಂಗಿನ ಸಿರಿ, ಬಾಳೆ ದಿಂಡು, ಬಿದಿರನ್ನು ಬಳಸಿ ಪಲ್ಲಕಿಯನ್ನು ಸಾಂಪ್ರದಾಯಿಕವಾಗಿ ಸಜ್ಜುಗೊಳಿಸ ಲಾಗಿದೆ. ಸಿರಿಯಿಂದ ತಯಾರಿಸಿದ ಗಿಳಿ, ನಕ್ಷತ್ರ ಮತ್ತು ಕದಿರು ಮುಡಿ ಪಲ್ಲಕಿಯ ವೈಭವವನ್ನು ಹೆಚ್ಚಿಸಿದೆ.

ಅಲೆವೂರಿನ ಮಂಚಿ ಕುಟುಂಬ
50 ವರ್ಷಗಳಿಂದ ದೈವ ನರ್ತನ, ಸಿರಿ ಸಿಂಗಾರದ ಸೇವೆ ನಡೆಸುತ್ತಿರುವ ಅಲೆವೂರು ನಿವಾಸಿ ಸಾಧು ಪಾಣಾರರ ನೇತೃತ್ವದಲ್ಲಿ ಅಲಂಕಾರ ನಡೆದಿದೆ. ನಾರಾಯಣ ಪಾಣಾರ, ಗಿರೀಶ್‌ ಪಾಣಾರ, ಪ್ರಜ್ವಲ್‌ ಪಾಣಾರ, ದಿನೇಶ್‌ ಪಾಣಾರ ಅವರು ತೆಂಗಿನ ಗರಿಯ ವಿವಿಧ ಕಲಾಕೃತಿ ರಚಿಸಿದ್ದಾರೆ.

ಉಡುಪಿ: ಪರ್ಯಾಯೋತ್ಸವದ ಮೆರ
ವಣಿಗೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅವರು ಏರಿ ಬರುವ ಪಲ್ಲಕಿಗೆ ಪಾರಂಪರಿಕ, ಜನಪದೀಯ ಕಲಾತ್ಮಕತೆಯ ಸ್ಪರ್ಶ ನೀಡಲಾಗಿದೆ. ಈ ಬಾರಿ ಪೇಜಾವರ ಶ್ರೀಗಳು ಸ್ಥಳೀಯ ಕಲಾ ವಿದರ ಕಲೆಗಾರಿಕೆಗೆ ಮನ್ನಣೆ ನೀಡುವ ಮತ್ತು ಪ್ರಕೃತಿಯ ಮೇಲಿನ ಒಲವಿನಿಂದ ಪಲ್ಲಕಿಗೆ ತೆಂಗಿನ ಸಿರಿ ಸಿಂಗಾರವನ್ನು ಮಾಡಿಸಿದ್ದಾರೆ.

ತೆಂಗಿನ ಸಿರಿ, ಬಾಳೆ ದಿಂಡು, ಬಿದಿರನ್ನು ಬಳಸಿ ಪಲ್ಲಕಿಯನ್ನು ಸಾಂಪ್ರದಾಯಿಕವಾಗಿ ಸಜ್ಜುಗೊಳಿಸ ಲಾಗಿದೆ. ಸಿರಿಯಿಂದ ತಯಾರಿಸಿದ ಗಿಳಿ, ನಕ್ಷತ್ರ ಮತ್ತು ಕದಿರು ಮುಡಿ ಪಲ್ಲಕಿಯ ವೈಭವವನ್ನು ಹೆಚ್ಚಿಸಿದೆ.
ಅಲೆವೂರಿನ ಮಂಚಿ ಕುಟುಂಬ 50 ವರ್ಷಗಳಿಂದ ದೈವ ನರ್ತನ, ಸಿರಿ ಸಿಂಗಾರದ ಸೇವೆ ನಡೆಸುತ್ತಿರುವ ಅಲೆವೂರು ನಿವಾಸಿ ಸಾಧು ಪಾಣಾರರ ನೇತೃತ್ವದಲ್ಲಿ ಅಲಂಕಾರ ನಡೆದಿದೆ. ನಾರಾಯಣ ಪಾಣಾರ, ಗಿರೀಶ್‌ ಪಾಣಾರ, ಪ್ರಜ್ವಲ್‌ ಪಾಣಾರ, ದಿನೇಶ್‌ ಪಾಣಾರ ಅವರು ತೆಂಗಿನ ಗರಿಯ ವಿವಿಧ ಕಲಾಕೃತಿ ರಚಿಸಿದ್ದಾರೆ.

ಜನಮನೋರಂಜಕ ಪರ್ಯಾಯ ಮೆರವಣಿಗೆ
ಉಡುಪಿ: ಪರ್ಯಾಯ ವೈಭವಕ್ಕೆ ಮತ್ತಷ್ಟು ರಂಗು ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಜಾನಪದ ತಂಡಗಳು ಉಡುಪಿಗೆ ಆಗಮಿಸಿದ್ದವು.  ಮೆರವಣಿಗೆಯಲ್ಲಿ ಪೌರಾಣಿಕ, ಐತಿಹಾಸಿಕ ಸಂದೇಶಗಳನ್ನು ಸಾರುವ ಟ್ಯಾಬ್ಲೋಗಳು ರಾರಾಜಿಸಿದವು. ಸ್ಥಳೀಯ ನಗರಸಭೆಯ ಸ್ವತ್ಛತೆ ಸಂದೇಶ ಸಾರುವ ಟ್ಯಾಬ್ಲೋ, ಕೃಷಿ ಇಲಾಖೆಯಿಂದ ಕೃಷಿಯ ಸೊಬಗಿನ ಟ್ಯಾಬ್ಲೋ, ಪ್ರವಾಸೋದ್ಯಮ ಇಲಾಖೆಯಿಂದ ತುಳುನಾಡ ಸೃಷ್ಟಿಯುಳ್ಳ ಟ್ಯಾಬ್ಲೋ, ಉಡುಪಿ ಜಿಲ್ಲಾ ಪಂಚಾಯತ್‌ನಿಂದ ವಿಶೇಷ ಭಜನ ತಂಡಗಳನ್ನೊಳಗೊಂಡ ಟ್ಯಾಬ್ಲೋಗಳು ಇದ್ದವು. ಶ್ರೀ ಕೃಷ್ಣ ಸೇವಾ ಬಳಗದ ಉಸ್ತುವಾರಿಯಲ್ಲಿ ವೇದಘೋಷ, ಲಕ್ಷ್ಮೀ ಶೋಭಾನೆ, ಕಾಳೀಯ ಮರ್ದನ ಶ್ರೀಕೃಷ್ಣ ದೇವರು, ಶ್ರೀ ರಾಮ ಮಂದಿರ, ಬೆಳ್ಳಿರಥದಲ್ಲಿ ಶ್ರೀಕೃಷ್ಣ, ಆಂಜನೇಯ, ನವದುರ್ಗೆಯರು, ಕುಂಜಾರುಗಿರಿ ಬೆಟ್ಟ, ದೇಶೀಯ ಗೋವಿನ ತಳಿ, ಹಳ್ಳಿ ಜೀವನ, ತುಳುನಾಡ ಸಂಸ್ಕೃತಿ, ಪ್ಲಾಸ್ಟಿಕ್‌ ಭೂತ, ಇಸ್ರೋ ವೀಕ್ಷಣೆ, ನಾಡ ದೋಣಿಯನ್ನೊಳಗೊಂಡ ಟ್ಯಾಬ್ಲೋಗಳನ್ನು ಜನರು ಕಣ್ತುಂಬಿಕೊಂಡರು.

ವೈವಿಧ್ಯಮಯ ಕಲಾತಂಡಗಳು
ಪರ್ಯಾಯ ಮೆರವಣಿಗೆಗೆ ಟ್ಯಾಬ್ಲೋಗಳ ಜತೆಗೆ ವಿವಿಧ ಕಲಾತಂಡಗಳು ಕೂಡ ಸಾಥ್‌ ನೀಡಿದವು. ಪೂರ್ಣಕುಂಭ, ಬಿರುದಾವಳಿ, 4 ಗೊಂಬೆ ತಂಡಗಳು, 7 ಚೆಂಡೆ ಬಳಗ, 1 ಪಂಚವಾದ್ಯ, 20 ಜನರ ಕೊಂಬು ವಾದನ ತಂಡ, ದೇವಸ್ಥಾನದ ಪಂಚವಾದ್ಯಗಳು, ನಾಗಸ್ವರ ತಂಡ, ಸ್ಯಾಕೊÕàಫೋನ್‌ ತಂಡ, ಚೆಂಡೆ ಮತ್ತು ಕೋಲಾಟ ತಂಡ, ತಮಟೆ ಮತ್ತು ನಗಾರಿ ತಂಡ, ತಾಲೀಮು, ಮರಕಾಲು ಕುಣಿತ, ಭಾರತ ಸೇವಾದಳ, ರೇಂಜರ್ ಮತ್ತು ರೋವರ್, ಭಜನ ತಂಡಗಳು, ಹರೇ ರಾಮ ಹರೇ ಕೃಷ್ಣ, ಬಣ್ಣದ ಕೊಡೆಗಳು, ಮಲ್ಲ ಕಂಬ ಸಹಿತ ಹಲವಾರು ಬಗೆಯ ಕಲಾಪ್ರಕಾರಗಳು ಜನರಿಗೆ ಮತ್ತಷ್ಟು ಮನೋರಂಜನೆ ನೀಡಿದವು.

ಬಿಗಿ ಪೊಲೀಸ್‌ ಭದ್ರತೆ
ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೋಲಾರ, ಕಾರವಾರ, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು ಸಹಿತ ಉಡುಪಿ ಜಿಲ್ಲೆಯ ಪೊಲೀಸರು ಕರ್ತವ್ಯದಲ್ಲಿದ್ದರು. ಎಸ್‌ಪಿ, ಅಡಿಷನಲ್‌ ಎಸ್‌ಪಿ, 8 ಡಿವೈಎಸ್‌ಪಿ, 23-ಪೊಲೀಸ್‌ ನಿರೀಕ್ಷಕರು, 65-ಪಿಎಸ್‌ಐ, 193-ಎಎಸ್‌ಐ, 289-ಎಚ್‌ಸಿ ಹಾಗೂ 530 ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳು ಸಹಿತ ಒಟ್ಟು 1,110 ಅಧಿಕಾರಿ/ಸಿಬಂದಿ ಹಾಗೂ 300 ಗೃಹರಕ್ಷಕ ಸಿಬಂದಿ ಇದ್ದರು. 4 ಕೆಎಸ್‌ಆರ್‌ಪಿ, 10 ಡಿಎಆರ್‌, 5 ವಿಧ್ವಂಸಕ ಕೃತ್ಯ ಪತ್ತೆ ತಂಡ ನಿಯೋಜನೆಗೊಂಡಿತ್ತು. ನಗರದ 4 ಆಯಕಟ್ಟಿನ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದಿದ್ದು, 24 ಗಂಟೆಯೂ ಸೂಕ್ತ ಕಣ್ಗಾವಲು ವ್ಯವಸ್ಥೆ ಮಾಡಲಾಗಿತ್ತು.

ಪೌರತ್ವ ಕಾಯ್ದೆ ಬೆಂಬಲಿಸಿ ಸಹಿಸಂಗ್ರಹ ಅಭಿಯಾನ
ನಗರ ಬಿಜೆಪಿ ವತಿಯಿಂದ ಪೌರತ್ವ ಕಾಯಿದೆ ಬೆಂಬಲಿಸಿ ಬೃಹತ್‌ ಸಹಿ ಸಂಗ್ರಹ ಅಭಿಯಾನ ಉಡುಪಿ ಅಂಚೆ ಕಚೇರಿ ಬಳಿ ನಡೆಯಿತು. ಎಲ್‌ಇಡಿ ಅಳವಡಿಸಿ ಜಾಗೃತಿ ಮೂಡಿಸಲಾಯಿತು. ಕೆ.ಎಂ. ರಸ್ತೆ ಬಳಿ ಕೋದಂಡರಾಮ ಯಕ್ಷಗಾನ ಕಲಾ ಮಂಡಳಿಯಿಂದ ಯಕ್ಷಗಾನ ಪ್ರದರ್ಶನ ಹಾಗೂ ಎದುರು ಭಾಗದಲ್ಲಿ ಮಾಂಡವಿ ಎಕ್ರೊಲೊಲಿಸ್‌ ಫ್ರೆಂಡ್ಸ್‌ ವತಿಯಿಂದ ರಸಮಂಜರಿ ನಡೆಯಿತು.

ಪೇಜಾವರ ಶ್ರೀ ಜೀವನಚರಿತ್ರೆ ಅನಾವರಣ
ನಗರದ ಡಯಾನ ಸರ್ಕಲ್‌ನ ಎರಡು ಕಡೆ ಇತ್ತೀಚೆಗೆ ಕೃಷ್ಣೆ„ಕ್ಯರಾದ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ ಜೀವನಚರಿತ್ರೆಗಳನ್ನು ಅನಾವರಣಗೊಳಿಸಲಾಯಿತು. ಕೋರ್ಟ್‌ ರೋಡ್‌ ಬಳಿ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ನಿಯಮಿತದ ವತಿಯಿಂದ ವಿದ್ಯುತ್‌ ಬಗೆಗಿನ ಅರಿವು “ವಿದ್ಯುತ್‌ ಜ್ಞಾನ ಜ್ಯೋತಿ’ಯನ್ನು ಪರದೆ ಮೂಲಕ ಪ್ರಸ್ತುತಪಡಿಸಲಾಯಿತು.

ಜಾಗರಣೆಯಲ್ಲಿದ್ದವರಿಗೆ ಮನೋರಂಜನೆ
ರಥಬೀದಿ ಸೇರಿದಂತೆ ನಗ‌ರದ‌ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು. ರಾತ್ರಿ ನಡೆದ ವೈವಿಧ್ಯಮಯ ಕಾರ್ಯಕ್ರಮಗಳು ಜನರನ್ನು ಸಾಂಸ್ಕೃತಿಕ ಲೋಕಕ್ಕೆ ಕೊಂಡೊಯ್ಯಿತು. ವೈಭವದ ಮೆರವಣಿಗೆಯನ್ನು ಜನರು ಕಣ್ತುಂಬಿಕೊಂಡರು.

ಇಂದಿನಿಂದ ಸಾಂಸ್ಕೃತಿಕ ರಸದೂಟ
ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪರ್ಯಾಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಪರ್ಯಾಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜ.18ರಿಂದ 22ರ ತನಕ ರಾಜಾಂಗಣದ ಶ್ರೀ ನರಹರಿ ತೀರ್ಥ ವೇದಿಕೆಯಲ್ಲಿ ನಡೆಯಲಿವೆ. ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ವಿವಿಧ ಭಾಗಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗೆ ಅಚ್ಚುಕಟ್ಟಾಗಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ವೀಕ್ಷಿಸಲು ಅಲ್ಲಲ್ಲಿ ಕಿಕ್ಕಿರಿದು ಜನರು ಸೇರಿದ್ದರು.

ಸ್ಥಳೀಯ ಕಲಾವಿದರಿಗೆ
ಅವಕಾಶ ನೀಡುವುದರ ಜತೆಗೆ ನಶಿಸಿ ಹೋಗುತ್ತಿರುವ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಬಾರಿ ಪಲ್ಲಕಿಗೆ ಹೊಸ ಸ್ಪರ್ಶ ನೀಡಲಾಗಿದೆ. ಮುಂದೆ ಇವರ ಈ ರೀತಿಯ ಅಲಂಕಾರಕ್ಕೆ ಬೇಡಿಕೆ ಬರಬಹುದು.
-ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶರು.

ಇದೇ ಮೊದಲ ಬಾರಿಗೆ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಪಲ್ಲಕಿಯನ್ನು ಅಲಂಕರಿಸಿದ್ದೇವೆ. ನಮ್ಮ ಕಲೆ ಗುರುತಿಸುವ ಅವಕಾಶ ನೀಡಿರುವುದು ಸಂತಸ ತಂದಿದೆ.
-ಸಾಧು ಪಾಣಾರ, ಕಲಾವಿದ

-  ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.