ಅವಳಿ ಕರುಗಳಿಗೆ ಜನ್ಮ ನೀಡಿದ ಗೋಮಾತೆ
Team Udayavani, May 22, 2018, 2:40 AM IST
ಸಿದ್ದಾಪುರ: ಹಸುವೊಂದು ಅವಳಿ ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆಯು ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾ. ಪಂ. ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಎಂಬಲ್ಲಿ ನಡೆದಿದೆ.
ತೊಂಬಟ್ಟು ಸ್ವಾಮಿಪಾಲು ಶ್ಯಾಮಲ ಹಾಗೂ ಲಕ್ಷ್ಮಣ ಕುಲಾಲ್ ದಂಪತಿಯು ಹೈನುಗಾರಿಕೆಯಲ್ಲಿ ಯಶಸ್ಸು ಕಾಣುತ್ತಿದ್ದು, ಹತ್ತಾರು ದನಗಳನ್ನು ಸಾಕಿ ಸಲಹುತ್ತಿದ್ದಾರೆ. ಅವರ ಮನೆಯಲ್ಲಿರುವ ಎಚ್.ಎಫ್. ತಳಿಯ ದನವು ರವಿವಾರ ಬೆಳಗ್ಗೆ ಅವಳಿ ಕರುಗಳಿಗೆ ಜನ್ಮ ನೀಡಿದೆ. ಎರಡು ಕೂಡ ಹೆಣ್ಣು ಕರುವಾಗಿದ್ದು, ಆರೋಗ್ಯವಾಗಿವೆ. ಎರಡು ಕರುಗಳು ಐದು ನಿಮಿಷದ ಅಂತರದಲ್ಲಿ ಜನಿಸಿವೆ. ಕಳೆದ ಬಾರಿ ಚೊಚ್ಚಲ ಗರ್ಭಧಾರಣೆಯಲ್ಲಿ ಒಂದು ಕರುವಿಗೆ ಜನ್ಮ ನೀಡಿದ್ದು, ಈ ಬಾರಿ ಅವಳಿ ಕರುವಿಗೆ ಜನ್ಮ ನೀಡಿದೆ.
ಅವಳಿ ಕರುವನ್ನು ನೋಡಲು ಗ್ರಾಮದ ಜನರು ಆಗಮಿಸುತ್ತಿದ್ದು ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ