Udupi; ಅನಾಮಧೇಯ ಲಿಂಕ್ ಕ್ಲಿಕ್ಕಿಸಿ ಸಾವಿರಾರು ರೂ. ಖೋತ
Team Udayavani, Mar 20, 2024, 12:40 AM IST
ಉಡುಪಿ: ಅನಾಮಧೇಯ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ನಗದು ವರ್ಗಾವಣೆಯಾದ ಘಟನೆ ನಡೆದಿದೆ.
ಹರಿಪ್ರಸಾದ್ ಅವರ ಮೊಬೈಲ್ಗೆ ಜ.18ರಂದು ಎಸ್ಬಿಐ ಪರವಾಗಿ ರಿವಾರ್ಡ್ ಪಾಯಿಂಟ್ ಕ್ಲೇಮ್ ಮಾಡುವಂತೆ ಎಸ್ಎಂಎಸ್ ಬಂದಿತ್ತು. ಲಿಂಕ್ ಮೇಲೆ ಕ್ಲಿಕ್ ಮಾಡಿದ ತತ್ಕ್ಷಣ ಅವರು ಬ್ಯಾಂಕ್ ಖಾತೆಯಿಂದ 49,999 ರೂ. ಅನಾಮಧೇಯ ಅಕೌಂಟ್ಗೆ ವರ್ಗಾವಣೆಗೊಂಡಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.