ಉಡುಪಿ ಕ್ಷೇತ್ರ: ಅಭ್ಯರ್ಥಿ ಬದಲಾವಣೆ ಗೆಲುವಿನ ಅಂತರ ಹೆಚ್ಚಿಸಿದೆ


Team Udayavani, May 25, 2023, 7:05 AM IST

ಉಡುಪಿ ಕ್ಷೇತ್ರ: ಅಭ್ಯರ್ಥಿ ಬದಲಾವಣೆ ಗೆಲುವಿನ ಅಂತರ ಹೆಚ್ಚಿಸಿದೆ

ಉಡುಪಿ: ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದು, ದಶಕಗಳ ಕಾಲ ಒಂದೇ ಕುಟುಂಬ ಆಡಳಿತ ನಡೆಸಿದ್ದ ಈ ಕ್ಷೇತ್ರದಲ್ಲೀಗ ಬಿಜೆಪಿ ಹಿಡಿತ ಬಿಗಿಗೊಂಡಿದೆ. 1983ರಲ್ಲಿ ಬಿಜೆಪಿ ಇಲ್ಲಿ ಖಾತೆ ತೆರೆದಿದ್ದರೂ ಬಹುಕಾಲ ಉಳಿಸಿಕೊಳ್ಳಲಾಗಲಿಲ್ಲ. 2004 ರಲ್ಲಿ ಮತ್ತೆ ತೆಕ್ಕೆಗೆ ತಂದುಕೊಂಡರೂ 2013ರಲ್ಲಿ ಕಾಂಗ್ರೆಸ್‌ ಕಿತ್ತುಕೊಂಡಿತ್ತು. 2018ರಲ್ಲಿ ಮತ್ತೆ ಗೆದ್ದುಕೊಂಡ ಬಿಜೆಪಿ ಈ ಬಾರಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಶೇ. 44.89ರಷ್ಟು ಮತ ಪಡೆದಿತ್ತು. ಈ ಬಾರಿ ಶೇ. 38.72 ಕ್ಕೆ ಕುಸಿದಿದೆ. ಬಿಜೆಪಿ ಮತಗಳಿಕೆ ಹೆಚ್ಚಾಗಿದೆ. ಇದಕ್ಕೆ ಬಿಜೆಪಿ ಸಂಘಟನಾ ಸಾಮರ್ಥ್ಯದೊಂದಿಗೆ ಜಿಲ್ಲಾ ಕಾಂಗ್ರೆಸ್‌ನ ಪ್ರಬಲ ಹೋರಾಟದ ಕೊರತೆಯೂ ಕಾರಣ ಎನ್ನಬಹುದು.

ಆಡಳಿತ ವಿರೋಧಿ ಅಲೆಯ ಅಬ್ಬರ ತಡೆಯುವುದೂ ಸೇರಿದಂತೆ ಹಲವು ಕಾರಣಗಳಿಗೆ ಜಿಲ್ಲೆಯಲ್ಲಿ 4 ಕಡೆ ಹೊಸಬರನ್ನು ಪರಿಚಯಿಸುವ ಪ್ರಯೋಗಕ್ಕೆ ಮುಂದಾ ಗಿತ್ತು. ಈ ಪ್ರಯೋಗದಿಂದ ಬಿಜೆಪಿಗೆ ಲಾಭವಾ ಗಿದೆ. ಅದರಂತೆ ಉಡುಪಿಯಲ್ಲೂ ಶಾಸಕ ರಘುಪತಿ ಭಟ್‌ ಬದಲು ಯಶ್‌ ಪಾಲ್‌ ಸುವರ್ಣ ಅವರಿಗೆ ಅವಕಾಶ ನೀಡಲಾಗಿತ್ತು. ಭಟ್‌ ಅವರೂ ಸೇರಿ ದಂತೆ ಹಿರಿಯ ಹಾಗೂ ಯುವ ಕಾರ್ಯಕರ್ತರು ಹೆಚ್ಚು ಉತ್ಸಾಹದಿಂದ ಪ್ರಚಾರದಲ್ಲಿ ತೊಡಗಿದರು. ಇದು ಸುಲಭವಾಗಿ ಜಯದ ಕದ ತಟ್ಟಲು ಸಾಧ್ಯವಾಯಿತು.

ಬಿಜೆಪಿ ಹಾಗೂ ಕಾಂಗ್ರೆಸ್‌ ಮೊಗವೀರ ಸಮುದಾ ಯದವರಿಗೇ ಟಿಕೆಟ್‌ ನೀಡಿದ್ದರೂ ಕಾಂಗ್ರೆಸ್‌ ಅವರ ಹೆಚ್ಚು ಮತಗಳನ್ನು ಪಡೆದಂತಿಲ್ಲ.

2018ರಲ್ಲಿ 1,62,405 ಮತ ಚಲಾವಣೆಯಾಗಿತ್ತು. ಅದರಲ್ಲಿ ಬಿಜೆಪಿ 84,946 ಮತ ಪಡೆದಿದ್ದರೆ, ಕಾಂಗ್ರೆಸ್‌ 72,902 ಮತ ಪಡೆದಿತ್ತು. ಆಗ ಕಾಂಗ್ರೆಸ್‌ನಿಂದ ಪ್ರಮೋದ್‌ ಮಧ್ವರಾಜ್‌ ಸ್ಪರ್ಧಿಸಿದ್ದರು. ಈ ಬಾರಿ ಪ್ರಮೋದ್‌ ಬಿಜೆಪಿ ಪಾಳಯದಲ್ಲಿದಾರೆ. ಹಾಗಾಗಿ ಮೊಗವೀರ ಸಮುದಾಯದ ಹೆಚ್ಚು ಮತ ಬಿಜೆಪಿ ಬುಟ್ಟಿಗೆ ಬಂದಿರಬಹುದೆಂಬುದು ಒಂದು ಅಂದಾಜು. ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಭಟ್‌ ಹೆಚ್ಚು ಹಿಡಿತ ಸಾಧಿಸಿದ್ದರು. ಅದರ ಫ‌ಲ ಫ‌ಲಿತಾಂಶ ದಲ್ಲಿ ಕಂಡಿದೆ. ಗ್ರಾಮೀಣ ಭಾಗದ ಬಹುತೇಕ ಸುತ್ತುಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು.

ಈ ಬಾರಿ 1,66,060 ಮತ ಚಲಾವಣೆಯಾಗಿತ್ತು. ಇದರಲ್ಲಿ ಬಿಜೆಪಿ 97,076 ಮತ ಪಡೆದಿದ್ದರೆ, ಕಾಂಗ್ರೆಸ್‌ 64,303 ಮತ ಪಡೆದಿದೆ. ಹಿಂದಿನ ಬಾರಿಗಿಂತ 8,599 ಮತಗಳು ಕಡಿಮೆ ಬಂದಿವೆ. 18-19 ವರ್ಷದ 4,309 ಮತದಾರರು ಸೇರಿದಂತೆ 5 ವರ್ಷದಲ್ಲಿ ಸೇರ್ಪಡೆಯಾದ 8ರಿಂದ 10 ಸಾವಿರ ಮತದಾರರಲ್ಲಿ ಶೇ.70ರಷ್ಟು ಮತದಾರರನ್ನು ಬಿಜೆಪಿ ಸೆಳೆದಿರುವಂತೆ ತೋರಿದೆ.

ಬಿಜೆಪಿ ಗೆಲುವಿಗೆ ಇನ್ನೊಂದು ಕಾರಣವೆಂದರೆ, ಕಾಂಗ್ರೆಸ್‌ ಸಂಘ ಟನಾತ್ಮಕವಾಗಿ ಗಟ್ಟಿ ಇಲ್ಲದಿರುವುದು ಮತ್ತು ಸಮರ್ಥ ನಾಯಕತ್ವದ ಕೊರತೆ.

ಕಳೆದ ಬಾರಿ ರಘುಪತಿ ಭಟ್‌ 12,044 ಮತಗಳಿಂದ ಗೆದ್ದಿದ್ದರೆ, ಈ ಬಾರಿ ಯಶ್‌ಪಾಲ್‌ 32,773 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಒಂದೊಮ್ಮೆ ಬಿಜೆಪಿ ಅಭ್ಯರ್ಥಿ ಬದಲಾಯಿಸದೇ ಇದ್ದಿದ್ದರೆ ಇಷ್ಟು ದೊಡ್ಡ ಅಂತರದ ಗೆಲುವು ಸಿಗುತ್ತಿತ್ತೇ ಹಾಗೂ ಗೆಲುವು ಬಿಜೆಪಿಗೆ ಸುಲಭದ ತುತ್ತಾಗಿರುತ್ತಿತ್ತೇ ಎಂಬ ಪ್ರಶ್ನೆಯನ್ನೂ ಫ‌ಲಿತಾಂಶ ಉದಾಹರಣೆ ಸಮೇತ ಮುಂದಿಟ್ಟಿದೆ. ಅಭಿವೃದಿಯ ಅಸ್ತ್ರದ ಜತೆಗೆ ಜಾತಿ ಲೆಕ್ಕಾಚಾರಕ್ಕಿಂತಲೂ ಹಿಂದುತ್ವ, ಸಂಘಟನೆ, ಕಾರ್ಯಕರ್ತರ ವಿಶ್ವಾಸ-ಗೌರವ, ಸಂಘಪರಿವಾರದ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಮುಖ್ಯ ಎಂಬುದನ್ನೂ ಉಡುಪಿ ಕ್ಷೇತ್ರ ಸೇರಿದಂತೆ ಕೆಲವು ಕ್ಷೇತ್ರಗಳ ಗೆಲುವು ಸಾಬೀತು ಪಡಿಸಿವೆ.

ಬಿಜೆಪಿ ತನ್ನ ಕೋಟೆಯನ್ನು ಭದ್ರ ಪಡಿಸಿಕೊಳ್ಳಲು ಎಲ್ಲ ರೀತಿಯ ಸಂಘಟಿತ ಪ್ರಯತ್ನ ನಡೆಸಿ ಯಶ ಸಾಧಿಸಿದೆ. ಕಾಂಗ್ರೆಸ್‌ ಸಾಂ ಕ ಹೋರಾಟ ನೀಡುವಲ್ಲಿ ಸ್ವಲ್ಪ ಎಡವಿದೆ.

– ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.