ಇನ್ನು ಉಡುಪಿ ಪೊಲೀಸರು ತುಂಬಾ ಸ್ಮಾರ್ಟ್‌

Team Udayavani, Apr 16, 2018, 6:05 AM IST

Udupi-police.jpg

ಉಡುಪಿ: ಕುಡಿದು ವಾಹನ ಚಲಾಯಿಸುವುದು, ಡ್ರೈವಿಂಗ್‌ ಲೈಸೆನ್ಸ್‌ ಇಲ್ಲ, ಇತ್ಯಾದಿ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಲು ಇನ್ನು ಪೊಲೀಸರಿಗೆ ಅತ್ಯಾಧುನಿಕ ತಂತ್ರಜ್ಞಾನ ನೆರವಾಗಲಿದೆ. 

ಈ ಮೊದಲು ರಸೀದಿ ನೀಡುವ ಪದ್ಧತಿ ಇದ್ದು, ಬಳಿಕ ಬ್ಲ್ಯಾಕ್‌ಬೆರಿ ಸೆಟ್‌ಗಳ ಮೂಲಕ ತ್ವರಿತ ಕೇಸು ದಾಖಲಿಸುವ ಪದ್ಧತಿ ಬಂದಿತ್ತು. ಇದೀಗ “ಮಲ್ಟಿ ಫ‌ಕ್ಷನಿಂಗ್‌ ಡಿವೈಸ್‌’ ಹೆಸರಿನ ಸುಧಾರಿತ ತಂತ್ರಜ್ಞಾನ ಉಡುಪಿ ಜಿಲ್ಲೆಗೆ ಪರಿಚಯಿಸಲಾಗಿದ್ದು, ಮೊದ ಹಂತವಾಗಿ 10 ಡಿವೈಸ್‌ಗಳು ಬಂದಿವೆ. ಮಾ.11ರಿಂದ ಹೊಸ ಡಿವೈಸ್‌ನಲ್ಲಿ ಕೆಲಸ ಮಾಡಲಾಗುತ್ತಿದೆ.
 
2012ರಲ್ಲಿ ಬ್ಲ್ಯಾಕ್‌ಬೆರಿ ಬಂದಿತ್ತು ಡಿವೈಸ್‌
ಸಂಪೂರ್ಣ ಪೇಪರ್‌ ರಹಿತ ತಾಂತ್ರಿಕತೆ ಅಡಿಯಲ್ಲಿ ಪೊಲೀಸ್‌ ಸರ್ವರ್‌ಗೆ ಸಂಪರ್ಕ ಕಲ್ಪಿಸುವಂತೆ ಇರುವ ಬ್ಲ್ಯಾಕ್‌ಬೆರಿ ಸಾಧನಗಳು ಬೆಂಗಳೂರಿನಲ್ಲಿ 2005ರಲ್ಲಿ ಜಾರಿಯಾಗಿದ್ದವು. 2012 ಜೂ.15ರಂದು ಇದು ಉಡುಪಿಗೆ ಪರಿಚಯಗೊಂಡಿತ್ತು. ಕೇಸಿನ ವಿವರಗಳನ್ನು ಬ್ಲಾಕ್‌ಬೆರಿಯಿಂದ ಬ್ಲೂಟೂತ್‌ ಮೂಲಕ ಪ್ರಿಂಟರ್‌ಗೆ ರವಾನಿಸಿ ದಾಖಲೆಯ ಪ್ರಿಂಟ್‌ ತೆಗೆಯಲಾಗುತ್ತಿತ್ತು. ಅಂದು ಉಡುಪಿ ಜಿಲ್ಲೆಗೆ 8 (ಉಡುಪಿಗೆ 4, ಕುಂದಾಪುರಕ್ಕೆ 4)ಸಾಧನಗಳನ್ನು ನೀಡಲಾಗಿತ್ತು. ಆದರೆ ಇದರಲ್ಲೂ ಕೆಲವೊಂದು ಲೋಪಗಳಿದ್ದ ಹಿನ್ನೆಲೆಯಲ್ಲಿ ಸುಧಾರಿತ ತಂತ್ರಜ್ಞಾನವಿರುವ ಸಾಧನವನ್ನು ಪರಿಚಯಿಸಲಾಗುತ್ತಿದೆ. 

ಕಾರ್ಯವಿಧಾನ ಹೇಗೆ? 
ಸದ್ಯ ಇಂಟರ್‌ನೆಟ್‌ ಬಳಸಿ ಟ್ರಾಫಿಕ್‌ ನಿಯಮ ಉಲ್ಲಂಘನೆ ಕೇಸು ಹಾಕುವುದು ಮತ್ತು ಅದರಲ್ಲೇ ಪ್ರಿಂಟ್‌ ತೆಗೆಯುವ ಆಪ್ಶನ್‌ ಅನ್ನು ಮಾತ್ರ ಆಕ್ಟಿವ್‌ ಮಾಡಲಾಗಿದೆ. ಸ್ಮಾರ್ಟ್‌ ಲೈಸೆನ್ಸ್‌ ಇದ್ದರೆ ಅದನ್ನು ಡಿವೈಸ್‌ನಲ್ಲಿ ಸ್ವೆ„ಪ್‌ ಮಾಡಿ ತಂತ್ರಾಂಶದಲ್ಲಿ ವಿವರಗಳನ್ನು ದಾಖಲಿಸಿಕೊಂಡು ಅವರು ಉಲ್ಲಂ ಸಿರುವ ನಿಯಮಕ್ಕೆ ಅನುಗುಣವಾದ ಕೇಸು ಹಾಕಲಾಗುತ್ತದೆ. ಕೇಸಿನ ವಿವರಗಳು ಆಟೋಪ್ರಿಂಟ್‌ ಆಗಿ ಸಿಗಲಿದೆ.

ಬರಲಿದೆ ಕ್ಯಾಶ್‌ಲೆಸ್‌ ವ್ಯವಸ್ಥೆ 
ಮಲ್ಟಿಫ‌ಂಕ್ಷನಿಂಗ್‌ ಡಿವೈಸ್‌ನಲ್ಲಿ ಕಾರ್ಡ್‌ ಸ್ವೆ„ಪ್‌ ಮಾಡಿ ದಂಡ ಕಟ್ಟುವ ಆಪ್ಶನ್‌ ಇದೆ. ಆದರೆ ಸದ್ಯಕ್ಕೆ ಆಕ್ಟಿವ್‌ ಮಾಡಿಲ್ಲ. ಸದ್ಯದ ಮಾದರಿಯಲ್ಲಿ ಫೈನ್‌ ಹಾಕಿದ ಕೂಡಲೇ ನಗದನ್ನೇ ನೀಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಕ್ಯಾಶ್‌ಲೆಸ್‌ ವ್ಯವಹಾರ ನಿರೀಕ್ಷಿಸಲಾಗಿದೆ.  

ಏನಿದು ಮಲ್ಟಿಫ‌ಂಕ್ಷನಿಂಗ್‌ ಡಿವೈಸ್‌? 
ಇದೂ ಆ್ಯಂಡ್ರಾಯಿಡ್‌ ಮೊಬೈಲ್‌ನ ರೀತಿ ಎಲ್ಲ ಫೀಚರ್ ಹೊಂದಿದೆ. ವಾಹನ ಪತ್ತೆ, ಜಿಪಿಎಸ್‌, ಫೋಟೋ ತೆಗೆಯುವುದು, ವಿಡಿಯೋ ಮಾಡುವ ಸೌಕರ್ಯವಿದೆ. ಮುಂದಿನ ದಿನಗಳಲ್ಲಿ ಆರ್‌ಟಿಒ ಸರ್ವರ್‌ ಜತೆಗೆ ಕನೆಕ್ಟ್ ಆಗಿ ಸ್ಮಾಟ್‌ ಕಾರ್ಡ್‌ ರೀತಿ ಇರುವ ಚಾಲನಾ ಪರವಾನಿಗೆಯಲ್ಲೇ ಟ್ರಾಫಿಕ್‌ ನಿಯಮ ಉಲ್ಲಂಘನೆ ಸ್ಟೋರ್‌ ಮಾಡಲಾಗುತ್ತದೆ. ಮಲ್ಟಿ ಫ‌ಂಕ್ಷನಿಂಗ್‌ ಡಿವೈಸ್‌ನಲ್ಲಿಯೂ ದತ್ತಾಂಶ ಶೇಖರಣೆ ಯಾಗುತ್ತದೆ. ಇದನ್ನು ಬೆಂಗಳೂರಿನ ದಿಮ್ಯಾಟಿಕ್ಸ್‌ ಐಟಿ ಸಲ್ಯೂಶನ್‌ ನವರು ಡಿವೈಸ್‌ನ ತಾಂತ್ರಿಕ ನಿರ್ವಹಣೆ ಮಾಡುತ್ತಾರೆ.

8 ಠಾಣೆಗಳಿಗೆ 10 ಹೊಸ ಡಿವೈಸ್‌
ಜಿಲ್ಲೆಯ 23 ಪೊಲೀಸ್‌ ಠಾಣೆಗಳ ಪೈಕಿ 8 ಪೊಲೀಸ್‌ ಠಾಣೆಗಳಿಗೆ 10 ಹೊಸ ಡಿವೈಸ್‌ಗಳನ್ನು ಒದಗಿಸಲಾಗಿದೆ. ಕುಂದಾಪುರ ಮತ್ತು ಉಡುಪಿ ಟ್ರಾಫಿಕ್‌ಗೆ ತಲಾ 2 ಹಾಗೂ ಬೈಂದೂರು, ಬ್ರಹ್ಮಾವರ, ಪಡುಬಿದ್ರಿ, ಕಾಪು, ಮಣಿಪಾಲ ಮತ್ತು ಕಾರ್ಕಳ ನಗರ ಪೊಲೀಸ್‌ ಠಾಣೆಗಳಿಗೆ ತಲಾ ಒಂದು ಡಿವೈಸ್‌ ನೀಡಲಾಗಿದೆ. ಪೊಲೀಸ್‌ ಇಲಾಖೆಯ ಬೆಂಗಳೂರಿನ ಕೇಂದ್ರ ಸ್ಥಾನ ಸಹಿತ ಪಶ್ಚಿಮ ವಲಯ ಐಜಿಪಿ ಕಚೇರಿ ಮತ್ತು ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಮಾನಿಟರಿಂಗ್‌ ಮಾಡಲಾಗುತ್ತದೆ. 2ನೇ ಹಂತದಲ್ಲಿ ಮತ್ತಷ್ಟು ಡಿವೈಸ್‌ಗಳನ್ನು ನಿರೀಕ್ಷಿಸಲಾಗಿದೆ.
 – ಲಕ್ಷ್ಮಣ ಬ. ನಿಂಬರಗಿ, ಉಡುಪಿ ಎಸ್‌ಪಿ

ಪೊಲೀಸ್‌ ಠಾಣೆ         ಕೇಸು    ದಂಡ ವಸೂಲಾತಿ ಮೊತ್ತ (ರೂ.)
ಉಡುಪಿ ಟ್ರಾಫಿಕ್‌        1,757    1,93,400
ಕುಂದಾಪುರ ಟ್ರಾಫಿಕ್‌    800    1,83,900
ಬ್ರಹ್ಮಾವರ                 682    1,74,000
ಮಣಿಪಾಲ                 752    1,15,600
ಬೈಂದೂರು                695    1,02,200
ಕಾರ್ಕಳ ನಗರ            598    84,000
ಕಾಪು                       611    73,500
ಪಡುಬಿದ್ರಿ                  496    53,400
ಒಟ್ಟು:                     6,391    9,80,000

– ಚೇತನ್‌ ಪಡುಬಿದ್ರಿ

ಟಾಪ್ ನ್ಯೂಸ್

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.