ಮಕ್ಕಳಿಗೆ ಕುಟುಂಬ ವ್ಯವಸ್ಥೆ ಪರಿಚಯಿಸುವ ವಿಶಿಷ್ಟ ಕಾರ್ಯಕ್ರಮ
Team Udayavani, Sep 3, 2019, 8:44 PM IST
ಕಾಪು: ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಸಂಬಂಧ‘ಗಳು ಮರೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪುಟಾಣಿ ಮಕ್ಕಳಿಗೆ ಕುಟುಂಬ ವ್ಯವಸ್ಥೆಯನ್ನು ಪರಿಚಯಿಸುವ ವಿಶಿಷ್ಟ ಕಾರ್ಯಕ್ರಮವನ್ನು ಮಂಗಳವಾರ ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಯುಕೆಜಿ ವಿದ್ಯಾರ್ಥಿ ಮುಹಮ್ಮದ್ ನೆಹಾನ್ ಅವರ ಕಾಪು ಪೊಲಿಪುನಲ್ಲಿರುವ ಮನೆಗೆ ಅದೇ ತರಗತಿಯ ಸುಮಾರು 60 ಪುಟಾಣಿ ಮಕ್ಕಳನ್ನು ಶಿಕ್ಷಕಿಯರು ಕರೆದುಕೊಂಡು ಹೋಗಿ ಕುಟುಂಬ ವ್ಯವಸ್ಥೆಯ ಕುರಿತು ಪಾಠ ಮಾಡಿದರು.
ವಿದ್ಯಾರ್ಥಿಯ ತಂದೆ ತಾಯಿ ಹಾಗೂ ಅಜ್ಜ ಅಜ್ಜಿಯಂದಿರ ಪರಿಚಯದ ಮೂಲಕ ಸಂಬಂಧ‘ಗಳ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡಲಾಯಿತು. ಅಜ್ಜ ಅಜ್ಜಿಯಂದಿರ ಮಹತ್ವಗಳ ಬಗ್ಗೆ ತಿಳಿ ಹೇಳಲಾಯಿತು. ಬಳಿಕ ವಿದ್ಯಾರ್ಥಿಗಳು ಹೆತ್ತವರ ಪ್ರಾಮುಖ್ಯತೆಗಳನ್ನು ಬಿಂಬಿಸುವ ಹಾಡನ್ನು ಹಾಡಿದರು. ಕೆಲ ವಿದ್ಯಾರ್ಥಿಗಳು ನೀತಿ ಕಥೆಗಳನ್ನು ಹೇಳಿದರು.
ಹೀಗೆ ಸಂಬಂಧ‘ಗಳ ಪ್ರಾಮುಖ್ಯತೆ ತಿಳಿಸುವ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಓಫಿಲಿಯಾ ಕುಟಿನ್ಹಾ, ಶಿಕ್ಷಕಿಯರಾದ ಆಶಾ ಅಂಚನ್, ವನಿತಾ ಕೋಟ್ಯಾನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ