ಗೆದ್ದಲು ತಿನ್ನುತ್ತಿರುವ 2000 ಮನೆ ನಿವೇಶನದ ಅರ್ಜಿಗಳನ್ನು ಮತ್ತೆ ಓಪನ್ ಮಾಡ್ತಿನಿ: ಸೊರಕೆ


Team Udayavani, May 2, 2023, 7:09 PM IST

ಗೆದ್ದಲು ತಿನ್ನುತ್ತಿರುವ 2000 ಮನೆ ನಿವೇಶನದ ಅರ್ಜಿಗಳನ್ನು ಮತ್ತೆ ಓಪನ್ ಮಾಡ್ತಿನಿ: ಸೊರಕೆ

ಉಡುಪಿ: ನಾನು ಶಾಸಕನಾಗಿದ್ದ ಕಾಲದಲ್ಲಿ 94 ಸಿ ಕಾನೂನು ಮತ್ತು ಅಕ್ರಮ‌ ಸಕ್ರಮ ಯೋಜನೆಯಡಿ 2 ಸಾವಿರ ಅರ್ಜಿಯನ್ನು ಈ ಭಾಗದಲ್ಲಿ ಶಿಫಾರಸು ಮಾಡಿದ್ದೇನೆ..‌ನಾನು‌ ಶಿಫಾರಸು ಮಾಡಿದ ಅರ್ಜಿಯನ್ನು ಸಂಪೂರ್ಣ ವಾಗಿ ತಿರಸ್ಕರಿಸಲಾಗಿದೆ ಅಂತಾ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಪೆರ್ಡೂರು ಪೇಟೆಯಲ್ಲಿ‌ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಾನು ಶಿಫಾರಸು ಮಾಡಿದ ಎಲ್ಲಾ ಅರ್ಜಿಗಳು ಗೆದ್ದಲು ಹಿಡಿದಿದ್ದು ಅರ್ಜಿಯ ಕಟ್ಟನ್ನು ಮತ್ತೆ ಓಪನ್ ಮಾಡಿ ಅದಕ್ಕೆ ಮರು‌ಜೀವ ಕೊಟ್ಟು ಬಡವರಿಗೆ ಮನೆ ಮಂಜೂರಾತಿ ಮಾಡುವ ಕೆಲಸವನ್ನು ಮಾಡ್ತಿನಿ ಅಂತಾ ಅವರು ಹೇಳಿದರು.

ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಬೈಪಾಸ್ ರಸ್ತೆ ಮೂಲಕ ಪೆರ್ಡೂರು ದೇವಸ್ಥಾನಕ್ಕೆ ಹಾನಿ ಆಗದ ಹಾಗೇ ರಸ್ತೆ ಅಗಲೀಕರಣ ಮಾಡಬೇಕಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಬಹಳಷ್ಟು ರಾಜಕೀಯ ಮಾಡ್ತಾ ಇದೆ.ಈಗಿನ ವ್ಯವಸ್ಥೆ ಯಲ್ಲಿ ಮಾಡೋದಾದಲ್ಲಿ ದೇವಸ್ಥಾನದ ಅರ್ಚಕರು ತಿಳಿಸಿದಂತೆ ಪಾಣಿಗ್ರಹದಲ್ಲಿ ಕಂಪನ ಬರುತ್ತದೆ.‌ ಕೆರೆ, ರಥಬೀದಿ ಎಲ್ಲಾನು ನಾಶವಾಗುತ್ತದೆ. ದೇವಸ್ಥಾನಕ್ಕೆ ಧಕ್ಕೆ ಆಗುತ್ತದೆ… ‌ಬೈಪಾಸ್ ರಸ್ತೆ ಮೂಲಕ ಈ ಕಾಮಗಾರಿ ಆದರೆ ದೇವಸ್ಥಾನ ಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ದೇವಸ್ಥಾನಕ್ಕೆ ಧಕ್ಕೆ ಆಗದೇ ರಸ್ತೆ ಅಗಲೀಕರಣಕ್ಕೆ ನಮ್ಮ ಬೆಂಬಲವಿದೆ ಅಂತಾ ಸೊರಕೆ ಹೇಳಿದ್ದಾರೆ. ಬಿಜೆಪಿ ದೇವಸ್ಥಾನ ದ ವಿಚಾರದಲ್ಲಿ ರಾಜಕೀಯ ಶುರುಮಾಡಿ ದೇವಸ್ಥಾನವನ್ನೆ ನಾಶ ಮಾಡಲು ಪ್ರಯತ್ನ ಮಾಡುತ್ತಿದೆ ಅಂತಾ ಸೊರಕೆ ಅಕ್ರೋಶ ವ್ಯಕ್ತಪಡಿಸಿದರು.

ನನ್ನ ಕ್ಷೇತ್ರದಾದ್ಯಂತ ಕುಡಿಯುವ ನೀರಿನ‌ ಸಮಸ್ಯೆ ಬಹಳಷ್ಟು ಇದೆ. ಚುನಾವಣಾ ಸಂದರ್ಭದಲ್ಲಿ ಕುಡಿಯುವ‌ ನೀರಿಗೆ ಆದ್ಯತೆ ಕೊಡ್ತಾ ಇಲ್ಲ. ಮೂಲಭೂತ ಸೌಕರ್ಯದಿಂದ ಜನರನ್ನು ವಂಚಿತರಾಗುವ ಕೆಲಸವನ್ನು ಬಿಜೆಪಿ ಮಾಡ್ತಾ ಇದೆ.ಕುಡಿಯುವ ನೀರಿನ ಮೂಲ ಹುಡುಕುವ ಬದಲು ಪೈಪ್ ಲೈನ್ ಮಾತ್ರ ಹಾಕುವ ಕೆಲಸ ಆಗ್ತಿದೆ ಅಂತಾ ಸೊರಕೆ‌ ವ್ಯಂಗ್ಯವಾಡಿದರು.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೊಳಿ ಮಾತನಾಡಿ ಈಗಿನ ಬಿಜೆಪಿ ಅಭ್ಯರ್ಥಿಯ ಮೇಲೆ ಎರಡು ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ಅವರೇ ಸಲ್ಲಿಸಿದ ಅಫಿದಾವಿತ್ ನಲ್ಲಿ ದಾಖಲಾಗಿದೆ. ಗಣಿ ಲೂಟಿಯಲ್ಲಿ ಸರಕಾರಕ್ಕೆ 81 ಕೋಟಿ ವಂಚಿಸಿದ ಪ್ರಕರಣ ಇದರಲ್ಲಿ ಮುಖ್ಯವಾದದ್ದು. ಈ ಬಗ್ಗೆ ಜನರು ಯೋಚಿಸಬೇಕಾಗಿದೆ.‌ ಆಲೋಚಿಸಿ ಮತ ಹಾಕಬೇಕಾಗಿದೆ. ಕಮಲ‌ ಕೆರೆಯಲ್ಲಿದ್ದರೆ ಚಂದ, ತೆನೆ ಗದ್ದೆಯಲ್ಲಿದ್ದರೆ ಚಂದ, ಪ್ರಾಮಾಣಿಕವಾದ ಕೈ ಅಧಿಕಾರದಲ್ಲಿದ್ದರೆ ಚಂದ ಅಂತೆ. ಹಾಗಾಗಿ ಪ್ರಾಮಾಣಿಕ ರಾಜಕಾರಣಿ ಸೊರಕೆಯವರಿಗೆ ಉತ್ತಮ ಆಯ್ಕೆ ಎಂದು ಮರೋಳಿ ಅಭಿಪ್ರಾಯ ಪಟ್ಟರು.

ಕಾಂಗ್ರೆಸ್ ಮುಖಂಡರಾದ ಶಾಂತಾರಾಮ‌ ಸೂಡ, ಚರಣ್ ವಿಠಲ್ ಕುದಿ, ಜಿತೇಂದ್ರ ಫುಟಾರ್ಡೊ, ಸಂತೋಷ್ ಕುಲಾಲ್ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.