“ಮಂತ್ರಿಗಳಿಗೆ ಮರಳು ಸಿಕ್ಕರೆ ಇತರ‌ರಿಗೆ ಯಾಕಿಲ್ಲ ?’


Team Udayavani, Aug 17, 2017, 7:45 AM IST

1608tke2(imp).jpg

ತೆಕ್ಕಟ್ಟೆ : ರಾಜ್ಯ ಸರಕಾರದ  ಒಂದು ಧೋರಣೆಯನ್ನು ವಿರೋಧಿಸುವುದು ಹಾಗೂ ಜನರ ಸಮಸ್ಯೆಗೆ ಸ್ಪಂದಿಸಬೇಕು ಎನ್ನುವ ಉದ್ಧೇಶದಿಂದ ಪಾದಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ಇದರಿಂದಾಗಿ ಜನ ಜಾಗೃತರಾಗಬೇಕಾಗಿದೆ ಎಂದು  ಮಾಜಿ ಸಂಸದ, ಬಿಜೆಪಿ ಮುಖಂಡ  ಕೆ.ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಅವರು ಬುಧವಾರದಂದು ರಾಜ್ಯ ಕಾಂಗ್ರೆಸ್‌ ಸರಕಾರದ ವೈಫಲ್ಯದ ವಿರುದ್ಧ  ಮಾಬುಕಳದಿಂದ ಕುಂದಾಪುರದೆಡೆಗೆ ಪಾದಾಯಾತ್ರೆಯ ಮೂಲಕ ಗಮನ ಸೆಳೆಯುವ ನಿಟ್ಟಿನಿಂದ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ತೆಕ್ಕಟ್ಟೆಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದರು.

ಮರಳು ನೀತಿಗೆ ಸಂಬಂಧಿಸಿದಂತೆ  ಕಳೆದ ಎರಡು ವರ್ಷದ ಹಿಂದೆ ಕಾನೂನು ಇಲಾಖೆಯ ಅಧಿಕಾರಿಯೊಬ್ಬರು ಸಣ್ಣ ತಿದ್ದುಪಡಿ ಮಾಡಬಹುದು ಎಂದು ಹೇಳಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಆ ತಿದ್ದುಪಡಿಯನ್ನು  ಜಾರಿಗೆ ತರಲಿಲ್ಲ . ಕರಾವಳಿಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ತೆಗೆಯುವ ವಿಚಾರದ ಬಗ್ಗೆ ಬ್ರಹ್ಮಾವರದವರು ಸಂಬಂಧಪಟ್ಟ ಹಸಿರು ಪೀಠಕ್ಕೆ ದೂರು ನೀಡುವ ಮೂಲಕ ಇಂದಿಗೂ ತಡೆ ಹಿಡಿದ್ದಾರೆ ಅದನ್ನು  ಕೂಡಾ ವಾದ ಮಾಡಿ  ತೆರವುಗೊಳಿಸಿದ್ದೇವೆ . ಇಷ್ಟೆಲ್ಲಾ ಆದರೂ ಕೂಡಾ  ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಯನ್ನು ಕೇಳುತ್ತಿರುವುದು ಬಿಟ್ರೆ ಬೇರೆನನ್ನು ನೋಡುತ್ತಿಲ್ಲ  ಅಲ್ಲದೆ ಇದುವರೆಗೆ ಆದೇಶ ಬಂದಿದ್ದನ್ನು ನೋಡಲಿಲ್ಲ . ಇದೇ ತಿಂಗಳ  ಒಂದನೇ ತಾರೀಕಿಗೆ ಮರಳು ತೆಗೆಯಲು ಬಿಡುತ್ತೇವೆ ಎಂದು ಹೇಳಿದರು ಆದರೆ ಇದು ವರೆಗೂ ಕೂಡಾ ಆಗಲಿಲ್ಲ . ಈ ಮೂಲಕ  ಮಂತ್ರಿಗಳ ಹಾಗೂ ಶಾಸಕರ ಗಮನಕ್ಕೆ ತರುವ ಇಚ್ಛಿಸುವುದೇನೆಂದರೆ ಯಾರು ತಮ್ಮ ಜನರಿಗೆ ಕೊಡಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ ಅವರ ವಿರುದ್ಧ  ನ್ಯಾಯಾಂಗ ಮೊರೆ ಹೋಗಬೇಕಾಗುತ್ತದೆ . ಮಂತ್ರಿಗಳಿಗೆ ಮರಳು ಸಿಗುವುದಾದರೆ ಬೇರೆಯವರಿಗೆ ಯಾಕೆ ಸಿಗುವುದಿಲ್ಲ ? ಇಂತಹ ಮರಳಿನ ಸಮಸ್ಯೆಯನ್ನು ಪರಿಹಾರ ಮಾಡದೆ ಇದ್ರೆ ಕಳೆದ ಎರಡುಮೂರು ವರ್ಷದಿಂದಲೂ ಆಗದಿದ್ದನ್ನು ಚುನಾವಣೆ ಸಮೀಪಿಸುತ್ತಿದೆ  ಎಂದು ಬೇಗ ಬೇಗ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು  ಪರೋಕ್ಷವಾಗಿ ಉಸ್ತುವಾರಿ ಮಂತ್ರಿಗಳ ವಿರುದ್ಧ ತೀವ್ರವಾಗಿ ವಾಗ್ಧಾಳಿ ನಡೆಸಿದರು.

ಈ ಸಂದರ್ಭದಲ್ಲಿ  ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ತೆಕ್ಕಟ್ಟೆ ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಮಲ್ಯಾಡಿ ರಾಜೀವ ಶೆಟ್ಟಿ ,  ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ರಾಜೇಶ್‌ ಕಾವೇರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ  ಕಿಶೋರ್‌ ಕುಮಾರ್‌ , ಉದ್ಯಮಿ ಬೇಳೂರು ರಾಘವೇಂದ್ರ ಶೆಟ್ಟಿ, ಓಬಿಸಿ ಮೋರ್ಚಾ ಕುಂದಾಪುರ ಕ್ಷೇತ್ರಾಧ್ಯಕ್ಷ ರವೀಂದ್ರ ತಿಂಗಳಾಯ ,  ತಾ.ಪಂ ಅಧ್ಯಕ್ಷೆ ನಳಿನಿ ರಾವ್‌, ಜಿ.ಪಂ.ಸದಸ್ಯ ರಾಘವೇಂದ್ರ ಬಾರಿಕೆರೆ ಪ್ರಧಾನ ಕಾರ್ಯದರ್ಶಿ  ಶಂಕರ ಅಂಕದಕಟ್ಟೆ ,  ಬಿಜೆಪಿ ಜಿಲ್ಲಾ ರೈತ ಮೋರ್ಚಾದ  ಬೇಳೂರು  ಪ್ರವೀಣ ಕುಮಾರ್‌ ಶೆಟ್ಟಿ ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ, ಜೈಶೀಲ್‌ ಶೆಟ್ಟಿ , ಗ್ರಾ.ಪಂ.ಸದಸ್ಯ ವಿನೋದ್‌ ದೇವಾಡಿಗ,  ಶ್ರೀನಾಥ ಶೆಟ್ಟಿ , ಅವಿನಾಶ್‌ ಶೆಟ್ಟಿ, ಹರೀಶ್‌ ಕುಲಾಲ್‌, ಸುರೇಶ್‌ ಮೊಗವೀರ ಶಾನಾಡಿ  ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಚೀನಾ ಕಾಯ್ದೆಗೆ ಆಕ್ಷೇಪ; ಗಡಿ ಕಾಯ್ದೆ ಬಾಂಧವ್ಯಕ್ಕೆ ಧಕ್ಕೆ ತರಲಿದೆ

ಚೀನಾ ಕಾಯ್ದೆಗೆ ಆಕ್ಷೇಪ; ಗಡಿ ಕಾಯ್ದೆ ಬಾಂಧವ್ಯಕ್ಕೆ ಧಕ್ಕೆ ತರಲಿದೆ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಡುಬಿದ್ರಿ: ಜಾನುವಾರು ಅಕ್ರಮ ಸಾಗಾಟ; ಇಬ್ಬರ ಬಂಧನ

ಪಡುಬಿದ್ರಿ: ಜಾನುವಾರು ಅಕ್ರಮ ಸಾಗಾಟ; ಇಬ್ಬರ ಬಂಧನ

ಅಡುಗೆ ಅನಿಲ ಕೊರತೆಯಿಂದ ಮಕ್ಕಳಿಗೆ “ಹಸಿಯೂಟ’!

ಅಡುಗೆ ಅನಿಲ ಕೊರತೆಯಿಂದ ಮಕ್ಕಳಿಗೆ “ಹಸಿಯೂಟ’!

ಮಹಿಳೆಯರು, ಸಾಮಾನ್ಯ ಜನರಿಗೆ ಸಣ್ಣ ಸಾಲ: ಶಾಸಕ ಕೆ.ರಘುಪತಿ ಭಟ್‌ ಸಲಹೆ

ಮಹಿಳೆಯರು, ಸಾಮಾನ್ಯ ಜನರಿಗೆ ಸಣ್ಣ ಸಾಲ : ಶಾಸಕ ಕೆ.ರಘುಪತಿ ಭಟ್‌ ಸಲಹೆ

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್‌ಇಡಿ ಲೈಟ್ ಅಳವಡಿಕೆಗೆ ಪ್ರಾಯೋಗಿಕ ಚಾಲನೆ

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್‌ಇಡಿ ಲೈಟ್ ಅಳವಡಿಕೆಗೆ ಪ್ರಾಯೋಗಿಕ ಚಾಲನೆ

ಜನಪ್ರತಿನಿಧಿಗಳೇ… ವಿಳಂಬ ನೀತಿಯಿಂದ ಪ್ರಯೋಜನವಿಲ್ಲ

ಜನಪ್ರತಿನಿಧಿಗಳೇ… ವಿಳಂಬ ನೀತಿಯಿಂದ ಪ್ರಯೋಜನವಿಲ್ಲ

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಶ್ರೀಕ್ಷೇತ್ರ ಧರ್ಮಸ್ಥಳ: ದೇವರ ದರ್ಶನ ಸಮಯ ಬದಲು

ಶ್ರೀಕ್ಷೇತ್ರ ಧರ್ಮಸ್ಥಳ: ದೇವರ ದರ್ಶನ ಸಮಯ ಬದಲು

ತನಿಖೆಯಿಂದ ವಾಂಖೆಡೆ ತೆರವಿಲ್ಲ; ಎನ್‌ಸಿಬಿ ಸ್ಪಷ್ಟನೆ

ತನಿಖೆಯಿಂದ ವಾಂಖೆಡೆ ತೆರವಿಲ್ಲ; ಎನ್‌ಸಿಬಿ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.