ಸಮ್ಮೇಳನಕ್ಕೆ ತೆರೆ: ಸಾಹಿತ್ಯ-ಸಂಸ್ಕೃತಿ ಬದುಕಿನ ಭಾಗವಾದಾಗ ಕನ್ನಡ ಗಟ್ಟಿ

Team Udayavani, Dec 29, 2023, 6:09 PM IST

ಸಮ್ಮೇಳನಕ್ಕೆ ತೆರೆ: ಸಾಹಿತ್ಯ-ಸಂಸ್ಕೃತಿ ಬದುಕಿನ ಭಾಗವಾದಾಗ ಕನ್ನಡ ಗಟ್ಟಿ

ಹೊನ್ನಾವರ: ಸಾಹಿತ್ಯ ಮತ್ತು ಸಂಸ್ಕೃತಿ ಬದುಕಿನ ಭಾಗವನ್ನಾಗಿ ಅಳವಡಿಸಿಕೊಂಡಾಗ ಮಾತ್ರ ಕನ್ನಡ ಭಾಷೆ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಹಿರಿಯ ಸಾಹಿತಿ ಡಾ| ಜಗದೀಶ ಕೊಪ್ಪ ಹೇಳಿದರು. ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಎರಡು ದಿನಗಳ ಕಾಲ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.

ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ಇತಿಹಾಸವನ್ನು ಮುಂದಿನ ತಲೆಮಾರಿಗೆ ಕೊಂಡ್ಯೊಯಲು ಇಂತಹ ಸಾಹಿತ್ಯ ಸಮ್ಮೇಳನ ಮಾಡಬೇಕಿದೆ. ಅದರಂತೆಯೇ ಕನ್ನಡದ ಬಗ್ಗೆ ಮರು ಆಲೋಚನೆಗೆ ಹಚ್ಚುವ ರೀತಿ ಸಾಹಿತ್ಯ ಸಮ್ಮೇಳನ ನಡೆಸುವತ್ತ ಸಂಘಟಕರು ಚಿಂತನೆ ನಡೆಸಬೇಕಿದೆ. ಕನ್ನಡ ಭಾಷೆ ಅನ್ನ ಕೊಡತ್ತೂ ಇಲ್ಲವೋ, ಆದರೆ ಅಪ್ಪಟ ಮನುಷ್ಯತ್ವದ ಗುಣ ಲಕ್ಷಣವನ್ನು ಕನ್ನಡ ಭಾಷೆ, ಸಾಹಿತ್ಯ ಕಲಿಸಲಿದೆ ಎಂದರು.

ಸಮ್ಮೇಳನಾಧ್ಯಕ್ಷ ಡಾ| ಶ್ರೀಪಾದ ಶೆಟ್ಟಿ ಮಾತನಾಡಿ ಸಂಘಟನೆಯು ಒಗ್ಗಟಾಗಿ ಯಶ್ವಸಿಯಾಗಿ ದುಡಿದರೆ ಕಾರ್ಯಕ್ರಮ ಯಶ್ವಸಿಯಾಗಲಿದೆ ಎನ್ನುವುದಕ್ಕೆ ಈ ಸಮ್ಮೇಳನ ಸಾಕ್ಷಿ. ಒಳ್ಳೆತನ ಬದುಕಿಗೆ ಬೆಳಕಾಗಲಿ ಎಂದರು. ಇದೇ ವೇಳೆ ಜಾನಪದ, ಸಾಂಸ್ಕೃತಿಕ ಸಂಘಟನೆ, ಮಾಧ್ಯಮ, ಶಿಕ್ಷಣ, ಸಂಘಟನೆ, ಸಮಾಜಸೇವೆ, ಸಂಗೀತ, ಸಂಶೋಧನೆ, ಯಕ್ಷಗಾನ, ರಂಗಭೂಮಿ, ತಾಳೆಗರಿ ವಾಚನ, ಕ್ರೀಡೆ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಕೊಡುಗೆ ನೀಡಿದ ಸಾಧಕರನ್ನು, ಕಾರ್ಯಕ್ರಮದ ಯಶ್ವಸಿಗೆ
ಕಾರಣರಾದವರನ್ನು ಸನ್ಮಾನಿಸಲಾಯಿತು.

ಸಮಾರೋಪ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್‌. ವಾಸರೆ ಸಮ್ಮೇಳನಕ್ಕೆ ಸಹಕರಿಸಿದವರನ್ನು
ಅಭಿನಂದಿಸಿದರು. ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ, ಕೆ.ಡಿ.ಸಿ.ಸಿ. ಬ್ಯಾಂಕ್‌ ನಿರ್ದೇಶಕ ಶಿವಾನಂದ ಹೆಗಡೆ
ಕಡತೋಕಾ, ಉದ್ಯಮಿ ರಾಜು ಭಂಡಾರಿ, ಸೇಫ್‌ ಸ್ಟಾರ್‌ ಸಮೂಹ ಸಂಸ್ಥೆ ಅಧ್ಯಕ್ಷ ಜಿ.ಜಿ.ಶಂಕರ, ಅಭಿಮಾನ ಸ್ಫೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ಸಂದೀಪ ಪೂಜಾರಿ, ಇ.ಒ. ಸುರೇಶ ನಾಯ್ಕ, ಬಿ.ಇ.ಒ ಜಿ.ಎಸ್‌ .ನಾಯ್ಕ, ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ ತಾಂಡೇಲ್‌, ಜಿಲ್ಲಾ ಕಾ.ನಿ.ಪ ಸಂಘದ ಸದಸ್ಯ ಎಚ್‌.ಎಂ.ಮಾರುತಿ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಸುದೀಶ ನಾಯ್ಕ, ಆರ್‌.ಟಿ.ನಾಯ್ಕ, ಸತೀಶ ನಾಯ್ಕ, ದೀಪಕ ನಾಯ್ಕ, ಸಂತೋಷ ಕುಮಾರ, ಅಣ್ಣಪ್ಪ ಮುಕ್ರಿ, ಮತ್ತಿತರರು ಇದ್ದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮುರ್ತುಜಾ ಹುಸೇನ್‌ ಸಮ್ಮೇಳನದ ನಿರ್ಣಯ ಮಂಡಿಸಿದರು. ತಾಲೂಕು ಅಧ್ಯಕ್ಷ ಎಸ್‌.
ಎಚ್‌. ಗೌಡ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಜಾರ್ಜ್‌ ಫರ್ನಾಂಡೀಸ್‌ ಪ್ರಾಸ್ತಾವಿಕ ನುಡಿಯನ್ನಾಡಿದರು. ಗೌರವ
ಕಾರ್ಯದರ್ಶಿ ಪಿ.ಆರ್‌.ನಾಯ್ಕ ವಂದಿಸಿದರು. ಪ್ರಕಾಶ ನಾಯ್ಕ, ಆರ್‌.ಬಿ.ಶೆಟ್ಟಿ ನಿರ್ವಹಿಸಿದರು.

ಡಾ| ಶ್ರೀಪಾದ ಶೆಟ್ಟರ ಕವಿತೆಗಳಲ್ಲಿ ಹಳ್ಳಿಸೊಗಡು-ಪ್ರಕೃತಿ ಸೌಂದರ್ಯ

ಹಳ್ಳಿಯ ಸೊಗಡು, ಪ್ರಕೃತಿ ಸೌಂದರ್ಯವನ್ನು ಕವಿತೆ ರೂಪದಲ್ಲಿ ಕಟ್ಟಿಕೊಟ್ಟ ಹಿರಿಮೆ ಡಾ| ಶ್ರೀಪಾದ ಶೆಟ್ಟಿಯವರಿಗೆ ಸಲ್ಲುತ್ತದೆ ಎಂದು ಸಾಹಿತಿ ಪ್ರೋ| ಆರ್‌.ಎಸ್‌.ನಾಯಕ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಸಾಹಿತ್ಯಾವ ಲೋಕನ ಸಂವಾದದಲ್ಲಿ ಪಾಲ್ಗೊಂಡು ಸಾಹಿತ್ಯ ಸಮ್ಮೆಳಾಧ್ಯಕ್ಷರ ಸಾಹಿತ್ಯ ಕೃಷಿ ಅವಲೋಕಿಸಿ ಅವರು ಮಾತನಾಡಿದರು.

ಕವಿಗಳ ವ್ಯಕ್ತಿ ಚಿತ್ರಣ, ತಾಲೂಕಿನಲ್ಲಿ ಹರಿಯುವ ಶರಾವತಿ ನದಿಯ ಆರ್ಭಟ ಸೇರಿದಂತೆ ಪ್ರಕೃತಿಯ ವಿಸ್ಮಯವನ್ನು ಕವಿತೆಯ ರೂಪದಲ್ಲಿ ಸಮಾಜದ ಮುಂದೆ ಇಟ್ಟಿದ್ದಾರೆ. ದಿನಕರ ದೇಸಾಯಿಯವರ ಕುರಿತು ಸಂಶೋಧನಾ ಪ್ರಬಂಧ ಇಂದಿನ ಯುವಕರಿಗೆ ಮಾರ್ಗದರ್ಶನ ಗ್ರಂಥವಾಗಿದೆ. ಇವರಿಂದ ಪ್ರಕಟವಾದ ಪ್ರವಾಸಿ ಕಥನಗಳು ಪ್ರವಾಸಿಗರನ್ನು ಆ ಸ್ಥಳದತ್ತ ಕರೆದೊಯ್ಯುವ ಮಟ್ಟಿಗೆ ಪ್ರಭಾವ ಬೀರಿದೆ ಎಂದರು. ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ ಸಮ್ಮೇಳನಾಧ್ಯಕ್ಷರ ಬದುಕಿನ ಕುರಿತು ಮಾತನಾಡಿ ಮೂರು ದಶಕಗಳ ಕಾಲ ಉಪನ್ಯಾಸಕರಾಗಿ, ಸಮಾಜಮುಖಿ ಕಾರ್ಯ ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ ಎಂದರು. ಸಂವಾದದಲ್ಲಿ ಶಂಕರ ಗೌಡ, ಮಮತಾ ನಾಯ್ಕ, ಪೂರ್ಣಿಮಾ ಮುರ್ಡೇಶ್ವರ, ಶಶಿಧರ ದೇವಾಡಿಗ, ಎಂ.ಡಿ. ಹರಿಕಂತ್ರ, ಮಂಜುನಾಥ ಗಾವಂಕರ ಬರ್ಗಿ, ಜನಾರ್ದನ ಹರಿನೀರು, ವಿನಾಯಕ ಶೇಟ್‌, ಸಾಧನಾ ಬರ್ಗಿ ಪಾಲ್ಗೊಂಡರು. ವೇದಿಕೆಯಲ್ಲಿ ಅಂಕೋಲಾದ ದಿನಕರ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಹಬ್ಬು, ನಿವೃತ ಪ್ರಾಧ್ಯಾಪಕ ಡಾ| ಸುರೇಂದ್ರ ದಫೇದಾರ ಉಪಸ್ಥಿತರಿದ್ದರು.

23ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯ 
*ಶಿರಸಿಯಲ್ಲಿ ಈಗಾಗಲೇ ಘೋಷಣೆಯಾಗಿರುವ ಪರಿಸರ ವಿಶ್ವವಿದ್ಯಾಲಯವನ್ನು ಶೀಘ್ರ ಸ್ಥಾಪಿಸುವುದರ ಜೊತೆಗೆ ಜಿಲ್ಲೆಗೊಂದು ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಲು ಒತ್ತಾಯ.
* ಜಿಲ್ಲೆಯಲ್ಲಿ ಈಗಾಗಲೇ ಬೇಡಿಕೆ ಇರುವ ಹೋರಾಟದ ಧ್ವನಿಯೂ ಆಗಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಆಗ್ರಹ
*ಹೊನ್ನಾವರದಲ್ಲಿ ರಾಣಿ ಚೆನ್ನ ಭೈರಾದೇವಿ ಥೀಮ್‌ ಪಾರ್ಕ್‌ ಜೊತೆಗೆ ಅಂಕೋಲೆಯಲ್ಲಿ ಡಾ| ದಿನಕರ ದೇಸಾಯಿ
ಥೀಮ್‌ ಪಾರ್ಕ್‌ ಸ್ಥಾಪನೆಗೆ ಒತ್ತಾಯ.
* ಘೋಷಿತ ತಾಳಗುಪ್ಪ-ಹುಬ್ಬಳ್ಳಿ ರೈಲ್ವೆ ಮಾರ್ಗ ಹಾಗೂ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಮಾರ್ಗ ಶೀಘ್ರ ಪ್ರಾರಂಭಿಸಲು
ಒತ್ತಾಯ.
* ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅಧಿಕೃತ ಪ್ರವಾಸೋದ್ಯಮ ಮಾನ್ಯತೆ
ಸಿಗಬೇಕು.
* ಉತ್ತರ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿಗೊಂದು ಸಾಹಿತ್ಯ ಭವನ ನಿರ್ಮಿಸಲು ಸರ್ಕಾರಕ್ಕೆ ಒತ್ತಾಯ.
* 7. ಸಮ್ಮೇಳನದ ಯಶಸ್ವಿಗೆ ಕಾರಣಿಕರ್ತರಾದ ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಸಮ್ಮೇಳನದ ಯಶಸ್ಸಿಗೆ ಜೊತೆಯಾದ
ಎಲ್ಲರಿಗೂ ಜಿಲ್ಲಾ ಸಾಹಿತ್ಯ ಪರಿಷತ್‌ನಿಂದ ವಿಶೇಷವಾಗಿ ಅಭಿನಂದನೆ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಯಿತು.

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.