ಹೊನ್ನಾವರ ಸಾಹಿತ್ಯ ಸಮ್ಮೇಳನ ಮೇ 5ಕ್ಕೆ

Team Udayavani, Apr 27, 2019, 3:36 PM IST

nc-1

ಹೊನ್ನಾವರ: ಒಂಭತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮೂಡ್ಕಣಿ ಶಂಭುಲಿಂಗೇಶ್ವರ ಸಭಾಭವನದಲ್ಲಿ ಮೇ 5ರಂದು ಮುಂಜಾನೆ 8ರಿಂದ ನಡೆಯಲಿದೆ. ಕವಿ, ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ| ಶ್ರೀಪಾದ ಹೆಗಡ ಕಣ್ಣಿ ಸರ್ವಾಧ್ಯಕ್ಷರಾಗಿದ್ದಾರೆ.

ಮುಂಜಾನೆ 8ಕ್ಕೆ ಹಿರಿಯ ಸಾಮಾಜಿಕ ಕಾರ್ಯಕರ್ತ ಪಿ.ಟಿ. ನಾಯ್ಕ ಮೂಡ್ಕಣಿ ರಾಷ್ಟ್ರಧ್ವಜಾರೋಹಣ, ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಕನ್ನಡ ಧ್ವಜಾರೋಹಣ ನಡೆಸುವರು. ನಂತರ ಕಲಾತಂಡದ ಮೆರವಣಿಗೆಗೆ ಟಿ.ಟಿ. ನಾಯ್ಕ ಚಾಲನೆ ನೀಡುವರು. ಮೂಡ್ಕಣಿ ನಾರಾಯಣ ಹೆಗಡೆ ಹೆಸರಿನ ವೇದಿಕೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ| ವಸುಂಧರಾ ಭೂಪತಿ ಉದ್ಘಾಟಿಸುವರು. ನಂತರ 4 ಸಾಹಿತ್ಯ ಕೃತಿಗಳ ಬಿಡುಗಡೆ ನಡೆಯಲಿದೆ. ಪುಸ್ತಕ ಮಳಿಗೆಯನ್ನು ಡಾ| ಶ್ರೀಪಾದ ಶೆಟ್ಟಿ ಉದ್ಘಾಟಿಸುವರು. ಸಾಹಿತ್ಯ ಸರ್ಜಾ ಶಂಕರ, ತಹಶೀಲ್ದಾರ್‌ ಮಂಜುಳಾ ಭಜಂತ್ರಿ, ತಾಪಂ ಇಒ ಸುರೇಶ ನಾಯ್ಕ ಪಾಲ್ಗೊಳ್ಳುವರು. ಅರವಿಂದ ಕರ್ಕಿಕೋಡಿ ಆಶಯದ ನುಡಿಗಳನ್ನಾಡುವರು.

ಅಪೂರ್ವ ಸ್ಮರಣೆ, ಕವಿಕಾವ್ಯ ಸಮಯ, ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ, ಹೊನ್ನಾವರ ಪ್ರಕೃತಿ ಸಂಸ್ಕೃತಿ, ಕುರಿತು ಚರ್ಚೆ, ವಿಚಾರ ಸಂಕಿರಣ ನಡೆಯಲಿದೆ. ನಾರಾಯಣ ಯಾಜಿ ಸಾಲೇಬೈಲು ಸಮಾರೋಪದ ನುಡಿಗಳನ್ನು ಆಡುವರು.

ವಿವಿಧ ಕ್ಷೇತ್ರಗಳಲ್ಲಿ ದುಡಿದ ಗಣ್ಯರ ಸನ್ಮಾನ ನಡೆಯಲಿದೆ. ಸ್ವಚ್ಛ ಭಾರತ ರೂಪಕ, ಕರ್ನಾಟಕ ದರ್ಶನ, ಭಾವಗೀತೆ ಗಾಯನ, ಯಕ್ಷಗಾನ ನಡೆಯಲಿದೆ. ವೇದಿಕೆಗೆ ಹಿರಿಯ ತಲೆಮಾರಿನ ಯಕ್ಷಗಾನ ಕಲಾವಿದ ನಾರಾಯಣ ಹೆಗಡೆ, ಸಮ್ಮೇಳನ ಸ್ಥಳಕ್ಕೆ ರಾಣಿ ಚೆನ್ನಭೈರಾದೇವಿ ನಗರ, ಪ್ರಧಾನ ದ್ವಾರಗಳಿಗೆ ಜಲವಳ್ಳಿ ವೆಂಕಟೇಶರಾವ್‌, ಡಾ| ಪದ್ಮನಾಭಯ್ಯ ಹೈಗುಂದ, ಡಾ| ಕುಸುಮಾ ಸೊರಬ, ಚಂದ್ರಹಾಸ ಹುಡಗೋಡ ಹೆಸರಿಡಲಾಗಿದೆ. ಸ್ಥಳೀಯ ಶಂಭುಲಿಂಗೇಶ್ವರ ಸಾಂಸ್ಕೃತಿಕ ಸಂಘ, ಹಳ್ಳೇರ ಯುವಕ ಸಂಘ, ಧರ್ಮಸ್ಥಳ ಯೋಜನೆ, ದುರ್ಗಾಂಬಾ ಮಹಿಳಾ ಮಂಡಳ ಮೊದಲಾದ ಸಂಘಟನೆಗಳೊಂದಿಗೆ ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗರಾಜ ಹೆಗಡೆ, ಶಶಿಧರ ದೇವಾಡಿಗ, ಭವಾನಿಶಂಕರ, ಪ್ರಶಾಂತ ಮೂಡಲಮನೆ, ಶಂಕರ ಗೌಡ ಬಳಗ ಸಮ್ಮೇಲನ ಸಂಘಟಿಸಿದೆ.

ಟಾಪ್ ನ್ಯೂಸ್

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.