ಯಕ್ಷಕಾಶಿ ಗುಂಡಬಾಳದಲ್ಲಿ ಭಾವೈಕ್ಯ ಹಬ್ಸಿ

ಅಲವಂಗ, ಮಲವಂಗ, ಗೋದಿರೋಟಿ ಖಾವುಂಗ, ಸಿದ್ಧಾಪುರನೆ ಆವುಂಗಾ ಘೋಷಣೆ

Team Udayavani, May 3, 2019, 4:09 PM IST

uttar-kannada-3-tdy..

ಹೊನ್ನಾವರ: ಯಕ್ಷಕಾಶಿ ಗುಂಡಬಾಳೆಯಲ್ಲಿ ಭಾವೈಕ್ಯದ ಹಬ್ಸಿ ಮಹೋತ್ಸವ ನಡೆಯಿತು.

ಹೊನ್ನಾವರ: ಯಕ್ಷಕಾಶಿ ಎಂದು ಕರೆಯಲ್ಪಡುವ, ಯಕ್ಷಗಾನ ಕಲಾಲೋಕದ ನಟರ ವಿಶ್ವವಿದ್ಯಾಲಯ ಗುಂಡಬಾಳ ಮುಖ್ಯಪ್ರಾಣ ಸನ್ನಿಧಿಯಲ್ಲಿ ಸೋತವನಿಗೂ ವಿರೋಚಿತ ಗೌರವ ಸಲ್ಲಿಸುವ ಸಂಪ್ರದಾಯ ಶತಮಾನಗಳಿಂದ ನಡೆದು ಬಂದಿದೆ.

ಒಂದೇ ಸ್ಥಳದಲ್ಲಿ ಪ್ರತಿವರ್ಷ 150ಕ್ಕೂ ಹೆಚ್ಚು ಬಯಲಾಟ ಸೇವೆ ನಡೆಯುವ ಜಗತ್ತಿನ ಏಕೈಕ ರಂಗಸ್ಥಳ ಗುಂಡಬಾಳ. ಇಲ್ಲಿ ಆಟ ಆಡುವುದು, ಆಡಿಸುವುದು, ನೋಡುವುದು ಒಂದು ಸೇವೆ. ರಂಗಸ್ಥಳಕ್ಕೆ ಹೋಗಿ ಧೂಳನ್ನು ಹಣೆಗೆ ಹಚ್ಚಿಕೊಂಡು ಬಂದರೂ ಅದು ಸೇವೆ. ಭಾರತದ ಮೇಲೆ ಆಬಸೇನಿಯಾ ಜನಾಂಗವು ದಾಳಿಮಾಡಿ ಲೂಟಿ ಮಾಡುತ್ತಿದ್ದರು. ಈ ಜನಾಂಗ ಲೂಟಿ ಮಾಡುತ್ತಾ ಗುಂಡಬಾಳ ತಲುಪಿತ್ತು. ಈತನನ್ನು ಊರವರು ಒಟ್ಟಾಗಿ ಹತ್ಯೆಗೈದರು. ನಂತರ ಈ ದುಷ್ಟ ದೈವವಾಗಿ ಊರನ್ನು ಕಾಡಲು ತೊಡಗಿದ. ಆಗ ಊರ ಜನ ಮುಖ್ಯಪ್ರಾಣನಿಗೆ ಶರಣು ಬಂದರು. ಈ ದೈವದಿಂದ ಶಾಶ್ವತ ವಿಮೋಚನೆ ಪಡೆಯಲು ದೇವರ ಸಾನ್ನಿಧ್ಯದಲ್ಲಿ ಗೌರವದ ಸ್ಥಾನ ನೀಡಿ, ಅದನ್ನು ಶಮನಗೊಳಿಸಲಾಯಿತು.

ಈ ಘಟನೆಯನ್ನು ನೆನಪಿಸುವಂತೆ ಅನ್ಯಕೋಮಿನ ಹಬ್ಸಿ ಎಂದು ಕರೆಯುವ ಈ ದೈವವನ್ನು ವರ್ಷಕ್ಕೊಮ್ಮೆ ಆಹ್ವಾನಿಸಿ ಸೇವೆಗೆ ಅವಕಾಶ ಮಾಡಿಕೊಟ್ಟು ಮರಳಿಸಲಾಗುತ್ತಿದೆ. ಈ ಭಾಗದ ಅತ್ಯಂತ ಪುರಾತನ ಕ್ಷೇತ್ರಗಳಲ್ಲೊಂದಾದ ಗುಂಡಬಾಳದಲ್ಲಿ ಯಕ್ಷಗಾನದ ಸೇವೆ ನಡೆಯುವ ತಿಂಗಳಲ್ಲಿ ಹಬ್ಸಿಯ ಆವೇಶ ಮಾವಿನಕುರ್ವೆ ಪುರೋಹಿತ ಕುಟುಂಬಕ್ಕೂ, ವೀರಭದ್ರ ಆವೇಶ ಗುಂಡಬಾಳ ಕಾಮತ್‌ ಕುಟುಂಬಕ್ಕೂ, ಕೃಷ್ಣ ಆವೇಶ ಚಿಕ್ಕನಕೋಡಿನ ನಾಯಕ ಮನೆತನಕ್ಕೂ ಬರುತ್ತದೆ. ಹಬ್ಸಿ ರುದ್ರ ರಮಣೀಯ ಪ್ರವೇಶ, ಆರ್ಭಟ ನೋಡುಗರನ್ನು ದಂಗುಬಡಿಸುತ್ತದೆ. ಧರ್ಮದರ್ಶಿಗಳು ಬಣ್ಣ ಹಚ್ಚಿ, ಕಪ್ಪು ಬಟ್ಟೆಯನ್ನು, ಗೆಜ್ಜೆಯನ್ನು ತೊಡಿಸುತ್ತಾರೆ. ಉಪವಾಸ ಕೈಗೊಂಡ ಹಬ್ಸಿ ಪಾತ್ರಧಾರಿ ಮುಖ್ಯಪ್ರಾಣನಿಗೆ, ನಂತರ ಗಣಪತಿಗೆ ಆರತಿ ಎತ್ತಿ ವೇಷಧಾರಿಯನ್ನು ಎತ್ತಿಕೊಂಡೇ ತರುತ್ತಾರೆ. ಆಗ ಅಪರಿಚಿತ ಭಾಷೆಯಲ್ಲಿ ಅಲವಂಗ, ಮಲವಂಗ, ಗೋದಿರೋಟಿ ಖಾವುಂಗ, ಸಿದ್ಧಾಪುರನೆ ಆವುಂಗಾ ಎಂಬ ಘೋಷಣೆಗಳಾಗುತ್ತವೆ. ಹಬ್ಸಿ ಪೋಷಾಕುಗಳು ಉಡುಗೊರೆಯಾಗಿ ಬರುತ್ತವೆ.

ಪರಂಪರೆ ಮುಂದುವರಿಸಲು ಮಾವಿನಕುರ್ವೆ ಗೋಪಾಲಕೃಷ್ಣ ನಾಗಪ್ಪ ಭಟ್ ಹಬ್ಸಿ ಕಲಾವಿದರಾಗಿ ರಂಗಪ್ರವೇಶ ಮಾಡಿದ್ದಾರೆ. ಹಲವು ನಿಗೂಢ ಸಂಪ್ರದಾಯ, ಪರಂಪರೆಗಳನ್ನು ಉಳಿಸಿಕೊಂಡು ಬಂದಿರುವ ಗುಂಡಬಾಳ ಕ್ಷೇತ್ರದ ಆಡಳಿತ ಮಂಡಳಿ ತನ್ನ ಯಕ್ಷಗಾನ ಸಂಪ್ರದಾಯದಿಂದಾಗಿ ಕಲಾಲೋಕಕ್ಕೆ ನೂರಾರು ಕಲಾವಿದರನ್ನು ಕೊಟ್ಟಿದೆ, ಕೊಡುತ್ತಿದೆ. ಸರ್ಕಾರದ ಯಾವ ನೆರವಿಲ್ಲದೇ ನಿರಂತರವಾಗಿ ನಡೆಯುತ್ತ ಬಂದ ಯಕ್ಷಗಾನ ಪರಂಪರೆಯಿಂದಾಗಿ ಕೆರೆಮನೆ, ಕೊಂಡದಕುಳಿ, ಚಿಟ್ಟಾಣಿ, ಜಲವಳ್ಳಿ, ಯಾಜಿ, ಹುಡಗೋಡು, ಮೊದಲಾದ ಸುಪ್ರಸಿದ್ಧ ಮತ್ತು ಪ್ರಸಿದ್ಧ ಕಲಾವಿದರ ಹುಟ್ಟಿಗೆ ಕ್ಷೇತ್ರ ಕಾರಣವಾಗಿದೆ.

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shirur landslide; Green signal for National highway traffic in three or four days?

Shirur landslide; ರಾ.ಹೆದ್ದಾರಿ ಸಂಚಾರಕ್ಕೆ ಮೂರ್ನಾಲ್ಕು ದಿನಗಳಲ್ಲಿ ಗ್ರೀನ್ ಸಿಗ್ನಲ್ ?

Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ

Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ

1-ccc-aa

Shiruru hill collapse; 10 ದಿನದಿಂದ ಇಲ್ಲೇ ಇದ್ದೇನೆ : ಟೀಕೆಗಳಿಗೆ ಶಾಸಕ ಸೈಲ್‌ ಬೇಸರ

1–eewr-aa-aa

Shiruru hill collapse; ಮಣ್ಣು ತೆಗೆಯುವ ಕಾರ್ಯಾಚರಣೆ ವೇಳೆ ಸಿಕ್ಕ ಹೋಟೆಲ್ ಅವಶೇಷಗಳು

1–eewr-aa

Shiruru hill collapse; ನದಿಯ ನಾಲ್ಕು ಕಡೆ ಅವಶೇಷಗಳು ಬೆಳಕಿಗೆ:ಇಂದ್ರಬಾಲನ್‌ ನಂಬಿಯಾರ್

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.