ನಾಗೋಡಾ ವಿದ್ಯಾರ್ಥಿಗಳ ಅಪಾಯದ ಸಂಚಾರ


Team Udayavani, Jan 1, 2020, 4:15 PM IST

uk-tdy-2

ಜೋಯಿಡಾ: ಸೂಪಾ ಜಲಾಶಯ ನಿರ್ಮಾಣಗೊಂಡು ನಾಲ್ಕು ದಶಕಗಳು ಕಳೆದರೂ ಜೋಯಿಡಾ ತಾಲೂಕಿನ ಪ್ರಮುಖ ಗ್ರಾಪಂ ಕೇಂದ್ರವಾದ ನಾಗೋಡಾಕ್ಕೆ ಇನ್ನೂ ನೂತನ ಸೇತುವೆ ಭಾಗ್ಯವಿಲ್ಲದೆ ತುಂಬಿದ ಸೂಪಾ ಹಿನ್ನೀರಿನಿಂದಾಗಿ ವಿದ್ಯಾರ್ಥಿಗಳು ದಿನನಿತ್ಯ ಬೋಟ್‌ ಮೂಲಕ ಸಂಚರಿಸುವಂತಾಗಿದೆ.

ಸೂಪಾ ತಾಲೂಕು ಕೇಂದ್ರವಿದ್ದಾಗಲೇ ನಾಗೋಡಾ ಪ್ರಮುಖ ಗ್ರಾಮವಾಗಿತ್ತು. ಇಲ್ಲಿನ ನಾಗೋಡಾ ದೇಸಾಯಿ ಎಂಬಾತ ಸೂಪಾ ತಾಲೂಕಿನ ಅಂದಿನ ಪ್ರಮುಖ ಜನನಾಯಕನಾಗಿದ್ದು, ಅಂದೇ ಡಾಂಬರಿಕರಣ ರಸ್ತೆಗಳನ್ನು ಹೊಂದಿ ನಿತ್ಯ ಬಸ್‌ ಸಂಚಾರ ವ್ಯವಸ್ತೆ ಇರುವ ಪ್ರಮುಖ ಕೇಂದ್ರವಾಗಿತ್ತು. ಸೂಪಾ ಮುಳುಗಡೆಯಾದ ಮೇಲೆ ಜೋಯಿಡಾ ತಾಲೂಕು ಕೇಂದ್ರವಾಗಲು ಇವರೇ ಕಾರಣರಾಗಿದ್ದರು. ಆದರೆ ಅವರಿಲ್ಲದ ನಾಗೋಡಾಡಕ್ಕೆ ಈಗ ಸೇತುವೆ ಭಾಗ್ಯವೂ ಇಲ್ಲದೆ, ಸರ್ವಋತು ರಸ್ತೆಗಳೂ ಇಲ್ಲದೆ ಕೊರಗುವಂತಾಗಿದೆ.

ನಾಗೋಡಾ ತಾಲೂಕು ಕೇಂದ್ರದಿಂದ ಅನತಿ ದೂರದಲ್ಲಿದ್ದರೂ ಇದರ ಮುಖ್ಯ ರಸ್ತೆ ಪ್ರತಿವರ್ಷ ಹಿನ್ನೀರಿನಿಂದ ಮುಳುಗಡೆ ಹೊಂದುತ್ತಿದ್ದು, ಗ್ರಾಮಸ್ಥರಿಗೆ, ನಿತ್ಯ ಸಂಚರಿಸುವ ಶಾಲಾ ವಿದ್ಯಾರ್ಥಿಗಳಿಗೆ ಜಲರಾಶಿಯ ಅಪಾಯವನ್ನೆದುರಿಸಿ ಬೋಟ್‌ ಮೂಲಕ ಸಾಗಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತಿದೆ. ಇಷ್ಟಕ್ಕೂ ಇಲ್ಲಿ ಸೇತುವೆ ನಿರ್ಮಾಣ ಅಸಾಧ್ಯವೇನು ಅಲ್ಲ. ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆ ಈ ಗ್ರಾಮವನ್ನು ನಿರ್ಲಕ್ಷಿಸುವಂತೆ ಮಾಡಿದೆ. ಈ ಗ್ರಾಮದಿಂದ ನಿತ್ಯ ಪ್ರಾಥಮಿಕ ಪ್ರೌಢಶಾಲೆ, ಕಾಲೇಜುಗಳಿಗೆ ಜೋಯಿಡಾ ಕೇಂದ್ರಕ್ಕೆ ಸುಮಾರು 25 ರಿಂದ 30 ವಿದ್ಯಾರ್ಥಿಗಳು ಹೋಗುತ್ತಾರೆ. ನಿತ್ಯ ಸಂಚರಿಸುವ ಇವರ ಬಗ್ಗೆ ಯಾವ ಜನನಾಯಕನ ಕನಿಕರೂ ಇಲ್ಲವೇ? ಎನ್ನುವಂತೆ ಭಾಸವಾಗುತ್ತಿದೆ.

ಇದು ಮಾಜಿ ಸಚಿವ ರಾಜ್ಯದ ಪ್ರಭಾವಿ ನಾಯಕ ಆರ್‌ .ವಿ.ದೇಶಪಾಂಡೆಯವರ ಕ್ಷೇತ್ರ. ತಾಲೂಕಿನ ಅಭಿವೃದ್ಧಿಗೆ ಈಗಾಗಲೇ ನೂರಾರು ಕೋಟಿ ಅಭಿವೃದ್ಧಿ ಕೆಲಸ ಮಾಡಿಸಿದ, ಮಾಡುತ್ತಾ ಬಂದ ಇವರಿಗೆ ಇವೆಲ್ಲಾ ದೊಡ್ಡದೇನಲ್ಲ. ಆದರೆ ಸ್ಥಳೀಯ ಅಧಿಕಾರಿಗಳು, ಜನನಾಯಕರ ನಿರ್ಲಕ್ಷ ಈ ಗ್ರಾಮಕ್ಕೆ ಹಿಂದೆ ಇದ್ದ ಗೌರವವನ್ನು ಕಡಿಮೆಗೊಳಿಸುವಂತೆ ಮಾಡಿದೆ. ಇದು ಜೋಯಿಡಾ ತಾಲೂಕಿನ ದುರ್ಭಾಗ್ಯದ ಸಂಗತಿ.

ನಾಗೋಡಾ ಗ್ರಾಮದ ವಿದ್ಯಾರ್ಥಿಗಳ, ಯುವಜನತೆ ಭವಿಷ್ಯದ ದೃಷ್ಟಿಯಿಂದಲಾದರೂ ಈ ಗ್ರಾಮಕ್ಕೆ ಸರ್ವಋತು ಸೇತುವೆ ಅಗತ್ಯವಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಕ್ರಮಕೈಗೊಂಡು ಅನುಷ್ಠಾನಗೊಳಿಸಬೇಕಿದೆ.

ಟಾಪ್ ನ್ಯೂಸ್

3-Sagara

Sagara: ಭಾಗವತ ವೇಣುಗೋಪಾಲ ಕೆಳಮನೆ ಇನ್ನಿಲ್ಲ

2-DKSHI

Subramanya: ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

Lok Sabha Speaker: ಲೋಕಸಭಾ ಸ್ಪೀಕರ್ ಚುನಾವಣೆಗೆ ಓಂ ಬಿರ್ಲಾ, ಕೆ. ಸುರೇಶ್ ನಾಮಪತ್ರ ಸಲ್ಲಿಕೆ

Speaker Election: ಲೋಕಸಭಾ ಸ್ಪೀಕರ್ ಚುನಾವಣೆಗೆ ಓಂ ಬಿರ್ಲಾ, ಕೆ.ಸುರೇಶ್ ನಾಮಪತ್ರ ಸಲ್ಲಿಕೆ

9

ಡಿಸೆಂಬರ್‌ 20, 21 ಹಾಗೂ 22 ರಂದು ಮಂಡ್ಯ ಸಾಹಿತ್ಯ ಸಮ್ಮೇಳನ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

8

Bollywood: ಮದ್ವೆ ದಿನವೇ ಕುಡಿದು ಟೈಟ್‌ ಆದ ಸೋನಾಕ್ಷಿ ಗಂಡ; ಎಣ್ಣೆ ಪಾರ್ಟಿ ಎಂದ ನೆಟ್ಟಿಗರು

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!

AFGvsBAN: ಪಂದ್ಯದ ವೇಳೆ ಕುಸಿದು ಬಿದ್ದ ಗುಲ್ಬದಿನ್; ಆಸ್ಕರ್‌ ಕೊಡಿ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Mundagodu-police

Fraud: ಯುವತಿಯಿಂದ 18 ಲಕ್ಷ ರೂ. ಪಡೆದು ವಂಚಿಸಿದ ಕಾನ್ಸ್‌ಟೇಬಲ್‌

Ankola BusStand ಮತ್ತೆ ಕಳ್ಳರ ಕರಾಮತ್ತು; ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನ

Ankola Bus Stand ಮತ್ತೆ ಕಳ್ಳರ ಕರಾಮತ್ತು; ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನ

1-ankola

Ankola: ತಾಯಿ-ಮಗಳ ಡಬಲ್ ಮರ್ಡರ್ ಆಗಿದೆ ಎಂದು 112ಕ್ಕೆ ಕರೆ!

Kumta ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟKumta ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ

Kumta ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

3-Sagara

Sagara: ಭಾಗವತ ವೇಣುಗೋಪಾಲ ಕೆಳಮನೆ ಇನ್ನಿಲ್ಲ

ಮುಂಡ್ಕೂರು: ರಸ್ತೆಯಲ್ಲಿ ಬೃಹತ್‌ ಹೊಂಡ- ವಾಹನ ಸಂಚಾರಕ್ಕೆ ಕಿರಿಕಿರಿ

ಮುಂಡ್ಕೂರು: ರಸ್ತೆಯಲ್ಲಿ ಬೃಹತ್‌ ಹೊಂಡ- ವಾಹನ ಸಂಚಾರಕ್ಕೆ ಕಿರಿಕಿರಿ

ಬೈಂದೂರು: ಬಹುಕೋಟಿ ಬಸ್‌ ನಿಲ್ದಾಣ ಜಾನುವಾರು ತಂಗುದಾಣ!

ಬೈಂದೂರು: ಬಹುಕೋಟಿ ಬಸ್‌ ನಿಲ್ದಾಣ ಜಾನುವಾರು ತಂಗುದಾಣ!

Udayavani Campaign: ಕಾರ್ಕಳ-ಮೊದಲು 70, ಈಗ 20!

Udayavani Campaign: ಕಾರ್ಕಳ-ಮೊದಲು 70, ಈಗ 20!

12

Sandalwood: ಒಂದು ಆತ್ಮ ಮೂರು ಜನ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.