ಗುಡ್ಡಗಾಡು ಜಿಲ್ಲೆಗೂ ಬಂತು ಸಂಚಾರಿ ಮೊಬೈಲ್‌ ಬ್ಯಾಂಕ್‌!

Team Udayavani, Jan 9, 2019, 11:19 AM IST

8-january-5.jpg

ಶಿರಸಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ನಗದು ರಹಿತ ವ್ಯವಹಾರವನ್ನು ಗ್ರಾಮೀಣ ರೈತರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ತಲುಪಿಸಬೇಕು, ಬ್ಯಾಂಕ್‌ ಸೌಲಭ್ಯ ಎಲ್ಲರೂ ಪಡೆದುಕೊಳ್ಳಬೇಕು ಎಂಬ ಕಾರಣದಿಂದ ಹೊಸದೊಂದು ಸಂಚಾರಿ ಬ್ಯಾಂಕ್‌ ಸೌಲಭ್ಯ ನಿಮ್ಮೂರಿಗೂ ಬರಲಿದೆ.

ಉತ್ತರ ಕನ್ನಡದ ಹಳ್ಳಿಗಳಿಗೆ ತ್ವರಿತ ಸೇವೆ ಕೊಡಬೇಕು ಎಂಬ ಆಶಯದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿರುವ ಮೊಬೈಲ್‌ ಬ್ಯಾಂಕ್‌ ಉದ್ಘಾಟನೆಯಾಗಿದ್ದು, ಈ ಮಾಸಾಂತ್ಯದೊಳಗೆ ನಿಗದಿತ ದಿನ, ನಿಗದಿತ ಸಮಯಕ್ಕೆ ಜಿಲ್ಲೆಯ ವಿವಿಧೆಡೆ ಓಡಾಡಲು ಮಾರ್ಗಸೂಚಿ ಪ್ರಕಾರ ಕೆಲಸ ಮಾಡಲಿದೆ. ಕೆಡಿಸಿಸಿ ಬ್ಯಾಂಕ್‌ ಇದನ್ನು ನಿರ್ವಹಿಸಲಿದೆ.

ಏನಿದು ಮೊಬೈಲ್‌ ಬ್ಯಾಂಕ್‌: ನಬಾರ್ಡ್‌ ಸಹಕಾರದಲ್ಲಿ ಸರಕಾರದ ಆಶಯಕ್ಕೆ ಬದ್ಧವಾಗಿ ನೂತನ ಸಂಚಾರಿ ಬ್ಯಾಂಕ್‌ ಅನುಷ್ಠಾನಕ್ಕೆ ಬಂದಿದ್ದು, ಈಗಾಗಲೇ ಮಂಗಳೂರು, ಉಡುಪಿ, ವಿಜಯಪುರಗಳಲ್ಲಿ ಇಂಥ ಬ್ಯಾಂಕಿಂಗ್‌ ಕೆಲಸ ಮಾಡುತ್ತಿದ್ದು, ಉತ್ತರ ಕನ್ನಡಕ್ಕೆ ಪ್ರಥಮ ಪ್ರವೇಶವಾಗಿದೆ.

ಏರಟೆಲ್‌ ನೆಟ್ವರ್ಕ್‌ ಎಲ್ಲೆಲ್ಲಿ ಸಿಗುತ್ತದೋ ಯಾವುದೇ ಊರಾದರೂ ಈ ಬ್ಯಾಂಕ್‌ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಬಂಗಾರ ದಾಗಿನ ಸಾಲ, ಕೃಷಿ ಸಾಲ ಮಾಹಿತಿ ಜೊತೆ ನೂತನ ಖಾತೆ ತೆರೆಯುವುದು, ಹಣ ತುಂಬುವುದು ಯಾವುದಿದ್ದರೂ ಇಲ್ಲಿ ಮಾಡಬಹುದಾಗಿದೆ. ಡ್ರೈವರ್‌, ಸಂಚಾರಿ ಮ್ಯಾನೇಜರ್‌, ಕ್ಯಾಶಿಯರ್‌ ಸೇರಿ ಮೂವರು ಇರುವ ವಾಹನವಿದಾಗಿದೆ.

ಉತ್ತರ ಕನ್ನಡದ ಮನೆಮನೆಯಿಂದ ಭಟ್ಕಳದ ಗೊರಟೆ ಗ್ರಾಮದ ತನಕ ಓಡಾಡಲಿದೆ. ಶಾಖೆ ಇರದ ಪ್ರದೇಶದಲ್ಲೂ ಈ ಮೊಬೈಲ್‌ ಬ್ಯಾಂಕ್‌ ಓಡಾಡಲಿದೆ. ಸಾಲಕ್ಕೆ, ಡಿಪೋಸಿಟ್‌ಗೆ, ಶೀಘ್ರ ನಗದಿಗೆ ಬ್ಯಾಂಕ್‌ ಖಾತೆಗೇ ಓಡಾಟ ಮಾಡಬೇಕಿಲ್ಲ. ವೃದ್ಧರಿಗೆ, ಮಹಿಳೆಯರಿಗೂ ಇದು ನೆರವಾಗಲಿದೆ.

ಏನೇನಿದೆ ಇಲ್ಲಿ?: ಮೊಬೈಲ್‌ ಬ್ಯಾಂಕ್‌ ವಾಹನ ಅತ್ಯಂತ ಸುಸಜ್ಜಿತವಾಗಿದೆ. ದೊಡ್ಡ ಟೆಂಪೋ ಮಾದರಿ ವಾಹನದಲ್ಲಿ ಎಟಿಎಂ ಕೇಂದ್ರವಿದೆ. ಇನ್ನೊಂದಡೆ ಬ್ಯಾಂಕ್‌ ಶಾಖೆ ಕೂಡ ಇದೆ. ಎರಡು ಕಂಪ್ಯೂಟರ್‌ ಒಳಗೊಂಡ ಭಾಗದಲ್ಲಿ ನಗದು ವಿಭಾಗ ಕೂಡ ಇದೆ.

ಇಡೀ ಕೌಂಟರ್‌ ಹವಾನಿಯಂತ್ರಿತವೂ ಆಗಿದ್ದು, ಜಿಪಿಎಸ್‌ ಸೇರಿದಂತೆ ಆಧುಕಿನ ಸೌಲಭ್ಯಗಳೂ ಇವೆ. ಐದು ಕೆವಿ ಜನರೇಟರ್‌, ಬ್ಯಾಟರಿ ಬ್ಯಾಂಕ್‌ ಆಫ್‌ ಕೂಡ ಅಳವಡಿಸಲಾಗಿದೆ. ಸರಕಾರಗಳ ಹಾಗೂ ನಿರ್ವಹಣೆ ಜವಾಬ್ದಾರಿ ಹೊತ್ತ ಕೆಡಿಸಿಸಿ ಬ್ಯಾಂಕ್‌ ಮಾಹಿತಿಗಳನ್ನೂ ಡಿಜಿಟಲ್‌ ಟಿವಿ ಮೂಲಕ ಬಿತ್ತರಿಸಲಾಗುತ್ತದೆ. ರಜಾ ದಿನ ಹೊರತಪಡಿಸಿ ಬೆಳಗ್ಗೆ 10ರಿಂದ ಸಂಜೆ 5ರ ತನಕ ಕಾರ್ಯಮಾಡಲಿದೆ.

ಗುಡ್ಡಗಾಡು ಜಿಲ್ಲೆಯಲ್ಲಿ: ಗುಡ್ಡಗಾಡು ಜಿಲ್ಲೆಯಲ್ಲಿ ಮೊಬೈಲ್‌ ನೆಟ್ವರ್ಕನದ್ದೇ ಸಮಸ್ಯೆ ಇದೆ. ಆದರೂ ಈ ಪ್ರಯೋಗ ನವೀನವಾದದ್ದೇ. ವಾಹನಗಳ ನಿರ್ವಹಣೆ, ನೆಟ್ವರ್ಕ ಸೌಲಭ್ಯ, ಜನಪರವಾಗಿರುವ ಬ್ಯಾಂಕ್‌ ಸಿಬ್ಬಂದಿಗಳಿಂದ ಇದನ್ನು ಇನ್ನಷ್ಟು ಜನಪ್ರಿಯಗೊಳಿಸಬಹುದು.

ಬ್ಯಾಂಕ್‌ ಖಾತೆಯೇ ಇನ್ನೂ ಆಗದ ಅನೇಕ ಮಹಿಳೆಯರು, ವೃದ್ಧರು ಇದ್ದಾರೆ. ಅಂಥವರಿಗೂ ಇದು ನೆರವಾದರೆ ಸರಕಾರದ ಸೌಲಭ್ಯಗಳಿಗೂ ಅನುಕೂಲ ಆಗಬಹುದು. ಮನೆಬಾಗಿಲಿಗೆ ಬ್ಯಾಂಕ್‌ ಸೌಲಭ್ಯ ಯಶಸ್ಸಿಗೆ ಸಿಬ್ಬಂದಿಗಳ ಉತ್ಸುಕತೆ ಜನರಿಗೆ ತಲುಪಬೇಕಿದೆ.

ಟಾಪ್ ನ್ಯೂಸ್

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

ಅಮೆರಿಕ : ಶಾಲಾ ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಗುಂಡಿನ ದಾಳಿ , 3 ಸಾವು

ಅಮೆರಿಕ : ಶಾಲಾ ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಗುಂಡಿನ ದಾಳಿ , 3 ಸಾವು

ಕಾಶಿ ವಿಶ್ವನಾಥನ “ಸುಗಮ ದರ್ಶನ’ದ ಅಡ್ಡಿ ನಿವಾರಣೆ

ಕಾಶಿ ವಿಶ್ವನಾಥನ “ಸುಗಮ ದರ್ಶನ’ದ ಅಡ್ಡಿ ನಿವಾರಣೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 8 ರೂ. ಇಳಿಕೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 8 ರೂ. ಇಳಿಕೆ

ಶಬರಿಮಲೆಯಲ್ಲಿ ಇ-ಹುಂಡಿ : ಭಕ್ತಾದಿಗಳು ಗೂಗಲ್‌ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು

ಶಬರಿಮಲೆಯಲ್ಲಿ ಇ-ಹುಂಡಿ : ಭಕ್ತಾದಿಗಳು ಗೂಗಲ್‌ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು

ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ

ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಜ್ಜಿ

ಬಸ್ ನಿಲ್ದಾಣದಲ್ಲಿ ಮನೆ ಮಂದಿ ಬರುವಿಕೆಗಾಗಿ ಕಾಯುತ್ತಿರುವ ವಯೋವೃದ್ದೆ..!

fight

ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

ಸುಧೀರ್‌ ಶೆಟ್ಟಿ

ಹಾಲಿನ ವ್ಯಾಪಾರದಲ್ಲಿ ಯಶಸ್ಸು ಕಂಡ ಸ್ನಾತಕೋತ್ತರ ಪದವೀಧರ

ಡಿ.13ಕ್ಕೆ ನಮ್ಮನೆ ಹಬ್ಬಕ್ಕೆ ದಶಮಾನೋತ್ಸವ, ‘ವಂಶೀವಿಲಾಸ’ ಲೋಕಾರ್ಪಣೆ

ಡಿ.13ಕ್ಕೆ ನಮ್ಮನೆ ಹಬ್ಬಕ್ಕೆ ದಶಮಾನೋತ್ಸವ, ‘ವಂಶೀವಿಲಾಸ’ ಲೋಕಾರ್ಪಣೆ

ಹಿಲ್ಲೂರು ಯಕ್ಷಮಿತ್ರ ಬಳಗ ಉದ್ಘಾಟನೆ

ಹಿಲ್ಲೂರು ಯಕ್ಷಮಿತ್ರ ಬಳಗ ಉದ್ಘಾಟನೆ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

ಅಮೆರಿಕ : ಶಾಲಾ ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಗುಂಡಿನ ದಾಳಿ , 3 ಸಾವು

ಅಮೆರಿಕ : ಶಾಲಾ ವಿದ್ಯಾರ್ಥಿಯಿಂದ ಸಹಪಾಠಿಗಳ ಮೇಲೆ ಗುಂಡಿನ ದಾಳಿ , 3 ಸಾವು

ಕಾಶಿ ವಿಶ್ವನಾಥನ “ಸುಗಮ ದರ್ಶನ’ದ ಅಡ್ಡಿ ನಿವಾರಣೆ

ಕಾಶಿ ವಿಶ್ವನಾಥನ “ಸುಗಮ ದರ್ಶನ’ದ ಅಡ್ಡಿ ನಿವಾರಣೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 8 ರೂ. ಇಳಿಕೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 8 ರೂ. ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.