ವಾಹನ ಮಾಲೀಕರಿಗೂ ಬಿತ್ತು ಅನಾವಶ್ಯಕ “ದಂಡ’!


Team Udayavani, May 25, 2020, 5:03 PM IST

ವಾಹನ ಮಾಲೀಕರಿಗೂ ಬಿತ್ತು ಅನಾವಶ್ಯಕ “ದಂಡ’!

ಸಾಂದರ್ಭಿಕ ಚಿತ್ರ

ಶಿರಸಿ: ಕೊವಿಡ್‌ 19ರ ನಿಯಂತ್ರಣಕ್ಕಾಗಿ ಭಾರತ ಸರಕಾರದ ಜೊತೆಗೆ ರಾಜ್ಯ ಸರಕಾರ ಕೂಡ ಘೋಷಿಸಿದ ಲಾಕ್‌ಡೌನ್‌ ಹಿನ್ನಲೆಯಲ್ಲಿ ಆರ್‌ಟಿಒ ಕಚೇರಿಯನ್ನೂ ಬಂದ್‌ ಮಾಡಲಾಗಿತ್ತು. ತಂಬು, ನೊಂದಣಿ, ನವೀಕರಣ ಸೇರಿದಂತೆ ಯಾವುದೇ ಕಾರ್ಯವನ್ನೂ ಇಲಾಖೆ ಮಾಡುತ್ತಿರಲಿಲ್ಲ. ಏಪ್ರಿಲ್‌ ಕೊನೇ ವಾರದಲ್ಲಿ ಬಿಎಸ್‌4 ನೋಂದಣಿಗೆ ಅವಕಾಶ ನೀಡಿ ಕೆಲಸ ಮಾಡಿತ್ತು.

ಆದರೆ, ಮೇ ತಿಂಗಳಲ್ಲಿ ಆರಂಭಗೊಂಡ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಬಿಎಸ್‌6 ಅಥವಾ ಕಚೇರಿ ಬಂದ್‌ ಆದ ಅವಧಿಯಲ್ಲಿ ವಾಹನಗಳ ನವೀಕರಣಕ್ಕೆ ಬಂದಿದ್ದರೆ ಅವುಗಳ ಮಾಲಕರು ವಿಳಂಬ ದಂಡ ಕಟ್ಟಬೇಕಾಗಿದೆ. ಕಚೇರಿಯೇ ಬಂದ್‌ ಆದ ಅವಧಿಯಲ್ಲಿ ಅವುಗಳ ನವೀಕರಣ ಅವಕಾಶ ಕೂಡ ಇರಲಿಲ್ಲ. ಆದರೆ, ಈಗ ಆರಂಭವಾದ ಕಚೇರಿಯಲ್ಲಿ ಲಾಕ್‌ಡೌನ್‌ ಬಂದ್‌ ಅವಧಿಯಲ್ಲಿ ಸವಾರರ, ಮಾಲಕರ ತಪ್ಪಿಲ್ಲದ ಕಾರ್ಯಕ್ಕೆ 100 ರೂ. ಅವಧಿ ಮೀರಿದ ದಂಡ ವಸೂಲಾತಿ ಆಗುತ್ತಿದೆ.

ಸರಕಾರ ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲವನ್ನೂ ಮುಂದೂಡಿದ್ದರೂ ಕಂಪ್ಯೂಟರ್‌ನಲ್ಲಿ ಬದಲಾವಣೆ ಆಗದೇ ಇರುವುದರಿಂದ ಈ ಸಮಸ್ಯೆ ತಲೆದೋರಿದೆ. ಬಿಎಸ್‌6 ವಾಹನಗಳ ತಾತ್ಕಾಲಿಕ ನೊಂದಣಿ ಅವಧಿ ಮುಗಿದವರೂ 100 ರೂ. ದಂಡ ಕಟ್ಟುವುದು ಅನಿವಾರ್ಯವಾಗಿದೆ.

ಇನ್ನೂ ಆರ್‌ಟಿಓ ಕಚೇರಿಯಲ್ಲಿ ಚಾಲನಾ ಪರವಾನಗಿ ನೀಡುವ ಕಾರ್ಯ ಆರಂಭವಾಗಿಲ್ಲ. ಹೊಸ ಲೈಸನ್ಸ್‌ ಪಡೆಯುವವರ ಎಲ್‌ಎಲ್‌ಆರ್‌ ಅವಧಿ ಮುಗಿದರೂ, ಲೈಸನ್ಸ್‌ ಅವಧಿ ಮುಗಿದವರು ಪುನಃ ಚಾಲನಾ ಪರವಾನಗಿ ಪಡೆಯಲು ದಂಡ ನೂರು ರೂ. ಕಟ್ಟಬೇಕಾಗುತ್ತದೆ. ಲಾಕ್‌ಡೌನ್‌ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿದ್ದ ಸೇವೆಯನ್ನು ಆರಂಭಿಸಿದಾಗ ದಂಡ ಕಟ್ಟುವ ಪ್ರಕ್ರಿಯೆ ಸರಿಯಲ್ಲ. ಕೋವಿಡ್‌ ಕಷ್ಟದಲ್ಲಿ ಬರೆ ಹಾಕುವುದು ತರವಲ್ಲ ಎಂದೂ ಅನೇಕ ನೋಂದಣಿಕಾರರು ಆಕ್ಷೇಪಿಸಿದ್ದಾರೆ. ಈ ಬಗ್ಗೆ ಕಂಪ್ಯೂಟರ್‌ ಸಾಫ್ಟ್‌ವೇರ್‌ ಬದಲಾಯಿಸಬೇಕು ಎಂಬ ಒತ್ತಾಯವನ್ನು ಸರಕಾರಕ್ಕೆ ಅಧಿಕಾರಿಗಳೂ ಮನವಿ ಮಾಡಿಕೊಂಡಿದ್ದರೂ ಪ್ರಯೋಜನ ಆಗಿಲ್ಲ.

ಈಗಗಲೇ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಇನ್ನೂ ಸ್ಪಷ್ಟನೆ ಬಂದಿಲ್ಲ. ಕಂಪ್ಯೂಟರ್‌ ದಂಡ ಕೇಳುತ್ತಿದೆ.  ಹೆಸರು ಹೇಳದ ಅಧಿಕಾರಿ

ನನ್ನ ಬೈಕ್‌ ರಿನಿವಲ್‌ಗೆ ಬಂದಿದೆ. ಏಪ್ರೀಲ್‌ 4ಕ್ಕೆ ಆಗಬೇಕಿತ್ತು. ಆದರೆ, ಆಗ ಲಾಕ್‌ಡೌನ್‌. ಈಗ ಬಂದರೆ 100 ದಂಡ ಹೇಳುತ್ತಾರೆ.  – ಎಸ್‌.ಆರ್‌. ಹೆಗಡೆ, ವಾಹನ ಮಾಲೀಕ

ಟಾಪ್ ನ್ಯೂಸ್

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.