ಗ್ರೀನ್‌ ಗೋಲ್ಡ್ ಕಂಪನಿ ವಿರುದ್ಧ ವರಿಷ್ಠಾಧಿಕಾರಿಗೆ ದೂರು

ವೈಜನಾಥ ಹಿರೇಮಠ ನೇತೃತ್ವದಲ್ಲಿ ಕ್ರಮಕ್ಕೆ ಮಹಿಳೆಯರ ಮನವಿ

Team Udayavani, Jun 14, 2019, 2:48 PM IST

14-June-26

ಯಾದಗಿರಿ: ಗ್ರೀನ್‌ ಗೋಲ್ಡ್ ಶೇಂಗಾ ಎಣ್ಣೆ ಉತ್ಪಾದನೆ ಕಂಪೆನಿಯಿಂದ ವಂಚನೆಗೊಳಗಾದವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಭಗವಾನ ಅವರಿಗೆ ದೂರು ಸಲ್ಲಿಸಿದರು.

ಯಾದಗಿರಿ: ಜಿಲ್ಲಾದ್ಯಂತ ನೂರಾರು ಜನರಿಗೆ ಶೇಂಗಾ ಎಣ್ಣೆ ತೆಗೆಯುವ ಯಂತ್ರ ಒದಗಿಸಿ ಉತ್ಪಾದಿತ ಶೇಂಗಾ ಎಣ್ಣೆ ಖರೀದಿ ಮಾಡುವುದಾಗಿ ಭರವಸೆ ನೀಡಿ ಲಕ್ಷಾಂತರ ರೂ. ಕಟ್ಟಿಸಿಕೊಂಡಿದೆ ಎಂದು ಆರೋಪಿಸಿ ಹೈದ್ರಾಬಾದ್‌ ಮೂಲದ ಗ್ರೀನ್‌ ಗೋಲ್ಡ್ ಬಯೋ ಟೆಕ್‌ ಕಂಪೆನಿ ವಿರುದ್ಧ ನೊಂದವರು ಎಸ್ಪಿಗೆ ದೂರು ಸಲ್ಲಿಸಿದರು.

ಗ್ರೀನ್‌ ಗೋಲ್ಡ್ ಕಂಪೆನಿಯಿಂದ ವಂಚನೆಗೊಳಗಾದ ಪ್ರತಿಭಾ ಎಸ್‌. ಸೋನಾರ್‌ ಹಾಗೂ ಇತರೆ 30 ಜನರು ಮನವಿ ಸಲ್ಲಿಸಿ ತಮ್ಮ ಅಳಲು ತೋಡಿಕೊಂಡಿದ್ದು, ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಕಂಪೆನಿಯವರು ನಿಮಗೆ ಶೇಂಗಾ ಎಣ್ಣೆ ತೆಗೆಯುವ ಯಂತ್ರ ಕೊಡುತ್ತೇವೆ. ಶೇಂಗಾ ಕಾಳು ಪೂರೈಸುತ್ತೇವೆ ಮತ್ತು ಅದರಿಂದ ಉತ್ಪಾದನೆಯಾಗುವ ಎಣ್ಣೆಯನ್ನು ಖರೀದಿಸುತ್ತೇವೆ ಹಾಗೂ ಲೇಬರ್‌ ಚಾರ್ಜಸ್‌ ಕೂಡ ಕೊಡುತ್ತೇವೆ ಎಂದು ಹೇಳಿ ಒಪ್ಪಂದ ಪತ್ರ ಬರೆಯಿಸಿಕೊಂಡು 25 ಜನರಿಂದ 1 ಲಕ್ಷ, 5 ಜನರಿಂದ 2 ಲಕ್ಷ ಹಾಗೂ ಒಬ್ಬರಿಂದ 5 ಲಕ್ಷ ರೂ.ಗಳನ್ನು ಪ್ರತ್ಯೇಕವಾಗಿ ಪಡೆದುಕೊಂಡು ಯಂತ್ರವೊಂದನ್ನು ನೀಡಿದ್ದು, ಒಪ್ಪಂದ ಪತ್ರದಲ್ಲಿ ತಿಳಿಸಿದಂತೆ ತಾಲೂಕಿಗೊಂಡು ಸ್ಟಾಕ್‌ ಪಾಯಿಂಟ್ ಮಾಡಿ ಅಲ್ಲಿ ಎಲ್ಲ ವ್ಯವಹಾರಗಳನ್ನು ಮಾಡಲಾಗುವುದು ಜಿಲ್ಲೆಗೊಂದು ಕಚೇರಿ ಇರುತ್ತದೆ ಎಂದು ತಿಳಿಸಿದ್ದರು. ಅಲ್ಲದೇ ಶೇಂಗಾ ಎಣ್ಣೆಯ ಉಪ ಉತ್ಪನ್ನವಾದ ಇಂಡಿಯನ್ನು ಸಹ ನಾವು ಖರೀದಿಸುತ್ತೇವೆ ಎಂದು ಸಹ ಅದರಲ್ಲಿ ಹೇಳಲಾಗಿತ್ತು ಎಂದು ನೊಂದವರು ಮನವಿಯಲ್ಲಿ ತಿಳಿಸಿದ್ದಾರೆ.

ಯಂತ್ರ ನೀಡಿದ ನಂತರ ಯಾವುದೇ ಶೇಂಗಾ ಬೀಜಗಳನ್ನು ನೀಡದೇ ಯಾವುದೇ ಎಣ್ಣೆಯನ್ನು ಖರೀದಿ ಮಾಡದೇ ವಂಚಿಸಿರುತ್ತಾರೆ. ಶೇಂಗಾ ಇಂಡಿಯನ್ನು ಸಹ ಖರೀದಿಸಿಲ್ಲ. ಅದರ ಹಣವನ್ನು ನೀಡಿಲ್ಲ. ಮತ್ತು ಇದುವರೆಗೆ ಯಾವುದೇ ಲೇಬರ್‌ ಚಾರ್ಜ ಅನ್ನು ಮಾಸಿಕ ವೇತನವನ್ನು ಸಹ ನಮ್ಮ ಖಾತೆಗೆ ಹಾಕದೆ ವಂಚಿಸಿದ್ದಾರೆಂದು ದೂರಿದ್ದಾರೆ.

ಯಾದಗಿರಿಯಲ್ಲಿ ಹೀಗೆ 31 ಜನರು ವಂಚನೆಗೊಳಗಾಗಿರುವುದು ಮೇಲ್ನೋಟಕ್ಕೆ ತಿಳಿದಿದ್ದು, ಇದೇ ರೀತಿ ಜಿಲ್ಲೆಯಲ್ಲಿ ಎಷ್ಟು ಜನರಿದ್ದಾರೊ ಎನ್ನುವ ಅನುಮಾನ ವ್ಯಕ್ತವಾಗಿದೆ. ಸಂಬಂಧಿಸಿದವರನ್ನು ಸಂಪರ್ಕಿಸಿದರೆ ಎಲ್ಲಾ ವ್ಯವಸ್ಥೆ ಮಾಡುತ್ತೇನೆ ಎಂದು ಹುಸಿ ಭರವಸೆ ನೀಡುತ್ತಿದ್ದು, ಒಂದು ತಿಂಗಳಲ್ಲಿ ಈ ವ್ಯವಸ್ಥೆ ಮಾಡುವುದಾಗಿ ಹೇಳಿ ಇದೀಗ ಮತ್ತೆ ಮೂರು ತಿಂಗಳು ಕಳೆಯುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ನೊಂದವರು ದೂರಿನಲ್ಲಿ ಉಲ್ಲೇಖೀಸಿದ್ದಾರೆ.

ಕಂಪನಿಯನ್ನು ಪರಿಚಯಿಸಿದವರ ಹೆಸರಿನ ಸಮೇತ ದೂರು ನೀಡಿದ್ದು, ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ ಪಂಗನಾಮ ಹಾಕಿ ಹೋದ ಈ ಕಂಪೆನಿಯ ವಿರುದ್ದ ಕಠಿಣ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ನೇತೃತ್ವದಲ್ಲಿ ಮಹಿಳೆಯರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಾ ಎಸ್‌. ಸೋನಾರ್‌, ಅಂಬ್ರಮ್ಮ ಎಸ್‌. ಸ್ವಾಮಿ, ಪ್ರಭಾವತಿ ಜೆ, ವೆಂಕಟರೆಡ್ಡಿ, ದೇವೀಂದ್ರ, ರವಿಕುಮಾರ, ಮುನಿಯಪ್ಪ, ಭೀಮಣ್ಣ ದೊರೆ, ನಾಗಮ್ಮ ಎನ್‌, ಸೀತಮ್ಮ ಅಯ್ಯಣ್ಣ, ಶಿವನಾಗಮ್ಮ , ಪಾರ್ವತಿ, ಭಾರತಿ, ಸುಮತಿ, ಲಕ್ಷ್ಮೀ ತಡಿಬಿಡಿ, ಈರಮ್ಮ, ರೇಣುಕಾ ಓಂ ಪ್ರಕಾಶ, ಬನ್ನಮ್ಮ, ಸುನಿತಾ ಗಂ., ಪಾರ್ವತೆಮ್ಮ ಕರಣಿಗಿ, ಭಾಗ್ಯಶ್ರೀ, ವಿಜಯಲಕ್ಷ್ಮೀ, ಸೃಷ್ಟಿ, ಶಿವಕಾಂತಮ್ಮ, ನಿಂಬಮ್ಮ ಪಾಟೀಲ, ಪಾರ್ವತಮ್ಮ ಪತ್ತಾರ, ವಿಜಯಕುಮಾರ ಶಿರಗೋಳ, ವೀರೇಶ ಭಾವಿ, ಸಾಯಿಬಣ್ಣ ಪಾಂಚಾಳ, ಸಿದ್ದಣ್ಣ ಶೆಟ್ಟಿ ಇನ್ನಿತರರು ಇದ್ದರು.

ಟಾಪ್ ನ್ಯೂಸ್

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.