ನಾರಾಯಣಪುರ: ಸತತ ಮಳೆಗೆ ಕುಸಿದ ಮನೆಗಳು


Team Udayavani, Sep 28, 2020, 6:03 PM IST

yg-tdy-1

ನಾರಾಯಣಪುರ: ಕಳೆದ ಎರಡು ದಿನಗಳಿಂದ ಸುರಿದ ಸತತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ರಾತ್ರಿಯಿಂದ ಆರಂಭಗೊಂಡ ಮಳೆ ರವಿವಾರವೂ ಮುಂದುವರಿದಿದ್ದರಿಂದ ಹಲವು ಗ್ರಾಮಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಶನಿವಾರ ಬೆಳಿಗ್ಗೆಯಿಂದಲೂ ಬಿಟ್ಟು ಬಿಡದೆ ಸುರಿಯುತಿರುವ ಮಳೆಯು ರವಿವಾರವು ಮುಂದುವರಿದ ಪರಿಣಾಮ ನಾರಾಯಣಪುರ ಗ್ರಾಪಂ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ನಾರಾಯಣಪುರ, ದೇವರಗಡ್ಡಿ, ಮೇಲಿನಗಡ್ಡಿ, ಹನುಮನಗರ, ನಾರಾಯಣಪುರ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ, ಗೋಡೆಗಳು ಕುಸಿದಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ತಗ್ಗುಪ್ರದೇಶದಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿ ಜನ ಸಂಕಷ್ಟ ಎದುರಿಸುವಂತಾಗಿದೆ. ಗ್ರಾಮ ಲೆಕ್ಕಿಗ ಅಪ್ಪಣ್ಣ ಮಳೆಯಿಂದ ಹಾನಿಗೊಳಾದ ಮನೆಗಳಿಗೆ ಭೇಟಿ ನೀಡಿ ವೀಕ್ಷಿಸಿ, ಈ ಕುರಿತು ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಮಳೆ ಅವಾಂತರದಿಂದ ಕುಸಿದ ಮನೆಗಳು ಮತ್ತು ಬೆಳೆ ಹಾನಿ ಕುರಿತು ಅಧಿಕಾರಿಗಳು ಸಮೀಕ್ಷೆ ಬಾಧಿತರಿಗೆ ಪರಿಹಾರ ವಿತರಿಸಬೇಕೆಂದು ಗ್ರಾಪಂ ಮಾಜಿ ಅಧ್ಯಕ್ಷ ಶಿವಪ್ಪ ಬಿರಾದಾರ ಒತ್ತಾಯಿಸಿದ್ದಾರೆ.

 

ದಬದಭೆ ಫಾಲ್ಸ್‌ನಲ್ಲಿ ಜನವೋ ಜನ.. :

ಶಹಾಪುರ: ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಸಗರಾದ್ರಿ ಬೆಟ್ಟದಲ್ಲಿರುವ ದಬದಭೆ ಫಾಲ್ಸ್‌ ಮೈದುಂಬಿ ಹರಿಯುತ್ತಿದ್ದು, ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನತೆಗೆ ಜಲಾಪತದಲ್ಲಿ ಮಿಂದೆದ್ದು ಸೃಷ್ಟಿ ವೈಭವ ಕಣ್ತುಂಬಿಕೊಳ್ಳುತ್ತಿದ್ದಾರೆ. ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯ ಬಲಗಡೆ ಕಲ್ಲುಬಂಡೆಗಳ ಮಧ್ಯೆ ಝುಳು ಝುಳು ನಾದದೊಂದಿಗೆ ಬಿಳಿನೊರೆ ಹಾಲಿನಂತೆ ನೀರು ಧುಮ್ಮಿಕ್ಕುತ್ತಿದೆ. ದಬದಬಾ ಅಂಥ ನೀರು ಬೀಳುವ ಶಬ್ಧ ಬರುತ್ತಿರುವುದರಿದಲೋ ಏನೋ ಇದಕ್ಕೆ ದಬೆದಭೆ ಫಾಲ್ಸ್‌ ಅಂತಲೇ ಕರೆಯುತ್ತಾರೆ. ಜೋರಾಗಿ ಮಳೆ ಬಂದರೆ ದಬದಭೆ ಫಾಲ್ಸ್‌ ಮೈದುಂಬಿ ಹರಿಯುತ್ತ ಜನರನ್ನು ತನ್ನತ್ತ ಸೆಳೆಯುತ್ತಿದೆ. ಹೀಗಾಗಿ ರವಿವಾರ ಸಾವಿರಾರು ಜನ ಫಾಲ್ಸ್ ಗೆ ಭೇಟಿ ನೀಡಿ ನೀರಲ್ಲಿ ಮಿಂದೆದ್ದು ಸಂಭ್ರಮಿಸುತ್ತಿರುವುದು ಕಂಡುಬಂತು.

ನಗರದ ಜನತೆ ಮಕ್ಕಳು, ಕುಟುಂಬ ಸಮೇತ ರವಿವಾರ ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಕೆಲಕಾಲ ಮೋಜು ಮಸ್ತಿಯಲ್ಲಿ ಸಮಯ ಕಳೆದರು. ಸಂಜೆಯಾದರೂ ಜನ ಸೇರುತ್ತಲೇ ಇರುವುದು ಕಂಡು ಬಂದಿತು. ಕೋವಿಡ್ ದಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಇದೆ. ಮನೆಯಲ್ಲೂ ಕೊರೊನಾ ಭಯದಿಂದ ಕಳೆದ ಆರೇಳು ತಿಂಗಳಿಂದ ಎಲ್ಲೂ ಹೋಗಿಲ್ಲ. ಹೀಗಾಗಿ ಸ್ಥಳೀಯವಾಗಿ ಈ ಫಾಲ್ಸ್‌ ಮಳೆಗಾಲದಲ್ಲಿ ಕೈ ಬೀಸಿ ಕರೆಯುತ್ತದೆ. ಮಕ್ಕಳ ಒತ್ತಾಯಕ್ಕೆ ಬಂದಿದ್ದೇವೆ. ಹಚ್ಚ ಹಸಿರಿನ ಮಧ್ಯೆ ಇರುವ ಫಾಲ್ಸ್‌ ನೋಡಿ ಮಕ್ಕಳುಖುಷಿಯಾಗಿ ಆಟವಾಡುವುದನ್ನು ಕಂಡು ಸಂತೋಷವಾಗಿದೆ ಎಂದು ಶಿಕ್ಷಕಿ ಮೇಘಾ ದೇಗನಾಳ ತಿಳಿಸಿದರು.

ಟಾಪ್ ನ್ಯೂಸ್

7gopalayya

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ: ಸಚಿವ ಕೆ.ಗೋಪಾಲಯ್ಯ

Untitled-1

ವೇಣೂರು: ಮರಬಿದ್ದು ಅರ್ಧ ತಾಸು ಹೆದ್ದಾರಿ ಬಂದ್!

6death

ವಿಟ್ಲ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು

5DKShi

ಚುನಾವಣಾ ಆಯೋಗದ ಅಧಿಕಾರ ಕಸಿದುಕೊಂಡ ರಾಜ್ಯ ಸರ್ಕಾರ: ಡಿಕೆ ಶಿವಕುಮಾರ್

vittla-1

ವಿಟ್ಲ: ರಸ್ತೆಗೆ ಬಿದ್ದ ವಿದ್ಯುತ್ ಕಂಬ: ಸಂಚಾರ ಅಸ್ತವ್ಯಸ್ತ

4horatti

ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಬಸವರಾಜ ಹೊರಟ್ಟಿ

3accident

ಕೊಪ್ಪಲಂಗಡಿ: ಚರಂಡಿಗೆ ಉರುಳಿದ ಪಿಕಪ್; ಇಬ್ಬರಿಗೆ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19land

ಶಾಲಾ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

15education

ಗುಣಮಟ್ಟ ಶಿಕ್ಷಣಕ್ಕೆ ಮೊದಲಾದ್ಯತೆ: ಪಾಟೀಲ್

ಶಹಾಪುರ: ನಕಲಿ ಮದ್ಯ ಮಾರಾಟ, ಇಬ್ಬರ ಬಂಧನ; ಐವರು ಪರಾರಿ

ಶಹಾಪುರ: ನಕಲಿ ಮದ್ಯ ಮಾರಾಟ, ಇಬ್ಬರ ಬಂಧನ; ಐವರು ಪರಾರಿ

20culture

ಮಠಗಳು ಸಂಸ್ಕಾರ ಕಲಿಸುವ ಶ್ರದ್ಧಾ ಕೇಂದ್ರ

19modi

ಮೋದಿ ಕನಸು ಸಾಕಾರಗೊಳಿಸೋಣ: ಬಾಬುರಾವ್‌ ಚಿಂಚನಸೂರು

MUST WATCH

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

ಹೊಸ ಸೇರ್ಪಡೆ

congress

ಬಿಜೆಪಿ-ಕಾಂಗ್ರೆಸ್‌ನಿಂದ ಅಬ್ಬರದ ಪ್ರಚಾರ

7gopalayya

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ: ಸಚಿವ ಕೆ.ಗೋಪಾಲಯ್ಯ

nere

ಮೊದಲ ಮಳೆಗೆ ಕೆಂಚನಕೆರೆಯಲ್ಲಿ ಕೃತಕ ನೆರೆ

Untitled-1

ವೇಣೂರು: ಮರಬಿದ್ದು ಅರ್ಧ ತಾಸು ಹೆದ್ದಾರಿ ಬಂದ್!

heavy-rain

ಭಾರೀ ಗಾಳಿ-ಮಳೆ: ಲಕ್ಷಾಂತರ ರೂ. ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.