ವರ್ಕ್‌ ಫ್ರಂ ಹೋಮ್‌ ದಿರಿಸಿನ ಆಯ್ಕೆ ಹೀಗಿರಲಿ


Team Udayavani, May 24, 2020, 8:37 PM IST

ವರ್ಕ್‌ ಫ್ರಂ ಹೋಮ್‌ ದಿರಿಸಿನ ಆಯ್ಕೆ ಹೀಗಿರಲಿ

ಮಣಿಪಾಲ: ಕೋವಿಡ್ ಬಂದು ಎಲ್ಲೆಡೆಯೂ ಲಾಕ್‌ಡೌನ್‌ ಆಗಿ ಎಲ್ಲರೂ ಮನೆಯಲ್ಲೇ ಕಾರ್ಯ ನಿರ್ವಹಿಸೋ ಸಮಯ. ಅಬ್ಬಬ್ಟಾ ಉರಿಬಿಸಿಲಿಗೆ ಸುಮ್ಮನೇ ಕೂರೋಕ್ಕಾಗಲ್ಲ. ಇನ್ನು ಮನೇಲಿ ಕೆಲಸ ಮಾಡುತ್ತಾ ಒಂದೇ ಕಡೇ ಇರುವುದೆಂದರೆ ಅದೊಂದು ರೀತಿ ಶಿಕ್ಷೆಯಂತೆ. ಯಾವ ಫ್ಯಾನ್‌ ಗಾಳಿಯು ಸಾಲೋದಿಲ್ಲ. ಒಂದೆರಡು ನಿಮಿಷ ಕರೆಂಟ್‌ ಹೋದರಂತೂ ಮೈಯಿಡೀ ಸ್ನಾನ ಮಾಡಿದಂತೆ ಬೆವರಿ ಒದ್ದೆಯಾಗಿರುತ್ತದೆ. ಯಾವಾಗ ಆಫೀಸು ಆರಂಭವಾಗುತ್ತೋ, ಯಾವಾಗ ಆಫೀಸಿಗೆ ಕೆಲಸಕ್ಕೆ ಹೋಗ್ತಿವೋ ಅಂತ ಚಡಪಡಿಕೆಯೂ ಆರಂಭವಾಗಿ ಹಲವು ದಿನವಾಯಿತು. ಮೊದಲ ವಾರ ರಜೆ, ಟೆನ್ಶನ್‌ ಇಲ್ಲ ಎಂದು ಹಾಯ್‌ ಆಗಿ ಕೂತಿದ್ದಾಯ್ತು. ಅಮೇಲೆ ದಿನ ದೂಡುವುದೂ ಕಷ್ಟವಾಗಿ ಮಾರ್ಪಟ್ಟಿದೆ. ದಿನಕ್ಕೆ ನಾಲ್ಕೈದು ದಿರಿಸುಗಳು ಬೆವರಿನಲ್ಲಿ ಒದ್ದೆ ಆಗುತ್ತವೆ. ಬೆವರದಂತಹ ದಿರಿಸು ಇದ್ದರೆ ಒಳ್ಳೇದಿತ್ತು ಅಂತ ಅನಿಸುವುದು ಸಹಜವೇ.

ಆಫೀಸಲ್ಲಿ ಎಸಿಗೆ ಖುಷಿಯಾಗಿದ್ದರಿಗೆ ಯಾವ ಫ್ಯಾನ್‌ ಗಾಳಿಯೂ ನೆಮ್ಮದಿ ನೀಡುತ್ತಿಲ್ಲ. ಇದ್ದಕ್ಕೆ ಇನ್ನೂ ಹೈರಾಣಾಗಿಸುವುದು ಬಟ್ಟೆಗಳ ಆಯ್ಕೆಯಲ್ಲಿನ ಗೊಂದಲ. ವಾತಾವರಣಕ್ಕೆ ಪೂರಕವಾದ ಬಟ್ಟೆಯನ್ನು ಧರಿಸುವುದರಿಂದ ಕೆಲಸವನ್ನೂ ಆರಾಮವಾಗಿ ಮೂಡಬಹುದು.

ಫ್ಯಾಶನ್‌ ಲೋಕದಲ್ಲಿ ಆಯಾಯ ಕಾಲಕ್ಕೆ ಅನುಗುಣವಾಗಿ ಧರಿಸುವ ಬಟ್ಟೆಗಳ ಬಗ್ಗೆಯೂ ವಿಶೇಷ ಚರ್ಚೆಗಳಾಗುತ್ತವೆ. ಆದರೆ ಲಾಕ್‌ಡೌನ್‌ನಲ್ಲಿ ಇಷ್ಟು ದೀರ್ಘ‌ ಕಾಲ ಮನೆಯಲ್ಲೇ ದುಡಿಯುವ ಬಗ್ಗೆ ಯಾರೋಬ್ಬರೂ ಅಂದಾಜೇ ಮಾಡಿರಲಿಲ್ಲ. ಹಾಗಾಗಿ ನಿಮ್ಮ ಬಟ್ಟೆಗಳ ಆಯ್ಕೆಯಲ್ಲಿ ಕೆಲವೊಂದನ್ನು° ಅಳವಡಿಸಿಕೊಂಡರೆ ಒಳಿತೆಂಬುದು ನಮ್ಮ ಅಂಬೋಣ.

ಆಯ್ಕೆ ಹೀಗಿರಲಿ :
ಹತ್ತಿಯ ಬಟ್ಟೆ ಉತ್ತಮ
ಹತ್ತಿಯ ಬಟ್ಟೆಗಳು ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಉತ್ತಮ ಹತ್ತಿ ಬಟ್ಟೆಗಳ ಆಯ್ಕೆ ನಮ್ಮದಾದರೆ ಒಳಿತು. ಚರ್ಮ ಮತ್ತು ಬಟ್ಟೆಯ ನಡುವೆ ತೇವಾಂಶ ಉಳಿಯದಂತೆ ನೀವು ಕೆಲಸ ಮಾಡುವಾಗ ಹತ್ತಿ ನಿಮಗೆ ಆರಾಮವಾಗಿರಲು ಅನುವು ಮಾಡಿಕೊಡುತ್ತದೆ. ಹತ್ತಿ ಬಟ್ಟೆಯು ಬೇಸಗೆಯ ಉಷ್ಣತೆ ಮತ್ತು ಚಳಿಗಾಲದಲ್ಲಿ ಶೀತದಿಂದ ರಕ್ಷಿಸುತ್ತದೆ.

ದಪ್ಪದ ಬಟ್ಟೆಗಳು ಹಾಕದಿರಿ
ಬಿಸಿಲಿನ ಪ್ರಭೆ ಜಾಸ್ತಿಯಾಗಿರುವುದರಿಂದ ದಪ್ಪಗಿನ ಜೀನ್ಸ್‌ ಅಥವಾ ಜಾಕೆಟ್‌ಗಳನ್ನು ಧರಿಸಿ ಕಾರ್ಯ ನಿರ್ವಹಿಸದಿರಿ. ಹೇಗೂ ಮನೆಯೊಳಗೇ ಇರುವುದರಿಂದ ತೆಳ್ಳಗಿನ ಬಟ್ಟೆಗಳಿಗೆ ಜಾಸ್ತಿ ಆದ್ಯತೆ ನೀಡಿ. ಇದರಿಂದ ತ್ವಚೆಗೂ ಒಳಿತಾಗುವುದು.

ಗಾಢ ಬಣ್ಣ ಬೇಡ
ಲಾಕ್‌ಡೌನ್‌ ವರ್ಕ್‌ಫ್ರಂ ಹೋಂ ಮಾಡುವವರು ಆದಷ್ಟು ತಿಳಿ ಬಣ್ಣದ ದಿರಿಸಿಗೇ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ. ಬೆಳಕನ್ನು ಹೀರಿಕೊಳ್ಳುವ ಕಪ್ಪು, ಕಂದು ಮುಂತಾದ ಗಾಢ ಬಣ್ಣಗಳನ್ನು ಬಿಟ್ಟು ಬಿಳಿ, ಹಳದಿ, ತಿಳಿ ಹಸಿರು ಬಣ್ಣಗಳಿಗೆ ಆದ್ಯತೆ ನೀಡಿ. ಇದರಿಂದ ನಿಮಗೆ ಆರಾಮದಾಯಕ ಭಾವನೆ ಉಂಟಾಗುವುದು.

ಬಟ್ಟೆಗಳು ಆದಷ್ಟು ಸಡಿಲವಾಗಿರಲಿ
ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಸೆಕೆ ನಮ್ಮನ್ನು ಇನ್ನಷ್ಟು ಬೆವರಿಸಿ ಹೈರಾಣಾಗಿಸುತ್ತಿದೆ. ಹೆಚ್ಚಿನವರೆಲ್ಲ ಲಾಕ್‌ಡೌನ್‌ ಕಾರಣಕ್ಕೆ ಮನೆಯಲ್ಲೇ ಇರುವುದರಿಂದ ಆದಷ್ಟು ಸಡಿಲವಾಗಿರುವಂತಹ ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡರೆ ಒಳಿತು. ಇದರಿಂದ ಚೆನ್ನಾಗಿ ಗಾಳಿ ಆಡುತ್ತಾ ಬೆವರುವಿಕೆಯನ್ನು ಹತೋಟಿಯಲ್ಲಿಡುತ್ತದೆ.

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.