ಅಸ್ತಮಾ, ಅಲರ್ಜಿಗೆ ನೈಸರ್ಗಿಕ ಬದುಕೇ ಪರಿಹಾರ!


Team Udayavani, Mar 11, 2022, 5:21 PM IST

ಅಸ್ತಮಾ, ಅಲರ್ಜಿಗೆ ನೈಸರ್ಗಿಕ ಬದುಕೇ ಪರಿಹಾರ!

ಅಸ್ತಮಾ ಅಥವಾ ಉಬ್ಬಸ ಒಂದು ದೀರ್ಘಾವಧಿ ಕಾಯಿಲೆ. ಶ್ವಾಸಕೋಶ ಹಾಗೂ ಶ್ವಾಸನಾಳಗಳ ಉರಿಯೂತ, ಉಸಿರಾಟದ ನಾಳಗಳು ಸಂಕೋಚ ಹೊಂದುವುದು ಈ ಎಲ್ಲ ಕಾರಣಗಳಿಂದ ಉಸಿರಾ ಟಕ್ಕೆ ಕಷ್ಟವಾಗುವುದು ಈ ಕಾಯಿಲೆಯ ಮುಖ್ಯ ಲಕ್ಷಣಗಳು. ಜಗತ್ತಿನ ಕೆಲವೊಂದು ಭಾಗಗಳಲ್ಲಿ ಕಳೆದ ಮೂರು ದಶಕಗಳಿಂದ ಅಸ್ತಮಾವು ಅತಿವೇಗ ದಲ್ಲಿ ಹೆಚ್ಚುತ್ತಿದೆ. ಒಂದೇ ಒಂದು ತಲೆಮಾರಿನಲ್ಲಿ ಅಸ್ತಮಾ ರೋಗಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಉತ್ತರ ಅಮೆರಿಕ, ಆಸ್ಟ್ರೇಲಿಯಾ ಹಾಗೂ ಪಾಶ್ಚಾತ್ಯ ಯುರೋಪಿಯನ್‌ ದೇಶಗಳ ವರದಿಯ ಪ್ರಕಾರ ಶೇ. 10-20ರಷ್ಟು ಮಕ್ಕಳು ಅಸ್ತಮಾದಿಂದ ಬಳಲುತ್ತಿದ್ದಾರೆ. ಅಂದರೆ ಜಗತ್ತಿನ ಒಟ್ಟು 300 ಮಿಲಿಯನ್‌ ಮಕ್ಕಳನ್ನು ಈ ಕಾಯಿಲೆ ಬಾಧಿಸುತ್ತಿದೆ. ಆದರೆ ಅಚ್ಚರಿಯ ವಿಷಯ ಎಂದರೆ ಇನ್ನೂ ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ಅಸ್ತಮಾ ಅಷ್ಟೊಂದು ವ್ಯಾಪಕವಾಗಿಲ್ಲದಿರುವುದು.

ಅಸ್ತಮಾಕ್ಕೆ ಅನುವಂಶೀಯ ಹಿನ್ನೆಲೆ ಇರುವುದು ಗೊತ್ತಿರುವ ವಿಚಾರವೇ ಆಗಿದೆ. ಅಧ್ಯಯನಗಳ ವೇಳೆ ಅಸ್ತಮಾದೊಂದಿಗೆ ಅನೇಕ ಜೀನ್‌ಗಳು ತಳಕು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಹೀಗಿದ್ದರೂ ಬಹುಸಂಖ್ಯೆಯಲ್ಲಿ ಅಸ್ತಮಾವು ಕುಟುಂಬದಲ್ಲಿ ವರ್ಗಾವಣೆ ಹೊಂದುವು ದನ್ನು ವಂಶವಾಹಿಗಳು ವಿವರಿಸಲಾರವು. ಈ ಕಾಯಿಲೆಯು ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಇರುವುದಕ್ಕೆ ಕಾರಣವನ್ನು ಕೂಡ ವಂಶವಾಹಿಗಳ ಸ್ಥಿತ್ಯಂತರ ವಿವರಿಸಲಾರದು. ಬಹುಶಃ ಒಂದೇ ಒಂದು ತಲೆಮಾರಿನಲ್ಲಿ ನಮ್ಮ ವಂಶವಾಹಿಗಳಲ್ಲಿ ಅಷ್ಟೊಂದು ಬದಲಾವಣೆ ಆಗಿರಲಾರದು. ಆದ ಕಾರಣ ಪರಿಸರದಲ್ಲಿನ ಪರಿವರ್ತಿತ ಅಂಶಗಳು ಇವೆಲ್ಲದಕ್ಕೆ ಪ್ರಭಾವಿ ಕಾರಣಗಳಿರಬಹುದು.

ವೈದ್ಯಕೀಯ ಸಂಶೋಧಕರು ಆಹಾರ, ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು, ಸೂರ್ಯನ ಬಿಸಿಲಿನ ಸಂಪರ್ಕ, ಮಾಲಿನ್ಯ, ಪುಷ್ಪಪರಾಗ, ಜನಾಂಗ, ಪ್ರಾಣಿಗಳ ಜತೆಗಿನ ಸಂಪರ್ಕ, ಪಟ್ಟಣ ಮತ್ತು ಹಳ್ಳಿಯ ವಾತಾವರಣ, ನಿರ್ದಿಷ್ಟ ಕೀಟಗಳ ಜತೆಗೆ ಸಂಪರ್ಕ ಹಾಗೂ ಇನ್ನೂ ಅನೇಕ ಅಂಶಗಳ ಬಗ್ಗೆ ಅಧ್ಯಯನ ನಡೆಸುತ್ತಲೇ ಬಂದಿದ್ದಾರೆ. ಇವುಗಳಲ್ಲಿ ಬಹುತೇಕ ಅಧ್ಯಯನಗಳು ಪರಿಸರದಲ್ಲಿನ ನಿರ್ದಿಷ್ಟ ಅಂಶಗಳು ಹಾಗೂ ಅಸ್ತಮಾ ರೋಗಕ್ಕೆ ಇರುವ ಸಂಬಂಧವನ್ನು ದೃಢಪಡಿಸಿವೆ. ಅಷ್ಟು ಮಾತ್ರವಲ್ಲ ಈ ಅಧ್ಯಯನಗಳಲ್ಲಿ ಸಾಬೀತಾದ ಪ್ರಮುಖ ಮತ್ತು ಪ್ರಬಲವಾದ ಅಂಶವೆಂದರೆ ಯಾರು ಹೊಲ-ಗದ್ದೆಗಳ ಪರಿಸರದಲ್ಲಿ ಬೆಳೆದಿರುತ್ತಾರೋ ಅವರಲ್ಲಿ ಅಸ್ತಮಾಕ್ಕೆ ಒಳಗಾಗುವ ಅಪಾಯಗಳು ಇತರರಿಗೆ ಹೋಲಿಸಿದರೆ ಅತ್ಯಂತ ಕಡಿಮೆ. ಅವರ ಜೀವನ ಪದ್ಧತಿಯಲ್ಲಿನ ಯಾವುದೋ ಒಂದು ಅಂಶವು ಅಸ್ತಮಾದಿಂದ ರಕ್ಷಣೆಯನ್ನು ನೀಡಿದೆ.

ಉತ್ತರ ಅಮೆರಿಕದಲ್ಲಿನ ಅಮಿಶ್‌ ಜನಾಂಗವನ್ನು ಅಧ್ಯಯನ ಮಾಡಿದಾಗ ಅವರಲ್ಲಿ ಪಾಶ್ಚಾತ್ಯ ಜನಾಂಗದಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಅಸ್ತಮಾ ಮತ್ತು ಅಲರ್ಜಿಗಳ ಸಮಸ್ಯೆ ಅಷ್ಟೊಂದು ಪ್ರಮಾಣದಲ್ಲಿ ಕಂಡುಬರಲಿಲ್ಲ. ಅಮಿಶ್‌ ಮಕ್ಕಳಲ್ಲಿ ಕಂಡುಬಂದ ಅಸ್ತಮಾದ ಶೇಕಡಾವಾರು ದರವು ತಲೆತಲಾಂತರಗಳಿಂದ ಜನಾಂಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಮಾಣವೇ ಆಗಿದೆ. ಅಮಿಶ್‌ ಜನಾಂಗವು ಸಾಂಪ್ರದಾಯಿಕ ಜೀವನ ಪದ್ಧತಿಯನ್ನು ಅನುಸರಿಸುತ್ತಾ ಬಂದಿದೆ. ಕೃಷಿಯೊಂದಿಗೆ ಪಶುಪಾಲನೆಯನ್ನು ಕೂಡ ಮಾಡುತ್ತಿದ್ದರು. ಒಟ್ಟಿನಲ್ಲಿ ತಾಂತ್ರಿಕತೆಯಿಂದ ಮುಕ್ತವಾದ ನೈಸರ್ಗಿಕ ಜೀವನ ಅವರದು. ಈ ಜನಾಂಗದ ಮಕ್ಕಳಿಗೆ ಮಣ್ಣು, ಕೊಳೆ ಮತ್ತು ಪ್ರಾಣಿಗಳೊಂದಿಗೆ ಸಂಪರ್ಕವು ಬಾಲ್ಯದಲ್ಲಿಯೇ ಆಗುತ್ತಿತ್ತು. ಗರ್ಭಿಣಿ ಸ್ತ್ರೀಯರು ಹೆರಿಗೆಯ ತನಕದ ಅವಧಿಯಲ್ಲಿ ದನದ ಹಟ್ಟಿಗಳಲ್ಲಿ ಕೆಲಸ ಮಾಡು ವುದನ್ನು ರೂಢಿಸಿಕೊಂಡಿದ್ದರು. ಈ ಮೂಲಕ ಪ್ರಸವಪೂರ್ವದಲ್ಲಿ ಅವರು ಶಿಶುಗಳನ್ನು ಅಸಂಖ್ಯ ಸೂಕ್ಷ್ಮಾಣುಗಳ ಸಂಪರ್ಕಕ್ಕೆ ತರುತ್ತಿದ್ದರು.

ಅಮಿಶ್‌ ಸಮುದಾಯದ ಜನರಂತೆ ಹಟೆರೈಟ್‌ ಸಮುದಾಯದ ಜನರು ಅಲರ್ಜಿ ಮತ್ತು ಅಸ್ತ ಮಾಗಳಿಂದ ಅಷ್ಟು ಸುರಕ್ಷಿತರಲ್ಲ. ಹಟೆರೈಟ್‌ ಜನಾಂಗದವರು ಕೆಲವೊಂದು ವಿಷಯಗಳಲ್ಲಿ ಅಮಿಶ್‌ ಜನಾಂಗದವರೊಂದಿಗೆ ಸಾಮ್ಯತೆಯನ್ನು ಹೊಂದಿದ್ದಾರೆ. ಇಬ್ಬರೂ ಕೂಡ ಕಟ್ಟುನಿಟ್ಟಾದ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವವರು ಮತ್ತು ಜರ್ಮನ್‌ ಮೂಲದವರು. ಆದರೆ ಹಟೆರೈಟ್‌ ಜನಾಂಗದವರು ತಾಂತ್ರಿಕ ಅಭಿವೃದ್ಧಿಯನ್ನು ಸ್ವಾಗತಿ ಸಿದರು, ಹೊಲವನ್ನು ಉಳುವುದಕ್ಕೆ ಯಂತ್ರಗಳನ್ನು ಬಳಸುವವರು ಮತ್ತು ಬಹಳ ದೊಡ್ಡ ಪ್ರಮಾಣದಲ್ಲಿ ಹೊಲಗಳಲ್ಲಿ ಕೃಷಿ ಮಾಡುವವರು, ನಮ್ಮ ಸಾಕು ಪ್ರಾಣಿಗಳಿಗೆ ಆಂಟಿಬಯಾಟಿಕ್‌ಗಳನ್ನು ಅಧಿಕವಾಗಿ ಬಳಸುವವರು. ಆದರೆ ಅಮಿಶ್‌ ಜನಾಂಗದವರು ಆದಷ್ಟು ನಿಸರ್ಗಕ್ಕೆ ನಿಕಟವಾಗಿ ಬದುಕುವವರು.

ಹೊಲಗಳಲ್ಲಿ ಅಧಿಕ ವೈವಿಧ್ಯದ ಸೂಕ್ಷ್ಮಾಣುಗಳಿವೆ. ದನದ ಕೊಟ್ಟಿಗೆಗಳಲ್ಲಿನ ಸೂಕ್ಷ್ಮಾಣುಗಳು ಕೂಡ ಮನೆಯ ಒಳಗಡೆ ಪ್ರವೇಶ ಪಡೆದಿರುತ್ತವೆ. ಈ ಎರಡು ಅಂಶಗಳು ಸೇರಿ ಬಹಳ ಪ್ರಬಲವಾದ ರಕ್ಷಣೆ ಯನ್ನು ಅಸ್ತಮಾದಿಂದ ನೀಡುತ್ತವೆ. ತಾಯಿಯ ಹೊದಿಕೆಯಲ್ಲಿನ ಸೂಕ್ಷ್ಮಾಣುಗಳ ಸಂಖ್ಯೆಯು ಹೆಚ್ಚಾ ಗಿದ್ದಾಗ ಅವಳ ಮಕ್ಕಳಲ್ಲಿ ಅಸ್ತಮಾದೊಂದಿಗೆ ಹೆಚ್ಚಾಗಿ ತಳಕು ಹಾಕಿಕೊಳ್ಳುವ ಎಕ್ಸೆಮಾ  ಚರ್ಮರೋಗ ಉಂಟಾಗುವ ಸಾಧ್ಯತೆಯೂ ಕಡಿಮೆ ಎಂಬುದು ಇನ್ನೊಂದು ಅಧ್ಯಯನದಲ್ಲಿ ಸಾಬೀತಾಗಿದೆ. ಹೊಲದಲ್ಲಿನ ಸೂಕ್ಷ್ಮಾಣುಗಳು ಬಾಲ್ಯದಲ್ಲಿಯೇ ಮಾನವನ ದೇಹದ ಸಂಪರ್ಕಕ್ಕೆ ಬಂದಲ್ಲಿ ಈ ರೋಗ ಗಳು ಅಂಥವರನ್ನು ಬಾಧಿಸುವ ಸಾಧ್ಯತೆ ಕಡಿಮೆ.

ಅಷ್ಟೇ ಅಲ್ಲದೆ ಇನ್ನೊಂದು ಅಧ್ಯಯನದ ಪ್ರಕಾರ, ಹೊಲಗದ್ದೆಗಳ ಸಂಪರ್ಕಕ್ಕೆ ಬಂದ ನವಜಾತ ಶಿಶುಗಳು ಬಹಳ ವಿಶೇಷವಾದ ರೋಗನಿರೋಧಕ ಶಕ್ತಿಯ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೊಲ ಗಳಲ್ಲಿ ಕೆಲಸ ಮಾಡಿ ಜೀವಿಸುವ ತಾಯಂದಿರ ಹೊಕ್ಕುಳ ಬಳ್ಳಿಯ ಮಾದರಿಯನ್ನು ಪರಿಶೀಲಿಸಿದಾಗ ರಕ್ಷಣಾತ್ಮಕ T ECELLS ಅಧಿಕವಾಗಿ ಇದ್ದದ್ದು ಕಂಡು ಬಂತು. ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಅವುಗಳ ಪಾತ್ರವೂ ಮಹತ್ವದ್ದು. ಅಸ್ತಮಾ ಹಾಗೂ ಅಲರ್ಜಿಗಳನ್ನು ಬಾರದಂತೆ ತಡೆಗಟ್ಟುವಲ್ಲಿಯೂ ಅವುಗಳ ಪಾತ್ರ ಪ್ರಮುಖ.

ಸಂಶೋಧಕರು ತುಲನಾತ್ಮಕ ಅಧ್ಯಯನಕ್ಕೆ ಆರಿಸಿಕೊಂಡ ಎರಡು ಗುಂಪುಗಳು ಕೂಡ ಸಮಾನ ಸಾಮುದಾಯಿಕ ಮೂಲವನ್ನು ಹೊಂದಿದ್ದು, ವ್ಯತ್ಯಾಸವಿರುವುದು ಕೇವಲ ಅವರ ಬದುಕಿನ ಪರಿಸರದಲ್ಲಿ ಮಾತ್ರ. ಗರ್ಭಿಣಿಯರು ಹೊಲಗಳ, ದನದ ಹಟ್ಟಿಗಳ ಸಂಪರ್ಕಕ್ಕೆ ಬಂದಲ್ಲಿ ಸಹಜ ರೀತಿಯಲ್ಲಿ ಗರ್ಭದಲ್ಲಿನ ಶಿಶುವಿನ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ದನ ಇತ್ಯಾದಿ ಸಾಕುಪ್ರಾಣಿಗಳ ಹಾಗೂ ಕೊಳೆಯ ಸಂಪರ್ಕಕ್ಕೆ ಬರುವುದರ ಮೂಲಕ ತಾಯಂದಿರು ತಮ್ಮ ಮಕ್ಕಳಲ್ಲಿ ರೋಗನಿರೋಧಕ ವ್ಯವಸ್ಥೆಯನ್ನು ಊರ್ಜಿತಗೊಳಿಸುತ್ತಾರೆ. ಆ ಮೂಲಕ ಭವಿಷ್ಯ ದಲ್ಲಿ ಅಲರ್ಜಿ ಉಂಟುಮಾಡುವ ಯಾವುದೇ ಸಂಗತಿಗಳನ್ನು ತಾಳಿಕೊಳ್ಳುವುದಕ್ಕೆ ಶಕ್ತರಾಗುವಂತೆ ಮಾಡುತ್ತಾರೆ. ನಮ್ಮ ಪೂರ್ವಜರು ಪ್ರಾಣಿಗಳ ಮತ್ತು ನಿಸರ್ಗದ ಸ್ಪರ್ಶದೊಂದಿಗೆ ಬದುಕಿದ್ದರು. ಆಧುನೀಕರಣದ ಧಾವಂತದಲ್ಲಿ ಗರ್ಭಿಣಿಯರಿಗೆ ಈ ರೀತಿಯ ಪರಿಸರದ ಸ್ಪರ್ಶ ಇಂದು ದೂರವಾಗಿದೆ. ಇದುವೇ ಅತ್ಯಂತ ತೀವ್ರಗತಿಯಲ್ಲಿ ಅಸ್ತಮಾ ಹಾಗೂ ಅಲರ್ಜಿಗಳು ಅಪಾಯಕಾರಿ ಮಟ್ಟವನ್ನು ತಲುಪುವುದಕ್ಕೆ ಕಾರಣ.

ನಮ್ಮ ಹಿರಿಯರು ಮನೆಯ ಅಂಗಳದಲ್ಲಿ ಮತ್ತು ಮನೆಯ ಒಳಗೆ ಗೋಮಯ ಅಂದರೆ ಸೆಗಣಿ ಸಾರಿಸುವುದನ್ನು ರೂಢಿಸಿಕೊಂಡಿದ್ದರು. ಅದು ಕೇವಲ ಅಲಂಕಾರಕ್ಕೋ ಮಡಿವಂತಿಕೆಗೋ ಆಗಿರದೆ ಆರೋಗ್ಯ ರಕ್ಷಣೆಯ ವೈಜ್ಞಾನಿಕತೆ ಅದರಲ್ಲಿ ಅಡಗಿದೆ. ಈವರೆಗೆ ನಡೆಸಲಾದ ಹಲವಾರು ಅಧ್ಯಯನಗಳು ಇಂತಹ ಆಚರಣೆಗಳ ಧನಾತ್ಮಕ ಪರಿಣಾಮವನ್ನು ಸಾರಿ ಹೇಳುತ್ತಿವೆ. ಆದರೆ ನಮ್ಮತನ, ನಮ್ಮ ಸಂಸ್ಕೃತಿಯ ಹಿಂದಿನ ಮಹತ್ವ, ಶ್ರೇಷ್ಠತೆಯನ್ನು ನಾವು ವಿದೇಶಿಯರಿಂದ ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ಎದುರಾಗಿರುವುದು ವಿಪರ್ಯಾಸವೇ ಸರಿ.

-ಡಾ| ಆರ್‌.ಪಿ. ಬಂಗಾರಡ್ಕ, ಪುತ್ತೂರು

ಟಾಪ್ ನ್ಯೂಸ್

ಮತಾಂತರ ಯತ್ನ: ಕೇರಳದ ದಂಪತಿ ವಿರುದ್ಧ ಪ್ರಕರಣ ದಾಖಲು

ಮತಾಂತರ ಯತ್ನ: ಕೇರಳದ ದಂಪತಿ ವಿರುದ್ಧ ಪ್ರಕರಣ ದಾಖಲು

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

Murder-aa

ವಂಡಾರು: ಪತಿಯಿಂದ ಪತ್ನಿ ಕೊಲೆ: ಪ್ರಕರಣ ದಾಖಲು

ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ

ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ

ತೊಕ್ಕೊಟ್ಟು: ಸ್ಕೂಟರ್‌ ಕಳ್ಳರಿಬ್ಬರ ಬಂಧನ

ತೊಕ್ಕೊಟ್ಟು: ಸ್ಕೂಟರ್‌ ಕಳ್ಳರಿಬ್ಬರ ಬಂಧನ

ಮಾರ್ಕೋನಹಳ್ಳಿ ಜಲಾಶಯ ಭರ್ತಿ : ರೈತರಲ್ಲಿ ಮುಖದಲ್ಲಿ ಮಂದಹಾಸ

ಮಾರ್ಕೋನಹಳ್ಳಿ ಜಲಾಶಯ ಭರ್ತಿ: ರೈತರಲ್ಲಿ ಮಂದಹಾಸ, ಜಲಾಶಯದ ಒಳಹರಿವು 2200 ಕ್ಯೂಸೆಕ್ಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಧಿಕ ರಕ್ತದೊತ್ತಡ ನಿರ್ಲಕ್ಷ್ಯ ಬೇಡ; ಇರಲಿ ಎಚ್ಚರ

ಅಧಿಕ ರಕ್ತದೊತ್ತಡ ನಿರ್ಲಕ್ಷ್ಯ ಬೇಡ; ಇರಲಿ ಎಚ್ಚರ

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಟೊಮ್ಯಾಟೊ ಜ್ವರ ಸೋಂಕು ನಿವಾರಣೆಗೆ “ಈ ಕ್ರಮ” ಅನುಸರಿಸಿ

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಟೊಮ್ಯಾಟೊ ಜ್ವರ ಸೋಂಕು ನಿವಾರಣೆಗೆ “ಈ ಕ್ರಮ” ಅನುಸರಿಸಿ

thumb 8

ಟೊಮೆಟೊ ಜ್ವರ ಆತಂಕ !: ಕೇರಳದಲ್ಲಿ 80 ಕ್ಕೂ ಹೆಚ್ಚು ಪುಟ್ಟ ಮಕ್ಕಳಿಗೆ ಸೋಂಕು

ಕೋವಿಡ್‌  ನಿನ್ನೆ, ಇಂದು, ನಾಳೆ

ಕೋವಿಡ್‌ ನಿನ್ನೆ, ಇಂದು, ನಾಳೆ

ಮಕ್ಕಳ ಬಳಕೆಗೆ ಕೊವೊವ್ಯಾಕ್ಸ್‌ ಲಸಿಕೆ ಲಭ್ಯ: ಪೂನಂವಾಲ

ಮಕ್ಕಳ ಬಳಕೆಗೆ ಕೊವೊವ್ಯಾಕ್ಸ್‌ ಲಸಿಕೆ ಲಭ್ಯ: ಪೂನಂವಾಲ

MUST WATCH

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

ಹೊಸ ಸೇರ್ಪಡೆ

ಶಿರ್ವ: ಗೋ ರಕ್ಷಣೆ ; ಓರ್ವ ಪೊಲೀಸರ ವಶಕ್ಕೆ

ಶಿರ್ವ: ಗೋ ರಕ್ಷಣೆ ; ಓರ್ವ ಪೊಲೀಸರ ವಶಕ್ಕೆ

ಮತಾಂತರ ಯತ್ನ: ಕೇರಳದ ದಂಪತಿ ವಿರುದ್ಧ ಪ್ರಕರಣ ದಾಖಲು

ಮತಾಂತರ ಯತ್ನ: ಕೇರಳದ ದಂಪತಿ ವಿರುದ್ಧ ಪ್ರಕರಣ ದಾಖಲು

ಮಂಗಳೂರು ವಿಮಾನ ನಿಲ್ದಾಣ: ಚಿನ್ನ ಅಕ್ರಮ ಸಾಗಾಟ ಪತ್ತೆ

ಮಂಗಳೂರು ವಿಮಾನ ನಿಲ್ದಾಣ: ಚಿನ್ನ ಅಕ್ರಮ ಸಾಗಾಟ ಪತ್ತೆ

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

Murder-aa

ವಂಡಾರು: ಪತಿಯಿಂದ ಪತ್ನಿ ಕೊಲೆ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.