ಅಮೇರಿಕ- ಇರಾನ್ ನಡುವೆ ಯುದ್ದ ನಡೆದರೆ ಭಾರತದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು?

Team Udayavani, Jan 9, 2020, 4:58 PM IST

ಮಣಿಪಾಲ: ಅಮೇರಿಕ- ಇರಾನ್ ನಡುವೆ ಯುದ್ದ ನಡೆದರೆ ಭಾರತದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಪ್ರಶ್ನೆಯನ್ನು ಉದಯವಾಣಿಯನ್ನು ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದು ಉತ್ತರಗಳು ಇಲ್ಲಿವೆ.

ಯಾಕುಬ್ ಕಾರ್ಕಳ: ಕಚ್ಚತೈಲ ರಫ್ತು ಇದರ ಮೇಲೆ ಪರಿಣಾಮ ಆಗಬಹುದು. ಕೊಲ್ಲಿ ರಾಷ್ಟ್ರದಲ್ಲಿ ದುಡಿಯುವ ಭಾರತೀಯರಿಗೆ ತುಂಬಾ ಕಷ್ಟ ನಷ್ಟ ಆಗಬಹುದು.

ಮೊಹಮ್ಮದ್ ರಿಯಾಜ್ ಕಾರ್ಲ: ಇಲ್ಲಿ ಯುದ್ಧಕ್ಕೆ ಪ್ರಚೋದಿಸುವುದು ಬೇಡ. ಶಾಂತಿಗಾಗಿ ಪ್ರಾರ್ಥಿಸೋಣ. ಅಧ್ಯಕ್ಷರ ದುರಾಡಳಿತಕ್ಕೆ ಅಮಾಯಕರು ಬಲಿಯಾಗುವುದು ಬೇಡ.

ವೈಷ್ಣವ ವಿ; ಕೇಂದ್ರದಲ್ಲಿ ಮೋದಿಜಿ ಇರುವರೆಗೂ ಯಾವುದೇ ಪರಿಣಾಮ ಬೀರುವುದಿಲ್ಲ. ಕೊಳೆಯುತ್ತಿದ್ದ ಭಾರತದ ಆರ್ಥಿಕತೆಯನ್ನು ಈ ಸ್ಥಿತಿಗೆ ತಂದವರು ನಮ್ಮ ಮೋದಿಜಿ

ಅರುಣ್ ಬಾಬು: ಬೆಲೆ ಏರಿಕೆಗೆ ಬಿಜೆಪಿ ಗೆ ಕಾರಣ ಸಿಕ್ಕಂತಾಗುತ್ತದೆ. ಆದ್ದರಿಂದ ಬಿಜೆಪಿ ಗೆ ಒಳ್ಳೆಯದು ಮತ್ತು ನಾಗರೀಕರಿಗೆ ಕೆಟ್ಟ ಸುದ್ದಿ.

ಅನಿಲ್ ಕುಮಾರ್: ಯುದ್ಧ ಎಂದರೆ ಏನು? ಸೈನಿಕರನ್ನು ಹಿಂದಿಟ್ಟು ಮುಂದೆ ನಿಂತು ಯುದ್ಧ ಮಾಡುವನೆ ನಿಜವಾದ ರಾಜ ನಾಯಕ, ಇದುವೆ ನಿಜವಾದ ಯುದ್ಧ. ಸೈನಿಕರನ್ನು ಬಲಿ ಕೊಟ್ಟು ರಾಜನು ಗಚ್ಚಿನ ಮನೆಯಲ್ಲಿ ಕೂಡುವುದು ಇದಾವ ಯುದ್ಧ!

ಸಣ್ಣಮಾರಪ್ಪ. ಚಂಗಾವರ; ಇಂದು ದೇಶ ದೇಶಗಳ ನಡುವೆ ದೊಡ್ಡ ಮಟ್ಟದಲ್ಲಿ ರಪ್ತು ಅಮದು ನೆಡೆಯುತ್ತಿದೆ. ಯಾವುದೇ ದೇಶದಲ್ಲಿ ಕೆಟ್ಟ ಘಟನೆಗಳು ನೆಡೆದರೆ ಸಂಬಂಧ ಹೊಂದಿರುವ ಎಲ್ಲಾ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮಧುಕುಮಾರ್ ಬಿಳಿಚೋಡು: ಈಗಾಗಲೇ ಎರಡು ರಾಷ್ಟ್ರಗಳ ಮಧ್ಯೆ ಉಂಟಾಗಿರುವ ಬಿರುಕುಗಳಿಂದ ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಗೊಂಡು ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಇನ್ನೂ ಯುದ್ದ ನಡೆದರೆ ಭಾರತದ ಆರ್ಥಿಕತೆ ಪರಿಸ್ಥಿತಿ ತೀವ್ರ ಹದಗೆಟ್ಟು ಪೆಟ್ರೋಲ್-ಡೀಸೆಲ್ ಮತ್ತು ಬಂಗಾರದ ಬೆಲೆ ಗಗನಕ್ಕೆರಲಿದೆ. ಮೊದಲೇ ಭಾರತದ ಆರ್ಥಿಕ ಪರಿಸ್ಥಿತಿ ಕಂಗಾಲಾಗಿದ್ದು ಯುದ್ದದಿಂದ ಇದಕ್ಕೆ ಮತ್ತಷ್ಟು ಹೊರೆಯಾಗಲಿದೆ.

ರಾಜೇಶ್ ಅಂಚನ್ ಎಂ ಬಿ: ಅಂತಹ ಯಾವುದೇ ಗಂಭೀರ ಪರಿಣಾಮ ಬೀರೋಲ್ಲ ಕೇವಲ ಇಂಧನ ಬೆಲೆಗಳಲ್ಲಿ ಸ್ವಲ್ಪ ವ್ಯತ್ಯಯ ವಾಗಬಹುದು. ಭಾರತ ಇಂಧನ ಹೊರತುಪಡಿಸಿ ಬೇರೆ ಯಾವುದಕ್ಕೂ ಕೊಲ್ಲಿ ರಾಷ್ಟ್ರಗಳನ್ನು ಹೆಚ್ಚಾಗಿ ಅವಲಂಭಿಸಿಲ್ಲ. ವಿದೇಶಿ ಕೆಲಸಗಳನ್ನೇ ನಂಬಿಕೊಂಡಿರುವ ಕೆಲ ಭಾರತೀಯರಿಗೆ ಕಷ್ಟವಾಗಬಹುದು ಅಷ್ಟೇ. ಒಟ್ಟಾರೆ ಭಾರತಕ್ಕೆ ಯಾವುದೇ ಪರಿಣಾಮ ಆಗೋಲ್ಲಾ. ನಮ್ಮ ಈಗಿನ ಸರ್ಕಾರ ಪರಿಸ್ಥಿತಿಯನ್ನು ಎದುರಿಸಲು ಸಾಕಷ್ಟು ಸಮರ್ಥವಾಗಿದೆ.

ಬಿ ಆರ್ ವಿಶ್ವನಾಥ್ ಗೌಡ; ಇರಾನ್ ಮತ್ತು ಅಮೆರಿಕ ನಡುವಿನ ಯುದ್ದ ನಡೆದರೂ ಕೂಡ ಭಾರತ ತಟಸ್ಥ ಧೋರಣೆ ಅನುಸರಿಸುತ್ತದೆ. ಇದೆ ನೆಪ ಮಾಡಿಕೊಂಡು ಪಾಕಿಸ್ತಾನ ತನ್ನ ಉದ್ದಟತನ ಪುಂಡಾಟಿಕೆ ನಡೆಸಿದರೆ ಪಾಕಿಸ್ತಾನದ ನಾಶ ಖಂಡಿತಾ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ