“ನ್ಯೂ ಹುಂಡೈ ಕ್ರೆಟಾ’ಗೆ ಬುಕ್ಕಿಂಗ್ ಆರಂಭ; ಆಕರ್ಷಕ ವಿನ್ಯಾಸ
ಕಾರು ಮಾರಾಟದಲ್ಲಿ ಕ್ರೆಟಾ ನಾಯಕತ್ವ ಸಾಧಿಸುವಲ್ಲಿ ಯಶಸ್ವಿಯಾಗಿದೆ
Team Udayavani, Jan 3, 2024, 10:00 AM IST
ಬೆಂಗಳೂರು: ಹುಂಡೈ ಮೋಟಾರ್ ಇಂಡಿಯಾ ಕಂಪನಿಯು ಮಂಗಳವಾರದಿಂದ “ನ್ಯೂ ಹುಂಡೈ ಕ್ರೆಟಾ’ಗೆ ಬುಕ್ಕಿಂಗ್ ಆರಂಭಿಸಿದೆ. ಹುಂಡೈ ಮೋಟಾರ್ ಇಂಡಿಯಾ ಲಿ. ಸಿಒಒ ತರುಣ್ ಮಾತನಾಡಿ, ಬ್ರ್ಯಾಂಡ್ ಕಾರು ಕೇವಲ ಎಸ್ಯುವಿ ಮಾತ್ರವಲ್ಲ , ಇದು ಜನರ ಎಮೋಶನ್ ಕೂಡ ಆಗಿದೆ. ಕಳೆದ 8 ವರ್ಷಗಳಿಂದ ಪ್ರತಿ ಮೂರು ಮಿಡ್ ಸೈಜ್ ಎಸ್ಯುವಿನಲ್ಲಿ ಗ್ರಾಹಕರು ಕ್ರೆಟಾ ಕಾರು ಖರೀದಿಸುತ್ತಿದ್ದಾರೆ.
ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್ ಯುವಿಗಳಲ್ಲಿ ಒಂದಾಗಿದೆ. ಈ ಹುಂಡೈ ಕ್ರೆಟಾ ಎಸ್ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹುಂಡೈ ಕಂಪನಿಯು ತನ್ನ ಜನಪ್ರಿಯ ಹುಂಡೈ ಕ್ರೆಟಾ ಎಸ್ಯುವಿಯ ಹೊಸ ರೂಪದಲ್ಲಿ ಬಿಡುಗಡೆಗೊಳಿಸಿದೆ. ಮಿಡ್ ಸೈಜ್ ಎಸ್ಯುವಿ ಕಾರು ಮಾರಾಟದಲ್ಲಿ ಕ್ರೆಟಾ ನಾಯಕತ್ವ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದುವರೆಗೆ 9.5ಲಕ್ಷ ಮಂದಿ ಗ್ರಾಹಕರನ್ನು ಹೊಂದಿದೆ. ಆ ಮೂಲಕ ಇಂದು ನೂತನ ಎಸ್ಯುವಿ ಕ್ರೆಟಾ ಕಾರು ಲೋಕಾರ್ಪಣೆ ಮಾಡಲು ಸಂತೋಷವಾಗುತ್ತಿದೆ. ಗ್ರಾಹಕರು 25 ಸಾವಿರ ರೂ. ನೀಡಿ ಬುಕಿಂಗ್ ಮಾಡಬಹುದಾಗಿದೆ ಎಂದರು.
ಹುಂಡೈ ಕ್ರೆಟಾ ಫೇಸ್ಲಿಫ್ಟ್ ಮಾಡಲಾಗಿದೆ. ಎಸ್ಯುವಿಯ ಮುಂದೆ ಮತ್ತು ಹಿಂದಿನ ಬಂಪರ್ಗಳನ್ನು ಹೆಚ್ಚು ಕೇಂದ್ರಿಕರಿಸಿ
ನವೀಕರಿಸಲಾಗಿದೆ. ಗ್ರಿಲ್ ಮತ್ತು ಎಲ್ಇಡಿ ಹೆಡ್ಲ್ಯಾಂಪ್ಗಳನ್ನು ಮರುನವೀಕರಣ ಮಾಡಲಾಗಿದೆ. ಗ್ರಾಹಕರಿಗೆ ಕೇವಲ 25 ಸಾವಿರ ನೀಡಿ ಆನ್ಲೈನ್ https://clicktobuy. hyundai.co.in/#/bookACar? modelCode=FH https:// clicktobuy. hyundai.co.in/ ಮೂಲಕ ಬುಕ್ ಮಾಡಬಹುದಾಗಿದೆ.ಇನ್ನೂ ಈಗಾಗಲೇ ಹಳೇ ಮಾಡೆಲ್ ಬುಕ್ ಮಾಡಿದ ಗ್ರಾಹಕರು
ಸಹ ಹೊಸ ಕ್ರೆಟಾವನ್ನು ಖರೀದಿಸಲು ಅವಕಾಶ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್