ಚಾಮರಾಜನಗರದಲ್ಲಿ 18 ಹೊಸ ಕೋವಿಡ್ ಪ್ರಕರಣಗಳು ದೃಢ ! 28 ಮಂದಿ ಗುಣಮುಖ
Team Udayavani, Jul 11, 2020, 6:07 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ 18 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 86 ಸಕ್ರಿಯ ಪ್ರಕರಣಗಳಿವೆ.
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 163 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು 77 ಮಂದಿ ಗುಣಮುಖರಾಗಿದ್ದಾರೆ. 4 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ಒಟ್ಟು 587 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ಇದರಲ್ಲಿ 569 ಪ್ರಕರಣಗಳು ನೆಗೆಟಿವ್ ಆಗಿವೆ. ಪ್ರಯೋಗಾಲಯಕ್ಕೆ ಕಳುಹಿಸಿರುವ ಮಾದರಿಗಳ ಪೈಕಿ 1697 ಮಾದರಿಗಳ ಫಲಿತಾಂಶ ಇನ್ನು ಬರಬೇಕಾಗಿದೆ.
ಶನಿವಾರ ವರದಿಯಾಗಿರುವ ಪ್ರಕರಣಗಳಲ್ಲಿ ಕೊಳ್ಳೇಗಾಲದಿಂದ 6 ಪ್ರಕರಣಗಳು, ಗುಂಡ್ಲುಪೇಟೆ 5, ಹನೂರು 3, ಚಾಮರಾಜನಗರ, ಯಳಂದೂರಿನಿಂದ ತಲಾ 2 ಪ್ರಕರಣಗಳು ವರದಿಯಾಗಿವೆ.
ಕೊಳ್ಳೇಗಾಲ ತಾಲೂಕು: ಕಾಮಗೆರೆಯ 24 ವರ್ಷದ ಯುವಕ, ಸಿಂಗಾನಲ್ಲೂರಿನ 39 ವರ್ಷದ ವ್ಯಕ್ತಿ, ಕೊಳ್ಳೇಗಾಲ ಪಟ್ಟಣದ 19 ವರ್ಷದ ಯುವಕ, ಚೆನ್ನಾಲಿಂಗನಹಳ್ಳಿಯ 26 ವರ್ಷದ ಯುವಕ, ಇಕ್ಕಡಹಳ್ಳಿಯ 35 ವರ್ಷದ ಯುವಕ, ಇಕ್ಕಡಹಳ್ಳಿಯ 14 ವರ್ಷದ ಬಾಲಕ. ಇವರಲ್ಲಿ ನಾಲ್ವರು ಬೆಂಗಳೂರಿನಿಂದ ಬಂದವರು. ಇಬ್ಬರು ಮೈಸೂರಿನಿಂದ ಬಂದವರಾಗಿದ್ದಾರೆ.
ಗುಂಡ್ಲುಪೇಟೆ ತಾಲೂಕು: 17 ವರ್ಷದ ಯುವಕ, ಜಾಕೀರ್ ಹುಸೇನ್ ನಗರ, ಗುಂಡ್ಲುಪೇಟೆ. 34 ವರ್ಷದ ಯುವಕ ದೊಡ್ಡತುಪ್ಪೂರು, 42 ವರ್ಷದ ವ್ಯಕ್ತಿ ಬೊಮ್ಮಲಾಪುರ, 23 ವರ್ಷದ ಯುವಕ ಬೊಮ್ಮಲಾಪುರ. 40 ವರ್ಷದ ಪುರುಷ, ಗುಂಡ್ಲುಪೇಟೆ ಪಟ್ಟಣ.
ಚಾಮರಾಜನಗರ ತಾಲೂಕು: 20 ವರ್ಷದ ಯುವಕ, ಸೋಮವಾರಪೇಟೆ. 46 ವರ್ಷದ ಮಹಿಳೆ, ಜಿಲ್ಲಾಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ, ಚಾಮರಾಜನಗರ ಪಟ್ಟಣ.
ಯಳಂದೂರು ತಾಲೂಕು: 30 ವರ್ಷದ ಯುವತಿ, ಮದ್ದೂರು. 65 ವರ್ಷದ ವೃದ್ಧೆ, ಮಾಂಬಳ್ಳಿ.
ಹನೂರು ತಾಲೂಕು: 39 ವರ್ಷದ ಮಹಿಳೆ, ಹನೂರು ಪಟ್ಟಣ, 54 ವರ್ಷದ ಪುರುಷ ಬೂದಬಾಳು,ಶಾಗ್ಯದ 26 ವರ್ಷದ ಯುವಕ.