ಕೋವಿಡ್ 2ನೇ ಅಲೆಯಿಂದ ಅರ್ಥ ವ್ಯವಸ್ಥೆಗೆ ಹೆಚ್ಚು ಪ್ರತಿಕೂಲ ಪರಿಣಾಮವಿಲ್ಲ
Team Udayavani, May 11, 2021, 8:27 PM IST
ನವದೆಹಲಿ: ದೇಶಕ್ಕೆ ತಟ್ಟಿರುವ ಕೊರೊನಾ 2ನೇ ಅಲೆಯಿಂದಾಗಿ ಅರ್ಥ ವ್ಯವಸ್ಥೆಗೆ ಹೆಚ್ಚಿನ ಪ್ರತಿಕೂಲ ಪರಿಣಾಮ ಉಂಟು ಮಾಡುವುದಿಲ್ಲ. ಹೀಗೆಂದು ರೇಟಿಂಗ್ ಸಂಸ್ಥೆ ಫಿಚ್ ಅಭಿಪ್ರಾಯಪಟ್ಟಿದೆ.
ಕಳೆದ ವರ್ಷ ಕಂಡುಬಂದಿದ್ದ ಮೊದಲ ಅಲೆಗೆ ಹೋಲಿಕೆ ಮಾಡಿದರೆ ಅದರ ಪ್ರತಿಕೂಲ ಪರಿಣಾಮ ಕಡಿಮೆಯೇ. ದೇಶದ ವಿವಿಧ ಭಾಗಗಳಲ್ಲಿ ಲಾಕ್‌ಡೌನ್ ಮತ್ತು ಇತರ ನಿಯಂತ್ರಣ ಕ್ರಮಗಳನ್ನು ಮುತುವರ್ಜಿಯಿಂದ ಕೈಗೊಳ್ಳುತ್ತಿದ್ದಾರೆ ಎಂದು ಫಿಚ್, ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
ಕೇಂದ್ರ ವಿತ್ತ ಸಚಿವಾಲಯ ಕೂಡ ಏಪ್ರಿಲ್‌ಗೆ ಸಂಬಂಧಿಸಿದ ಮಾಸಿಕ ಆರ್ಥಿಕ ಮುನ್ಸೂಚನಾ ವರದಿಯಲ್ಲಿ ಕೂಡ 2ನೇ ಅಲೆಯಿಂದಾಗಿ ಅರ್ಥ ವ್ಯವಸ್ಥೆಗೆ ಹೆಚ್ಚಿನ ಋಣಾತ್ಮಕ ಪರಿಣಾಮ ಇರಲಾರದು ಎಂದು ತಿಳಿಸಿತ್ತು. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕದಲ್ಲಿ 2ನೇ ಅಲೆಯಿಂದಾಗಿ ಅರ್ಥ ವ್ಯವಸ್ಥೆಯ ಬೆಳವಣಿಗೆಯ ಮೇಲೆ ಕೊಂಚ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎನ್ನುವುದನ್ನು ಫಿಚ್ ಅಲ್ಲಗಳೆದಿಲ್ಲ.
ಇದನ್ನೂ ಓದಿ :ರಾಜ್ಯದಲ್ಲಿಂದು 39,510 ಹೊಸ ಕೋವಿಡ್ ಪ್ರಕರಣ ಪತ್ತೆ: 480 ಜನರ ಸಾವು, 22,584 ಮಂದಿ ಗುಣಮುಖ
ಸೋಂಕಿನ ಜತೆಗೇ ವ್ಯವಸ್ಥೆಯನ್ನು ನಿರ್ವಹಿಸಲು ಕಲಿತಿರುವುದರಿಂದ ಅರ್ಥ ವ್ಯವಸ್ಥೆಯ ಕೆಲವು ಚಟುವಟಿಕೆಗಳು ಮುಂದುವರಿಯಲಿವೆ. ಹೀಗಾಗಿ, ಅತ್ಯಂತ ಸಂಕಷ್ಟ ಸ್ಥಿತಿ ಬರಲಾರದು. 2ನೇ ತ್ತೈಮಾಸಿಕದಲ್ಲಿ ಕೊಂಚ ಚೇತರಿಕೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ರಾ ಚವ್ಲಾ ಪ್ರಕರಣ: ಸಂಜಯ್ ರಾವತ್ ನ್ಯಾಯಾಂಗ ಬಂಧನ ಆ.22ರವರೆಗೆ ವಿಸ್ತರಣೆ
ಸಿಕಾರ್ ದೇವಾಲಯದ ಹೊರಗೆ ಕಾಲ್ತುಳಿತ ; 3 ಸಾವು, ಹಲವರಿಗೆ ಗಾಯ
ವೆಂಕಯ್ಯ ನಾಯ್ಡು ಅವರ ಸೇವೆ ದೇಶಕ್ಕೆ ಶಾಶ್ವತ ಮಾರ್ಗದರ್ಶನ: ಪ್ರಧಾನಿ ಮೋದಿ
ರಾಜಸ್ಥಾನ: ಮೈನಿಂಗ್ ಮಾಫಿಯಾ-ಬಿಜೆಪಿ ಸಂಸದೆ ಮೇಲೆ ದಾಳಿಗೆ ಯತ್ನ; ದೂರು ದಾಖಲು
ಉತ್ತರಪ್ರದೇಶ: ಮಹಿಳೆ ಮೇಲೆ ಹಲ್ಲೆ-ಬಿಜೆಪಿ ಕಾರ್ಯಕರ್ತನ ಮನೆ ಬುಲ್ಡೋಜರ್ ಮೂಲಕ ನೆಲಸಮ
MUST WATCH
ಹೊಸ ಸೇರ್ಪಡೆ
ಡಿಕೆಶಿ ಮೇಕೆದಾಟು ಯಾತ್ರೆಗೆ ಪ್ರತಿಯಾಗಿ ಸಿದ್ದರಾಮೋತ್ಸವ ಮಾಡಿದ್ದಾರೆ: ವಿಜಯೇಂದ್ರ ವ್ಯಂಗ್ಯ
ಪತ್ರಾ ಚವ್ಲಾ ಪ್ರಕರಣ: ಸಂಜಯ್ ರಾವತ್ ನ್ಯಾಯಾಂಗ ಬಂಧನ ಆ.22ರವರೆಗೆ ವಿಸ್ತರಣೆ
ಮೊಳಹಳ್ಳಿ: ಹಕ್ಕು ಪತ್ರ ಸಿಗಲಿ, ನೀರಿನ ಕೊರತೆ ನೀಗಲಿ
ಮಾನ ಮರ್ಯಾದೆ ಇದೆಯೇನ್ರಿ…? ಕಾಮಗಾರಿ ವಿಳಂಬಿಸಿದ ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ
ಕಾಮನ್ವೆಲ್ತ್ ಬಾಡ್ಮಿಂಟನ್: ಬಂಗಾರದ ಬರ ನೀಗಿಸಿದ ಪಿ.ವಿ.ಸಿಂಧು