ಎತ್ತಿನ ಭುಜದ‌ ಮ್ಯಾಲೆ ಸವಾರಿ..! ಏಷ್ಯಾ ಖಂಡದಲ್ಲೇ ರೋಮಾಂಚನಕಾರಿ ಟ್ರಕ್ಕಿಂಗ್ ಸ್ಪಾಟ್ 


Team Udayavani, Oct 3, 2021, 5:38 PM IST

ಎತ್ತಿನ ಭುಜದ‌ ಮ್ಯಾಲೆ ಸವಾರಿ..! ಏಷ್ಯಾ ಖಂಡದಲ್ಲೇ ರೋಮಾಂಚನಕಾರಿ ಟ್ರಕ್ಕಿಂಗ್ ಸ್ಪಾಟ್ 

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು : ರಾಜ್ಯದ ಎತ್ತರದ ಶಿಖರ ಮುಳ್ಳಯ್ಯನಗಿರಿ ಸೌಂದರ್ಯವನ್ನು ನಾಚಿಸುವಂತಹ ಸೌಂದರ್ಯ ಅದು. ಇಲ್ಲಿದೆ ನಿನಗಿಂತ ನಾ ಮೇಲೆನ್ನೋ ಒಂದಕ್ಕೊಂದು ಅಂಟಿಕೊಂಡಿರೋ ಒಂಬತ್ತು ಗುಡ್ಡಗಳು. ರಾಜ್ಯದಲ್ಲೇ ಮೋಸ್ಟ್ ಅಡ್ವೇಂಚರ್ ಎಂಬ ಖ್ಯಾತಿಗೆ ಪಾತ್ರವಾಗೋದ್ರ ಜೊತೆ ಏಷ್ಯಾ ಖಂಡದಲ್ಲೇ ರೋಮಾಂಚನಕಾರಿ ಟ್ರಕ್ಕಿಂಗ್ ಸ್ಪಾಟ್ ಎಂಬ ಹೆಗ್ಗಳಿಕೆ ಈ ಗುಡ್ಡಕ್ಕಿದೆ. ಕಾಫಿನಾಡಿನ ಎಲೆಮರೆ ಕಾಯಿಯಾಗಿರೋ ಅಲ್ಲಿನ ಸೌಂದರ್ಯ ಸವಿಯೋಕೆ ಪ್ರವಾಸಿಗರಿಲ್ಲದ ದಿನವಿಲ್ಲ. ಅಂತಹ ಅಪರೂಪದ ಸೌಂದರ್ಯವನ್ನ ಬಣ್ಣಿಸೋಕೆ ಪದಪುಂಜ ಸಾಲದು… ಅಷ್ಟಕ್ಕೂ ಆ ಗಿರಿಶಿಖರ ಯಾವುದು ಅಂತೀರಾ..? ಇಲ್ಲಿದೆ ನೋಡಿ ಸೊಬಗಿನ ಗುಡ್ಡದ ಸುಂದರ ನೋಟ

ಕಾಫಿನಾಡು ಚಿಕ್ಕಮಗಳೂರು, ಪ್ರವಾಸಿಗರ ಪಾಲಿನ ಅಕ್ಷಯಪಾತ್ರೆ. ನೋಡುಗರು-ಕೇಳುಗರ ಭಾವನೆಗಳಿಗೆಲ್ಲಾ ಜೀವ ತುಂಬೋ ಜೀವ ವೈವಿಧ್ಯಮಯ ತಾಣ. ಭೂಲೋಕದ ಸ್ವರ್ಗವೆನ್ನಿಸಿರೋ ಈ ನೆಲದಲ್ಲಿ ಬೆಳಕಿಗೆ ಬಾರದ ಅದೆಷ್ಟೋ ಸುಮಧುರ ತಾಣಗಳಲ್ಲಿ ಮೂಡಿಗೆರೆ ತಾಲೂಕಿನ ಬೈರಾಪುರ ಬಳಿ ಇರೋ ಶಿಶಿಲ ಗುಡ್ಡ ಕೂಡ ಒಂದು. ಇದನ್ನ ಎತ್ತಿನ ಭುಜ ಅಂತಲೂ ಕರೀತಾರೆ. ಕಾರಣ, ದೂರದಿಂದ ನೋಡಿದರೆ ಈ ರಮಣೀಯ ತಾಣ ಎತ್ತಿನ ಭುಜದ ರೀತಿ ಕಾಣಿಸೋದು. ಇಲ್ಲಿನ ಮನಮೋಹಕ ಗುಡ್ಡಗಳು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಅಷ್ಟೆ ಅಲ್ಲದೆ, ಈ ಬೆಟ್ಟ ಏರೋ ಸವಾಲ್ ಇದೆಯಲ ಅದು ನಿಜಕ್ಕೂ ರೋಮಾಂಚನ. ಬೈರಾಪುರ ಗ್ರಾಮದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರೋ ಈ ಬೆಟ್ಟವನ್ನು ನಡೆದುಕೊಂಡೇ ಹತ್ತಬೇಕು. ಅದು ಕೂಡ ಕಡಿದಾದ ರಸ್ತೆಯಲ್ಲಿ ಕಲ್ಲು ಮಣ್ಣು ಎನ್ನದೇ ಗುಡ್ಡವನ್ನು ಹತ್ತುತ್ತ ಸಾಗಬೇಕು.. ಹೀಗೆ ಬೆಟ್ಟ ಹತ್ತುವ ಸಾಹಸಕ್ಕೆ ಬಿದ್ದಾಗ ಸಾಕು, ಸಾಕು ಏನ್ನೋ ಸೋಲು ನಮ್ಮನ್ನ ಮುಂದೆ ಗುಡ್ಡವನ್ನು ಏರದಂತೆ ತಡೆಯುತ್ತೆ. ಆದ್ರೆ ಮುಂದೆ ನಡೆಯದಂತೆ ತಡೆಯೋ ಸುಸ್ತು, ಸೋಲನ್ನು ಹಿಮ್ಮೆಟ್ಟಿಸಿ ಹೆಜ್ಜೆ ಹಾಕಿ, ಬೆಟ್ಟ ಏರಿದ್ರೆ ಸಿಗೋದು ನಿಜಕ್ಕೂ ಸ್ವರ್ಗ..

ಇದನ್ನೂ ಓದಿ : ಸಿದ್ದರಾಮಯ್ಯನವರಿಗೆ ಜೆಡಿಎಸ್ ಮನೆಯೊಳಗೆ ಇಣುಕಿ ನೋಡುವ ಚಾಳಿ ಯಾಕೆ: ಸಿ.ಟಿ.ರವಿ

ಇಲ್ಲಿನ ಒಂಬತ್ತು ಗುಡ್ಡಗಳ ಕಾಣೋ ಎತ್ತಿನ ಭುಜದ ಬೆಟ್ಟದ ಮಧ್ಯೆ ನಿಂತ್ರೆ ಯಾವುದೋ ದ್ವೀಪದಲ್ಲಿ ನಿಂತ ಅನುಭವವಾಗತ್ತೆ. ಈ ಗುಡ್ಡವನ್ನ ಹತ್ತಿ ಇಳಿಯುವುದೇ ಖುಷಿ,‌ ಸುಸ್ತಿನ ನಡುವೆಯೂ ಬೆಟ್ಟ ಹತ್ತುವಾಗ ಬೀಸೋ ತಣ್ಣನೆಯ ಗಾಳಿ ಎಂತಹಾ ಆಯಾಸವನ್ನು ಮಾಯವಾಗಿಸುತ್ತೆ.‌ಅದ್ರಲ್ಲೂ ಚಿಕ್ಕ ಚಿಕ್ಕ ಮಕ್ಕಳನ್ನ ಕರೆದುಕೊಂಡು ಎತ್ತಿನ ಭುಜ ಬೆಟ್ಟವನ್ನ ಏರೋ ಸಾಹಸ ನಿಜಕ್ಕೂ ಸವಾಲೇ. ಈ ಮಧ್ಯೆಯೂ ಎಲ್ಲಾ ಅಡೆತಡೆಗಳನ್ನ ಭೇದಿಸಿ ಬೆಟ್ಟದ ಮೇಲೆ ನಿಂತಾಗ ಸಿಗೋ ಖುಷಿ ಅಷ್ಟಿಷ್ಟಲ್ಲ. ಆಕಾಶಕ್ಕೆ ಮೂರೇ ಗೇಣು ಅನ್ನೋ ಮಾತು ಈ ಬೆಟ್ಟದ ಮೇಲೆ ನಿಂತೊರ್ಗೇ‌ ಅನುಭವವಾಗದೇ ಇರದು. ಅಷ್ಟು ಸುಂದರ ಮನಮೋಹಕ, ರಮಣೀಯ ತಾಣ ಈ ಎತ್ತಿನ ಭುಜ.

ಬೆವರು ಸುರಿಸಿ ಎತ್ತಿನ ಭುಜದ ಮೇಲೆ ಸವಾರಿ ಮಾಡೋ ಟ್ರೆಕ್ಕಿಂಗ್ ಪ್ರಿಯರು ಪೋಟೋ ಕ್ಲಿಕ್ಕಿಸಿ ಕೊಂಡು, ಸೆಲ್ಫಿ ತೆಗೆದುಕೊಂಡು ಈ ಸುಂದರ ನೆನಪನ್ನ ಹಸಿರಾಗಿಸಿಕೊಳ್ತಾರೆ. ಇನ್ನೂ ಈ ಬೆಟ್ಟವನ್ನು ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲ ಮಾರ್ಗದಿಂದಲೂ ಏರಬಹುದು. ಆದ್ರೆ ಅದು ಹೆಚ್ಚು ದೂರವಾಗೋದ್ರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಭೈರಾಪುರಕ್ಕೆ ಹೋಗಿ ಬೆಟ್ಟ ಏರೋದೇ ಸುಲಭ ಹಾಗೇ ಹತ್ತಿರ ಕೂಡ. ಟ್ರೆಕ್ಕಿಂಗ್ ಪ್ರಿಯರಿಗಂತೂ ಈ ನಯನಮನೋಹರ ತಾಣ ನಿಜಕ್ಕೂ ಹೇಳಿಮಾಡಿಸಿದ ತಾಣ.‌ ಬಿಸಿಲು ಇದ್ದಾಗ ಎತ್ತಿನ‌ ಭುಜದ ವಿಹಂಗಮ ನೋಟವಂತೂ ಕಣ್ಣಿಗೆ ಹಬ್ಬ, ಆಗ ದಶದಿಕ್ಕುಗಳು ಗೋಚರವಾಗುತ್ತದೆ. ಎತ್ತಿನ ಭುಜದ ಮೇಲೆ ಆಗಾಗ ಮಂಜು ಆವರಿಸುತ್ತಲ್ಲೇ ಇರುತ್ತೆ. ಆ ವೇಳೆ ಮಂಜಿನಲ್ಲಿ ಪ್ರವಾಸಿಗರು ಆಕಾಶದಲ್ಲೇ ತೇಲಿದ ಅನುಭವ ಪಡೆಯುತ್ತಾರೆ.‌ ಒಟ್ನಲ್ಲಿ ಕಾಫಿನಾಡಿನ‌ ಶೋಲೆ ಅರಣ್ಯದಲ್ಲಿ ಆಕಾಶಕ್ಕೆ ಚಾಚಿಕೊಂಡಿರುವ ಈ ಎತ್ತಿನ ಭುಜ, ಟ್ರೆಕ್ಕಿಂಗ್ ಪ್ರಿಯರ ಫೇವರಿಟ್, ಅಡ್ವೆಂಚರಸ್ ಪ್ಲೇಸ್ ಅನ್ನೋದ್ರಲ್ಲಿ ಎರಡು ಮಾತಿಲ್ಲ..

– ಸಂತೋಷ್ ಮೂಡಿಗೆರೆ 

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.