ನಿಮ್ಮ ಪಾನ್‌ – ಆಧಾರ್‌ ಲಿಂಕ್‌ ಮಾಡಲು ಡಿ. 31 ಕೊನೆ ದಿನ

ಹೇಗೆ ಮಾಡುವುದು ಇಲ್ಲಿದೆ ವಿವರ

Team Udayavani, Sep 28, 2019, 4:29 PM IST

Pan-adhar-Cover-Photo

ಬೆಂಗಳೂರು: ನಿಮ್ಮ ಆಧಾರ್‌ ಕಾರ್ಡ್‌ನೊಂದಿಗೆ ಪಾನ್‌ ಲಿಂಕ್‌ ಮಾಡಲು ಡಿಸೆಂಬರ್ 31 ಕಡೆಯ ದಿನವಾಗಿದೆ. ಡಿ.31ರ ಒಳಗೆ ಕಡೆಯ ದಿನ ನೀವು ಆಧಾರ್‌ಲಿಂಕ್‌ ಮಾಡಿಸದೇ ಇದ್ದರೆ ನಿಮ್ಮ ಪಾನ್‌ ಕಾರ್ಡ್‌  ನಿಷ್ಕ್ರೀಯಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪಾನ್‌ ನಿಷ್ಕ್ರೀಯಗೊಂಡರೆ ಬ್ಯಾಂಕ್‌ ವಹಿವಾಟುಗಳಿಗೆ ಸಮಸ್ಯೆಯಾಗಬಹುದಾಗಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾದರೆ ಆಧಾರ್‌ ಸಂಖ್ಯೆ ಅನಿವಾರ್ಯವಾಗಿತ್ತು. ಈ ವೇಳೆ ನಿಮ್ಮಲ್ಲಿ ಆಧಾರ್‌ ಕಾರ್ಡ್‌ ಇಲ್ಲದೇ ಇದ್ದರೆ ಅಥವ ನಿಮ್ಮ ಆಧಾರ್‌ ಪಾನ್‌ ಕಾರ್ಡ್‌ಗೆ ಲಿಂಕ್‌ ಆಗದೇ ಇದ್ದರೆ ನೀವು ತೆರಿಗೆ ಲಿಟರ್ನ್ಸ್ ಸಲ್ಲಿಸಲು ಬರುವುದಿಲ್ಲ.

ಲಿಂಕ್‌ ಮಾಡುವ ಬಗೆಯನ್ನು ಈ ಕೆಳಗೆ ಹಂತ ಹಂತವಾಗಿ ನೀಡಲಾಗಿದೆ.

ಹಂತ 1: https://www.incometaxindiaefiling.gov.in/home

ಹಂತ 2: ವೆಬ್‌ಸೈಟ್‌ನ ನಿಮ್ಮ ಎಡಬದಿಯ ಮೆಲೆ ಕಾಣಿಸಿಕೊಳ್ಳುವ ಲಿಂಕ್‌ ಆಧಾರ್‌ ಮೇಲೆ ಕ್ಲಿಕ್‌ ಮಾಡಿ.

ಹಂತ 3: ಅಲ್ಲಿ ಸೂಚಿಸಿದಂತೆ ನಿಮ್ಮ ಪಾನ್‌ ಮತ್ತು ಆಧಾರ್‌ ಸಂಖ್ಯೆಯನ್ನು ನಮೂದಿಸಿ.

ಹಂತ 4: ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ಮುದ್ರಣವಾಗಿರುವ ಹೆಸರನ್ನು ಅಲ್ಲಿ ನಮೂದಿಸಬೇಕು

ಹಂತ 5: ಕೆಲವು ಆಧಾರ್‌ ಕಾರ್ಡ್‌ಗಳಲ್ಲಿ ಹುಟ್ಟಿದ ವರ್ಷ ಮಾತ್ರ ದಾಖಲಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಅಲ್ಲಿ ನೀಡಲಾಗಿರುವ ‘I have the only year of birth in Aadhar card ಬಾಕ್ಸ್‌ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ

ಹಂತ 6: ನೀವು ಮೇಲೆ ನೀಡಲಾದ ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ಮತ್ತೊಮ್ಮೆ ಪರೀಕ್ಷಿಸಿ, ಎಲ್ಲವೂ ಸರಿಯಾಗಿದ್ದರೆ “I agree to validate my Aadhar details with UIDAI’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

ಹಂತ 7: ಬಳಿಕ ಕೆಳಗೆ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುವ ಕೋಡ್‌ (ಸರಿಯಾಗಿ ಗಮನಿಸಿ ಇದು ಹಲವು ಕ್ಯಾಪ್ಸ್‌ ಮತ್ತು ಸ್ಮಾಲ್‌ ಲೆಟರ್‌ಗಳನ್ನು ಅಂಕಿಯೊಂದಿಗೆ ಒಳಗೊಂಡಿರುತ್ತದೆ) ಅನ್ನು ನಮೂದು ಮಾಡಿ.

ಹಂತ 8: ಬಳಿಕ ಕೆಳಗೆ ಕಾಣಿಸಿಕೊಳ್ಳುವ ಲಿಂಕ್‌ ಆಧಾರ್‌ ಮತ್ತು ಕ್ಯಾನ್ಸಲ್‌ ಎಂಬ ಬಟನ್‌ಗಳನ್ನು ಗಮನಿಸಿಸಿ, ಅಲ್ಲಿ ನೀವು ಲಿಂಕ್‌ ಆಧಾರ್‌ ಬಟನ್‌ ಮೆಲೆ ಕ್ಲಿಕ್‌ ಮಾಡಬೇಕು.

ಹಂತ: 9 ಕಡೆಯದಾಗಿ ನಿಮ್ಮಿಂದ ಮಾಹಿತಿಯನ್ನು ಪಡೆದುಕೊಂಡ ವೆಬ್‌ಸೈಟ್‌ ಎಲ್ಲವೂ ಸರಿಯಾಗಿದೆ ಎಂದಾದ ಬಳಿಕ ‘Your Pan is already linked ಎಂಬ ಸಂದೇಶವನ್ನು ತೋರಿಸುತ್ತದೆ.

ಮೊಬೈಲ್‌ನಲ್ಲೇ ಲಿಂಕ್‌ ಮಾಡುವುದು ಹೇಗೆ?

ನಿಮ್ಮ ಮೊಬೈಲ್‌ನಿಂದ ಎಸ್‌ಎಂಎಸ್‌ ಮೂಲಕ ಪಾನ್‌ ಮತ್ತು ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಬಹುದು. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ.

ಉದಾ: ನಿಮ್ಮ ಆಧಾರ್‌ ಸಂಖ್ಯೆ 111122224444 ಎಂದೂ, ಪಾನ್‌ ಕಾರ್ಡ್‌ ನಂಬರ್‌ AAAPA9999Q ಎಂದು ಇದೆ ಎಂದುಕೊಳ್ಳೋಣ. ನಿಮ್ಮ ಪೋನ್‌ನಿಂದ UIDPAN 111122224444 AAAPA9999Q ಎಂದು 567678 ಅಥವಾ 56161 ಸಂಖ್ಯೆಗೆ ಮೆಸೇಜ್‌ ಮಾಡಬಹುದಾಗಿದೆ. ಇದಕ್ಕೆ ನಿಮ್ಮ ನೆಟ್‌ವರ್ಕ್‌ ಪೂರೈಕೆದಾರರ ಮೆಸೇಜ್‌ ದರ ಅನ್ವಯವಾಗಲಿದೆ.

ಟಾಪ್ ನ್ಯೂಸ್

ಅಶೋಕ್‌ ಗೆಹ್ಲೋಟ್, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಆಸ್ತಿ: ರಾಹುಲ್‌ ಗಾಂಧಿ

ಅಶೋಕ್‌ ಗೆಹ್ಲೋಟ್, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಆಸ್ತಿ: ರಾಹುಲ್‌ ಗಾಂಧಿ

ಹೆಬ್ರಿ ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಹೆಬ್ರಿ ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

PM Modi

ಆಯುರ್ವೇದ ಕಾಂಗ್ರೆಸ್‍ನ ಸಮಾರೋಪ : ಡಿ.11ಕ್ಕೆ ಪ್ರಧಾನಿ ಮೋದಿ ಗೋವಾಕ್ಕೆ

1-sadsad

53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ; ಸ್ಪ್ಯಾನಿಷ್‌ ಚಿತ್ರಕ್ಕೆ ಗೋಲ್ಡನ್‌ ಪೀಕಾಕ್‌ ಪ್ರಶಸ್ತಿ

1-SAAS

ಅಫ್ತಾಬ್ ಪೂನವಾಲಾನನ್ನ ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್‌ ಮೇಲೆ ದಾಳಿ; ವಿಡಿಯೋ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

tdy-19

2023ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

1-aSASA

ಡಬ್ಬಲ್ ಇಂಜಿನ್ ಸರಕಾರವಿದ್ದರೂ ಶರಾವತಿ ಸಂತ್ರಸ್ತರಿಗೆ ನ್ಯಾಯವಿಲ್ಲ: ಸಿದ್ದರಾಮಯ್ಯ ಕಿಡಿ

Satish Jaraki

ಕಾಂಗ್ರೆಸ್ ಸರ್ಕಾರದಲ್ಲೇ ಹೆಚ್ಚು ಹಿಂದೂಗಳ ರಕ್ಷಣೆ: ಸತೀಶ್ ಜಾರಕಿಹೊಳಿ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ಅಶೋಕ್‌ ಗೆಹ್ಲೋಟ್, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಆಸ್ತಿ: ರಾಹುಲ್‌ ಗಾಂಧಿ

ಅಶೋಕ್‌ ಗೆಹ್ಲೋಟ್, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಆಸ್ತಿ: ರಾಹುಲ್‌ ಗಾಂಧಿ

ಹೆಬ್ರಿ ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಹೆಬ್ರಿ ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

PM Modi

ಆಯುರ್ವೇದ ಕಾಂಗ್ರೆಸ್‍ನ ಸಮಾರೋಪ : ಡಿ.11ಕ್ಕೆ ಪ್ರಧಾನಿ ಮೋದಿ ಗೋವಾಕ್ಕೆ

1-sadsad

53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ; ಸ್ಪ್ಯಾನಿಷ್‌ ಚಿತ್ರಕ್ಕೆ ಗೋಲ್ಡನ್‌ ಪೀಕಾಕ್‌ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.