ವಿದೇಶಗಳಲ್ಲೂ ಇನ್ನು ಖಾದಿ ಕಲರವ : 40 ರಾಷ್ಟ್ರಗಳಲ್ಲಿ ಟ್ರೇಡ್ಮಾರ್ಕ್ ನೋಂದಣಿಗೆ ಸಿದ್ಧತೆ
Team Udayavani, Jul 12, 2021, 7:05 AM IST
ಹೊಸದಿಲ್ಲಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಈಗ ವಿದೇಶಗಳಿಗೆ ಕೂಡ ತನ್ನ ಉತ್ಪನ್ನಗಳನ್ನು ಕಳುಹಿಸಿ ಕೊಡಲು ಮುಂದಾಗಿದೆ. ಅದಕ್ಕಾಗಿ ಅಮೆರಿಕ, ಕತಾರ್, ಶ್ರೀಲಂಕಾ, ಜಪಾನ್, ಇಟಲಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಾಪುರ, ಬ್ರೆಜಿಲ್ ಸೇರಿದಂತೆ 40 ರಾಷ್ಟ್ರಗಳಲ್ಲಿ ಟ್ರೇಡ್ಮಾರ್ಕ್ ನೋಂದಣಿ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.
ಈ ಮೂಲಕ ಖಾದಿ ಉತ್ಪನ್ನಗಳನ್ನು ಸಿದ್ಧಪಡಿಸುವವರಿಗೆ ಮತ್ತಷ್ಟು ಹೆಚ್ಚಿನ ಅನುಕೂಲ ಮಾಡಿಕೊಡಲು ನೆರವಾಗಿದೆ. ಜೂ.28 ರಂದು ಭೂತಾನ್, ಯುಎಇ ಮತ್ತು ಮೆಕ್ಸಿಕೋಗಳಲ್ಲಿ ಹೆಸರನ್ನು ನೋಂದಾಯಿಸಿದೆ ಎಂದು ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕೆಗಳ ಸಚಿವಾಲಯ ಮಾಹಿತಿ ನೀಡಿದೆ. ಜರ್ಮನಿ, ಯು.ಕೆ., ಆಸ್ಟ್ರೇಲಿಯಾ, ರಷ್ಯಾ, ಚೀನ ಮತ್ತು ಐರೋಪ್ಯ ಒಕ್ಕೂಟಗಳಲ್ಲಿ “ಖಾದಿ’ ಎಂಬ ಹೆಸರು ನೋಂದಣಿಯಾಗಿದೆ.
ಅಲ್ಲಿ ಖಾದಿ ಫ್ಯಾಬ್ರಿಕ್ಸ್, ಖಾದಿ ರೆಡಿಮೇಡ್ ಮತ್ತು ಗ್ರಾಮೀಣ ಕೈಗಾರಿಕೆಗಳ ಉತ್ಪನ್ನ ಸಾಬೂನು, ಕಾಸೆ¾ಟಿಕ್ಸ್, ಸುಗಂಧ ಸೂಸುವ ಕಡ್ಡಿಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ನೋಂದಣಿ ಮಾಡಲಾಗಿದೆ.