ಪತಿಯನ್ನು ಡೊಮಿನಿಕಾದಿಂದ ಆ್ಯಂಟಿಗುವಾಕ್ಕೆ ಕರೆತರಲು ರಾಣಿಎಲಿಜಬೆತ್ಗೆ ಚೋಕ್ಸಿ ಪತ್ನಿ ಪತ್ರ
Team Udayavani, Jun 5, 2021, 9:04 PM IST
ನವದೆಹಲಿ: ಭಾರತೀಯ ಬ್ಯಾಂಕುಗಳಿಗೆ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿ, ಈಗ ಡೊಮಿನಿಕಾದಲ್ಲಿ ಬಂಧಿತರಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದಿಂದ ಆ್ಯಂಟಿಗುವಾಕ್ಕೆ ಕರೆತರುವಂತೆ ಬ್ರಿಟನ್ ರಾಣಿ 2ನೇ ಎಲಿಜಬೆತ್ಗೆ ಚೋಕ್ಸಿ ಪತ್ನಿ ಪ್ರೀತಿ ಚೋಕ್ಸಿ ಪತ್ರ ಬರೆದಿದ್ದಾರೆ.
ಆ್ಯಂಟಿಗುವಾ ಮತ್ತು ಬರ್ಬುಡಾ ಕೂಡ ಬ್ರಿಟನ್ ರಾಣಿಯ ಅಧಿಕಾರ ವ್ಯಾಪ್ತಿಗೆ ಒಳಪಡುವ ಕಾರಣ, ನನ್ನ ಪತಿಗೆ ನೀವೇ ನ್ಯಾಯ ಒದಗಿಸಬೇಕು ಎಂದು ಪತ್ರದಲ್ಲಿ ಪ್ರೀತಿ ಚೋಕ್ಸಿ ಮನವಿ ಮಾಡಿದ್ದಾರೆ. ಪತಿಯನ್ನು ಅಪಹರಿಸಿ ಮಾನವಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ. ತಮ್ಮ ಗಡಿಪಾರು ವಿರುದ್ಧ ಅವರು ಕಾನೂನು ಹೋರಾಟ ನಡೆಸುತ್ತಿದ್ದು, ಅವರ ವಿರುದ್ಧ ಭಾರತ ಮತ್ತು ಆ್ಯಂಟಿಗುವಾದ ಅಧಿಕಾರಿಗಳು ಪಿತೂರಿ ನಡೆಸಿದ್ದಾರೆ. ನೀವು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಪತಿಯನ್ನು ಆ್ಯಂಟಿಗುವಾಗೆ ಸ್ಥಳಾಂತರಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಇದನ್ನೂ ಓದಿ :ಒಳಉಡುಪುಗಳಲ್ಲಿ ಕನ್ನಡದ ಧ್ವಜ ಬಳಕೆ! ಅಮೆಜಾನ್ನಿಂದಲೂ ಕನ್ನಡಕ್ಕೆ ಅವಮಾನ