ಕೊರಟಗೆರೆ ಕ್ಷೇತ್ರದ ಅಂತರ್ಜಲ ಅಭಿವೃದ್ದಿಗೆ ಆದ್ಯತೆ-ರೈತರ ಬೇಡಿಕೆ ಇತ್ಯರ್ಥ: ಸುಧಾಕರಲಾಲ್


Team Udayavani, Apr 12, 2023, 8:54 PM IST

korate

ಕೊರಟಗೆರೆ: ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ ಜನಪರ ಅಭಿವೃದ್ದಿ ಯೋಜನೆಗಳ ಹೆಜ್ಜೆಗುರುತೇ ನನಗೆ ಆದರ್ಶ. 25 ವರ್ಷ ನಾನು ಕೊರಟಗೆರೆ ಕ್ಷೇತ್ರದಲ್ಲಿ ಹಗಲು-ರಾತ್ರಿ ಎನ್ನದೇ ಬಡ ಜನರ ಸೇವೆ ಮಾಡಿದ್ದೇನೆ. ನಾನು ಮತ್ತೇ 2023ಕ್ಕೆ ಶಾಸಕ ಆಗೋದು ಬಡಜನರ ಸೇವೆಗೆ ಮತ್ತು ಕೊರಟಗೆರೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಮಾತ್ರ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.

ಕೊರಟಗೆರೆ ಪಟ್ಟಣದ ಜಾಮೀಯಾ ಸಮುದಾಯ ಭವನದ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿಗಳ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

15 ವರ್ಷ ಜಿಪಂ ಸದಸ್ಯನಾಗಿ ಜನಸೇವೆ ಸಲ್ಲಿಸಿದ ನನಗೇ ಕೊರಟಗೆರೆ ಕ್ಷೇತ್ರದ ಸಂಪೂರ್ಣ ಪರಿಚಯವಿದೆ. ನನ್ನ ಕ್ಷೇತ್ರಕ್ಕೆ ಅಗತ್ಯವಿರುವ ಯೋಜನೆ ಮತ್ತು ಬಡಜನತೆಯ ಸಮಸ್ಯೆಯ ಬಗ್ಗೆ ನನಗೇ ಅರಿವಿದೆ. ನಾನು ಶಾಸಕನಾದಾಗ ಗಂಗಾಕಲ್ಯಾಣ, ಸಾಗುವಳಿ ಚೀಟಿ, ವಿಶೇಷ ಚೇತನರಿಗೆ ವಾಹನ, ಪ್ರವಾಸೋದ್ಯಮ ಇಲಾಖೆಯ ವಾಹನ ಸೇರಿದಂತೆ ಸಾವಿರಾರು ಜನರಿಗೆ ಸಾಲ ಸೌಲಭ್ಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

ರಾಜ್ಯ ಹಿಂದುಳಿದ ವರ್ಗದ ಕಾರ್ಯಾಧ್ಯಕ್ಷ ಮಹಾಲಿಂಗಪ್ಪ.ಹೆಚ್.ಕೆ ಮಾತನಾಡಿ ನಾವು ಮಾಡುವ ಕೆಲಸವನ್ನು ಜನರೇ ಇನ್ನೋಬ್ಬರ ಮುಂದೇ ಹೇಳುವುದೇ ನಿಜವಾದ ಕೆಲಸ. ಕೊರಟಗೆರೆ ಕ್ಷೇತ್ರದ ಪ್ರತಿ ಗ್ರಾಮದಲ್ಲಿಯೂ ಸುಧಾಕರಲಾಲ್ ಮಾಡಿರುವ ಆರೋಗ್ಯ ಕ್ಷೇತ್ರದ ಕೊಡುಗೆ ಇದೆ. ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಲು 3 ಜನ ಮುಖಂಡರ ದಾಟಿ ಹೋಗಬೇಕಿದೆ. ಆದ್ರೇ ನಮ್ಮ ಲಾಲ್‌ಗೆ ಕೂಗಿದ್ರೇ ಸಾಕು ನಿಮ್ಮ ಮನೆ ಬಾಗಲಿಗೆ ಬರ್ತಾರೇ. ನಿಮಗೇ ಯಾರು ಬೇಕು ನೀವೇ ಯೋಚಿಸಿ ಮತ ನೀಡಿ ಎಂದು ಮನವಿ ಮಾಡಿದರು.

ತುಮಕೂರು ಜಿಲ್ಲಾ ಪರಿಶಿಷ್ಟ ವರ್ಗಗಳ ಜಿಲ್ಲಾಧ್ಯಕ್ಷ ಶಿವಕುಮಾರ್ ಮಾತನಾಡಿ ಕೊರಟಗೆರೆ ಕ್ಷೇತ್ರದ ಜನರಿಗೆ ಸರಳವಾಗಿ ಸಿಗುವ ಜನನಾಯಕ ನಮ್ಮ ಸುಧಾಕರಲಾಲ್ ಮಾತ್ರ. ಅವರಿಗೆ 35ವರ್ಷ ಕೊರಟಗೆರೆ ಕ್ಷೇತ್ರದ ಜನತೆಯ ಜೊತೆ ಬೆರೆತು ಜನಸೇವೆ ಮಾಡಿದ ಅನುಭವವಿದೆ.ಬಡವರು ಮತ್ತು ರೈತರ ಪರವಾಗಿ ಚಿಂತನೇ ನಡೆಸುವ ಪ್ರಾದೇಶಿಕ ಜೆಡಿಎಸ್ ಪಕ್ಷಕ್ಕೆ ನಿಮ್ಮೇಲ್ಲರ ಆರ್ಶಿವಾದ ಇರಲಿ ಎಂದು ಹೇಳಿದರು.

ಸಮಾವೇಶದಲ್ಲಿ ಜಿಲ್ಲಾ ಜೆಡಿಎಸ್ ಮಹಿಳಾಧ್ಯಕ್ಷೆ ಕುಸುಮಾ, ಕೊರಟಗೆರೆ ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು, ಉಪಾಧ್ಯಕ್ಷ ಕಾಮರಾಜು, ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್, ಮುಖಂಡರಾದ ವೀರಕ್ಯಾತರಾಯ, ಸಿದ್ದಮಲ್ಲಪ್ಪ, ಪುಟ್ಟನರಸಪ್ಪ, ರಮೇಶ್, ಲಕ್ಷ್ಮೀನಾರಾಯಣ್, ರವಿಕುಮಾರ್, ಮಾರುತಿ, ಶಿವರಾಜ್, ನರಸಿಂಹಮೂರ್ತಿ, ದೊಡ್ಡಯ್ಯ, ನಾಗರಾಜು, ಸೈಪುಲ್ಲಾ, ಕಲೀಂವುಲ್ಲಾ ಸೇರಿದಂತೆ ಇತರರು ಇದ್ದರು.

೧೦೦ಕ್ಕೂ ಅಧಿಕ ಯುವಕರ ಸೇರ್ಪಡೆ..
ಕೊರಟಗೆರೆ ಕ್ಷೇತ್ರದ ಆರು ಹೋಬಳಿಯ ಎಸ್‌ಸಿ ಸಮುದಾಯದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನೂರಾರು ಜನ ಯುವಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಮಾಜಿ ಶಾಸಕ ಸುಧಾಕರಲಾಲ್ ಸಮ್ಮುಖದಲ್ಲಿ ಬುಧವಾರ ಸೇರ್ಪಡೆಯಾದರು.

ʻಸುವರ್ಣಮುಖಿ ಮತ್ತು ಜಯಮಂಗಳಿ ನದಿ ತುಂಬಿ ಹರಿದಾಗಲೇ ರೈತರಿಗೆ ಗೊತ್ತಾಗಿದ್ದು ಅಂತರ್ಜಲ ಮಟ್ಟದ ಏರಿಕೆ. ೫ವರ್ಷ ಶಾಸಕನಾಗಿ ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಹಸ್ತಾಂತರ ಮಾಡಿದ ಕೊಳವೆ ಬಾವಿಗಳೇ ಇಂದು ಅಭಿವೃದ್ದಿಗೆ ಸಾಕ್ಷಿ. ೩೫ ಸಾವಿರ ಜನರಿಗೆ ಲಾಲ್ ಮಾಡಿರುವ ಆರೋಗ್ಯ ಸೇವೆಯ ವಿಚಾರವು ನಾವು ಹಳ್ಳಿಗಳಿಗೆ ಹೋದಾಗಲೇ ಗೊತ್ತಾಗಿದ್ದು. ಬಡಜನರು ಮತ್ತು ರೈತರ ರಕ್ಷಣೆಗೆ ಲಾಲ್ ಮತ್ತೋಮ್ಮೆ ಗೆಲ್ಲಲೇಬೇಕಿದೆ.ʼ

ಕೆ.ಎನ್.ನಟರಾಜು. ಸ್ಥಾಯಿ ಸಮಿತಿ ಅಧ್ಯಕ್ಷ, ಕೊರಟಗೆರೆ

ʻ5ವರ್ಷ ಶಾಸಕನಾಗಿ ನೂರಾರು ಜನರಿಗೆ ವೈಯಕ್ತಿಕ ಸೌಲಭ್ಯ ನೀಡಿದ ಕೀರ್ತಿ ಲಾಲ್‌ಗೆ ಸಲ್ಲಲಿದೆ. 25ವರ್ಷ ಕೊರಟಗೆರೆ ಕ್ಷೇತ್ರದಲ್ಲಿ ಹಗಲುರಾತ್ರಿ ಜನಸೇವೆ ಮಾಡಿದ್ದಾರೆ. 2023ಕ್ಕೆ ಮತ್ತೆ ಸುಧಾಕರಲಾಲ್ ಗೆಲುವು ಖಚಿತ. ಏ.15ರಂದು ಜೆಡಿಎಸ್ ಅಭ್ಯರ್ಥಿಯಾಗಿ ಲಾಲ್ ನಾಮಪತ್ರ ಸಲ್ಲಿಸ್ತಾರೇ. ಕರ್ನಾಟಕ ಮತ್ತು ಕೊರಟಗೆರೆ ಅಭಿವೃದ್ದಿಗೆ ಪಂಚರತ್ನ ಯೋಜನೆ ಸಹಕಾರಿ ಆಗಲಿದೆ.ʼ

ಲಕ್ಷ್ಮೀನರಸಯ್ಯ. ಎಸ್‌ಸಿ ಘಟಕ ಅಧ್ಯಕ್ಷ. ಕೊರಟಗೆರೆ

ಟಾಪ್ ನ್ಯೂಸ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.