ನ್ಯೂಜಿಲ್ಯಾಂಡಿನ ಕಾನ್ವೆ, ಇಂಗ್ಲೆಂಡಿನ ಸೋಫಿ ಎಕ್ಲ್ ಸ್ಟೋನ್ ಐಸಿಸಿ ತಿಂಗಳ ಆಟಗಾರರು
Team Udayavani, Jul 12, 2021, 11:54 PM IST
ದುಬಾೖ : ನ್ಯೂಜಿಲ್ಯಾಂಡಿನ ಆರಂಭಕಾರ ಡೇವನ್ ಕಾನ್ವೆ ಮತ್ತು ಇಂಗ್ಲೆಂಡಿನ ಎಡಗೈ ಸ್ಪಿನ್ನರ್ ಸೋಫಿ ಎಕ್ಲ್ ಸ್ಟೋನ್ ಐಸಿಸಿ ಜೂನ್ ತಿಂಗಳ ಆಟಗಾರರಾಗಿ ಆಯ್ಕೆಯಾಗಿದ್ದಾರೆ.
ವನಿತೆಯರ ಪ್ರಶಸ್ತಿ ರೇಸ್ನಲ್ಲಿ ಭಾರತದ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ ಮತ್ತು ಆಲ್ರೌಂಡರ್ ಸ್ನೇಹ್ ರಾಣಾ ಕೂಡ ಇದ್ದರು. ಆದರೆ ಎಕ್ಲ್ ಸ್ಟೋನ್ ಇವರಿಬ್ಬರನ್ನೂ ಮೀರಿಸಿದರು.
ಬ್ರಿಸ್ಟಲ್ನಲ್ಲಿ ನಡೆದ ಭಾರತದೆದುರಿನ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್, ಅನಂತರದ 2 ಏಕದಿನ ಪಂದ್ಯಗಳಲ್ಲಿ ತಲಾ 3 ವಿಕೆಟ್ ಉರುಳಿಸಿದ್ದು ಎಕ್ಲ್ ಸ್ಟೋನ್ ಸಾಧನೆಯಾಗಿದೆ.
ಮೊದಲ ಕಿವೀಸ್ ಕ್ರಿಕೆಟಿಗ
ಡೇವನ್ ಕಾನ್ವೆ ಈ ಪ್ರಶಸ್ತಿಗೆ ಪಾತ್ರರಾದ ನ್ಯೂಜಿಲ್ಯಾಂಡಿನ ಮೊದಲ ಕ್ರಿಕೆಟಿಗರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್
ನಲ್ಲಿ ಟೆಸ್ಟ್ ಪದಾರ್ಪಣೆಗೈದು ಅಮೋಘ ದ್ವಿಶತಕ ಬಾರಿ ಸಿದ್ದು ಈ ಎಡಗೈ ಆರಂಭಿಕನ ಸಾಹಸವೆನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ