Sulthan Bathery: ವಯನಾಡ್ ನ ಗಣಪತಿವಟ್ಟಂ “ಸುಲ್ತಾನ್‌ ಬತ್ತೇರಿ”ಯಾಗಿ ಬದಲಾಗಿದ್ದು ಹೇಗೆ?

ಈ ಪಟ್ಟಣ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಡಂಪಿಂಗ್‌ ಯಾರ್ಡ್‌ ಆಗಿತ್ತಂತೆ

ನಾಗೇಂದ್ರ ತ್ರಾಸಿ, Apr 12, 2024, 12:13 PM IST

Sulthan Bathery: ವಯನಾಡ್ ನ ಗಣಪತಿವಟ್ಟಂ “ಸುಲ್ತಾನ್‌ ಬತ್ತೇರಿ”ಯಾಗಿ ಬದಲಾಗಿದ್ದು ಹೇಗೆ?

ಕರ್ನಾಟಕ ರಾಜಕಾರಣದಲ್ಲಿ ಸಾಕಷ್ಟು ಹುಯಿಲೆಬ್ಬಿಸಿದ್ದ ಟಿಪ್ಪು ಸುಲ್ತಾನ್‌ ವಿಷಯ ಇದೀಗ ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ನಡುವೆಯೇ ಕೇರಳದ ವಯನಾಡ್‌ ನಲ್ಲಿ ರಾಜಕೀಯ ಪಕ್ಷದ ಮುಖಂಡರು ಟಿಪ್ಪು ಸುಲ್ತಾನ್‌ ವಿಷಯದೊಂದಿಗೆ ವಾಕ್ಸಮರಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ:

ವಯನಾಡ್‌ ಜಿಲ್ಲೆಯಲ್ಲಿನ ಸುಲ್ತಾನ್‌ ಬತ್ತೇರಿ ಹೆಸರನ್ನು ಗಣಪತಿವಟ್ಟಂ ಎಂದು ಬದಲಾಯಿಸಬೇಕು ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್‌ ಹೇಳಿಕೆ ನೀಡಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.

ಕೆ.ಸುರೇಂದ್ರನ್‌ ವಯನಾಡ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್‌ ಪಕ್ಷದಿಂದ ಹಾಲಿ ಸಂಸದ ರಾಹುಲ್‌ ಗಾಂಧಿ ಹಾಗೂ ಸಿಪಿಐನಿಂದ ಅನ್ನಿ ರಾಜಾ ಸ್ಪರ್ಧಿಸುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಯನಾಡ್‌ ಸುಲ್ತಾನ್‌ ಬತ್ತೇರಿ ಇತಿಹಾಸವೇನು?

ಸುಲ್ತಾನ್‌ ಬತ್ತೇರಿ ಕಥೆ ಶ್ರೀಮಂತ ಮತ್ತು ಸಂಕೀರ್ಣವಾಗಿದೆ. ನವಶಿಲಾಯುಗದ ಬೇರುಗಳನ್ನು ಹೊಂದಿರುವ ಈ ಪಟ್ಟಣವು ಬುಡಕಟ್ಟು ಜನಾಂಗ, ಆಕ್ರಮಣಕಾರರು ಮತ್ತು ವಸಾಹತುಶಾಹಿ ಆಡಳಿತಗಾರರ ವೈವಿಧ್ಯತೆಯ ಸಂಸ್ಕೃತಿಯನ್ನು ಕಂಡಿತ್ತು.

ಸುಲ್ತಾನ್‌ ಬತ್ತೇರಿ ಕೇರಳದ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆ ಪಡೆದಿದೆ. ಕುತೂಹಲದ ಸಂಗತಿ ಅಂದರೆ ಮಲಬಾರ್‌ ನಲ್ಲಿ ಮೈಸೂರು ಅರಸರು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಈ ಪಟ್ಟಣ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಡಂಪಿಂಗ್‌ ಯಾರ್ಡ್‌ ಆಗಿತ್ತಂತೆ!

ಒಂದು ಕಾಲದಲ್ಲಿ ಜೈನ ದೇವಾಲಯವಿದ್ದ ಈ ಪಟ್ಟಣದ ಮೇಲೆ ಫಿರಂಗಿ ದಾಳಿ ನಡೆದಿತ್ತು. ಈ ಪಟ್ಟಣದ ಮೂಲ ಹೆಸರು “ಗಣಪತಿವಟ್ಟಂ” ಎಂದಾಗಿತ್ತು. ಸುಲ್ತಾನ್‌ ಬತ್ತೇರಿ ಮುನ್ಸಿಪಲ್‌ ವೆಬ್‌ ಸೈಟ್‌ ನಲ್ಲಿರುವ ಮಾಹಿತಿ ಪ್ರಕಾರ, ಹಿಂದೆ ಗಣಪತಿ ದೇವಾಲಯ ಇದ್ದ ಹಿನ್ನೆಲೆಯಲ್ಲಿ ಗಣಪತಿವಟ್ಟಂ ಎಂಬ ಹೆಸರಿನಿಂದ ಪಟ್ಟಣವನ್ನು ಗುರುತಿಸುತ್ತಿದ್ದರು.

17ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್‌ ಮಲಬಾರ್‌ ಪ್ರದೇಶದ ಮೇಲೆ ದಂಡೆತ್ತಿ ಬಂದಿದ್ದ. ಬಳಿಕ ಟಿಪ್ಪು ಸೇನೆ ಗಣಪತಿವಟ್ಟಂ ಪಟ್ಟಣವನ್ನು ಬ್ಯಾಟರಿ ಶೇಖರಿಸಿ ಇಡುವ ಸ್ಥಳವನ್ನಾಗಿ ಬಳಸಿಕೊಂಡಿದ್ದು…ಹೀಗೆ ಈ ಪಟ್ಟಣ ಸುಲ್ತಾನ್‌ ನ ಬ್ಯಾಟರಿ ಪ್ರದೇಶ ಎಂದೇ ಪ್ರಸಿದ್ಧವಾಯಿತು. ಇಲ್ಲಿ ಟಿಪ್ಪು ಸುಲ್ತಾನ್‌ ಕೋಟೆಯೊಂದನ್ನು ಕಟ್ಟಿಸಿದ್ದ, ಆದರೆ ಅದು ಈಗ ಪಾಳುಬಿದ್ದಿದೆ.

ಈ ಪ್ರದೇಶದಲ್ಲಿ ಟಿಪ್ಪು ಸೇನೆ ಬ್ಯಾಟರಿಯನ್ನು ತಯಾರಿಸುತ್ತಿತ್ತು. ಇದರಿಂದಾಗಿ ಪಟ್ಟಣಕ್ಕೆ ಸುಲ್ತಾನ್‌ ಬತ್ತೇರಿ ಎಂದೇ ಹೆಸರಾಯಿತು. ಈ ಹೆಸರು ಅಧಿಕೃವಾಗಿದ್ದು, ಇದೀಗ ಭಾರತೀಯ ಜನತಾ ಪಕ್ಷ ಹೆಸರನ್ನು ಬದಲಾಯಿಸಿ ಗಣಪತಿವಟ್ಟಂ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದೆ. ವಿಜಯನಗರ ಆಡಳಿತದ ಸಂದರ್ಭದಲ್ಲಿ 13ನೇ ಶತಮಾನದಲ್ಲಿ ಈ ಪಟ್ಟಣದಲ್ಲಿ ಜೈನ ಸಮುದಾಯ ವಾಸವಾಗಿತ್ತು. ಅಂದು ಕಟ್ಟಿಸಿದ್ದ ಜೈನ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆ ಸ್ಮಾರಕವನ್ನಾಗಿ ಮಾಡಿ ರಕ್ಷಿಸುತ್ತಿದೆ.

ಟಾಪ್ ನ್ಯೂಸ್

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

Kargil War’s@25: ಹಿಮ ಪರ್ವತಗಳಲ್ಲಿ ಪಾಕ್ ಅನ್ನು ತಣ್ಣಗಾಗಿಸಿದ ಬೋಫೋರ್ಸ್ ಹವಿಟ್ಜರ್ ನೆನಪು

Kargil War’s@25: ಹಿಮ ಪರ್ವತಗಳಲ್ಲಿ ಪಾಕ್ ಅನ್ನು ತಣ್ಣಗಾಗಿಸಿದ ಬೋಫೋರ್ಸ್ ಹವಿಟ್ಜರ್ ನೆನಪು

ಕುಸಿದು ಬಿತ್ತಾ ಗುಜರಾತ್ ಟೈಟಾನ್ಸ್ ಸಾಮ್ರಾಜ್ಯ; ಅದಾನಿ ಪಾಲಾಗುತ್ತಾ ಐಪಿಎಲ್ ತಂಡ?

IPL 2025;ಕುಸಿದು ಬಿತ್ತಾ ಗುಜರಾತ್ ಟೈಟಾನ್ಸ್ ಸಾಮ್ರಾಜ್ಯ; ಅದಾನಿ ಪಾಲಾಗುತ್ತಾ ಐಪಿಎಲ್ ತಂಡ?

Rani Ki Vav: ನೂರಾರು ವರ್ಷ ಭೂಗತವಾಗಿದ್ದ “ರಾಣಿ ಕೀ ವಾವ್”‌ ಮೆಟ್ಟಿಲು ಬಾವಿಯ ಸ್ವರ್ಗ!

Rani Ki Vav: ನೂರಾರು ವರ್ಷ ಭೂಗತವಾಗಿದ್ದ “ರಾಣಿ ಕೀ ವಾವ್”‌ ಮೆಟ್ಟಿಲು ಬಾವಿಯ ಸ್ವರ್ಗ!

6–bamboo-shoot

Bamboo shoot: ಬಿದಿರಿನ ಚಿಗುರಿನ ಆರೋಗ್ಯ ಮಹತ್ವ-ಮಲೆನಾಡಿನ ನೆಚ್ಚಿನ ಖಾದ್ಯ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

7-uv-fusion

UV Fusion: ಮಂಗನ ಕೈಯಲ್ಲಿದೆ ಮಾಣಿಕ್ಯ

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ

Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.