ಇಂದು ವಿಜಯ್‌ ದಿವಸ್‌: ಪಾಕ್‌ ಸೇನೆಯ ಬೆವರಿಳಿಸಿದ್ದ ಸೇನಾವೀರರು

ಪಾಕ್‌ ದಾಳಿಗೆ ಕಾರಣ ಏನು?

Team Udayavani, Dec 16, 2023, 6:30 AM IST

1-asdadas

ಸುಮಾರು 52 ವರ್ಷಗಳ ಹಿಂದೆ 1971ರಂದು ಪಾಕಿಸ್ಥಾನವು ಭಾರತದ ಮೇಲೆ ಏಕಾಏಕಿ ದಾಳಿ ಮಾಡಿತ್ತು. ಪಾಕ್‌ ಸೇನೆಯ ಈ ದಾಳಿಯನ್ನು ಆಗಿನ ಜ| ಸ್ಯಾಮ್‌ ಮಾಣಿಕ್‌ ಶಾ ನೇತೃತ್ವದ ಭಾರತದ ಸೇನೆ ಎದುರಿಸಿ ಪಾಕ್‌ ಸೇನೆಯ ಹುಟ್ಟಡಗಿಸಿತ್ತು. ಕೊನೆಯಲ್ಲಿ ಡಿ.16ರಂದು ಪಾಕ್‌ ಸಂಪೂರ್ಣವಾಗಿ ಭಾರತಕ್ಕೆ ತಲೆ ಬಾಗಿತ್ತು. “ಆಪರೇಷನ್‌ ವಿಜಯ್‌’ ಅಥವಾ “ಬಾಂಗ್ಲಾ ವಿಮೋಚನ ದಿನ’ದ ಗೆಲುವಿನ ನೆನಪಿಗಾಗಿ ಈ ದಿನವನ್ನು “ವಿಜಯ್‌ ದಿವಸ್‌’ ಎಂದು ಆಚರಿಸಲಾಗುತ್ತಿದೆ.

ಯಾವಾಗ ?
ಡಿ.3ರ ಮಧ್ಯರಾತ್ರಿ ಪಾಕಿಸ್ಥಾನದ ಭೂಸೇನೆ ಹಾಗೂ ವಾಯುಸೇನೆ ಭಾರತದ ಪಂಜಾಬ್‌ ಪ್ರಾಂತ ಹಾಗೂ ಸೇನಾ ನೆಲೆಗಳ ಮೇಲೆ ದಾಳಿ ಆರಂಭಿಸಿದ್ದವು. ಬೆಳಗ್ಗೆ 5.30ರ ಹೊತ್ತಿಗೆ ಏನಾಯಿತು ಎಂದು ತಿಳಿಯುವ ಹೊತ್ತಿಗೆ ಆಗಲೇ ಪಾಕ್‌ ಭಾರತದ ಮೇಲೆ ಸಂಪೂರ್ಣ ಯುದ್ಧವನ್ನು ಸಾರಿ ಬಿಟ್ಟಿತ್ತು. ಒಟ್ಟಾರೆ 13 ದಿನಗಳ ಕಾಲ ಯುದ್ಧ ಸಾಗಿತ್ತು. ಭಾರತದ ಮೇಲೆ ಸದಾ ಹಗೆಯನ್ನು ಸಾಧಿಸಿಕೊಂಡು ಬರುತ್ತಿದ್ದ ಪಾಕ್‌ನ ಈ ದಾಳಿಗೆ ಪ್ರತಿಯಾಗಿ ದಿಟ್ಟ ಉತ್ತರ ಕೊಡಬೇಕೆಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪಾಕ್‌ ಎದುರು ಯುದ್ಧವನ್ನು ಸಾರಿದ್ದರು.

ಭಾರತದ ಪ್ರತಿದಾಳಿ, ಢಾಕಾ ಜನರಲ್‌ ಶರಣಾಗತಿ
ಭಾರತದ ಭೂಸೇನೆಯೂ ಏಕಕಾಲದಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ಥಾನದ ಮೇಲೆ ದಾಳಿ ಮಾಡಿ, ಪಾಕಿಸ್ಥಾನ ವನ್ನು ಅಕ್ಷರಶಃ ಹುಟ್ಟಡಗಿಸಿತು. ಪೂರ್ವ ಪಾಕಿಸ್ಥಾನದಲ್ಲಿ ಢಾಕಾ ವರೆಗೂ ಹೋದ ಭೂಸೇನೆ, ಅಲ್ಲಿನ ಜನರಲ್‌ ಅನ್ನು ಶರಣಾಗುವಂತೆ ಮಾಡಿತು. ಡಿ.16ರಂದು ಪಾಕಿಸ್ಥಾನದ ಈಸ್ಟರ್ನ್ ಕಮಾಂಡ್‌ನ‌ ಕಮಾಂಡರ್‌ ಲೆ| ಜ| ಎಎಕೆ ನಿಯಾಜಿ, ಭಾರತದ ಈಸ್ಟರ್ನ್ ಕಮಾಂಡ್‌ನ‌ ಕಮಾಂಡರ್‌ ಲೆ| ಜ| ಜಗ್ಜೀತ್‌ ಸಿಂಗ್‌ ಅರೋರಾ
ಅವರ ಮುಂದೆ ಶರಣಾದರು.

ಪಾಕ್‌ ದಾಳಿಗೆ ಕಾರಣ ಏನು?
1970ರ ಡಿ.6ರಂದು ಪೂರ್ವ ಮತ್ತು ಪಶ್ಚಿಮ ಪಾಕಿಸ್ಥಾನದಲ್ಲಿ ಚುನಾವಣೆ ನಡೆದಿತ್ತು. 1970ರ ಡಿ.6ರಂದು ಪೂರ್ವ ಪಾಕಿಸ್ಥಾನದಲ್ಲಿನ ಶೇಕ್‌ ಮುಜಿºàರ್‌ ರೆಹಮಾನ್‌ ಅವರ ಅವಾಮಿ ಲೀಗ್‌ ಹೆಚ್ಚಿನ ಮತಗಳಿಂದ ಗೆಲುವನ್ನು ತನ್ನದಾಗಿಸಿಕೊಂಡಿತ್ತು. ಅತ್ತ ಪಶ್ಚಿಮ ಪಾಕಿಸ್ಥಾನದಲ್ಲಿ ಝುಲ್ಫಿಕರ್‌ ಅಲಿ ಭುಟ್ಟೋ ಅವರ ಪಾಕಿಸ್ಥಾನ ಪೀಪಲ್ಸ್‌ ಪಾರ್ಟಿ ಸೋಲನ್ನು ಅನುಭವಿಸಿತ್ತು. ಈ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದಿದ್ದ ಶೇಕ್‌ ಮುಜಿºàರ್‌ ರೆಹಮಾನ್‌ ಅವರೇ ಪ್ರಧಾನಿಯಾಗಬೇಕಾಗಿತ್ತು. ಆದರೆ ಝುಲ್ಫೀ ಕರ್‌ ಭುಟ್ಟೋ ಅವರು ಸೇನೆಯ ಮನವೊಲಿಕೆ ಮಾಡಿ, ಮುಜಿºàರ್‌ ಅವರಿಗೆ ಪ್ರಧಾನಿ ಪಟ್ಟ ಸಿಗದಂತೆ ನೋಡಿಕೊಂಡರು. ಇದನ್ನು ವಿರೋಧಿಸಿ ಮುಜಿºàರ್‌ ಅವರು ಪ್ರತಿಭಟನೆ ಆರಂಭಿಸಿದ್ದರು. ಈ ಪ್ರತಿಭಟನೆಗೆ ಭಾರತ ಬೆಂಬಲ ನೀಡಿತು. ಅಲ್ಲದೆ ಗಡಿಯಲ್ಲಿ ಬಿಎಸ್‌ಎಫ್ ಅಲ್ಪ ಪ್ರಮಾಣದ ಸಹಾಯ ಮಾಡಿತ್ತು. ಆದರೆ ಪರಿಸ್ಥಿತಿ ಹದಗೆಟ್ಟ ಕಾರಣದಿಂದಾಗಿ 1971ರಲ್ಲಿ ಭಾರತ ಈಸ್ಟರ್ನ್ ಕಮಾಂಡ್‌, ಆಪರೇಷನ್‌ ಜಾಕ್‌ಪಾಟ್‌ ಆರಂಭಿಸಿತು. ಈ ಮೂಲಕ ಬಾಂಗ್ಲಾ ಸ್ವಾತಂತ್ರ್ಯಹೋರಾಟಕ್ಕೆ ಸಹಾಯ ಮಾಡಲಾಯಿತು. ಇದರಿಂದ ಕೆರಳಿದ್ದ ಪಾಕ್‌ ಪೂರ್ವ ಪಾಕಿಸ್ಥಾನದಲ್ಲಿ ಹಿಂದೂಗಳನ್ನೇ ನೇರವಾಗಿ ಗುರಿಯಾಗಿಸಿಕೊಂಡು ನರಮೇಧ ನಡೆಸುತ್ತಿತ್ತು. ಪೂರ್ವ ಪಾಕಿಸ್ಥಾನದಲ್ಲಿ ಅವಾಮಿ ಲೀಗ್‌ನ ಗೆರಿಲ್ಲಾಗಳ ಕೈ ಮೇಲಾಗುತ್ತಿದ್ದಂತೆ 1971ರ ಡಿ.3ರಂದು ಪಾಕ್‌ ಭಾರತದ ಮೇಲೆ ದಾಳಿ ಆರಂಭಿಸಿತ್ತು.

 

ಟಾಪ್ ನ್ಯೂಸ್

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.