

Team Udayavani, Nov 24, 2023, 4:12 PM IST
ನವದೆಹಲಿ: ಮೂರು ವರ್ಷದ ಪುಟ್ಟ ಬಾಲಕಿ, 67 ವರ್ಷದ ಅಜ್ಜಿ, 76 ವರ್ಷದ ಅಜ್ಜಿ ಯಾವುದೇ ಅಳುಕಿಲ್ಲದೇ ಪ್ಯಾರಾಗ್ಲೈಡಿಂಗ್ ಮಾಡಿರುವ ಸುದ್ದಿ ಓದಿದ್ದೀರಿ. ಆದರೆ ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ತನ್ನ 97ನೇ ವಯಸ್ಸಿನಲ್ಲೂ ಯಾವ ಭಯವಿಲ್ಲದೇ ಪ್ಯಾರಾಗ್ಲೈಡಿಂಗ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ ಈ ಅಜ್ಜಿ!
ಇದನ್ನೂ ಓದಿ:D.K. Shivakumar ಪ್ರಕರಣ ಹಿಂಪಡೆದಿದ್ದನ್ನು ನ್ಯಾಯಾಲಯ ತಿರಸ್ಕರಿಸಲಿದೆ: ಜೋಶಿ ವಿಶ್ವಾಸ
ಸದಾ ಒಂದಿಲ್ಲೊಂದು ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುವ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಅವರು ಈ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದು, “ಇಟ್ಸ್ ನೆವರ್ ಟೂ ಲೇಟ್ ಟು ಪ್ಲೈ..ಈಕೆ ಈ ದಿನದ ನನ್ನ ಹೀರೋ” ಎಂಬುದಾಗಿ ಉಲ್ಲೇಖಿಸಿ ವಿಡಿಯೋವನ್ನು ಶೇರ್ ಮಾಡಿದ್ದಾರೆ.
97 ವರ್ಷದ ಅಜ್ಜಿ ಪುಣೆಯಲ್ಲಿ ಪ್ಯಾರಾಗ್ಲೈಡಿಂಗ್ ಸಾಹಸದಲ್ಲಿ ತೊಡಗಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾರಾಮೋಟಾರಿಂಗ್ ಬಳಿ ಬರುವ ಅಜ್ಜಿಯನ್ನು ಪ್ಯಾರಾಗ್ಲೈಡರ್ ನಲ್ಲಿ ಕೂರಿಸಿ, ರಕ್ಷಣಾ ಬೆಲ್ಟ್ ಹಾಕಿ, ಹೆಲ್ಮೆಟ್ ತೊಡಿಸಿ…ಪ್ಯಾರಾಗ್ಲೈಡಿಂಗ್ ಮಾಡುವ ದೃಶ್ಯ ವಿಡಿಯೋದಲ್ಲಿದೆ.
It’s NEVER too late to fly.
She’s my hero of the day… pic.twitter.com/qjskoIaUt3— anand mahindra (@anandmahindra) November 23, 2023
ಯಾರೀವರು?
ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಅಜ್ಜಿಯನ್ನು ಗುರುತಿಸಿದ್ದು, ಇವರು ಉಷಾ ತೌಸೆ (97ವರ್ಷ). ನಾಗ್ಪುರದ ನಿವೃತ್ತ ಶಿಕ್ಷಕಿ. ಪ್ರಸ್ತುತ ಪುಣೆಯಲ್ಲಿ ವಾಸವಾಗಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಅಜ್ಜಿಯ ಈ ಸಾಹಸಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Ad
Himachal Pradesh: ಭೂಕುಸಿತಕ್ಕೂ ಮುನ್ನ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ.!
Video: ಮಾವು ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಿದ್ದ ಮಾವುಗಳನ್ನೇ ಹೊತ್ತೊಯ್ದ ಜನ…
Video: 18 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ರಕ್ಷಿಸಿದ ಮಹಿಳಾ ಅರಣ್ಯ ಅಧಿಕಾರಿ
Viral Video: ರೀಲ್ಸ್ ಹುಚ್ಟಾಟ: ರೈಲು ಬರುತ್ತಿದ್ದಂತೆ ಹಳಿಯ ಮೇಲೆ ಮಲಗಿದ ಬಾಲಕ
ಲಂಡನ್‌ನ ಪಾರ್ಟಿಯಲ್ಲಿ ದೇಶಭ್ರಷ್ಟ ಮಲ್ಯ, ಲಲಿತ್ ಮೋದಿ ಮೋಜು, ಮಸ್ತಿ!
You seem to have an Ad Blocker on.
To continue reading, please turn it off or whitelist Udayavani.