ಕನಸು ನನಸಾಗಿಸಲು ವಯಸ್ಸಿನ ಹಂಗೇಕೆ?82ನೇ ವಯಸ್ಸಿನಲ್ಲಿ ಬಾಹ್ಯಾಕಾಶ ಪ್ರಯಾಣ…

ಈಕೆ ಅಮೇರಿಕಾ ಮೂಲದವಳಾಗಿದ್ದು ಹುಟ್ಟು ಕನಸುಗಾರ್ತಿ ಇವರಾಗಿದ್ದಾರೆ.

Team Udayavani, Sep 24, 2021, 3:23 PM IST

ಕನಸು ನನಸಾಗಿಸಲು ವಯಸ್ಸಿನ ಹಂಗೇಕೆ?82ನೇ ವಯಸ್ಸಿನಲ್ಲಿ ಬಾಹ್ಯಾಕಾಶ ಪ್ರಯಾಣ…

ರಾಧಿಕಾ ಕುಂದಾಪುರ

ಕನಸೊಂದು ಮಾಯೆಯಂತೆ. ಸ್ವಾಮಿ ವಿವೇಕಾನಂದರು ಹೇಳುವಂತೆ ನಾವು ಕಾಣುವ ಕನಸು ಹೇಗಿರಬೇಕೆಂದರೆ ನಿದ್ದೆಯಲ್ಲೂ ನಮ್ಮನ್ನು ಎಚ್ಚರಿಸುವಂತಿರಬೇಕು. ಹಾಗೆಂದು ಪ್ರತಿಯೊಬ್ಬರು ತಮ್ಮ ಬಾಲ್ಯದ ವಯಸ್ಸಿನಲ್ಲಿ ಭವಿಷ್ಯತ್ತಿನ ಕನಸು ಕಾಣುತ್ತಲೇ ಇರುತ್ತಾರೆ. ಆದರೆ ಅದು ಕಾಲ ಕಳೆದಂತೆ ಬದಲಾಗುತ್ತಾ ಕೊನೆಗೊಂದು ಬೇರೆ ಆಯಾಮವನ್ನೇ ಪಡೆಯುತ್ತಾ ಜೀವನ ಕಟ್ಟಿಕೊಳ್ಳುವ ಸಲುವಾಗಿ ತಮ್ಮ ಕನಸಿಗೂ ಒಲ್ಲದ ಮಗದೊಂದು ಉದ್ಯೋಗದಲ್ಲಿ ತೊಡಗಿಸಿಕೊಂಡು ಬಿಡುತ್ತಾರೆ.

ಹಾಗೆಂದು ಅವರು ಕಂಡ ಕನಸು ಈಡೇರಲು ಬೇಕಾದ ಪರಿಶ್ರಮ ಪಡುವಲ್ಲಿ ಅವರು ಹಿಂದಡಿ ಇಟ್ಟಿದ್ದೇ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗಲಿಲ್ಲವೆನ್ನಬಹುದು. ಇನ್ನೂ ಕೆಲವರಿಗೇ ತಾನು ಸಾಧಿಸಬೇಕೆನ್ನುವ ಹಂಬಲವಿರುತ್ತದೆ ಆದರೆ ಹೇಗೆ? ಏನು? ಮುಂತಾದವುಗಳಿಗೆ ಉತ್ತರ ಹುಡುಕದೆ ಸೋತು ಬಿಡುತ್ತಾರೆ. ವಯಸ್ಸಿನ ಕಾರಣ ನೀಡಿ ಕನಸಿನ ಬೆನ್ನಟ್ಟಲು ಸಾಧ್ಯವಾಗಿಲ್ಲ ಎನ್ನುವ ಗುಂಪು ಒಂದೆಡೆಯಾದರೆ ವಯಸ್ಸಿಗೂ ಕನಸಿಗೂ ಸಂಬಂಧವಿಲ್ಲ ಎಂಬಂತೆ ಬದುಕುವವರೂ ಇನ್ನೊಂದೆಡೆ ಅಂತವರ ಪಟ್ಟಿಯಲ್ಲಿ ನಾವು ವಾಲಿ ಫಂಕ್ ಅವರನ್ನು ಕಾಣಬಹುದಾಗಿದೆ.

ಈಕೆ ಅಮೇರಿಕಾ ಮೂಲದವಳಾಗಿದ್ದು ಹುಟ್ಟು ಕನಸುಗಾರ್ತಿ ಇವರಾಗಿದ್ದಾರೆ. ಫೆಬ್ರವರಿ 1, 1939ರಂದು ಜನಿಸಿದ್ದು ಬಾಲ್ಯದಿಂದಲೂ ವಿಮಾನ ಏರುವ ಕನಸಿನೊಂದಿಗೆ ತನ್ನ ಬದುಕನ್ನು ಕಳೆಯುತ್ತಿದ್ದರಂತೆ. ತನ್ನ ಪ್ರೌಢ ಶಿಕ್ಷಣದ ಅವಧಿಯಲ್ಲಿ ಆಟೋ ಮೆಕ್ಯಾನಿಕಲ್‌ ಕೋರ್ಸ್‌ ಕಲಿಯಲು ಆಸಕ್ತಿ ಈಕೆಗಿತ್ತು ಆದರೆ ಹುಡುಗಿ ಎಂಬ ಕಾರಣಕ್ಕೆ ಅವಳನ್ನು ಅಲ್ಲಿ ನಿರ್ಲಕ್ಷಿಸಿದ್ದು ಹತಾಶೆ ಭಾವನೆ ಈಕೆಯಲ್ಲಿ ಮೂಡಿಸಿತಂತೆ.

ಸ್ಟೀಫ‌ನ್‌ ಕಾಲೇಜಿನಲ್ಲಿ ಏವೀಯೇಷನ್‌ ಸಂಬಂಧಿತ ಕೋರ್ಸ್‌ಗೆ ಸೇರಿಕೊಂಡು ತನ್ನ 18ನೇ ವಯಸ್ಸಿನಲ್ಲಿ ಪೈಲಟ್‌ ಆಗಲು ಪರವಾನಿಗೆಯನ್ನು ಸಹ ಪಡೆಯುತ್ತಾಳೆ. ಸ್ಟೀಫ‌ನ್‌ ಕಾಲೇಜಿನಲ್ಲಿ ಅಲ್ಯುಮಿನಿಯಂ ಅಚೀವ್‌ ಮೆಂಟ್‌ ಅನ್ನು ಅತೀ ಸಣ್ಣ ವಯಸ್ಸಿಗೆ ಪಡೆದವರೆಂಬ ಹೆಗ್ಗಳಿಕೆಯೂ ಈಕೆಗಿದೆ. 1994ರಲ್ಲಿ ನ್ಯಾಷನಲ್‌ ಟ್ರಾನ್ಸ್‌ಫೋರ್ಟ್‌ ಸೇಫ್ ಬೋರ್ಡ್‌ಗೆ ಪ್ರಥಮ ಮಹಿಳಾ ಸೇಫ್ಟಿ ಸೇಫ‌ರ್‌ ಆಗಿ ನೇಮಕವಾಗುತ್ತಾರೆ. ಇಲ್ಲಿ 11ವರ್ಷ ಸೇವೆ ಸಲ್ಲಿಸಿ 450ಕ್ಕೂ ಅಧಿಕ ವಿಮಾನ ಅಪಘಾತ ತಡೆಯಲು ಯಶಸ್ವಿಯಾಗುತ್ತಾರೆ. ತಮ್ಮ 82ನೇ ವಯಸ್ಸಿನಲ್ಲಿ ಅಮೇಜಾನ್‌ ಸಂಸ್ಥೆಯ ಖಾಸಗಿ ಒಡೆತನದ ಬ್ಲೂ ಒರಿಜಿನ್‌ ಬಾಹ್ಯಾಕಾಶ ಪ್ರಯಾಣ ಮಾಡಿದ ಅತೀ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆ ಈಕೆಗಿದ್ದು ಈ ಕನಸು ಈಡೇರಿಕೆಗೆ 60ವರ್ಷ ಕಾದಿದ್ದರು. ಶ್ರಮಿಸಿದ್ದರು ಎಂಬುದು ಇಲ್ಲಿ ಸ್ಮರಿಸಲೇ ಬೇಕಾಗಿದೆ. ಹೀಗಾಗಿಯೇ ಕನಸು ಕಾಣುವುದು ಸುಲಭ ಅದರ ಈಡೇರಿಕೆಗಾಗಿ ಪಡುವ ಶ್ರಮ ಕಷ್ಟ. ಕನಸಿನ ಈಡೇರಿಕೆಗೆ ವಯಸ್ಸಿನ ಹಂಗು ತೊರೆದ ಈಕೆಯ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎನ್ನಬಹುದು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.