ಯೇನಪೊಯ, ಯುನೈಟೆಡ್‌ ತಂಡಕ್ಕೆ ಪ್ರಶಸ್ತಿ

ಅಹ್ಮದ್‌ ಮಾಸ್ಟರ್‌ , ಪಳ್ಳಿ ಜಯರಾಂ ಶೆಟ್ಟಿ ಸ್ಮಾರಕ ಫುಟ್‌ಬಾಲ್‌ ಪಂದ್ಯಕೂಟ

Team Udayavani, Feb 11, 2023, 10:40 AM IST

football

ಮಂಗಳೂರು: ದ.ಕ. ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಶನ್‌ ಆಶ್ರಯದಲ್ಲಿ ಮಂಗಳೂರು ನೆಹರೂ ಮೈದಾನದಲ್ಲಿ ಒಂದು ತಿಂಗಳ ಕಾಲ ನಡೆದ ದಿ| ಅಹಮದ್‌ ಮಾಸ್ಟರ್‌ ಸ್ಮಾರಕ ಎ ಡಿವಿಜನ್‌ ಪಂದ್ಯಾವಳಿಯ ಫೈನಲ್‌ ಪಂದ್ಯಾಟದಲ್ಲಿ ದೇರಳಕಟ್ಟೆಯ ಯೇನಪೊಯ ತಂಡವು ಮಂಗಳೂರಿನ ಕಸಬಾ ಬೆಂಗರೆಯ ಕಸಬಾ ಬ್ರದರ್ಸ್‌ ತಂಡವನ್ನು 2-0 ಗೊಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.

ಈ ಮೊದಲು ಸೆಮಿಫೈನಲ್‌ ಪಂದ್ಯದಲ್ಲಿ ಯೇನಪೊಯ ತಂಡ ಸೋಕರ್‌ ಉಳ್ಳಾಲ ತಂಡವನ್ನು 2-0 ಗೋಲಿಗಳಿಂದ ಸೋಲಿಸಿ ಫೈನಲ್‌ ಹಂತ ತಲುಪಿತ್ತು. ಅದೇ ರೀತಿ ಕಸಬಾ ಬೆಂಗರೆ ತಂಡ ಜೆನಿಫಾ ಉಳ್ಳಾಲ ತಂಡವನ್ನು 1-0 ಗೋಲಿನಿಂದ ಸೋಲಿಸಿ ಫೈನಲ್‌ ಹಂತ ತಲುಪಿತ್ತು. ಲೀಗ್ ಹಂತದಲ್ಲಿ ಕಸಬಾ ಬೆಂಗರೆ ತಂಡ ಆಡಿದ 4 ಪಂದ್ಯಗಳಲ್ಲಿ ಜಯಗಳಿಸಿ ಪೂರ್ಣ 12 ಅಂಕ ಗಳಿಸಿಕೊಂಡು ಸೆಮಿಫೈನಲ್‌ ಹಂತ ತಲುಪಿತ್ತು.

ಯೇನಪೊಯ ತಂಡ 3 ಜಯ, ಒಂದು ಡ್ರಾ ಸಾಧಿಸಿ ಒಟ್ಟು 10 ಅಂಕ ಗಳಿಸಿ ಸೆಮಿಫೈನಲ್‌ ಹಂತ ತಲುಪಿತ್ತು. ಬಿ ಡಿವಿಜನ್‌ ಪಂದ್ಯಾವಳಿ ಜಿಲ್ಲಾ ಫ‌ುಟ್‌ ಬಾ ಲ್‌ ಸಂಸ್ಥೆಯ ವತಿಯಿಂದ ನಡೆದ ಪಳ್ಳಿ ಜಯರಾಂ ಶೆಟ್ಟಿ ಸ್ಮಾರಕ ಬಿ’ ಡಿವಿಜನ್‌ ಫ‌ುಟ್‌ ಬಾಲ್‌ ಲೀಗ್‌ ಪಂದ್ಯಾವಳಿಯ ಫೈನಲ್‌ ಪಂದ್ಯಾಟದಲ್ಲಿ “ಮಂಗಳೂರು ಯುನೈಟೆಡ್‌ ತಂಡ’ ಪಜೀರಿನ ಯುನೈಟೆಡ್‌ ಪಜೀರ್‌ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಸೆಮಿಫೈನಲ್‌ ಪಂದ್ಯದಲ್ಲಿ ಮಂಗಳೂರು ಯುನೈಟೆಡ್‌ ತಂಡ ಉಳ್ಳಾಲದ ಏಷಿಯನ್‌ ತಂಡವನ್ನು 1-0 ಗೋಲಿನಿಂದ ಸೋಲಿಸಿ ಫೈನಲ್‌ ಹಂತ ತಲುಪಿತ್ತು.

ಯುನೈಟೆಡ್‌ ಪಜೀರ್‌ ತಂಡ ಕೆ.ಸಿ.ರೋಡ್‌ ತಲಪಾಡಿಯ ಸಿಟಿಜನ್‌ ತಂಡವನ್ನು ಟೈ ಬ್ರೇಕರ್‌ ನಲ್ಲಿ 6-4 ಗೋಲ್‌ ಅಂತರದಿಂದ ಸೋಲಿಸಿ ಫೈನಲ್‌ ಹಂತ ತಲುಪಿತ್ತು. ಲೀಗ್‌ ಹಂತದಲ್ಲಿ ಮಂಗಳೂರು ಯುನೈಟೆಡ್‌ ತಂಡ ಆಡಿದ ಆರು ಪಂದ್ಯಾಟಗಳಲ್ಲಿ 15 ಅಂಕಗಳಿಸಿ ಸೆಮಿಫೈನಲ್‌ ಹಂತ ತಲುಪಿದರೆ ಪಜೀರ್‌ ಯುನೈಟೆಡ್‌ ತಂಡ 13 ಅಂಕಗಳಿಸಿ ಸೆಮಿಫೈನಲ್‌ ಹಂತ ತಲುಪಿತ್ತು.

ಅದೇ ರೀತಿ ಸಿಟಿಜನ್‌ ಕೆ.ಸಿ.ರೋಡ್‌ ತಂಡ ಆಡಿದ 5 ಪಂದ್ಯಗಳಲ್ಲಿ 11 ಅಂಕ ಗಳಿಸಿ ಸೆಮಿಫೈನಲ್‌ ಹಂತ ತಲುಪಿದರೆ ಏಷಿಯನ್‌ ಉಳ್ಳಾಲ ತಂಡ 10 ಅಂಕ ಗಳಿಸಿ ಸೆಮಿಫೈನಲ್‌ ಹಂತ ತಲುಪಿತ್ತು. ಸಮಾರೋಪದಲ್ಲಿ ಮಂಗಳೂರು ನಗರ ಟ್ರಾಫಿಕ್‌ ಎಸಿಪಿ. ಗೀತ ಕುಲಕರ್ಣಿ, ಮನಪಾ ಸದಸ್ಯರಾದ ಎ.ಸಿ. ವಿನಯರಾಜ್‌, ಮುನೀಬ್‌ ಬೆಂಗ್ರೆ ಪ್ರಶಸ್ತಿ ವಿತರಿಸಿದರು. ಜಿಲ್ಲಾ ಫ‌ುಟ್‌ ಬಾ ಲ್‌ ಸಂಸ್ಥೆಯ ಅಧ್ಯಕ್ಷ ಡಿ.ಎಂ ಅಸ್ಲಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಫ‌ುಟ್‌ ಬಾ ಲ್‌ ಸಂಸ್ಥೆಯ ಖಜಾಂಚಿ ಅನಿಲ್‌ ಪಿ.ವಿ, ಸದಸ್ಯರಾದ ಶಿವರಾಮ್‌ ಎ., ಅಬ್ದುಲ್‌ ಲತೀಫ್‌, ಜೀವನ್‌, ಟೂರ್ನಮೆಂಟ್‌ ಸಮಿತಿ ಸದಸ್ಯರಾದ ಅಶ್ರಫ್‌, ಬಶೀರ್‌, ಜಿಲ್ಲಾ ಫ‌ುಟ್‌ ಬಾಲ್‌ ತಂಡದ ಕೋಚ್‌ ಆ್ಯಂಟಣಿ, ಬಿಬಿ ಥೋಮಸ್‌ ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಫ‌ುಟ್‌ಬಾಲ್‌ ಸಂಸ್ಥೆಯ ಸದಸ್ಯ ವಿಜಯ ಸುವರ್ಣ ಪ್ರಸ್ತಾವಿಸಿದರು. ಜಿಲ್ಲಾ ಫ‌ುಟ್‌ಬಾಲ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುಸೇನ್‌ ಬೋಳಾರ ನಿರೂಪಿದರು.

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.