ಕೌನ್ ಬನೇಗಾ ಕರೋಡ್ಪತಿಯಲ್ಲಿ 50 ಲಕ್ಷ ರೂ. ಗೆದ್ದ ಉಡುಪಿಯ ಅನಮಯ
Team Udayavani, Dec 17, 2020, 10:32 AM IST
ಉಡುಪಿ: ವಿದ್ಯೋ ದಯ ಪಬ್ಲಿಕ್ ಸ್ಕೂಲ್ನ 7ನೇ ತರಗತಿ ವಿದ್ಯಾರ್ಥಿ ಅನಮಯ ಯೋಗೇಶ್ ದಿವಾಕರ್ ಅವರು ಕೌನ್ ಬನೇಗಾ ಕರೋಡ್ ಪತಿ ಸ್ಟೂಡೆಂಟ್ ವೀಕ್ ಸ್ಪೆಷಲ್ನಲ್ಲಿ ಬುಧವಾರ 14 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ 50 ಲ.ರೂ. ನಗದು ಬಹುಮಾನ ಪಡೆದುಕೊಂಡಿದ್ದಾನೆ.
ಹಾಟ್ಸೀಟ್ನಲ್ಲಿ ಅಮಿತಾಬ್ ಬಚ್ಚನ್ ಕೇಳುವ 15 ಪ್ರಶ್ನೆಗಳ ಈ ಸ್ಪರ್ಧೆಯಲ್ಲಿ ಅನಮಯ 14 ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ್ದು 50 ಲಕ್ಷ ರೂ. ಗೆದ್ದಿದ್ದರು. 1 ಕೋಟಿ ರೂ. ಗೆಲ್ಲುವ ಅಂತಿಮ ಪ್ರಶ್ನೆ ಕೇಳಿದಾಗ ಅವರ ಹತ್ತಿರ ಒಂದು ಲೈಫ್ಲೈನ್ ಇತ್ತು. ಆದರೆ ಈ ಪ್ರಶ್ನೆಗೆ ಖಚಿತ ಉತ್ತರ ಗೊತ್ತಿಲ್ಲದ ಕಾರಣ ಯಾವುದೇ ಅಪಾಯ ತೆಗೆದು ಕೊಳ್ಳದೇ ಅಲ್ಲಿಗೆ ಆಟ ಮುಗಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ :ಅಟ್ಟಾರಿ ಗಡಿ ಪ್ರದೇಶದಲ್ಲಿ ಬಿಎಸ್ ಎಫ್ ಎನ್ ಕೌಂಟರ್ ಗೆ ಇಬ್ಬರು ನುಸುಳುಕೋರರ ಸಾವು